Asianet Suvarna News Asianet Suvarna News

ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಡ್ತಿದ್ದಾರೆಯೇ ಕನ್ನಡತಿ, ಪುಟ್ಟಗೌರಿ ರಂಜನಿ? ನಟಿ ಹೇಳಿದ್ದೇನು?

ಕನ್ನಡತಿ, ಪುಟ್ಟಗೌರಿ ಮದುವೆ ಮೂಲಕ ಖ್ಯಾತಿ ಪಡೆದಿರುವ ನಟಿ ರಂಜನಿ ರಾಘವನ್​, ಈ ಬಾರಿಯ ಬಿಗ್​ಬಾಸ್​ ಮನೆಗೆ ಹೋಗ್ತಿದ್ದಾರಾ? ನಟಿ ಹೇಳಿದ್ದೇನು?
 

Actress Ranjani Raghavan going to the Bigg Boss house What  actress say suc
Author
First Published Oct 6, 2023, 12:56 PM IST

ಪುಟ್ಟಗೌರಿ ಮದುವೆ, ಕನ್ನಡತಿ ಧಾರಾವಾಹಿಗಳಲ್ಲಿ ನಟಿಸಿ ಮನೆಮಾತಾಗಿರುವ ನಟಿ ರಂಜನಿ ರಾಘವನ್.  ಎರಡೂ ಸೀರಿಯಲ್‌ಗಳು ಈಗಾಗಲೇ ಮುಗಿದಿದ್ದು, ನಟಿ ಈಗ  ಆದಿತ್ಯ ನಾಯಕನಾಗಿರುವ ಇನ್ನೂ ಹೆಸರಿಡದ ಸಸ್ಪೆನ್ಸ್ ಥ್ರಿಲ್ಲರ್‌ನ ನಾಯಕಿಯಾಗಿ ರಂಜನಿ ರಾಘವನ್ ನಟಿಸುತ್ತಿದ್ದಾರೆ. ಕಿಶೋರ್ ಮೇಗಳಮನೆ ನಿರ್ದೇಶಕರು.  ಇದರ ಮಧ್ಯೆಯೇ ಬಿಗ್​ಬಾಸ್​ 10 ಬಹಳ ಸದ್ದು ಮಾಡುತ್ತಿದೆ. ಬಿಗ್​ಬಾಸ್​ ಶುರುವಾಗುತ್ತದೆ ಎನ್ನುವ ಮಾತು ಕೇಳಿ ಬರುತ್ತಿದ್ದಂತೆಯೇ ಅದರ ಹಿಂದೆ ಹಲವು ನಟ-ನಟಿಯರ ಹೆಸರು ಥಳಕು ಹಾಕಿಕೊಳ್ಳುವುದು ಸಾಮಾನ್ಯ. ಇವರು ಹೋಗುತ್ತಾರೆ, ಅವರು ಹೋಗುತ್ತಾರೆ ಎಂದೆಲ್ಲಾ ಹೇಳುತ್ತಾರೆ. ಅದೇ ರೀತಿ ಪುಟ್ಟಗೌರಿ ಮದುವೆ ಮತ್ತು ಕನ್ನಡತಿ ಧಾರಾವಾಹಿ ಮುಗಿದಿರುವ ಹಿನ್ನೆಲೆಯಲ್ಲಿ ರಂಜನಿ ಅವರೂ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಕೆಲ ತಿಂಗಳುಗಳಿಂದಲೇ ಇವರ ಹೆಸರೂ ಚಾಲ್ತಿಯಲ್ಲಿದೆ. ಇನ್ನೇನು ಬಿಗ್​ಬಾಸ್​-10 ಆರಂಭಕ್ಕೆ ಕ್ಷಣ ಗಣನೆ ಶುರುವಾಗಿದೆ. ಎರಡೇ ದಿನಗಳಲ್ಲಿ ಆಟ ಶುರುವಾಗಲಿದೆ. ಈ ನಡುವೆ, ರಂಜನಿ ಫೇಸ್​ಬುಕ್​ ಖಾತೆಯಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.

ಅದೇನೆಂದರೆ, ತಾವು ಬಿಗ್​ಬಾಸ್​ ಮನೆಗೆ ಹೋಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.  ಬಿಗ್ ಬಾಸ್​ಗೆ ಹೋಗುತ್ತಿರುವುದು ಸುದ್ದಿ ಸರಿಯಲ್ಲ  ಎಂದಿರುವ ನಟಿ, ಕರಿಯರ್​ನಲ್ಲಿ ಬೇರೆಯದೇ ಪ್ಲ್ಯಾನ್ ಇರುವುದಾಗಿ ಹೇಳಿದ್ದಾರೆ.  ‘ನಾನು ಬಿಗ್ ಬಾಸ್​ಗೆ ಹೋಗ್ತಾ ಇಲ್ಲ. ಸುಳ್ಳು ಸುದ್ದಿ. ನನ್ನ ಕರಿಯರ್ ಪ್ಲಾನ್ ಬೇರೆ ಇದೆ. ಸೂಕ್ತ ಸಮಯದಲ್ಲಿ ತಿಳಿಸುವೆ. ನಿಮ್ಮ ಪ್ರೀತಿ-ಪ್ರೋತ್ಸಾಹ ಹೀಗೆಯೇ ಇರಲಿ’ ಎಂದು ರಂಜನಿ ರಾಘವನ್ ಹೇಳಿದ್ದಾರೆ. ಇದನ್ನು ಕೇಳಿ ಹಲವರು ಒಳ್ಳೆಯ ಸುದ್ದಿ, ಬಿಗ್​ಬಾಸ್​ ಮನೆಗೆ ಹೋಗದೇ ನಿಮ್ಮ ಉಜ್ವಲ ಭವಿಷ್ಯದತ್ತ ಗಮನ ಹರಿಸಿ ಎಂದಿದ್ದರೆ, ಇನ್ನು ಕೆಲವು ಫ್ಯಾನ್ಸ್​ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮನ್ನು ದೊಡ್ಮನೆ ಒಳಗೆ ನೋಡುವ ಬಯಕೆ ಇತ್ತು ಎಂದಿದ್ದಾರೆ. 

BIGGBOSS ಮನೆಯಲ್ಲಿ 73 ಕ್ಯಾಮೆರಾ: 24 ಗಂಟೆಗಳ ಕ್ಷಣ ಕ್ಷಣದ ದೃಶ್ಯ ವಿಕ್ಷಣೆಗೆ ಈ ಬಾರಿ ಅವಕಾಶ!

ರಂಜನಿ ಅವರು ಸಾಮಾಜಿಕ ಜಾಲತಾಣದಲ್ಲಿಯೂ ಸಕತ್​ ಆ್ಯಕ್ಟೀವ್​. ಆಗಾಗ್ಗೆ ಫೋಟೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಕೆಲ ದಿನಗಳ ಹಿಂದೆ ಕೆಲವು ಫೋಟೋಗಳನ್ನು ಇನ್​​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡ ನಟಿ, ನಾನೇ ವೀಣೆ.. ನೀನೇ ತಂತಿ.. ಅವನೇ ವೈಣಿಕಾ ಎಂದಿದ್ದರು. ವೀಣೆ ಹಿಡಿದು ಅವರು ಕ್ಯೂಟ್​ ಪೋಸ್​ ನೀಡಿದ್ದರು.  ಮುತ್ತುಗಳ ನೆಕ್ಲೆಸ್, ಆಕರ್ಷಕವಾದ ಇಯರಿಂಗ್ಸ್, ಕೈಯಲ್ಲಿ ಸಿಂಗಲ್ ಬಳೆ ಧರಿಸಿದ್ದರು. ಕೆಂಬಣ್ಣದ ಪುಟ್ಟ ಬಿಂದಿನ ನಟಿಯ ಮುಖಕ್ಕೆ ಮತ್ತಷ್ಟು ಕಳೆ ಕೊಟ್ಟಿದ್ದು ಆಕರ್ಷಕ ಫೋಟೋಶೂಟ್​ನಲ್ಲಿ ಅಪ್ಪಟ ಕನ್ನಡತಿಯಾಗಿ ಕಾಣಿಸಿದ್ದರು. ಇದನ್ನು ನೋಡಿದ್ದ ಹಲವರು ಮದುವೆ ಫಿಕ್ಸಾ ಎಂದು ಪ್ರಶ್ನಿಸಿದ್ದರು. ಮದುಮಗಳಂತೆ ಮಿಂಚುತ್ತಿದ್ದೀರಿ ಎಂದು ಹಲವರು ಹೇಳಿದ್ದು, ರಂಜನಿ ಅವರು ಶೀಘ್ರದಲ್ಲಿಯೇ ಸಪ್ತಪದಿ ತುಳಿಯುವ ಮುನ್ಸೂಚನೆ ನೀಡಿದ್ದಾರೆ ಎಂದೇ ಹೇಳತೊಡಗಿದ್ದರು.

ಅಂದಹಾಗೆ ಈ ಬಾರಿ ಬಿಗ್​ಬಾಸ್​ ಹಲವು ವಿಶೇಷತೆಗಳಿಂದ ಕೂಡಿದೆ ಎಂದು ಸುದೀಪ್​ ಹಾಗೂ ಬಿಗ್​ಬಾಸ್ ತಂಡ ಪತ್ರಿಕಾಗೋಷ್ಠಿಯಲ್ಲಿ ಇದಾಗಲೇ ತಿಳಿಸಿದೆ. ಚಾರ್ಲಿ 777 ನಾಯಿಯೂ ಬಿಗ್​ಬಾಸ್​​ ಮನೆಯೊಳಕ್ಕೆ ಹೋಗಲಿದೆ. ಈ ಬಾರಿ ಇನೋವೆಟಿವ್ ಫಿಲ್ಮ್ ಸಿಟಿಯಲ್ಲಿ ಬಿಗ್ ಬಾಸ್ ನಡೆಯುತ್ತಿಲ್ಲ. ಬದಲಾಗಿ ಬೆಂಗಳೂರಿನ ದೊಡ್ಡ ಆಲದ ಮರದ ಬಳಿ ಮನೆಯನ್ನು ಹೊಸದಾಗಿ ನಿರ್ಮಾಣ ಮಾಡಲಾಗಿದೆ. ಇದು ಭಾರತದಲ್ಲೇ ಅತೀ ದೊಡ್ಡ ಬಿಗ್ ಬಾಸ್ ಮನೆ ಎಂಬ ಖ್ಯಾತಿಗೆ ಪಾತ್ರವಾಗಲಿದೆ.  

BIGGBOSS ಮನೆಗೆ ಹೋಗ್ತಿದ್ದಾರಾ 'ಜೊತೆಜೊತೆಯಲಿ' ಅನು ಸಿರಿಮನೆ? ನಟಿ ಹೇಳಿದ್ದೇನು?

Follow Us:
Download App:
  • android
  • ios