ಮೊನ್ನೆ ತನಕ ಅಮ್ಮಮ್ಮನ ಸೀರೆ ಉಟ್ಕೊಂಡು, ಹರ್ಷನ ಜೊತೆಗೆ ಸುತ್ತಾಡ್ಕೊಂಡು, ತರಲೆ ತಂಗಿಯ ಜೊತೆಗೆ ಹೆಣಗಾಡುತ್ತಾ ಗೆಲುವಾಗಿಯೇ ಇದ್ದ ಭುವಿಯ ಬಾಳಲ್ಲಿ ಈಗ ಗಾಯದ ಮೇಲೆ ಗಾಯ. ಬರೆಯ ಮೇಲೆ ಬರೆ ಬೀಳುತ್ತಿದೆ. ನಮ್ಮ ಲೈಫ್‌ನಲ್ಲೂ ಹಾಗೇ ಅಲ್ವಾ, ಕಷ್ಟ ಅಂತ ಬಂದ್ರೆ ಒಂದರ ಮೇಲೊಂದು ಕಷ್ಟ ಬರುತ್ತಲೇ ಇರುತ್ತೆ. ಅದರಿಂದ ಪಾರಾಗೋಕೂ ಆಗದೇ, ಅನುಭವಿಸೋಕೋ ಆಗದ ಒದ್ದಾಟ ಮಾಡ್ತಿರುತ್ತೇವೆ. 
ಹಾಗೆ ನೋಡಿದರೆ 'ಕನ್ನಡತಿ' ಸೀರಿಯಲ್ ಮೊದಲಿಂದಲೂ ಕಾಮನ್ ಮ್ಯಾನ್ ಲೈಫ್ ಗೆ ಹತ್ತಿರವಾಗಿಯೇ ಇದೆ. ಇದರಲ್ಲಿ ಬರುವ ಪಾತ್ರಗಳು, ಅವು ಅನುಭವಿಸುವ ಕಷ್ಟ ಸುಖ ಎಲ್ಲ ಮಧ್ಯಮವರ್ಗದ ಕಷ್ಟದ ಜೊತೆಗೆ ತಾಳೆ ಆಗ್ತಾನೇ ಇರುತ್ತೆ. ಆ ಕಾರಣಕ್ಕೋ ಏನೋ, ಈ ಸೀರಿಯಲ್ ಅನ್ನು ಕ್ಲಾಸ್ ಜನರೂ ನೋಡ್ತಾರೆ. ಇದರಲ್ಲಿ ಕ್ರೈಮ್, ಪ್ರೇಮದ ಅಂಶಗಳೂ ಬೆರೆತಿರುವ ಕಾರಣ ಮಾಸ್ ಆಡಿಯನ್ಸ್ ಗೂ ಕನ್ನಡತಿ ಇಷ್ಟ ಆಗ್ತಾನೇ ಇದ್ದಾಳೆ. 

ರಂಜನಿ ಕ್ರಿಸ್ಮಸ್: ಜಿಂಗಲ್ ಬೆಲ್ಸ್‌ಗೆ ಕನ್ನಡದಲ್ಲಿ ಏನಂತಾರೆ ಅಂತ ಕೇಳಿದ ಕನ್ನಡತಿ ...

ಸದ್ಯಕ್ಕೀಗ ಭುವಿಯ ಪರಿಸ್ಥಿತಿ ನಾವು ಊಹಿಸಲಾಗದಷ್ಟು ಕಷ್ಟದ್ದು. ಈಕೆಯ ಸದ್ಯದ ಸ್ಥಿತಿ ಕಂಡು ಎಂಥಾ ಸ್ಥಿತಪ್ರಜ್ಞರೂ, ಅಯ್ಯೋ, ಈ ಹುಡುಗಿಗೆ ಅದೇನಾಗಿ ಹೋಯ್ತು ಅಂತ ನೊಂದುಕೊಳ್ಳುವ ಹಾಗಾಗಿದೆ. ಯಾಕೆಂದರೆ ಕನ್ನಡತಿ ಭುವಿಯ ಪಾತ್ರವೇ ಹಾಗಿದೆ. ಈಕೆ ಬಡ ಕುಟುಂಬದ ಛಲಗಾರ್ತಿ ಹುಡುಗಿ. ಎಲ್ಲರ ಕಷ್ಟಕ್ಕೆ ಮರುಗುವ, ಪರರ ಸುಖದಲ್ಲಿ ತನ್ನ ಸುಖ ಕಾಣುವ ಅಪ್ಪಟ ಕನ್ನಡ ಮಾತಾಡುವ ಸಿಂಪಲ್ ಹೆಣ್ಮಗಳು. ಪ್ರಾಮಾಣಿಕತೆಯೇ ಬದುಕು ಅನ್ನೋದು ಈ ಕಾಲದಲ್ಲಿ ಪ್ರಾಕ್ಟಿಕಲ್ ಅಲ್ಲ ಅನ್ನೋದು ನಮಗೆಲ್ಲಾ ಗೊತ್ತಿದೆ. ನಾವು ಅನುಭವಿಸುವ ಎಲ್ಲಚಾಲೆಂಜ್ ಗಳನ್ನು ಭುವಿಯೂ ಅನುಭವಿಸುತ್ತಾಳೆ. ನಾವು ಒಂದೆರಡು ಪ್ರಯತ್ನಕ್ಕೇ ಸೋತು ಹೋದರೆ ಈಕೆ ಮಾತ್ರ ತಾಳ್ಮೆಯಿಂದ ಪ್ರಾಮಾಣಿಕವಾಗಿಯೇ ಸವಾಲನ್ನು ಎದುರಿಸುತ್ತಾಳೆ. ಆ ಕೆಲಸ ಕಂಪ್ಲೀಟ್ ಆಗೋ ತನಕ ಬಿಡೋದಿಲ್ಲ. ನಾವೆಲ್ಲ ಪ್ರಾಮಾಣಿಕತೆಗೆ ಗೆಲುವಿಲ್ಲ ಅಂತ, ಅನಿವಾರ್ಯವಾಗಿ ಒಂಚೂರು ಪರಿಸ್ಥಿತಿಯ ಜೊತೆಗೆ ಕಾಂಪ್ರಮೈಸ್ ಮಾಡಿಕೊಳ್ಳುತ್ತೇವೆ. ಆದರೆ ಬದುಕಲ್ಲಿ ಪ್ರಾಮಾಣಿಕವಾಗಿದ್ದು, ಶ್ರದ್ಧೆಯಿಂದ ಕೆಲಸ ಮಾಡಿದ್ರೆ ಒಂದಲ್ಲ ಒಂದು ದಿನ ಯಶಸ್ಸು ಸಿಕ್ಕೇ ಸಿಗುತ್ತೆ ಅನ್ನೋದನ್ನು ನಮಗೆ ಭುವಿ ತೋರಿಸಿಕೊಡ್ತಾಳೆ. 
ಇಂಥಾ ಅಪರಂಜಿಗೆ ಈಗ ಬಂದಿರೋ ಕಷ್ಟ ಕಂಡ್ರೆ ಎದೆ ನಡುಗುತ್ತೆ. ಇಂಥ ಸ್ಥಿತಿ ನಮಗೂ ಬಂದಿದ್ರೆ, ಏನಪ್ಪ ಮಾಡೋದು ದೇವ್ರೇ ಅಂತ ಯೋಚಿಸೋ ಥರ ಆಗಿದೆ. ಜೊತೆಗೆ ಸಾಕಷ್ಟು ಜನ ಭುವಿಯ ಕಷ್ಟವೆಲ್ಲ ಬೇಗ ಕರಗಿಹೋಗಲಿ ಅಂತ ಮನಸ್ಸಲ್ಲೇ ಹಾರೈಸೋಕೆ ಶುರು ಮಾಡಿದ್ದಾರೆ.

ಮಸ್ತಾನಿಯಾದ್ರು ಕನ್ನಡತಿ ನಟಿ..! ಏನ್ ಚಂದ ಡ್ಯಾನ್ಸ್ ನೋಡಿ ...

ಅಷ್ಟಕ್ಕೂ ಆಗಿರೋದೇನು ಗೊತ್ತಾ, ಹಸಿರು ಪೇಟೆಗೆ ಅಂತ ಭುವಿ ತನ್ನ ತಂಗಿ ಬಿಂದು ಜೊತೆಗೆ ಟ್ಯಾಕ್ಸಿಯಲ್ಲಿ ಹೋಗ್ತಿರುತ್ತಾಳೆ. ಶುರುವಲ್ಲಿ ಅದು, ಇದು ಮಾತು ಎಲ್ಲ ಚೆನ್ನಾಗಿಯೇ ಇರುತ್ತೆ. ಆದರೆ ನಡುವಲ್ಲಿ ಒಂದು ಎಡವಟ್ಟು ಮಾಡ್ತಾಳೆ ಬಿಂದು, 'ಎರಡು ಲಕ್ಷನ ಬ್ಯಾಂಕ್‌ನಲ್ಲಿ ಇಟ್ಕೊಂಡ್ಯಾ' ಅಂತ ಕೇಳ್ತಾಳೆ. ಅದು ಕಾರಲ್ಲೇ ಇರೋದು ಗೊತ್ತಾಗುತ್ತೆ. ಈ ಮಾತುಕತೆಯನ್ನು ಟ್ಯಾಕ್ಸಿ ಡ್ರೈವರ್ ಕೂಡ ಕೇಳ್ತಾನೆ. ಅಪರಾತ್ರಿ, ಇಬ್ಬರೇ ಹೆಣ್ಣುಮಕ್ಕಳು, ಬ್ಯಾಗ್‌ನಲ್ಲಿರುವ ಲಕ್ಷಾಂತರ ದುಡ್ಡು. ಡ್ರೈವರ್ ಆ ದುಡ್ಡನ್ನು ಕಸಿದುಕೊಳ್ಳೋದಕ್ಕೆ ಪ್ಲಾನ್ ಮಾಡ್ತಾನೆ. ಅವರಿಬ್ಬರನ್ನೂ ತಳ್ಳಿ ಹಣದ ಚೀಲವನ್ನು ಎತ್ತಿಕೊಂಡು ಪರಾರಿಯಾಗ್ತಾನೆ. ಅದೇ ಹೊತ್ತಿಗೆ ಮನೆಯಲ್ಲಿ ಒಂದು ಘಟನೆ ನಡೆಯುತ್ತೆ. ಭುವಿಯ ತಂದೆಯ ಮರಣವದು. ಈಕೆ ಎಲ್ಲ ಕಳೆದುಕೊಂಡು ದಾರಿಮಧ್ಯೆ ಇರುವಾಗಲೇ ಬರುವ ಆ ಕಾಲ್ ಸಾವಿನ ರಹಸ್ಯವನ್ನು ಒಳಗೊಂಡಿರುತ್ತೆ. ಆದರೆ ಭುವಿಗಿದು ಆ ಕ್ಷಣಕ್ಕೆ ಗೊತ್ತಾಗೋದಿಲ್ಲ. ಗೊತ್ತಾದ್ರೂ ಏನೂ ಮಾಡುವ ಸ್ಥಿತಿಯಲ್ಲಿ ಆಕೆಯಿಲ್ಲ. ಅತ್ತ ಅಮ್ಮಮ್ಮ ರತ್ನಮಾಲಾ ಮತ್ತು ಹರ್ಷ ಹಸಿರುಪೇಟೆಗೆ ಹೊರಟಿದ್ದಾರೆ. ಆದರೆ ಹರ್ಷ ವರೂಧಿನಿಯನ್ನು ಮಾತಾಡಿಸಿ ಕೊಂಚ ಲೇಟಾಗಿ ಹೊರಡೋ ಸಾಧ್ಯತೆ ಇದೆ.


ಈ ಕ್ಷಣಕ್ಕೆ ಈ ಎಲ್ಲ ಸಮಸ್ಯೆಗೂ ಪರಿಹಾರ ಸಿಗಬೇಕು ಅಂತಿದ್ರೆ ಅಲ್ಲೊಂದು ಪವಾಡವೇ ಆಗಿಬಿಡಬೇಕು. ಭುವಿ ಮತ್ತು ಅಮ್ಮಮ್ಮನ್ನ ಸದಾ ಕಾಯುತ್ತಿರುವ ಸಿಗಂದೂರು ಚೌಡೇಶ್ವರಿ ಕಣ್ಬಿಟ್ಟರೆ ಅದು ಕಷ್ಟ ಅಲ್ಲ. ಆದರೆ ಆ ತಾಯಿಯ ಕೃಪೆ ಇವರ ಮೇಲಾಗುತ್ತಾ ಅನ್ನೋದಕ್ಕೆ ಇನ್ನೂ ಒಂದಿಷ್ಟು ದಿನ ಕಾಯಬೇಕು. 

ಅರೆ ಸೀರಿಯಲ್ ಬಿಟ್ರಾ..? ಅಡಿಕೆ ಸುಲೀತಿದ್ದಾರೆ ರಂಜನಿ..! ...