ಮೈ ಮೇಲೆ ಕುದಿಯುವ ನೀರು ಬಿದ್ದರೂ ಹೇಳಿಕೊಂಡಿರಲಿಲ್ಲ; ತಾಯಿ ನೆನೆದು ಭಾವುಕರಾದ ಗೀತಾ
ತಾವೇ ಡಿಸೈನ್ ಮಾಡಿದ ಟ್ಯಾಟೂ ಹಾಕಿಸಿಕೊಂಡ ಗೀತಾ ಭಾರತಿ ಭಟ್. ತಾಯಿ ನೆನೆದು ಭಾವುಕರಾದ ಕ್ಷಣ ಹೀಗಿತ್ತು...
ಸೂಪರ್ ಕ್ವೀನ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿರುವ ಕಿರುತೆರೆ ನಟಿ ಗೀತಾ ಭಾರತಿ ಭಟ್ ತಮ್ಮ ತಾಯಿಗೆ ವಿಶೇಷವಾದ ಗಿಫ್ಟ್ ಕೊಡಬೇಕು ಎಂದು ಕೈ ಮೇಲೆ ಟ್ಯೂಟೂ ಹಾಕಿಸಿಕೊಂಡಿದ್ದಾರೆ. ತಾಯಿಯನ್ನು ವೇದಿಕೆ ಮೇಲೆ ಬರೆದು ಮಾತನಾಡುವಾಗ ಭಾವುಕರಾಗಿದ್ದಾರೆ.
'ಚಿಕ್ಕ ವಯಸ್ಸಿನಲ್ಲಿ ನಾನು ಹೆಚ್ಚಿಗೆ ಬ್ಯಾಸ್ಕೆಟ್ ಬಾಲ್ ಆಡುತ್ತಿದ್ದೆ ಆಗ ಬಿದ್ದು ಆಂಕಲ್ ಸರ್ಜರಿ ಮಾಡಿದ್ದರು. ಈ ಸರ್ಜರಿ ಸಮಯದಲ್ಲಿ ನನ್ನ ತಾಯಿ ಬೆಂಗಳೂರಿನಲ್ಲಿ ಇರಲಿಲ್ಲ, ಅವರ ತಾಯಿಗೆ ಅಂದ್ರೆ ನನ್ನ ಅಜ್ಜಿಗೆ ಅನಾರೋಗ್ಯವಾಗಿತ್ತು ಎಂದು ಒಂದು ತಿಂಗಳು ಕೆಲಸದಿಂದ ರಜೆ ತೆಗೆದುಕೊಂಡು ಊರಿಗೆ ಹೋಗಿದ್ದರು. ಸರ್ಜರಿ ವಿಚಾರ ಕೇಳಿ ಅಲ್ಲಿ ಮತ್ತೊಬ್ಬರ ವ್ಯವಸ್ಥೆ ಮಾಡಿ ಬಂದರು. ಎರಡು ಮೂರು ತಿಂಗಳು ನಡೆಯಲು ಆಗುತ್ತಿರಲಿಲ್ಲ ಆಗ ನನ್ನ ಪ್ರತಿಯೊಂದು ಕೆಲಸವನ್ನು ಅಮ್ಮ ಮಾಡುತ್ತಿದ್ದರು. ಸ್ನಾನ ಬಾತ್‌ರೂಮ್ ಊಟ ಎಲ್ಲಾ ನೋಡಿಕೊಂಡಿದ್ದಾರೆ. ಸ್ಕೂಲ್ ಮಿಸ್ ಆಗುತ್ತಿತ್ತು ಎಂದು ನನ್ನ ಸ್ನೇಹಿತರ ಮನೆಗೆ ಹೋಗಿ ಬುಕ್ ಪಡೆದುಕೊಂಡು ಬಂದು ಓದಿಸುತ್ತಿದ್ದರು. ನನ್ನ ಲೈಫಲ್ಲಿ ಜಾಸ್ತಿ ಮಾರ್ಕ್ಸ್ ಬಂದಿದ್ದು ಅಮ್ಮ ಓದಿಸಿದಾಗ. ಮತ್ತೆ ಕೈ ಕೊಟ್ಟು ನಡೆಯಲು ಹೇಳಿಕೊಟ್ಟಿದ್ದು ಅಮ್ಮ. ಆ ಸಮಯಗಳನ್ನು ನೆನಪಿಸಿಕೊಂಡರೆ ಮೈ ಜುಮ್ ಅನಿಸುತ್ತದೆ. ಆ ಆಪರೇಷನ್ ಆದ ಮೇಲೆ ನನ್ನ ದೇಹದ ತೂಕ ಹೆಚ್ಚಾಗಿದ್ದು. ಅವರ ತಾಯಿಯನ್ನು ಬಿಟ್ಟು ನನ್ನನ್ನು ನೋಡಿಕೊಂಡಿದ್ದಕ್ಕೆ ನನ್ನ ತಾಯಿಗೆ ಥ್ಯಾಂಕ್ಸ್ ಹೇಳುತ್ತೀನಿ' ಎಂದು ಗೀತಾ ಮಾತನಾಡಿದ್ದಾರೆ.
'ಮದುವೆ ವಿಚಾರದಲ್ಲಿ ತಾಯಿ ತುಂಬಾನೇ ಆಸೆ ಪಡುತ್ತಾರೆ ಮಗಳಿಗೆ ಮದುವೆ ಆಗಲಿ ಎಂದು. ಓದುವಾಗ ಆನಂತರ ಕೆಲಸ ಅದು ಬಿಟ್ಟು ಸೀರಿಯಲ್ ಶುರು ಮಾಡಿದಾಗ...ಹೀಗೆ ಪ್ರತಿಯೊಂದು ಕ್ಷಣದಲ್ಲೂ ನನ್ನ ತಾಯಿ ನನ್ನ ಜೊತೆಗಿದ್ದಾರೆ. ಸದಾ ಸಪೋರ್ಟ್ ಮಾಡಿದ್ದಾರೆ ಆದರೆ ಯಾವತ್ತೂ ನೀನು ಇದ್ದನೇ ಮಾಡು ಎಂದು ಒತ್ತಾಯ ಮಾಡಿಲ್ಲ. ನನ್ನ ತಾಯಿ 20 ವರ್ಷಗಳಿಂದ ಪೋಸ್ಟಲ್ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಅಲ್ಲೂ ಕೆಲಸ ಮಾಡಿಕೊಂಡು ಮನೆಯಲ್ಲೂ ಕೆಲಸ ಮಾಡಿ ಮಕ್ಕಳನ್ನು ಸಂಭಾಳಿಸಿಕೊಂಡು ಬಂದಿದ್ದಾರೆ. ಅವರು ಮಾತು ಕಡಿಮೆ ಅದರೆ ಕೆಲಸ ಜಾಸ್ತಿ ಮಾಡುತ್ತಾರೆ.' ಎಂದು ಗೀತಾ ಹೇಳಿದ್ದಾರೆ.
30 ಕೆಜಿ ಆಯ್ತು ಈಗ 50 ಕೆಜಿ ಕಮ್ಮಿ ಆಗ್ಬೇಕು: ಗುಂಡಮ್ಮ ಗೀತಾ ಭಟ್ ರೋಚಕ ವೇಟ್ ಲಾಸ್ ಜರ್ನಿ
'ನನ್ನ ತಂದೆ ಜೀವನದ ಒಂದು ಕೆಟ್ಟ ಗಳಿಗೆಯಲ್ಲಿ ಅಮ್ಮ ಒಬ್ಬರೇ ನಿಂತು ದುಡಿಮೆ ಮಾಡಿ ನಮ್ಮನ್ನು ನೋಡಿಕೊಂಡಿದ್ದಾರೆ. ಬೆಂಗಳೂರಿನಂತ ಸಿಟಿಯಲ್ಲಿ ಮಿಡಲ್ ಕ್ಲಾಸ್ ಜನರು ಬದುಕುವುದೇ ಕಷ್ಟ ಎನ್ನುವ ಸಮಯದಲ್ಲಿ ಅಮ್ಮ ಒಬ್ಬರೇ ನಿಂತು ಕೆಲಸ ಮಾಡುತ್ತಾರೆ. ಆ ಕ್ಷಣಗಳನ್ನು ನೆನಪಿಸಿಕೊಂಡರೆ ನೋವಾಗುತ್ತದೆ. ನಮ್ಮ ಜೀವನದ ರಿಯಲ್ ಹೀರೋನೇ ಅಮ್ಮ. ನಾನು ಡಿಸೈನ್ ಮಾಡಿರುವ ಸ್ಪೆಷಲ್ ಟ್ಯಾಟೂ ಹಾಕಿಸಿಕೊಂಡು ಬಂದಿರುವೆ. ನನ್ನ ತಾಯಿ ಕೆಲಸಕ್ಕೆ ಹೋಗುತ್ತಾರೆ ಶೂಟಿಂಗ್‌ಗೆ ಬರಲು ಆಗುವುದಿಲ್ಲ ಪ್ರತಿಯೊಬ್ಬರು ಅಮ್ಮನ ಕರೆದುಕೊಂಡು ಹೋಗುತ್ತಾರೆ...ಈಗ ನಾನು ಟ್ಯಾಟೂ ಮೇಲೆ ಅಮ್ಮನ ಹೆಸರು ಇದೆ ಎಲ್ಲರಿಗೂ ಹೇಳುವೆ ತಾಯಿ ಕರೆದುಕೊಂಡು ಬಂದಿರುವೆ ಅಂತ. ನಾವು ಸಣ್ಣ ಗಾಯ ಮಾಡಿಕೊಂಡರೂ ಅಮ್ಮ ಅಂತ ಹೇಳುತ್ತೀವಿ ಆದರೆ ಒಂದು ಸಲ ಕುದಿಯುವ ನೀರು ಅಮ್ಮನ ಮೈ ಮೇಲೆ ಬಿದ್ದಿತ್ತು ಎಷ್ಟು ನೋವು ಇತ್ತು ಅಂದ್ರೆ ಯಾರಿಗೂ ಹೇಳಿಕೊಳ್ಳಲಿಲ್ಲ ಎಲ್ಲಿ ಹೇಳಿದ್ದರೆ ನಾವು ಬೇಸರ ಮಾಡಿಕೊಳ್ಳುತ್ತೀವಿ ಎಂದು ಸುಮ್ಮನಿದ್ದರು. ಮಾತಿಗೂ ಕಷ್ಟ ಆಗುತ್ತಿದೆ ನೋವಾಗುತ್ತಿದೆ ಎಂದು ಹೇಳಿಕೊಂಡಿರಲಿಲ್ಲ. ದೇವರು ತಾಯಿಗೆ ಶಕ್ತಿ ಕೊಡಲಿ ನೋವು ಕೊಡುವುದು ಬೇಡ. ಯಾವ ಗಿಫ್ಟ್ ಕೊಟ್ಟರೂ ಕಳೆದು ಹೋಗಬಹುದು ಏನಾದರೂ ಆಗಬಹುದು ಆದರೆ ಈ ಟ್ಯಾಟೂ ಜೀವನ ಪೂರ್ತಿ ಜೊತೆ ಇರುತ್ತದೆ' ಎಂದಿದ್ದಾರೆ ಗೀತಾ.