ಸದ್ಯ ಕಿರುತೆರೆಯ ನಂ.1 ಸೀರಿಯಲ್ ಸತ್ಯಾ. ಇದರಲ್ಲಿ ಟಾಮ್ ಬಾಯ್ ಹುಡ್ಗಿ ಸತ್ಯಾ ಪಾತ್ರ ಮಾಡಿರೋದು ಗೌತಮಿ ಜಾಧವ್. ಈಕೆಗೆ ಕಿರುತೆರೆ ಸಿನಿಮಾ ಹೊಸತಲ್ಲ. 2021 ರ ಫೇಮಸ್ ಸೀರಿಯಲ್ 'ನಾಗರ ಪಂಚಮಿ'ಯಲ್ಲಿ ಈಕೆ ನಟಿಸಿದ್ರು. ಆ ಬಳಿಕ ಸಿನಿಮಾ ಫೀಲ್ಡ್ ಗೆ ಹೋದ ಗೌತಮಿ 'ಲೂಟಿ', 'ಆದ್ಯಾ', 'ಕಿನಾರೆ' ಮೊದಲಾದ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಇನ್ನೊಂದು ತಮಿಳು ಸಿನಿಮಾದಲ್ಲೂ ನಟಿಸಿದ್ದಾರೆ. ಸಹಜ ನಟನೆಗೆ ಹೆಸರಾದ ಈಕೆಗೆ ಸಿನಿಮಾ ಯಾಕೋ ಕೈ ಹಿಡೀಲಿಲ್ಲ. ಸೀರಿಯಲ್ ಜಗತ್ತು ಕೈ ಬಿಡಲಿಲ್ಲ. ಈಗ 'ಸತ್ಯಾ' ಸೀರಿಯಲ್ ನ ಟಾಮ್ ಬಾಯ್ ಪಾತ್ರಕ್ಕೆ ಜೀವದುಂಬಿ ನಟಿಸುತ್ತಿದ್ದಾರೆ. ಪಕ್ಕಾ ಟಾಮ್ ಬಾಯ್ ಪಾತ್ರವಿದು. ಬಾಯ್ ಕಟ್ ಹೇರ್, ಟೀ ಶರ್ಟ್ ಮೇಲೊಂದು ಅಂಗಿ ತೊಟ್ಟು ಬುಲೆಟ್ ಏರಿ ಪಕ್ಕಾ ರೌಡಿ ಸ್ಟೈಲ್ ನಲ್ಲಿ ಎಂಟ್ರಿ ಕೊಡೋ ಸತ್ಯಾ ಇಡೀ ಕನ್ನಡ ಸೀರಿಯಲ್ಗೇ ಡಿಫರೆಂಟ್ ಲುಕ್ನಲ್ಲಿರೋಳು. ಉಳಿದೆಲ್ಲ ಸೀರಿಯಲ್ ಹುಡುಗೀರು ಬಕೆಟ್ ಗಟ್ಟಲೆ ಕಣ್ಣೀರು ಸುರಿಸಿಕೊಂಡು, ಸಿಕ್ಕಾಪಟ್ಟೆ ಒಳ್ಳೆತನದ ಫೋಸ್‌ನಲ್ಲಿ ಕಾಣಿಸಿಕೊಂಡರೆ, ಈಕೆ ಮಾತ್ರ ರಗಡ್. ಆತ್ಮ ವಂಚನೆ ಮಾಡಿಕೊಳ್ಳದೇ ನೇರವಾಗಿ ಅನಿಸಿದ್ದನ್ನು ಮಾಡೋಳು. ಅದದೇ ಅಳುಮಂಜಿಯ ಪಾತ್ರ, ಅತೀ ಒಳ್ಳೆತನದ ಹೀರೋಯಿನ್‌ಗಳನ್ನು ನೋಡಿ ನೋಡಿ ಸಾಕಾದ ಕಿರುತೆರೆ ಪ್ರೇಕ್ಷಕರು ಇದೀಗ 'ಸತ್ಯಾ'ಗೆ ವಿಷಲ್ ಹೊಡೀತಿದ್ದಾರೆ. ಹೊರಗಿನಿಂದ ಸಖತ್ ಖಡಕ್ ಅನಿಸೋ ಈ ಸತ್ಯಾ ಒಳಗಿನಿಂದ ಬೆಣ್ಣೆಗಿಂತ ಹೆಚ್ಚು ಮೃದು ಅನ್ನೋದನ್ನು ಮನಸಾರೆ ಒಪ್ಪಿಕೊಂಡಿದ್ದಾರೆ. ಒಟ್ಟಾರೆ, ಅತಿಯಾದ ಸ್ವೀಟ್‌ನ ನಡುವೆ ಅಪರೂಪಕ್ಕೆ ಬರುವ ಖಾರದ ಹಾಗೆ ಈ ಸತ್ಯಾ ಎಂಟ್ರಿಯಾಗಿದೆ. 

ಗೌಡ್ರ ಹುಡುಗ ಬೇಕೆಂದು ತೆಲುಗು ಹುಡುಗನನ್ನು ಪ್ರೀತಿಸುತ್ತಿದ್ದಾರಾ ರಚಿತಾ ರಾಮ್? ...

ಇಷ್ಟೆಲ್ಲ ರಗಡ್ ಆಗಿರೋ ಸತ್ಯಾ ರಿಯಲ್ ನಲ್ಲೂ ಹೀಗೇನಾ ಅಂದ್ರೆ, 'ನಾನು ಕಂಪ್ಲೀಟ್ ಉಲ್ಟಾ' ಅಂತಾರೆ ಗೌತಮಿ. ರಿಯಲ್ ನಲ್ಲಿ ಇವರು ಸಖತ್ ಗರ್ಲಿಶ್ ಆಗಿರೋರು. ಸತ್ಯಾ ಪಾತ್ರಕ್ಕೆ ವಿರುದ್ಧವಾಗಿ ತುಂಬ ಮೃದು ಸ್ವಭಾವದ ಸೂಕ್ಷ್ಮ ಮನಸ್ಸಿನ ಹುಡುಗಿ. ಯಾರನ್ನೂ ಬೈದು ಅಭ್ಯಾಸ ಇಲ್ಲ. ಜೋರಾಗಿ ಮಾತಾಡಿಯೂ ಗೊತ್ತಿಲ್ಲದ ಹುಡುಗಿ. ಶುರು ಶುರುವಿನಲ್ಲಿ ಈ ಪಾತ್ರ ನಿಭಾಯಿಸಲು ಗೌತಮಿ ಒಂಚೂರು ಕಷ್ಟಪಡಬೇಕಾಯ್ತು. ಆದರೆ ನಟನೆ ಅಂದ್ರೆ ನೀರು ಕುಡಿದಷ್ಟೇ ಸಲೀಸಾದ ಈಕೆ ಕ್ರಮೇಣ ಸತ್ಯಾ ಪಾತ್ರಕ್ಕೆ ಹೊಂದಿಕೊಳ್ಳುತ್ತಾ ಹೋದರು. ಗೌತಮಿ ಮನೆಯಲ್ಲಿ ಚೆಂದದ ನಾಯಿಯೊಂದಿದೆ. ಅದರ ಬರ್ತ್ ಡೇ ಸೆಲೆಬ್ರೇಶನ್ ಮಾಡೋದ್ರಿಂದ ಹಿಡಿದು ಅದರ ಜೊತೆಗೆ ಆಡೋದು, ಓಡೋದು, ಸ್ನಾನ ಮಾಡಿಸೋದು ಇವೆಲ್ಲ ಈಕೆಗೆ ಬಹಳ ಇಷ್ಟ. ಈಕೆಯ ಇನ್ ಸ್ಟಾ ಅಕೌಂಟ್ ಇವರೆಂಥಾ ನಾಯಿಮುದ್ದು ಅನ್ನೋದು ಗೊತ್ತಾಗುತ್ತೆ. ಜೊತೆಗೆ ಬಾಯ್ ಕಟ್ ನಲ್ಲೇ ಗೌತಮಿಯನ್ನು ನೋಡಿದವರಿಗೆ ಅವರು ಫುಲ್ ಹೇರ್ ನಲ್ಲಿ ಹೇಗೆ ಕಾಣ್ತಾರೆ ಅನ್ನೋದೂ ತಿಳಿಯುತ್ತೆ. 

2020ರಲ್ಲಿ ಅತಿ ಹೆಚ್ಚು ಗಾಸಿಪ್‌ ಕ್ರಿಯೇಟ್‌ ಮಾಡಿಕೊಂಡ ನಟ, ನಟಿಯರಿವರು! ...

ಇದೆಲ್ಲಕ್ಕಿಂತ ಮುಖ್ಯ ವಿಷ್ಯ ಅಂದ್ರೆ ಸೀರಿಯಲ್ ನಲ್ಲಿ ಇನ್ನೂ ಮದ್ವೆಯಾಗದ ಚಿಕ್ಕ ಹುಡುಗಿ ಥರ ಕಾಣ್ತಾರೆ ಗೌತಮಿ. ತುಂಬು ಅಂತಃಕರಣದ ಈಕೆಯನ್ನು ಸೀರಿಯಲ್ ನೋಡಿದ ಹುಡುಗ್ರೂ ಬಹಳ ಇಷ್ಟಪಡ್ತಿದ್ದಾರೆ. ಆದ್ರೆ ಲೈನ್ ಹೊಡೆಯೋ ಹಾಗಿಲ್ಲ. ಏಕಂದ್ರೆ ಈಕೆ ವಿವಾಹಿತೆ. ಗೌತಮಿ ಗಂಡನೂ ಸಿನಿಮಾ ಇಂಡಸ್ಟ್ರಿಯವರೇ. ಹಾಂ, ಹೀಗಂದ ಕೂಡಲೇ ಯಾರೋ ನಟ ಇರ್ಬೇಕು ಅಂಬ್ಕೋಬೇಡಿ. ಗೌತಮಿ ಪತಿ ಸಿನಿಮಾಟೋಗ್ರಾಫರ್. ಹೆಸರು ಅಭಿಷೇಕ್ ಕಾಸರಗೋಡು. ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಪುತ್ರ. ಪುನೀತ್ ರಾಜ್‌ಕುಮಾರ್ ಬ್ಯಾನರ್‌ನಲ್ಲಿ ಬಂದ ಮಾಯಾಬಜಾರ್‌ನ ಸಿನಿಮಟೋಗ್ರಾಫರ್ ಇವರೇ. ಆಪರೇಶನ್ ಅಲುಮೇಲಮ್ಮ ಮೂಲಕ ಸ್ಯಾಂಡಲ್‌ವುಡ್ ಗೆ ಎಂಟ್ರಿಕೊಟ್ಟ ಪ್ರತಿಭಾವಂತ. ಅನಂತ್‌ ವರ್ಸಸ್ ನುಸ್ರತ್ ಇವರ ಸಿನಿಮಾಟೋಗ್ರಫಿ ಇರುವ ಮತ್ತೊಂದು ಸಿನಿಮಾ. ಪತ್ನಿಯನ್ನು ಸಿಕ್ಕಾಪಟ್ಟೆ ಹಚ್ಚಿಕೊಂಡಿರುವ ಅಭಿಷೇಕ್, ಗೌತಮಿ ಅವರ ನಿದ್ದೆಯಲ್ಲಿ ಮುಗುಳ್ನಗೋದು, ನಾಯಿ ಜೊತೆಗೆ ಆಟ ಆಡೋದು ಇತ್ಯಾದಿ ಆಪ್ತ ಸನ್ನಿವೇಶಗಳನ್ನು ಚೆಂದಕ್ಕೆ ಸೆರೆ ಹಿಡಿದಿದ್ದಾರೆ. ಸದ್ಯ ಸೀರಿಯಲ್ ಜಗತ್ತಿನಲ್ಲಿ ಸತ್ಯಾ ಆಗಿ ಅಬ್ಬರಿಸುತ್ತಿರುವ ಪತ್ನಿಯ ಫುಲ್ ಸಪೋರ್ಟ್‌ಗೆ ನಿಂತಿದ್ದಾರೆ. 

ಅಯ್ಯಯ್ಯೋ, ಭುವಿಗೆ ಇದೇನು ಸಂಕಟ ಬಂತು?