ಕಲರ್ಸ್‌ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಕನ್ನಡತಿ'ಯಲ್ಲಿ ಪ್ರಮುಖ ಪಾತ್ರಧಾರಿ ಭುವಿ ಮಾತ್ರವಲ್ಲ, ಇನ್ನಿತರೆ ಪಾತ್ರಗಳೂ ತಮ್ಮ ಆದ ಕಾರಣಕ್ಕೆ ವಿಶೇಷ ಮಹತ್ವ ಪಡೆದುಕೊಂಡಿವೆ. ಪಾತ್ರಧಾರಿಗಳು ಪಾತ್ರಕ್ಕೆ ಜೀವ ತುಂಬಿರುವುದರಿಂದ ಪ್ರತಿಯೊಬ್ಬರೂ ಮನೆ ಮನೆ ಮಾತಾಗಿದ್ದಾರೆ. ಬೋಲ್ಡ್‌ ಸುಂದರಿ ವರುಧಿನಿಗೆ ಬೌಲ್ಡ್‌ ಆಗದವರಿಲ್ಲ, ಆದರೆ ವರುಧಿನಿ ಕಲರ್ಸ್ ಕನ್ನಡ ಅನುಬಂಧ ಅವಾರ್ಡ್‌ ಶೋಗೆ ಯಾಕೆ ಬರಲಿಲ್ಲ ಎಂಬುದು ಎಲ್ಲರನ್ನೂ ಕಾಡುತ್ತಿರುವ ಏಕೈಕ ಪ್ರಶ್ನೆ...

Kia Sonet ಕಾರು ತಗೊಂಡ್ರು ಕನ್ನಡತಿ ನಟಿ: ವರುಧಿನಿ ಖುಷಿ ನೋಡಿ..!

ಕಲರ್ಸ್‌ ಕನ್ನಡ ಅನುಬಂಧ ಅವಾರ್ಡ್‌ ಕಾರ್ಯಕ್ರಮ ಎರಡು ದಿನಗಳ ಕಾಲ ದೊಡ್ಡ ಮಟ್ಟದಲ್ಲಿ ನಡೆಯಿತ್ತು. ಜನ ಮೆಚ್ಚಿದ ಹಾಗೂ ಮನೆ ಮೆಚ್ಚಿದ ಅವಾರ್ಡ್‌ ಪಡೆದ ಕಲಾವಿದರು ಸಂಭ್ರಮಿಸಿದರು. ಸಣ್ಣ ಪಾತ್ರವಿರಲಿ, ದೊಡ್ಡ ಪಾತ್ರವಿರಲಿ ಇಡೀ ಧಾರಾವಾಹಿ ತಂಡವೇ ಕಾರ್ಯಕ್ರಮದಲ್ಲಿತ್ತು. ಆದರೆ, ವರುಧಿನಿ ಅಲಿಯಾಸಾ ಸಾರಾ ಅಣ್ಣಯ್ಯ ಮಾತ್ರ ಮಿಸ್ಸಿಂಗ್.

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫ್ಯಾನ್ಸ್ ಹೊಂದಿರುವ ಸಾರಾ ಪರವಾಗಿ  ವಾಹಿನಿಯವರನ್ನು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಅಭಿಮಾನಿಗಳು ಟ್ರೋಲ್ ಕ್ರಿಯೇಟ್ ಮಾಡುತ್ತಿದ್ದಾರೆ. ಒಬ್ಬ ವ್ಯಕ್ತಿ: ವರುಧಿನಿ ಯಾಕೆ ಬಂದಿರಲಿಲ್ಲ? ಎಂದು ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಅಜ್ಜಿ: ಆಕಿ ಜೈಲಲ್ಲಿ ಇದ್ದಾಳೆ ಅದಕ್ಕೆ ಬಂದಿಲ್ಲ, ಎಂದೇ ಉತ್ತರ ನೀಡಿದ್ದಾರೆ.

ಹಾಟ್ ಫೊಟೋ ಪೋಸ್ಟ್ ಮಾಡಿದ್ರು ನಟಿ: ಫ್ಯಾನ್ಸ್ ಕಮೆಂಟ್ಸ್ ಹೀಗಿತ್ತು..!

ತನ್ನ ಹೀರೋಗೆ ಯಾವುದೇ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಮಾಡದ ತಪ್ಪನ್ನು ತಮ್ಮ ಮೇಲೆಳೆದುಕೊಂಡು ಜೈಲಿನಲ್ಲಿರುವ ವರುಧಿನಿಯನ್ನು ವೀಕ್ಷಕರು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಹರ್ಷಾನೇ ಬೇಲ್ ಕೊಡಿಸಲುತ್ತಾನೋ? ಅಥವಾ ಸಾನಿಯಾ ಮತ್ತೊಂದು ಪ್ಲಾನ್ ಮಾಡುತ್ತಾಳೋ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಕನ್ನಡತಿ ಮಿಸ್ ಮಾಡಿಕೊಳ್ಳಲು ವೀಕ್ಷಕರಿಗೆ ಸಾಧ್ಯವೇ ಇಲ್ಲ ಎನ್ನುವಂತಾಗಿದೆ.