ಕೈ ಕಾಲಿಲ್ಲ ಅಂದ್ರೂ ಮನೆಯಲ್ಲಿ ದೊಡ್ಡವರು ಇರಬೇಕು; ತಾಳಿ ಅಡವಿಟ್ಟ ಘಟನೆ ನೆನೆದು ಹೇಮಲತಾ ಭಾವುಕ

 ಸೂಪರ್ ಕ್ವೀನ್ ಶೋನಲ್ಲಿ ತಾಯಿ ರಾಜಲಕ್ಷ್ಮಿ ಬಗ್ಗೆ ನಿರೂಪಕಿ ಹೇಮಲತಾ ಮಾತನಾಡಿದ್ದಾರೆ. ಮನೆಯಲ್ಲಿ ದೊಡ್ಡವರು ಇರಲೇ ಬೇಕು ಎನ್ನುತ್ತಾರೆ.

Vj Hemalatha gets emotional recalling difficult days after missing father vcs

ಜೀ ಕನ್ನಡ ವಾಹಿನಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ಕ್ವೀನ್ ರಿಯಾಲಿಟಿ ಶೋನಲ್ಲಿ ತಾಯಂದಿರನ್ನು ಕರೆದು ಗೌರವಿಸಲಾಗಿತ್ತು. ವಿಜೆ ಹೇಮಲತಾ ಅವರು ತಮ್ಮ ತಂದೆಯನ್ನು ಕಳೆದುಕೊಂಡಾಗ ಜೀವನ ಹೇಗೆ ಬದಲಾಗಿತ್ತು ಎಂದು ಹೇಳಿಕೊಂಡಿದ್ದಾರೆ. 

'ಸ್ವಾಭಿಮಾನದಿಂದ ಜೀವನ ನಡೆಸಿಕೊಂಡು ಬಂದವರು ನೀವು ಯಾವ ರೀತಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ರಿ ಎಂದು ನಿರೂಪಕಿ ಶ್ವೇತಾ ಚಂಗಪ್ಪ ಹೇಮಲತಾ ತಾಯಿ ಅವರನ್ನು ಪ್ರಶ್ನಿಸುತ್ತಾರೆ. 'ನಾನು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದೆ ಹಾಗೂ ಮನೆ ಕೆಲಸ ಮಾಡುತ್ತಿದ್ದೆ'ಎಂದು ರಾಜಲಕ್ಷ್ಮಿ ಹೇಳುತ್ತಾರೆ. 'ನನ್ನ ತಾಯಿ ಮದುವೆಯಾಗ ಬಂದಾಗ ತುಂಬಾ ರಿಚ್‌ ಆಗಿ ಆಡಂಬರದ ಜೀವನ ನೋಡಿಕೊಂಡು ಬಂದವರು. ಮದುವೆ ನಂತರ ಕಷ್ಟದ ದಿನಗಳನ್ನು ಎದುರಿಸುತ್ತಾರೆ. ಅಲ್ಲಿ ಊಟ ವ್ಯವಸ್ಥೆ ಇರುವುದಿಲ್ಲ ಹೀಗಾಗಿ ಮನೆ ಕೆಲಸ ಮಾಡಲು ಶುರು ಮಾಡುತ್ತಾರೆ. ಬೆಳಗ್ಗೆ ಮನೆ ಕೆಲಸ ಮಾಡಿ ಮಧ್ಯಾಹ್ನ ಒಬ್ರು ಮನೆಯಲ್ಲಿ ಅಡುಗೆ ಕೆಲಸ ಮಾಡಲು ಹೋಗುತ್ತಿದ್ದರು ಆಮೇಲೆ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದಾರೆ ಅವರಿಂದ ನಾವು ಜೀವನದಲ್ಲಿ ಒಂದು ಶಕ್ತಿಯಿಂದ ಕೆಲಸ ಮಾಡುತ್ತಿರುವುದು.' ಎಂದು ಹೇಮಾ ಮಾತನಾಡಿದ್ದಾರೆ.

Vj Hemalatha gets emotional recalling difficult days after missing father vcs

ತಾಳಿ ಅಡವಿಟ್ಟ ಘಟನೆ: 

'ತುಂಬಾ ಕಷ್ಟದಲ್ಲಿ ಜೀವನ ನಡೆಸುತ್ತಿದ್ದೆವು. ಮಗಳ ಸ್ಕೂಲ್ ಫೀಸ್‌ ಕಟ್ಟಿಲ್ಲ ಅಂದ್ರೆ ಹೊರಗಡೆ ಕಳುಹಿಸುತ್ತಾರೆಂದು ಯೋಚನೆ ಮಾಡಿ ನನ್ನ ಯಜಮಾನರಿಗೆ ಹೇಳಿದೆ ನನ್ನ ತಾಳಿ ತೆಗೆದುಕೊಂಡು ಹೋಗಿ ಇಟ್ಟು ಅದರಿಂದ ಬರುವ ಹಣ ಬಳಸಿಕೊಂಡು ನಮ್ಮ ಮಕ್ಕಳಿಗೆ ಭವಿಷ್ಯ ಕೊಡೋಣ ವಿದ್ಯಾಭ್ಯಾಸ ತುಂಬಾನೇ ಮುಖ್ಯ. ನಮಗೆ ಆಸ್ತಿ ಬೇಡ ಏನೂ ಬೇಡ ಮಕ್ಕಳು ಓದಬೇಕು ಅಷ್ಟೆ ಅಂತ. ತಾಳಿ ಇಡುವ ನಿರ್ಧಾರ ಮಾಡಿದ್ದಕ್ಕೆ ನನ್ನ ಯಜಮಾನರಿಗೆ ತುಂಬಾ ಬೇಸರ ಆಗಿತ್ತು' ಎಂದು ರಾಜಲಕ್ಷ್ಮಿ ಹೇಳುತ್ತಾರೆ. 'ತಾಯಿ ಮನಸ್ಸಿನಲ್ಲಿ ಒಂದು ನೋವು ಉಳಿದುಕೊಂಡಿದೆ. ನೀವು ಓದಬೇಕು ಎಂದು ನನ್ನ ತಾಳಿ ಅಡವಿಟ್ಟೆ ಅದು ಯಾವ ಗಳಿಗೆಯಲ್ಲಿ ಬಿಚ್ಚಿಗೆ ನನಗೆ ಗೊತ್ತಿಲ್ಲ ಇವತ್ತು ನನಗೆ ಗಂಡ ಇಲ್ಲ ಆದರೂ ನನ್ನ ಮಕ್ಕಳು ಎಲ್ಲಾ ಪ್ರೀತಿಯನ್ನು ಕೊಡುತ್ತಿದ್ದಾರೆ ಇವತ್ತಿಗೂ ನನಗೆ ಜೀವನ ಮಾಡಿಸುತ್ತಿದ್ದಾರೆ ಎಂದು ಹೇಳುತ್ತಾರೆ. ನನ್ನ ತಂದೆ ಅವ್ರುನ ತುಂಬಾ ಪ್ರೀತಿ ಮಾಡುವವರು ಒಂದು ಮಗು ರೀತಿ ನೋಡಿಕೊಳ್ಳುವವರು ಅವರು ಎಲ್ಲೇ ಹೋದರು ನಾನು ಕರೆದುಕೊಂಡು ಹೋಗುತ್ತೀನಿ ನಿಮ್ಮ ತಾಯಿ ಪ್ರಪಂಚ ಗೊತ್ತಿಲ್ಲ ಗೊತ್ತಿಲ್ಲ ಎನ್ನುತ್ತ ಒಂದೇ ಸಲ ಬಿಟ್ಟು ಹೋದರು' ಎಂದು ಹೇಮಲತಾ ಹೇಳುತ್ತಾರೆ.

ಮೈ ಮೇಲೆ ಕುದಿಯುವ ನೀರು ಬಿದ್ದರೂ ಹೇಳಿಕೊಂಡಿರಲಿಲ್ಲ; ತಾಯಿ ನೆನೆದು ಭಾವುಕರಾದ ಗೀತಾ

ಹಿರಿಯರು ಇರಬೇಕು:

' ತಂದೆ ಇದ್ದಾಗಲೂ ಜೀವನದಲ್ಲಿ ನಮಗೆ ಕಷ್ಟು ಹೇಳಿಕೊಟ್ಟಿದ್ದಾರೆ. ಜೀವನ ಹೀಗೆ ಮಾಡಬೇಕು ಎಂದು ಹೇಳಿಕೊಟ್ಟಿದ್ದಾರೆ. ಏನ್ ಅಂದ್ರೆ ಮನೆಯಲ್ಲಿ ಗಂಡಸರು ಇರಬೇಕು ಇಲ್ಲ ಅಂದ್ರೆ ಮನೆಯಲ್ಲಿ ಸೊಸೈಟಿ ಯಾವ ತರ ಮಾತನಾಡಿತ್ತೆ ಯಾವ ತರ ನೋಡುತ್ತೆ ಹಾಗೂ ವರ್ತಿಸುತ್ತದೆ ಎಂದು ಅವರ ಅಗಲಿಕೆ ಆದ ಮೇಲೆ ನಾವು ಅದನ್ನು ಅನುಭಿಸಿದ್ದೀವಿ. ತಂದೆ ಇದ್ದಾಗ ಸ್ನೇಹಿತರು ಮತ್ತು ಕುಟುಂಬಸ್ಥರು ಒಂದು ರೀತಿ ಇರುತ್ತಾರೆ ತಂದೆ ಹೋದ ಮೇಲೆ ಯಾರಿಗೂ ನಮ್ಮ ಜೊತೆ ಇರುವುದಕ್ಕೆ ಇಷ್ಟವಿಲ್ಲ. ಏನೇ ಆಗಲಿ ಮನೆಯಲ್ಲಿ ದೊಡ್ಡವರು ಅನ್ನೋರು ಕೈ ಇಲ್ಲ ಕಾಲು ಇಲ್ಲ ಅಂದ್ರೂ ಪರ್ವಾಗಿಲ್ಲ ಒಂದು ಮೂಲೆಯಲ್ಲಿ ದೊಡ್ಡವರು ಕುಳಿತಿದ್ದರೆ ಅಷ್ಟೇ ಸಾಕು' ಎಂದಿದ್ದಾರೆ ಹೇಮಲತಾ.

Latest Videos
Follow Us:
Download App:
  • android
  • ios