Asianet Suvarna News Asianet Suvarna News

ಮಮತಾ ಬ್ಯಾನರ್ಜಿ ಕಾರಿನಲ್ಲಿ ಶಾರುಕ್ ಖಾನ್‌; ವಿಮಾನ ನಿಲ್ದಾಣದಲ್ಲಿ ನೋಡಿ ಜನ ಶಾಕ್!

ವಿಮಾನ ನಿಲ್ದಾಣದಲ್ಲಿ ಇಳಿದ ಕೂಡಲೇ ಶಾರುಖ್ ಖಾನ್ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಕಾಲು ಮುಟ್ಟಿ ನಮಸ್ಕರಿಸಿದಾಗ ಹಲವರು ಅಚ್ಚರಿಗೆ ಒಳಗಾದರು. 

Bollywood actor Shah Rukh Khan meets west Bengal cm mamata banerjee srb
Author
First Published Dec 28, 2023, 5:18 PM IST

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಾಲಿವುಡ್ ಕಿನಗ ಖಾನ್ ಖ್ಯಾತಿಯ ಶಾರುಕ್ ಖಾನ್ ಮಧ್ಯೆ ಒಳ್ಳೆಯ, ಅನ್ಯೋನ್ಯವಾದ ಸಂಬಂಧವಿದೆ. ಪಶ್ಮಿಮ ಬಂಗಾಳ, ಕೊಲ್ಕೊತಾಗೆ ಬಂದಾಗಲೆಲ್ಲಾ ಮಮತಾ ಬ್ಯಾನರ್ಜಿ(ದೀದಿ)ಯನ್ನು ಭೇಟಿ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ ನಟ ಶಾರುಖ್. ಅವರು ಮಮತಾ ಬ್ಯಾನರ್ಜಿ ರಾಜ್ಯವನ್ನು ತಮ್ಮ ಎರಡನೇ ತವರುಮನೆ ಎಂದೇ ಕರೆಯುತ್ತಾರಂತೆ. 

ಶ್ರಾವಣಿ ಸುಬ್ರಹ್ಮಣ್ಯಕ್ಕೆ ದಶಕದ ಸಂಭ್ರಮ; ಬರಲಿದೆ ಒನ್ಸ್‌ ಮೋರ್ ಶ್ರಾವಣಿ ಸುಬ್ರಹ್ಮಣ್ಯ!

ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಇಳಿದ ಕೂಡಲೇ ಶಾರುಖ್ ಖಾನ್ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಕಾಲು ಮುಟ್ಟಿ ನಮಸ್ಕರಿಸಿದಾಗ ಹಲವರು ಅಚ್ಚರಿಗೆ ಒಳಗಾದರು. ಆದರೆ, ಅಲ್ಲಿದ್ದ ಕೆಲವರಿಗೆ ಅವರಿಬ್ಬರ ನಡುವಿನ ವಿಶೇಷ ಸಂಬಂಧದ ಬಗ್ಗೆ ಅರಿವಿತ್ತು. ಸಹೋದರನನ್ನು ಟ್ರೀಟ್ ಮಾಡುವಂತೆ ದೀದಿ ನಟ ಶಾರುಖ್‌ರನ್ನು ನೋಡಿಕೊಂಡಿರುವುದು ನೆರೆದಿದ್ದವರಲ್ಲಿ ಸಂತಸದ ಜತೆ ಸಂಭ್ರಮವನ್ನು ಮೂಡಿಸಿತು. 

ಜವಾನ್ ಡೈರೆಕ್ಟರ್ ಮುಂದಿನ ಸಿನಿಮಾಗೆ ಟಾಲಿವುಡ್ ಸ್ಟೈಲಿಶ್ ಸ್ಟಾರ್; ಪುಷ್ಪಾ 2 ಕಥೆ ಏನಾಯ್ತು?

ಕೋಲ್ಕತಾಗೆ ಆಗಮಿಸಿದ್ದ ಶಾರುಖ್‌, ಕಾರ್ಯಕ್ರಮ ಮುಗಿಸಿ ಹೊರಟಾಗ ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಿದ್ದು ಬೇರೆ ಯಾರು ಅಲ್ಲ. ಸ್ವತಃ ಸಿಎಂ ಮಮತಾ ಬ್ಯಾನರ್ಜಿ. ಡಂಕಿ ನಟ ಶಾರುಕ್ ಖಾನ್ ದೀದಿಯ ಸ್ಯಾಂಟ್ರೋ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ವಿಡಿಯೋ ವೈರಲ್ ಆಗಿದೆ. ಪ್ರಪಂಚದಲ್ಲಿರುವ ಎಲ್ಲಾ ಐಷಾರಾಮಿ ಸೌಲಭ್ಯ ಹೊಂದಿರುವ ಶಾರುಖ್‌ ಖಾನ್, ದೀದಿಯ ಸಣ್ಣ ಕಾರಿನಲ್ಲಿ ಪ್ರಯಾಣಿಸಿರುವುದು ಹಲವರ ಪಾಲಿಗೆ ಅಚ್ಚರಿ ಆಗಿರಬಹುದು. 

ಕಮಲ್ ಹಾಸನ್ ಬಗ್ಗೆ ನಟಿ ಶ್ರುತಿ ಹಾಸನ್ ಹೀಗಾ ಹೇಳೋದು; ತಪ್ಪೇನಿದೆ ಅಂತಿದಾರಲ್ಲ ನೆಟ್ಟಿಗರು!

ಸಣ್ಣ ಕಾರಿನಲ್ಲಿ ಶಾರುಖ್ ಕುಳಿತು ಟ್ರಾವೆಲ್‌ ಮಾಡಿ ಅದೆಷ್ಟು ಕಾಲವಾಗಿತ್ತೋ ಏನೋ ಎನ್ನುವಂತೆ ವಿಮಾನ ನಿಲ್ದಾಣದಲ್ಲಿದ್ದ ಜನರು ಕುತೂಹಲದಿಂದ ನೋಡುತ್ತಿದ್ದರು. ಆದರೆ, ನಟ ಮೌನವಾಗಿ ಮುಂದೆ ಸಾಗಿದರು. ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸದಿರಲು ಮೊದಲೇ ನಿರ್ಧರಿಸಿದ್ದ ನಟ ಶಾರುಖ್, ಮಾಧ್ಯಮದವರತ್ತ ಕೈ ಬೀಸುತ್ತ ಮೌನವಾಗಿ ಹೊರಟೇಬಿಟ್ಟರು. ಅಂದಹಾಗೆ, ಪ್ರಸಕ್ತ ವರ್ಷದಲ್ಲಿ ನಡೆದ ರಾಖಿ ಹಬ್ಬದಂದು ಟ್ವೀಟ್ ಮಾಡಿದ್ದ ಶಾರುಖ್‌ ಖಾನ್, 'ಪ್ರತಿ ವರ್ಷ ರಾಖಿ ಹಬ್ಬದಂದು ದೀದಿಯ ಆಶೀರ್ವಾದಕ್ಕಾಗಿ ಕಾಯುತ್ತೇನೆ' ಎಂದಿದ್ದರು. 
***

Follow Us:
Download App:
  • android
  • ios