ಸಂಗೀತಾ ಕುಗ್ಗಿಸಲು ವಿನಯ್ ಹೆಂಡತಿ ಪ್ಲಾನ್ ಮಾಡಿದ್ರಾ; ಯಾಕೆ ಬೇಕಿತ್ತು ಪ್ರತ್ಯೇಕ ಮಾತುಕತೆ!?

ಮನೆಯ ಸ್ಪರ್ಧಿಗಳನ್ನೆಲ್ಲ ಮಾತಾಡಿಸಿದ ವಿನಯ್ ಪತ್ನಿ ಸಂಗೀತಾ ಅವರ ಬಳಿ ಪ್ರತ್ಯೇಕವಾಗಿ ಮಾತಾಡಬೇಕು ಎಂದು ಕರೆದಿದ್ದಾರೆ. ಹಾಗಾದರೆ ಅವರು ಸಂಗೀತಾ ಬಳಿ ಏನು ಮಾತಾಡಿದ್ದಾರೆ? 

Vinay Gowda wife talks separately with Sangeetha Sringeri in Bigg Boss Kannada 10 srb

ಪ್ರತಿದಿನವನ್ನೂ ಬಿಗ್‌ಬಾಸ್‌ ಒಂದು ಹಾಡಿನೊಂದಿಗೆ ಶುರುಮಾಡುತ್ತಾರೆ. ಆ ಹಾಡಿಗೆ ಖುಷಿಯಿಂದ ಕುಣಿಯುತ್ತ ಸ್ಪರ್ಧಿಗಳು ಬೆಳಗನ್ನು ಬರಮಾಡಿಕೊಳ್ಳುತ್ತಾರೆ. ಇದು ವಾಡಿಕೆ. ಆದರೆ ಬಿಗ್‌ಬಾಸ್‌ ಮನೆಯಲ್ಲಿ ಈ ಬೆಳಗು ಬರೀ ಹಾಡಿನ ಬೆಳಗಾಗಿರಲಿಲ್ಲ. ಅದೇನು ಎಂಬುದು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ.

ಉಳಿದ ಸ್ಪರ್ಧಿಗಳಿಗಿಂತ ವಿನಯ್‌ ಗೌಡ ಅವರಿಗಂತೂ ಈ ಬೆಳಗು ತುಂಬ ವಿಶೇಷವೂ ಸ್ಮರಣೀಯವೂ ಆಗಿದ್ದು. ಯಾಕೆಂದರೆ ಬೆಳಗಿನ ಹಾಡಿಗೆ ಮುಸುಕಿನೊಳಗೆ ಮಲಗಿದ್ದಾಗಲೇ ಅವರ ಪತ್ನಿಯ ತೋಳು ಬಂದು ಅವರನ್ನು ತಬ್ಬಿ ಎಬ್ಬಿಸಿದೆ. ಬೆಳಿಗಿನೊಟ್ಟಿಗೆ ಬಂದ ಹೆಂಡತಿಯನ್ನು ನೋಡಿ ವಿನಯ್ ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಅವರು ಮುಖ ನಗುವಿನಿಂದ ಅರಳಿದೆ. ‘ವಿಲನ್‌ ಮುಖದಲ್ಲೀಗ ಹೀರೊ ಕಳೆ ಬಂದಿದೆ’ ಎಂದು ತನಿಷಾ ಛೇಡಿಸಿದ್ದಾರೆ.

ಮಮತಾ ಬ್ಯಾನರ್ಜಿ ಕಾರಿನಲ್ಲಿ ಶಾರುಕ್ ಖಾನ್‌; ವಿಮಾನ ನಿಲ್ದಾಣದಲ್ಲಿ ನೋಡಿ ಜನ ಶಾಕ್!

ಮನೆಯ ಸ್ಪರ್ಧಿಗಳನ್ನೆಲ್ಲ ಮಾತಾಡಿಸಿದ ವಿನಯ್ (Vinay Gowda) ಪತ್ನಿ ಸಂಗೀತಾ ಅವರ ಬಳಿ ಪ್ರತ್ಯೇಕವಾಗಿ ಮಾತಾಡಬೇಕು ಎಂದು ಕರೆದಿದ್ದಾರೆ. ಹಾಗಾದರೆ ಅವರು ಸಂಗೀತಾ (Sangeetha Sringeri) ಬಳಿ ಏನು ಮಾತಾಡಿದ್ದಾರೆ? ಅದಕ್ಕ ಸಂಗೀತಾ ಹೇಗೆ ಪ್ರತಿಕ್ರಿಯಿಸುತ್ತಾರೆ? ಸಂಗೀತಾ-ವಿನಯ್ ಜಗಳ ಎರಡನೇ ವಾರದಿಂದಲೇ ಶುರುವಾಗಿ ನಿರಂತರವಾಗಿ ಮುಂದುವರಿದುಕೊಂಡು ಬಂದಿದೆ. ಹಲವು ಸಲ ಇದು ಅತಿರೇಕಕ್ಕೂ ಹೋಗಿದೆ.

ಶ್ರಾವಣಿ ಸುಬ್ರಹ್ಮಣ್ಯಕ್ಕೆ ದಶಕದ ಸಂಭ್ರಮ; ಬರಲಿದೆ ಒನ್ಸ್‌ ಮೋರ್ ಶ್ರಾವಣಿ ಸುಬ್ರಹ್ಮಣ್ಯ! 

ಈ ಬಗ್ಗೆ ವಿನಯ್‌ ಪತ್ನಿ ಮನೆಯ ಹೊರಗಡೆಯೂ ನೋವು ತೋಡಿಕೊಂಡಿದ್ದರು. ಈ ವಿಷಯದ ಬಗ್ಗೆ ಅವರು ಸಂಗೀತಾ ಬಳಿ ಮಾತಾಡುತ್ತಾರಾ? ವಿನಯ್ ಪತ್ನಿ ಜೊತೆಗಿನ ಮಾತುಕತೆ ಸಂಗೀತಾ ಅವರನ್ನು ಕುಗ್ಗಿಸುತ್ತದೆಯೇ? ಈ ವಾರದಲ್ಲಿ ಅನ್ಯೋನ್ಯವಾಗಿಯೇ ಇದ್ದ ವಿನಯ್-ಸಂಗೀತಾ ಮಧ್ಯೆ ಮತ್ತೆ ಬಿರುಕು ಮೂಡಲಿದೆಯೇ? 
ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲು ಬಿಗ್‌ಬಾಸ್‌ ಅನ್ನು ವೀಕ್ಷಿಸಬೇಕು.

ದೇವರ ರೂಪದಲ್ಲಿ ಕನ್ನಡಕ್ಕೆ ಬರುತ್ತಿರುವ ಜ್ಯೂನಿಯರ್ ಎನ್‌ಟಿಆರ್‌; ಜಾನ್ವಿ ಕಪೂರ್ ಬರುತ್ತಿಲ್ವಾ!?

ಅಂದಹಾಗೆ, ಬಿಗ್ ಬಾಸ್‌ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ  ವೀಕ್ಷಿಸಬಹುದು. 

Latest Videos
Follow Us:
Download App:
  • android
  • ios