'ಕೆ' ಅಕ್ಷರದ ಜ್ಯೋತಿಷಿ ಮಾತು ನೆನಪಿಸಿದ ಕೋಮಲ್​: ಕಾರ್ತಿಕ್​ಗೆ ಮಗಳ ಸಂದೇಶ ತಲುಪಿಸಿದ ಶ್ರುತಿ

ಬಿಗ್​ಬಾಸ್​ ಕನ್ನಡ ಸೀಸನ್​ 10 ವಿನ್ನರ್​ ಕಾರ್ತಿಕ್​ ಅವರ ಕುರಿತು ನಟರಾದ ಶ್ರುತಿ, ಕೋಮಲ್​ ಹೇಳಿದ್ದೇನು?
 

What actors Shruti and Komal said about Bigg Boss Kannada season 10 winner Karthik suc

ಬಿಗ್​ಬಾಸ್​ ಸೀಸನ್​ 10 ಮುಗಿದಿದ್ದರೂ ಹಲವರು ಇದರ ಗುಂಗಿನಿಂದ ಹೊರಬಂದಿಲ್ಲ. ಇದರ ನಡುವೆಯೇ ಬಿಗ್​ಬಾಸ್​ ಸ್ಪರ್ಧಿಗಳೇ ಹೆಚ್ಚಾಗಿ ಇರುವ  ಗಿಚ್ಚಿ-ಗಿಲಿಗಿಲಿ ಸೀಸನ್ 3 ಇದೇ 3ನೇ ತಾರೀಖಿನಿಂದ ಶುರುವಾಗಲಿದೆ. ಇದರ ಪ್ರೊಮೋಷನ್​ಗೆ ಬಂದ ಬಿಗ್​ಬಾಸ್​ ವಿನ್ನರ್​ ಕಾರ್ತಿಕ್​ ನಟರಾದ ಶ್ರುತಿ, ಕೋಮಲ್​  ಸೇರಿದಂತೆ ಅಭಿಮಾನಿಗಳ ಜೊತೆಯೂ ಮಾತನಾಡಿದ್ದು, ಅದರ ಪ್ರೊಮೋ ಇದೀಗ ಬಿಡುಗಡೆಯಾಗಿದೆ. ಇದರಲ್ಲಿ ಶ್ರುತಿ ಅವರು ತಮ್ಮ ಮಗಳ ಸಂದೇಶವನ್ನು ಕಾರ್ತಿಕ್​ ಅವರಿಗೆ ತಲುಪಿಸಿದ್ದರೆ, ಕ ಅಕ್ಷರದ ಬಗ್ಗೆ ಜ್ಯೋತಿಷಿ ಹೇಳಿದ ಮಾತನ್ನು ನೆನಪಿಸಿದ್ದಾರೆ ಕೋಮಲ್​. ಹಾಗಿದ್ದರೆ ಇವರೇನು ಹೇಳಿದ್ರು ನೋಡೋಣ.

ಮೊದಲಿಗೆ ಶ್ರುತಿ ಅವರ ಬಳಿ ಮಾತನಾಡಿದ ಕಾರ್ತಿಕ್​, ನೀವು ಕೊಟ್ಟಿರುವ ಇನ್​ಪುಟ್ಸ್​ನಿಂದ ಬಿಗ್​ಬಾಸ್​ ವಿನ್ನರ್​ ಎನಿಸಿಕೊಂಡಿದ್ದೇನೆ. ನೀವೇನು ಹೇಳುತ್ತೀರಿ ಎಂದು  ಪ್ರಶ್ನಿಸಿದ್ದಾರೆ. ಆಗ ಶ್ರುತಿ ಅವರು, ಇನ್​ಪುಟ್ಸ್​ ಎನ್ನೋದೆಲ್ಲಾ ಸುಳ್ಳು. ನೀವು ಚೆನ್ನಾಗಿ ಆಡಿದ್ರಿ ಅಷ್ಟೇ ಎಂದರು. ಈ ಸೀಸನ್​ನಲ್ಲಿ ಪ್ರತಿಯೊಬ್ಬರಿಗೂ ಏನು ಮಾಡಿದ್ರೆ ಸರಿ, ಏನು ಮಾಡಿದ್ರೆ ತಪ್ಪು ಎನ್ನುವ ಕ್ಲಾರಿಟಿ ಇಟ್ಟುಕೊಂಡು ಹೋಗಿದ್ದೀರಿ. ತುಂಬಾ ಜನರ ಮನಸ್ಸನ್ನು ಕದ್ದಿದ್ದೀರಿ, ಗೆದ್ದಿದ್ದೀರಿ. ಯಾವುದೇ ಸೀಸನ್​ನಲ್ಲಿಯೂ ಇಲ್ಲದಿರುವಂಥ ವೋಟಿಂಗ್​ ಈ ಬಾರಿ ಬಂದಿದೆ ಎಂದರು.

ಪ್ರತಾಪ್​ ಹೀರೋ ಆದ್ರೆ ಫ್ರೀಯಾಗಿ ವಿಲನ್​ ಆಗುವೆ! ಡ್ರೋನ್​ ಆ್ಯಕ್ಟಿಂಗ್​ ಬಗ್ಗೆ ವಿನಯ್​ ಗೌಡ ಹೇಳಿದ್ದೇನು?

ಬಳಿಕ ತಮ್ಮ ಮಗಳ ಸಂದೇಶವನ್ನು ತಲುಪಿಸಿದರು. ಅದೇನೆಂದರೆ, ಗೆಸ್ಟ್​ ಆಗಿ ಬಿಗ್​ಬಾಸ್​ ಮನೆಯೊಳಕ್ಕೆ ಹೋಗುವಾಗ ನನ್ನ ಮಗಳು ಹೇಳಿ ಕಳಿಸಿದ್ಲು. ಕಾರ್ತಿಕ್​ ನನ್ನ ಫೆವರೆಟ್​ ಸ್ಪರ್ಧಿ ಎಂದು ಅವರಿಗೆ ಹೇಳು ಅಂತ ಹೇಳಿದ್ಲು. ಆದರೆ ನಾನು ಜಡ್ಜ್​ ಆಗಿ ಬಂದಿದ್ದೆ. ಆದ್ದರಿಂದ ಆ ಸಮಯದಲ್ಲಿ ಅದನ್ನು ಹೇಳುವುದು ಸೂಕ್ತವಾಗಿರಲಿಲ್ಲ. ಆದ್ದರಿಂದ ಈಗ ಹೇಳ್ತಾ ಇದ್ದೇನೆ. ನನ್ನ ಮಗಳಿಗೂ ನೀವೇ ಫೆವರೆಟ್​. ಅಷ್ಟೇ ಅಲ್ಲದೇ  ನೀವು ಇಡೀ ಕರ್ನಾಟಕದ ಫೆವರೆಟ್​ ಎಂದಿದ್ದಾರೆ. ಇದೇ ವೇಳೆ ಗಿಲಿಗಿಚ್ಚಿ ಗಿಲಿಗಿಲಿಯ ಕುರಿತು ಮಾತನಾಡಿದ ಕಾರ್ತಿಕ್​, ಕಳೆದ ಎರಡು ಸೀಸನ್​ಗಳು ತುಂಬಾ ಅದ್ಭುತವಾಗಿ ಮೂಡಿಬಂದಿದೆ. ಜನರನ್ನು ನಗಿಸುವುದು ತುಂಬಾ ಕಷ್ಟ. ಗಿಲಿಗಿಚ್ಚಿ ತುಂಬಾ ಚೆನ್ನಾಗಿ ಮೂಡಿಬರಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ. ಜೊತೆಗೆ  ಚಿಕ್ಕ ವಯಸ್ಸಿನಿಂದಲೂ ಶ್ರುತಿ ಮೇಡಂ ಅವರನ್ನು ನೋಡ್ತಾ ಇದ್ದೇವೆ. ಅವರಿನ್ನೂ ಚಿಕ್ಕ ವಯಸ್ಸಿನಲ್ಲಿಯೇ ಇದ್ದಾರೆ ಎಂದೂ ತಮಾಷೆ ಮಾಡಿದ್ದಾರೆ.

ಇದೇ ವೇಳೆ, ಕೋಮಲ್​ ಅವರೂ ಮಾತನಾಡಿದ್ದಾರೆ.  ಕೋಮಲ್​ ಕೂಡ ಕಾರ್ತಿಕ್​ ಅವರಿಗೆ ಶುಭಾಶಯ ಹೇಳುತ್ತಲೇ ಕಿವಿ ಮಾತು ಹೇಳಿದರು. ತುಂಬಾ ಜನರ ಅಭಿಮಾನ ಪಡೆದುಕೊಂಡಿದ್ದೀರಾ. ಸಿನಿಮಾದಲ್ಲಿಯೂ ಅವಕಾಶ ಸಿಗಬಹುದು. ಹಾಗೆಂದು ಯಾವ್ಯಾವುದೋ ಸಿನಿಮಾ ಒಪ್ಪಿಕೊಳ್ಳಬೇಡಿ. ಕರಿಯಲ್​ ಗ್ರೋ ಆಗುವಂಥ ಸಿನಿಮಾ ಒಪ್ಪಿಕೊಳ್ಳಿ ಎಂದಿದ್ದಾರೆ. ಕಾರ್ತಿಕ್​ ಗೆಲ್ಲಬೇಕು ಎಂದೇ ಸೋಷಿಯಲ್​ ಮೀಡಿಯಾಗಳಲ್ಲಿಯೂ ಹೇಳ್ತಾನೇ ಇದ್ರು. ಹಾಗೆ ನೀವು ಗೆದ್ದಿದ್ದೀರಾ ಎಂದ ಕೋಮಲ್​ ಅವರು, 'ಕೆ' ಅಕ್ಷರಕ್ಕೆ ಈಗ ಒಳ್ಳೆಯ ಟೈಂ ಎಂದು ಜ್ಯೋತಿಷಿ ಒಬ್ಬರು ಹೇಳಿದ್ರು. ನಿಮ್ಮ ವಿಷಯದಲ್ಲಿ ನಿಜವಾಗಿದೆ ಎಂದರು.  

ಸಲ್ಮಾನ್​ ಖಾನ್​ ಚಿತ್ರದಲ್ಲಿ ರಿಜೆಕ್ಟ್​ ಆಗಿದ್ದ 'ಜೈ ಹೋ'ಗೆ ಆಸ್ಕರ್​ ಪ್ರಶಸ್ತಿ: ಎ.ಆರ್​.ರೆಹಮಾನ್​ ಹೇಳಿದ್ದೇನು?

Latest Videos
Follow Us:
Download App:
  • android
  • ios