ಪ್ರತಿಯೊಬ್ಬನ ಸಾವಿಗೂ ದಿನ ನಿಗದಿಯಾಗಿದೆ

ಅಂದಮೇಲೆ ಯಾಕೆ ರಾತ್ರಿ ನಿದ್ದೆಗೆಟ್ಟು ಸಾಯಬೇಕು?

ಗಾಲಿಬ್‌ ನ ಸಾಲುಗಳಿವು. ಮಹಾ ನಿರಾಸಕ್ತಿಯ, ಉಡಾಫೆಯ ವ್ಯಕ್ತಿಯಾಗಿ ಕಾಣುವ ಗಾಲಿಬ್‌ ನ ಕವಿತೆಗಳು ಮಾತ್ರ ಮಹಾ ತೀಕ್ಷ$್ಣ. ತೀವ್ರ ಪ್ರೇಮವೋ, ನೋವೋ, ಅನುಭಾವವೋ ಕವಿತೆಯ ಪರಿಧಿಯೊಳಗಿನಿಂದ ನಮ್ಮೊಳಗಿಗೆ ದಾಟುತ್ತವೆ. ಮೊಘಲ್‌ ಸಾಮಾಜ್ಯದ ಅವನತಿಯ ದಿನಗಳಲ್ಲಿ ಅಂದರೆ 1797ರಲ್ಲಿ ಗಾಲಿಬ್‌ ಹುಟ್ಟಿದ್ದು. ಶ್ರೀಮಂತ, ಮೊಘಲ್‌ ರಾಜಾಸ್ಥಾನದ ಕವಿ ಎಲ್ಲವೂ ಆಗಿದ್ದ ಗಾಲಿಬ್‌ ಈಗ ಶತಮಾನಗಳ ನಂತರ ಅವೆಲ್ಲವನ್ನೂ ಮೀರಿದ ನೆಲೆಯಲ್ಲಿ ನಮಗೆ ಹತ್ತಿರವಾಗುತ್ತಾನೆ.

ಕವಿ ಸುಬ್ರಾಯ ಚೊಕ್ಕಾಡಿ 80 : ಹಕ್ಕಿಯ ಜತೆ ಸುವರ್ಣ ಚಿಲಿಪಿಲಿ!

ಎದುರು ದಿಕ್ಕಿನ ಗಾಳಿ, ಖಗ್ರಾಸ ಕತ್ತಲೆ

ಕಡಲಲ್ಲಿ ಬಿರುಗಾಳಿ ಎದ್ದಿದೆ

ಹಡಗಿನ ಲಂಗರು ಮುರಿದು ಹೋಗಿದೆ

ಕಪ್ತಾನನಿಗೆ ಇನ್ನೂ ಗಾಢ ನಿದ್ದೆ!

ತನ್ನ ಕಾಲದ ರಾಜಕೀಯ ಸನ್ನಿವೇಶವನ್ನು ಗಾಲಿಬ್‌ ಹೀಗೆ ಕವಿತೆಯಲ್ಲಿ ಕಟ್ಟಿಕೊಟ್ಟಿದ್ದಾನೆ. ಆದರೆ ಈ ಕವಿತೆ ಕೆಲವೊಮ್ಮೆ ಸಂಪೂರ್ಣ ಆಧ್ಯಾತ್ಮಿಕ ನೆಲೆಯಲ್ಲಿ ಕೊಂಚಮಟ್ಟಿಗೆ ನಮ್ಮ ದಾಸರ ಪದಗಳ ಹಾಗೆಯೂ ಕಂಡರೆ ಅಚ್ಚರಿ ಇಲ್ಲ. ಇದೇ ಗಾಲಿಬ್‌ ನ ಹೆಚ್ಚುಗಾರಿಕೆ. ಆತ ಬದಲಾದ ಕಾಲದಲ್ಲೂ ಹೀಗೆ ಹತ್ತಿರಾಗಬಲ್ಲ.

ಎಲ್ಲ ಕೆಲಸ ಹೂವೆತ್ತಿದಂತೆ ಹಗುರವಾಗೋದು ಕಷ್ಟ

ಮನುಷ್ಯರಾಗಿ ಹುಟ್ಟಿದವರಿಗೂ ಮನುಷ್ಯರಾಗೋದು ಕಷ್ಟ!

***

ಕಷ್ಟದ ಮೂಟೆ ಯಾವ ಪರಿ

ಮೈಮೇಲೆ ಬಿತ್ತು ಅಂದರೆ ಆಮೇಲೆ ಅದೇ ಸುಲಭವಾಯಿತು

'ಏನೀ ಅದ್ಭುತವೇ'! ಮಾನಸಿ ಹಾಡಿದರು,ಮಂದಿ ನೋಡಿದರು;ಹೃತ್ಪೂರ್ವಕ ಚಪ್ಪಾಳೆ

..ಗಾಲಿಬ್‌ ನೋವನ್ನೇ ತೆಪ್ಪವಾಗಿಸಿ ಬದುಕಿನ ಯಾನ ಮುಗಿಸಿದವನ ಹಾಗೆ ಕಾಣುತ್ತಾನೆ. ‘ಹೇ ರಬ್‌ ಜಮಾನ ಮುಝ್‌ ಕೊ ಮಿಟಾತ ಹೈ ಕಿಸ್‌ ಲಿಯೇ’ (ಜಗತ್ಯಾಕೆ ನನ್ನ ಅಳಿಸುತ್ತದೆ ದೇವರೇ) ಅನ್ನುವಾಗ ಮಗುವಿನಂಥಾ ಮುಖವೂ ಕಾಣುತ್ತದೆ. ‘ಗಾಲಿಬ್‌ ಅಂದರೆ ಯಾರು ಅಂತ ನನ್ನೇ ಕೇಳ್ತಾಳೆ ನೋಡಿ, ಯಾರಾದ್ರೂ ಉತ್ತರಿಸುತ್ತೀರಾ, ಅಲ್ಲಾ ನಾನೇ ಹೇಳಲಾ’ ಅಂತ ತುಂಟ ನಗೆ ನಗುವ ಗಾಲಿಬ್‌ ಮುಂಗಾರಿನ ಈ ದಿನಗಳಲ್ಲಿ ಮೋಡದಂತೆ ಆವರಿಸುತ್ತಾನೆ.