ಸತ್ಯ ಸೀರಿಯಲ್​ ಕೀರ್ತನಾ ಪಾತ್ರಧಾನಿ ಅನು ಜನಾರ್ದನ ಸೀರಿಯಲ್​ ಬಿಟ್ಟಿದ್ದಾರೆ. ರೀಲ್ಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಹೇಳ್ತಿರೋದೇನು? 

ಟಿ.ವಿ. ಧಾರಾವಾಹಿಗಳು ಇಂದು ಎಷ್ಟೋ ಮಂದಿಗೆ ಅದರಲ್ಲಿಯೂ ಮಹಿಳೆಯರ ಪ್ರಾಣವಾಗಿಬಿಟ್ಟಿದೆ. ಚಿಕ್ಕ ಕಥೆಯನ್ನು ವರ್ಷಗಟ್ಟಲೆ ಎಳೆಯುತ್ತಾರೆ, ಮಹಿಳೆಯರನ್ನೇ ವಿಲನ್‌ (Villian) ಆಗಿ ತೋರಿಸುತ್ತಾರೆ, ಅಕ್ರಮ ಸಂಬಂಧ, ಅತ್ತೆ-ಸೊಸೆ ಜಗಳ, ಎರಡು ಮದುವೆ, ಮದುವೆಯಾದರೂ ದಂಪತಿ ನಡುವೆ ಸಂಬಂಧ ಇಲ್ಲದೇ ಇರುವುದು... ಹೀಗೆ ಒಂದೇ ರೀತಿಯ ಕಥೆಯನ್ನು ವಿಭಿನ್ನವಾಗಿ ತೋರಿಸುತ್ತಾರೆ ಎಂದೆಲ್ಲಾ ಪ್ರತಿನಿತ್ಯ ದೂಷಿಸುತ್ತಲೇ, ಧಾರಾವಾಹಿಯನ್ನು ಗೊಣಗುತ್ತಲೇ ಒಂದು ದಿನವೂ ಮಿಸ್‌ ಮಾಡದೇ ನೋಡುವ ಮಹಿಳೆಯರ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲಿ ಇದೆ. ಇದೇ ಕಾರಣಕ್ಕೆ ಬಹುತೇಕ ಎಲ್ಲಾ ಚಾನೆಲ್‌ಗಳಲ್ಲಿ ಧಾರಾವಾಹಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ರಾತ್ರಿ ಮಾತ್ರ ಪ್ರಸಾರವಾಗುತ್ತಿದ್ದ ಧಾರಾವಾಹಿಗಳು ಮಧ್ಯಾಹ್ನ ಕೂಡ ಪ್ರಸಾರ ಆಗುವಷ್ಟರ ಮಟ್ಟಿಗೆ ಇದರ ಬೇಡಿಕೆ ಹೆಚ್ಚಿದೆ. ಅದೇ ರೀತಿ ಧಾರಾವಾಹಿಯ ಪಾತ್ರಧಾರಿಗಳೂ ಜನರಿಗೆ ಆಪ್ತರಾಗಿಬಿಡುತ್ತಾರೆ. ತಮ್ಮದೇ ಮನೆಯ ಕಥೆಯಂತೆ ನೋಡುವ ಜನರು, ಆ ಪಾತ್ರಧಾರಿಗಳಲ್ಲಿಯೂ ತಮ್ಮನ್ನೇ ತಾವು ಪ್ರತಿಬಿಂಬಿಸಿಕೊಳ್ಳುವುದು ಇದೆ.

Add Asianetnews Kannada as a Preferred SourcegooglePreferred

ಅದರೆ ಕೆಲವೊಂದು ಧಾರಾವಾಹಿಗಳು ವಿಭಿನ್ನ ಎನಿಸಿಕೊಂಡು ಜನರನ್ನು ಇನ್ನಷ್ಟು ಹತ್ತಿರಗೊಳಿಸುತ್ತದೆ. ಅಂಥ ಧಾರಾವಾಹಿಗಳಲ್ಲಿ ಒಂದು ಜೀ ಟಿ.ವಿಯಲ್ಲಿ ನಿತ್ಯ ಪ್ರಸಾರವಾಗ್ತಿರೋ ಸತ್ಯ (Sathya) ಧಾರಾವಾಹಿ. ಈ ಧಾರಾವಾಹಿ ಕಳೆದ ಎರಡೂವರೆ ವರ್ಷಗಳಿಂದ ಜನಮನ ಗೆದ್ದಿದೆ. 2020ರ ಡಿಸೆಂಬರ್​ನಿಂದ ಪ್ರಸಾರವಾಗ್ತಿರೋ ಈ ಧಾರಾವಾಹಿಗೆ ಅದರದ್ದೇ ಆದ ಪ್ರೇಕ್ಷಕರಿದ್ದಾರೆ. ಮಾಮೂಲು ಧಾರಾವಾಹಿಗಳಂತೆ ನಾಯಕಿ, ಮನೆಯಲ್ಲೊಬ್ಬಳು ವಿಲನ್​ ಕಥಾ ವಸ್ತು ಇದ್ದರೂ ಬೇರೆ ಧಾರಾವಾಹಿಗಳಿಗಿಂತಲೂ ತುಸು ಭಿನ್ನ ಎನ್ನುವಂಥ ಪಾತ್ರ ಇದರಲ್ಲಿ ಇರುವ ಕಾರಣ ಜನರಿಗೆ ಇದು ತುಂಬಾ ಇಷ್ಟವಾಗುತ್ತಿದೆ. ಗಂಡುಬೀರಿಯಂತಿದ್ದ ನಾಯಕಿ ಸತ್ಯ ಅನಿವಾರ್ಯವಾಗಿ ಮದುವೆಯಾಗಿ ಸಂಪ್ರದಾಯಸ್ಥ ಕುಟುಂಬದಲ್ಲಿ ಹೊಂದಿಕೊಳ್ಳಲು ಹೆಣಗಾಡುವುದು, ಇವಳು ಹೊಂದಿಕೊಳ್ಳಲು ನೋಡಿದರೂ ಅತ್ತೆಗೆ ಇವಳನ್ನು ಕಂಡರೆ ಆಗಿರುವುದು, ಪತ್ನಿಯನ್ನು ಕಂಡರೆ ಸಿಡಿಮಿಡಿ ಎನ್ನುತ್ತಿರುವ ಗಂಡ ಕಾರ್ತೀಕ್​ಗೆ ಕೊನೆಗೂ ಪತ್ನಿ ಮೇಲೆ ಲವ್​ ಆಗುವುದು... ಹೀಗೆ ಒಂದು ಸಂಸಾರದ ಸುತ್ತಲೂ ಹೆಣೆದಿರುವ ಈ ಕಥೆಯಲ್ಲಿ ನಾಯಕಿಯಂತೆಯೇ ಎಲ್ಲರ ಗಮನ ಸೆಳೆಯುವುದು ವಿಲನ್​ ಪಾತ್ರಧಾರಿ ಕೀರ್ತನಾ. 

ಕೆಲ್ಸನೇ ಇಲ್ಲದವ್ನಿಗೆ ಲವ್ ಯಾಕೆ ಅಂತ ಇವ್ರು... ಮಿಲೇನಿಯರ್​ ಮಕ್ಳಿಗೆ ಕೆಲ್ಸ ಯಾಕೆ ಅಂತ ಅವ್ರು... ಯಾರು ಸರಿ?

ಸುಂದರಿ ಕೀರ್ತನಾ ಅವರನ್ನು ನೋಡಿದಾಗ ವಿಲನ್​ ಎಂದು ಕರೆಯುವುದು ಹೆಚ್ಚಿನವರಿಗೆ ಸಹ್ಯ ಎನ್ನಿಸದಿದ್ದರೂ ತಮ್ಮ ಅದ್ಭುತ ನಟನೆಯಿಂದ ಥೇಟ್​ ಮನೆಹಾಳಿಯಂತೆಯೇ ಕಾಣಿಸಿಕೊಳ್ಳುತ್ತಿದ್ದಾರೆ ಕೀರ್ತನಾ. ಮದುವೆಯಾದರೂ ತವರಿನಲ್ಲಿಯೇ ಇದ್ದು, ತಮ್ಮನ ಪತ್ನಿಯ (ನಾಯಕಿ ಸತ್ಯ) ಮೇಲೆ ಸದಾ ಕುತಂತ್ರ ಹೆಣೆಯುತ್ತಾ ಇರುವ ಈ ಕೀರ್ತನಾ ಪಾತ್ರಧಾರಿಯಾಗಿದ್ದವರು ಅನು ಜನಾರ್ದನ. ಆದರೆ ಕೆಲ ಸಂಚಿಕೆಗಳಿಂದ ಅನು ಜನಾರ್ದನ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ದಿಢೀರ್​ ಎಂದು ಕೀರ್ತನಾ ಪಾತ್ರಧಾರಿ ಬದಲಾಗಿದ್ದಾರೆ. ಇದರಿಂದ ಅಭಿಮಾನಿಗಳಿಗೆ ಸಕತ್​ ಬೇಸರವಾಗಿದೆ. ಹಲವು ತಿಂಗಳುಗಳಿಂದ ಒಂದೇ ಮುಖವನ್ನು ಒಂದು ಪಾತ್ರದಲ್ಲಿ ನೋಡುತ್ತಿರುವ ಅಭಿಮಾನಿಗಳಿಗೆ ಇಂಥದ್ದೊಂದು ಬೇಸರ ಸಹಜವಾದದ್ದೇ. ಅದರಲ್ಲಿಯೂ ಸ್ಟೈಲಿಷ್​ ಆಗಿ, ಕೀರ್ತನಾ ಪಾತ್ರವನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಿದ್ದ ಅನು ಜನಾರ್ದನ ಅವರು ಹೀಗೆ ದಿಢೀರ್​ ನಾಪತ್ತೆಯಾಗಿರುವುದು ಅಭಿಮಾನಿಗಳಿಗೆ ಶಾಕ್​ ಆಗಿದೆ.

ವೈಯಕ್ತಿಕ ಕಾರಣಗಳಿಂದ ಅನು ಅವರು ಸತ್ಯ ಸೀರಿಯಲ್​ ಬಿಟ್ಟು ಹೋಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಇವರು ಸೀರಿಯಲ್​ ಬಿಟ್ಟು ಹೋಗಿರುವ ಹಿಂದಿನ ಸತ್ಯ ಇನ್ನೂ ಬಯಲಾಗಿಲ್ಲ. ಇವರಿಗೆ ಬೇರೆ ಒಳ್ಳೆಯ ಅವಕಾಶಗಳು ಸಿಕ್ಕವೇ ಅಥವಾ ಇನ್ನೇನು ಕಾರಣವೇ ಎನ್ನುವುದು ತಿಳಿದುಬಂದಿಲ್ಲ. ಸತ್ಯ ಸೀರಿಯಲ್​ ತಂಡ ಕೂಡ ಅನು ಜನಾರ್ದನ ಅವರಿಗೆ ಬೀಳ್ಕೊಡುಗೆ ಕೊಟ್ಟಿದೆ ಎನ್ನಲಾಗುತ್ತಿದ್ದು, ಅದರ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿರುವ ಅನು, ರೀಲ್ಸ್​ ಶೇರ್​ ಮಾಡುತ್ತಲೇ ಇರುತ್ತಾರೆ. ಇದೀಗ ಇನ್ನೊಂದು ರೀಲ್ಸ್​ ಶೇರ್​ ಮಾಡಿದ್ದಾರೆ. ಈ ರೀಲ್ಸ್​ಗೆ ಕಮೆಂಟ್​ಗಳ ಸುರಿಮಳೆಯೇ ಆಗುತ್ತಿದೆ. ಆದರೆ ಕಮೆಂಟಿಗರು ರೀಲ್ಸ್​ ಬಗ್ಗೆಯಲ್ಲ, ಬದಲಿಗೆ ಸತ್ಯ ಸೀರಿಯಲ್​ ಬಿಟ್ಟ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ನೀವಿಲ್ಲದ ಸತ್ಯ ಸೀರಿಯಲ್​ ನೆನೆಪಿಸಿಕೊಳ್ಳುವುದೂ ಕಷ್ಟ. ನಿಮ್ಮ ಸುಂದರ ಮುಖವನ್ನು ನಾವು ಮಿಸ್​ ಮಾಡಿಕೊಳ್ಳುತ್ತಿದ್ದೇವೆ ಎಂದೆಲ್ಲಾ ಹೇಳುತ್ತಿದ್ದಾರೆ. 

'ಕೆ' ಅಕ್ಷರದ ಜ್ಯೋತಿಷಿ ಮಾತು ನೆನಪಿಸಿದ ಕೋಮಲ್​: ಕಾರ್ತಿಕ್​ಗೆ ಮಗಳ ಸಂದೇಶ ತಲುಪಿಸಿದ ಶ್ರುತಿ

View post on Instagram