ಶೀಘ್ರದಲ್ಲಿ ʼಮುದ್ದು ಸೊಸೆʼ ಧಾರಾವಾಹಿ ಪ್ರಸಾರ ಆಗಲಿದೆ. ಈ ಧಾರಾವಾಹಿಗೋಸ್ಕರ ಇನ್ನು ಯಾವ ಸೀರಿಯಲ್‌ ಎಂಡ್‌ ಆಗಲಿದೆ?  

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಈಗಾಗಲೇ ಕೆಲ ಧಾರಾವಾಹಿಗಳು ಪ್ರಸಾರ ಆಗುತ್ತಿವೆ. ಈ ಮಧ್ಯೆ ಇತ್ತೀಚೆಗೆ ʼನೂರು ಜನ್ಮಕೂʼ ಧಾರಾವಾಹಿ ಆರಂಭ ಆಯ್ತು. ಇದರ ಜೊತೆಗೆ ʼಭಾರ್ಗವಿ ಎಲ್‌ಎಲ್‌ಬಿʼ ಸೀರಿಯಲ್‌ ಕೂಡ ಪ್ರಸಾರ ಆಗಲಿದೆ. ಇನ್ನು ತ್ರಿವಿಕ್ರಮ್‌, ಪ್ರತಿಮಾ ನಟನೆಯ ʼಮುದ್ದು ಸೊಸೆʼ ಧಾರಾವಾಹಿ ಕೂಡ ಹೊಸದಾಗಿ ಬರಲಿದೆ. ಹಾಗಾದರೆ ಯಾವ ಧಾರಾವಾಹಿ ಅಂತ್ಯ ಆಗಬಹುದು?

ಕರಿಮಣಿ ಧಾರಾವಾಹಿ
ಕರಿಮಣಿ ಧಾರಾವಾಹಿಗೆ ಕಳೆದ ಬಾರಿ 2.3 ಟಿಆರ್‌ಪಿ ಬಂದಿತ್ತು. ಕಳೆದ ಇಪ್ಪತ್ತೆರಡು ಎಪಿಸೋಡ್‌ಗಳ ಕಾಲ ಕರ್ಣ, ಸಾಹಿತ್ಯ ಮದುವೆ ಎಪಿಸೋಡ್‌ ಪ್ರಸಾರ ಆಗಿತ್ತು. ರಾಜೇಂದ್ರ ಪ್ರಸಾದ್‌ ಮನೆಯ ಕುರಿತು ಕಥೆ ಸಾಗುತ್ತಿದೆ. ಸಾಹಿತ್ಯ ಮೇಲೆ ಕರ್ಣನಿಗೆ ಲವ್‌ ಆಗಿದೆ. ಕರ್ಣ ಈಗ ಸಾಹಿತ್ಯ ಮದುವೆಯಾಗಿದ್ದಾರೆ. ಇವರಿಬ್ಬರು ಒಬ್ಬರನ್ನೊಬ್ಬರು ಇಷ್ಟಪಡ್ತಾರಾ? ಒಟ್ಟಿಗೆ ಬದುಕ್ತಾರಾ ಅಂತ ಕಾದು ನೋಡಬೇಕಿದೆ. ಇದರ ಜೊತೆಗೆ ಮುಂಬರುವ ಎಪಿಸೋಡ್‌ಗಳು ಹೇಗಿರಲಿದೆ ಎಂದು ಕಾದು ನೋಡಬೇಕಿದೆ. ಟಿಆರ್‌ಪಿಯಲ್ಲಿ ಈ ಸೀರಿಯಲ್‌ ಕಡಿಮೆ ಇರೋದರಿಂದ ಮುಗಿದರೂ ಆಶ್ಚರ್ಯ ಇಲ್ಲ. 

ʼಬಿಗ್‌ ಬಾಸ್ʼ‌ ಮುಗಿತಿದ್ದಂತೆ ಹೆಣ್ಣು ನೋಡಲು ಹೋದ ತ್ರಿವಿಕ್ರಮ್;‌ ಮನೆಗೆ ಮುದ್ದುಸೊಸೆ ಬೇಕಲ್ವೇ?

ದೃಷ್ಟಿಬೊಟ್ಟು ಧಾರಾವಾಹಿ 
ದೃಷ್ಟಿಬೊಟ್ಟು ಧಾರಾವಾಹಿಗೆ 3.8 ಟಿಆರ್‌ಪಿ ಬಂದಿತ್ತು. ವಿಜಯ್‌ ಸೂರ್ಯ, ಅರ್ಪಿತಾ ಮೋಹಿತೆ ನಟನೆಯ ಧಾರಾವಾಹಿಗೆ ಒಂದು ಪ್ರಮಾಣದಲ್ಲಿ ಟಿಆರ್‌ಪಿ ಸಿಗುತ್ತಿದೆ. ದತ್ತಾಭಾಯ್‌ ಹಾಗೂ ದೃಷ್ಟಿ ನಡುವೆ ಕಥೆ ಸಾಗುತ್ತಿದೆ. ದತ್ತಾಭಾಯ್‌ ಸರ್ವನಾಶ ಮಾಡಲು ಅವನ ತಂಗಿಯರು ಹೊಂಚು ಹಾಕುತ್ತಿದ್ದಾರೆ. ಇವರನ್ನು ದೃಷ್ಟಿ ಹೇಗೆ ತಡೆಯುತ್ತಾಳೆ? ದೃಷ್ಟಿ ನಿಜ ಸ್ವರೂಪ ಗೊತ್ತಾದಮೇಲೆ ಅವನು ಅವಳನ್ನು ಒಪ್ಪುತ್ತಾನಾ ಅಂತ ಕಾದು ನೋಡಬೇಕುದೆ. ಟಿಆರ್‌ಪಿ ಕಾರಣಕ್ಕೆ ಈ ಸೀರಿಯಲ್‌ ಅಂತ್ಯ ಆದರೂ ಆಶ್ವರ್ಯ ಇಲ್ಲ.


ರಾಮಾಚಾರಿ ಧಾರಾವಾಹಿ
ರಾಮಾಚಾರಿ ಧಾರಾವಾಹಿಗೆ 4.6 ಟಿಆರ್‌ಪಿ ಬರುತ್ತಿದೆ. ಮೌನ ಗುಡ್ಡೇಮನೆ, ರಿತ್ವಿಕ್‌ ಕೃಪಾಕರ್‌ ನಟನೆಯ ಈ ಸೀರಿಯಲ್‌ಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ರಾಮಾಚಾರಿ ಕುಟುಂಬದ ಕುರಿತು ಕಥೆ ಸಾಗುತ್ತಿದೆ. ರಾಮಾಚಾರಿ ಕುಟುಂಬವನ್ನು ಹೇಗೆ ಚಾರು ಕಾಪಾಡಿಕೊಳ್ಳುತ್ತಾಳೆ ಎನ್ನುವ ಕಥೆ ಇದೆ. 

ಮೇಘಾ ಶೆಟ್ಟಿ ನಿರ್ಮಾಣದ ʼಮುದ್ದು ಸೊಸೆʼ ಧಾರಾವಾಹಿ; Bigg Boss Kannada Runner Up ಹೀರೋ ಆಗ್ತಾರಾ?
ನಿನಗಾಗಿ ಧಾರಾವಾಹಿ
ನಿನಗಾಗಿ ಧಾರಾವಾಹಿಗೆ 5.3 ಟಿಆರ್‌ಪಿ ಬಂದಿತ್ತು. ರಿತ್ವಿಕ್‌ ಮಾತಾಡ್‌, ದಿವ್ಯಾ ಉರುಡುಗ ನಟನೆಯ ಈ ಧಾರಾವಾಹಿಯಲ್ಲಿ ಇನ್ನು ಒಂದಿಷ್ಟು ಕಥೆಗಳು ಇವೆ. ಹೀಗಾಗಿ ಈ ಸೀರಿಯಲ್‌ ಎಂಡ್‌ ಆಗೋದು ಡೌಟ್.‌

ʼಮುದ್ದು ಸೊಸೆʼ ಧಾರಾವಾಹಿ
ʼಮುದ್ದು ಸೊಸೆʼ ಧಾರಾವಾಹಿಯ ಪ್ರೋಮೋ ರಿಲೀಸ್‌ ಆಗಲಿದೆ. ಈ ಧಾರಾವಾಹಿಯಲ್ಲಿ ಪ್ರತಿಮಾ, ತ್ರಿವಿಕ್ರಮ್‌ ನಟಿಸುತ್ತಿದ್ದಾರೆ. ಪ್ರೋಮೋ ಮೂಲಕ ಹೇಳೋದಾದರೆ ಬಾಲ್ಯವಿವಾಹದ ಕಥೆ ಇರುವ ಹಾಗೆ ಕಾಣ್ತಿದೆ. ಈ ಸೀರಿಯಲ್‌ ಯಾವ ಟೈಮ್‌ನಲ್ಲಿ ಪ್ರಸಾರ ಆಗಲಿದೆ ಎಂಬುದು ರಿವೀಲ್‌ ಆಗಬೇಕಿದೆ.