- Home
- Entertainment
- TV Talk
- ಕಿರುತೆರೆ ನಟಿ ಮಾನ್ಸಿ ಜೋಶಿ ಅರಿಶಿಣ ಶಾಸ್ತ್ರದಲ್ಲಿ ಬಿಗ್ ಬಾಸ್ ಮೋಕ್ಷಿತಾ; ಜನರಿಗೆ ಫುಲ್ ಕನ್ಫ್ಯೂಷನ್...
ಕಿರುತೆರೆ ನಟಿ ಮಾನ್ಸಿ ಜೋಶಿ ಅರಿಶಿಣ ಶಾಸ್ತ್ರದಲ್ಲಿ ಬಿಗ್ ಬಾಸ್ ಮೋಕ್ಷಿತಾ; ಜನರಿಗೆ ಫುಲ್ ಕನ್ಫ್ಯೂಷನ್...
ಸ್ನೇಹಿತೆ ಮದುವೆ ಶಾಸ್ತ್ರದಲ್ಲಿ ಬ್ಯುಸಿಯಾದ ಮೋಕ್ಷಿತಾ ಪೈ. ಅರಿಶಿಣ ಶಾಸ್ತ್ರದಲ್ಲಿ ಸಖತ್ ಮಿಂಚಿದ ಸುಂದರಿಯರು.....

ಪಾರು ಧಾರಾವಾಹಿ ಮೂಲಕ ಖ್ಯಾತಿ ಪಡೆದಿರುವ ಮಾನ್ಸಿ ಜೋಶಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ನಿನ್ನೆ ಅದ್ಧೂರಿಯಾಗಿ ಅರಿಶಿಣ ಶಾಸ್ತ್ರ ನಡೆದಿದೆ.
ಪಾರು ಧಾರಾವಾಹಿಯಲ್ಲಿ ಮಾನ್ಸಿ ಜೋಶಿ ಜೊತೆ ಮೋಕ್ಷಿತಾ ಪೈ ಕೂಡ ನಟಿಸಿದ್ದರು. ಹೀಗಾಗಿ ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು. ಈಗ ಫೋಟೋಗಳನ್ನು ಮೋಕ್ಷಿತಾ ಅಪ್ಲೋಡ್ ಮಾಡಿದ್ದಾರೆ.
ಹೌದು! ಮಾನ್ಸಿ ಜೋಶಿ ಅರಿಶಿಣ ಶಾಸ್ತ್ರದಲ್ಲಿ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಸಖತ್ ಕೂಲ್ ಆಗಿ ಮಿಂಚುತ್ತಿರುವುದು ಮೋಕ್ಷಿತಾ ಪೈ. ಹಳದಿ ಬಣ್ಣದ ಹಾಫ್ ಶೋಲ್ಡರ್ ಬಟ್ಟೆ ಧರಿಸಿದ್ದಾರೆ.
'ಬೇಬಿ ಮಾ...ನನ್ನ ಅರಿಶಿಣ ಶಾಸ್ತ್ರಕ್ಕೆ ನೀನು ಆಗಮಿಸಿದ್ದಕ್ಕೆ ತುಂಬಾನೇ ಥ್ಯಾಂಕ್ಸ್' ಎಂದು ಮೋಕ್ಷಿತಾ ಅಪ್ಲೋಡ್ ಮಾಡಿರುವ ಫೋಟೋಗೆ ಮಾನ್ಸಿ ಕಾಮೆಂಟ್ ಮಾಡಿದ್ದಾರೆ.
ಅಯ್ಯೋ ಮಾನ್ಸಿ ಜೋಶಿ ಮದುವೆ ನಡೆಯುತ್ತಿದ್ದರೂ ನಮಗೆ ಮೋಕ್ಷಿತಾ ಪೈ ಮದುವೆ ಅನಿಸುತ್ತಿದೆ. ಅವರ ಅರಿಶಿಣ ಶಾಸ್ತ್ರದಲ್ಲೂ ಇಷ್ಟೋಂದು ಕೂಲ್ ಆಗಿ ಕಾಣಿಸುತ್ತಾರೋ ಇಲ್ವೋ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಮಾನ್ಸಿ ಜೋಶಿ ಮತ್ತು ರಾಘವ್ ಫೆಬ್ರವರಿ 16, 2025ರಂದು ದಾಂಪತ್ಯ ಜೀವನಕ್ಕ ಕಾಲಿಡುತ್ತಿದ್ದಾರೆ. ಇಂದಿನಿಂದ ಮದುವೆ ಶಾಸ್ತ್ರಗಳು ಆರಂಭವಾಗಿದೆ. ಇದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಎನ್ನಲಾಗಿದೆ.