ಕಳ್ಳಿ ಸುಂದ್ರಿನೇ ತನ್ನ ಮಗ ತಾಂಡವ್​ನ ನಕಲಿ ಅಮ್ಮ ಎನ್ನುವ ಸತ್ಯ ಕುಸುಮಾಗೆ ಗೊತ್ತಾಗುತ್ತದೆಯೆ? ಆಕೆಯ ತಂತ್ರವೇನು? 

ಸುಳ್ಳಿ ಎಂಬ ಶ್ರೇಷ್ಠಾಳ ಅತ್ತೆ ಸುಂದ್ರಿ ಎಂಬ ಕಳ್ಳಿನಾ ಎನ್ನುವ ಅನುಮಾನ ಶುರುವಾಗಿದೆ ಕುಸುಮಾಗೆ. ಮನೆಯಿಂದ ಸಾಮಾನು ಕದ್ದುಕೊಂಡು ಹೋಗಿದ್ದ ಸುಂದ್ರಿಯನ್ನು ತಪ್ಪಿಸುವಲ್ಲಿ ತಾಂಡವ್​ ಯಶಸ್ವಿಯಾಗಿದ್ದಾನೆ. ಇದು ತಾಂಡವ್​-ಭಾಗ್ಯ ಮಗ ಗುಂಡನನ್ನು ಕೆರಳಿಸಿದೆ. ಅಪ್ಪನ ಮೇಲೆ ಸಂದೇಹ ಹೆಚ್ಚಾಗಿದೆ. ಆದರೆ ಆ ಕಳ್ಳಿಗೂ, ಈ ಅಪ್ಪನಿಗೂ ಸಂಬಂಧ ಏನು ಎನ್ನುವುದು ತಿಳಿಯುತ್ತಿಲ್ಲ. ಅದು ತಿಳಿಯುವುದಾದರೂ ಹೇಗೆ? ಹೆಂಡತಿ, ಇಬ್ಬರು ಮಕ್ಕಳನ್ನು ಬಿಟ್ಟು ಪ್ರೇಯಸಿಯನ್ನು ಮದುವೆಯಾಗಲು ಬಯಸಿರೋ ತಾಂಡವ್​ ಈ ಸುಂದ್ರಿಯನ್ನೇ ತನ್ನ ನಕಲಿ ಅಮ್ಮ ಮಾಡಿಕೊಂಡಿರುವ ವಿಷಯ ಕುಸುಮಾ ಮನೆಗೆ ತಿಳಿಯುವುದು ಕಷ್ಟವೇ. ಹಾಗೆನೇ ವಿಲನ್​ ಶ್ರೇಷ್ಠಾ ಮದುವೆಯಾಗುತ್ತಿರುವುದು ತನ್ನ ಮಗನನ್ನೇ ಎನ್ನುವ ಸತ್ಯ ಕುಸುಮಾಗೆ ಆಗಲೀ, ತನ್ನ ಪತಿ ಇನ್ನೊಂದು ಮದ್ವೆಯಾಗುತ್ತಿದ್ದಾನೆ ಎನ್ನುವ ಸತ್ಯ ಭಾಗ್ಯಳಿಗಾಗಲೀ, ತನ್ನ ಅಪ್ಪ ಇನ್ನೊಬ್ಬಳ ಬಲೆಗೆ ಬಿದ್ದಿರುವುದು ಮಕ್ಕಳಿಗಾಗಲಿ ತಿಳಿದಿಲ್ಲ. ಆದರೆ ಶ್ರೇಷ್ಠಾಳ ಇನ್ನೊಂದು ಮದ್ವೆಯಾಗುತ್ತಿದೆ ಎಂದಷ್ಟೆ ತಿಳಿದಿದೆ. 

ಆದರೆ ತಮ್ಮ ಮನೆಯ ಸಾಮಗ್ರಿಗಳನ್ನು ಕದ್ದುಕೊಂಡು ಹೋಗಿರುವ ಕಳ್ಳಿಯ ಮುಖ ಚೆಹರೆಯನ್ನು ತಾಂಡವ್​ ಮಗ ಗುಂಡ ಅಜ್ಜಿ ಕುಸುಮಳಿಗೆ ಹೇಳಿದ್ದಾನೆ. ಅದರ ಆಧಾರದ ಮೇಲೆ ಕುಸುಮಳಿಗೆ ಈಕೆ ಶ್ರೇಷ್ಠಾಳ ಅತ್ತೆ ಎಂಬ ಅನುಮಾನ ಕಾಡಿದೆ. ಆದರೆ ಈಕೆ ತನ್ನ ಮಗ ತಾಂಡವ್​ನ ನಕಲಿ ಅಮ್ಮ ಎನ್ನುವುದು ತಿಳಿದಿಲ್ಲ. ಸುಳ್ಳಿಯ ಅತ್ತೆ ಕಳ್ಳಿ ಇರ್ಬೋದಾ ಎಂದು ಕುಸುಮಾ ಅಂದುಕೊಂಡರೂ ಇರಲಿಕ್ಕಿಲ್ಲ ಎಂದುಕೊಂಡಿದ್ದಾಳೆ. 

'ಕೆ' ಅಕ್ಷರದ ಜ್ಯೋತಿಷಿ ಮಾತು ನೆನಪಿಸಿದ ಕೋಮಲ್​: ಕಾರ್ತಿಕ್​ಗೆ ಮಗಳ ಸಂದೇಶ ತಲುಪಿಸಿದ ಶ್ರುತಿ

ಅದೇನೇ ಇರಲಿ ಎಂದು ಶ್ರೇಷ್ಠಾಳ ಅಮ್ಮನಿಗೆ ಕರೆ ಮಾಡಿ ಬೀಗರ ಫೋಟೋ ಕಳುಹಿಸಲು ಹೇಳಿದ್ದಾಳೆ. ಶ್ರೇಷ್ಠಾಳ ಅಪ್ಪ-ಅಮ್ಮಂದಿರಿಗೋ ತನ್ನ ಮಗಳು ಕುಸುಮಾಳ ಮಗನನ್ನೇ ಬುಟ್ಟಿಗೆ ಹಾಕಿಕೊಂಡಿದ್ದಾಳೆ ಎನ್ನುವುದು ತಿಳಿದಿಲ್ಲ. ಆದರೆ ಸದ್ಯ ತನ್ನ ಬಳಿ ಅವರ ಫೋಟೋ ಇಲ್ಲ ಎಂದಿರುವ ಶ್ರೇಷ್ಠಾಳ ಅಮ್ಮ, ಆ ಫೋಟೋ ಬೇರೊಬ್ಬರ ಬಳಿ ಇದ್ದು, ಅದನ್ನು ಶೀಘ್ರದಲ್ಲಿಯೇ ಕಳಿಸುವುದಾಗಿ ಹೇಳಿದ್ದಾಳೆ. ಫೋಟೋ ಕೂಡ ಕೈಸೇರಿದೆ ಆದರೆ ಮುಂದೆ?

ಆ ಫೋಟೋ ಬರುವುದನ್ನೇ ಕುಸುಮಾ ಕಾಯುತ್ತಿದ್ದಾಳೆ. ಒಮ್ಮೆ ಫೋಟೋ ಬಂತು ಅಂದರೆ ಗುಂಡನ ಬಳಿ ಕಳ್ಳಿ ಇವಳೇನಾ ಎಂದು ಕೇಳೋಣ ಎಂದುಕೊಂಡಿದ್ದಾಳೆ. ಆದರೆ ಆ ಫೋಟೋಗಳು ಕುಸುಮಾಳ ಫೋನ್​ಗೆ ಬರುತ್ತಾ ಅಥವಾ ಬರುವ ಮೊದಲೇ ಏನಾದರೂ ಆಗಿಬಿಡುತ್ತಾ? ಏಕೆಂದರೆ ಆ ಫೋಟೋದಲ್ಲಿ ಬರಿ ಕಳ್ಳಿ ಸುಂದ್ರಿಯ ಫೋಟೋ ಇಲ್ಲ, ಬದಲಿಗೆ ಸುಂದ್ರಿ ಜೊತೆಗೆ ತಾಂಡವ್​ ಫೋಟೋ ಕೂಡ ಇದೆ. ಅದು ಫಾರ್ವರ್ಡ್​ ಆಗಬೇಕು ಎನ್ನುವಷ್ಟರಲ್ಲಿ ಏನಾಗುತ್ತದೆ? ಕುಸುಮಾ ತಂತ್ರ ಫಲಿಸತ್ತಾ ಎಂದು ಕಾದು ನೋಡಬೇಕಿದೆ. 

ಸೀರಿಯಲ್​ನಲ್ಲಿ ನಾಪತ್ತೆ, ರೀಲ್ಸ್​ನಲ್ಲಿ ಪತ್ತೆ! ಸತ್ಯ ಸೀರಿಯಲ್​ ಕೀರ್ತನಾ ಬದಲಾಗಿದ್ದೇಕೆ? ಫ್ಯಾನ್ಸ್​ ಬೇಸರ