Asianet Suvarna News Asianet Suvarna News

ಬಾಕ್ಸಿಂಗ್​ ಪಟು ಪುಟ್ಟಕ್ಕನ ಮಕ್ಕಳು ವಿಲನ್​ ರಾಜೇಶ್ವರಿ: ಪಂಚ್​ ನೋಡಿ ಉಫ್​ ಎಂದ ಫ್ಯಾನ್ಸ್​!

ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ  ವಿಲನ್ ಆಗಿರೋ​ ರಾಜೇಶ್ವರಿ ಅವರು ಈಗ  ಬಾಕ್ಸಿಂಗ್​ ಪಟು ಎಂದೂ ಸಾಬೀತಾಗಿದ್ದಾರೆ. ಅವರ ಪಂಚ್​ ನೋಡಿ ಉಫ್​ ಅಂತಿದ್ದಾರೆ ಫ್ಯಾನ್ಸ್​! 
 

villain in Puttakkana Makkalu  now  proved to be a boxing champion suc
Author
First Published Sep 17, 2023, 5:51 PM IST

 ಜನಮನ ಗೆದ್ದು, ಟಿಆರ್​ಪಿಯಲ್ಲಿ ಟಾಪ್​ ಸ್ಥಾನದಲ್ಲಿರೋ   ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪಾತ್ರಧಾರಿ, ನಾಯಕಿ ಪುಟ್ಟಕ್ಕ ಅರ್ಥಾತ್​ ನಟಿ ಉಮಾಶ್ರಿ ಅವರಷ್ಟೇ ಸಕತ್​ ಫೇಮಸ್​ ಆಗಿರೋ ನಟಿಯೆಂದರೆ ಪುಟ್ಟಕ್ಕನ ಸವತಿ ಅಂದ್ರೆ ಪತಿಯ ಎರಡನೆಯ ಪತ್ನಿಯ ಪಾತ್ರದಲ್ಲಿ ನಟಿಸ್ತಿರೋ ರಾಜೇಶ್ವರಿ. ಹೌದು. ರಾಜೇಶ್ವರಿ ಎಂದಾಕ್ಷಣ ಧಾರಾವಾಹಿ ಪ್ರಿಯರ ಕಣ್ಣಮುಂದೆ ಈ ಪುಟ್ಟಕ್ಕನ ಮಕ್ಕಳ ಧಾರಾವಾಹಿಯ ವಿಲನ್​ ಪಾತ್ರವೇ ಹಾದುಹೋಗುವಷ್ಟರ ಮಟ್ಟಿಗೆ ರಾಜೇಶ್ವರಿ (Rajeshwari) ಪಾತ್ರ ಜೀವ ತುಂಬಿದೆ. ಗಂಡ ಇಲ್ಲದಿದ್ದರೂ ಕ್ಷಣ ಕ್ಷಣಕ್ಕೂ ನೋವನ್ನೇ ಪುಟ್ಟಕ್ಕ ಅನುಭವಿಸುತ್ತಿದ್ದರೂ ಅವರ ಮನೆಯ ಸಮೀಪವೇ ಇದ್ದು, ಕ್ಷಣ ಕ್ಷಣಕ್ಕೂ ಆಕೆಗೆ ತೊಂದರೆ ಕೊಡುವಲ್ಲಿ ಈ ಸವತಿ ರಾಜೇಶ್ವರಿಯದ್ದು ಎತ್ತಿದ ಕೈ. ಪುಟ್ಟಕ್ಕನ ಪತಿಯನ್ನು ಬುಟ್ಟಿಗೆ ಹಾಕಿಕೊಂಡು ಮದುವೆಯಾದರೂ ಪುಟ್ಟಕ್ಕನಿಗೆ ತೊಂದರೆ ಕೊಡುವುದು ಎಂದರೆ ಈಕೆಗೆ ಅದೇನೋ ಖುಷಿ. ರಾಜೇಶ್ವರಿ ಬಂದರೆ ಅದೆಷ್ಟೋ ಮನೆಯಲ್ಲಿ ಆಕೆಗೆ ಹಿಡಿಶಾಪ ಹಾಕುವುದೂ ಇದೆ. ಥೇಟ್​ ವಿಲನ್​ನಂತೆ ಪಾತ್ರ ಮಾಡಿ ಆ ಪಾತ್ರಕ್ಕೆ ಜೀವ ತುಂಬುತ್ತಿರುವ ಈ ರಾಜೇಶ್ವರಿಯವರ ನಿಜವಾದ ಹೆಸರು ಹಂಸ ನಾರಾಯಣಸ್ವಾಮಿ @ ಹಂಸ ಪ್ರತಾಪ್​ (Hamsa Pratap)

ಮುದ್ದು ಮೊಗದ ಹಂಸ ಅವರನ್ನು ವಿಲನ್​ ಪಾತ್ರದಲ್ಲಿ ಕಲ್ಪನೆ ಮಾಡಿಕೊಳ್ಳುವುದು ಎಷ್ಟೋ ಮಂದಿಗೆ ಅರಗಿಸಿಕೊಳ್ಳಲಾಗದ ಸತ್ಯವೇ. ಆದರೂ ರಾಜೇಶ್ವರಿ ಪಾತ್ರದೊಳಕ್ಕೆ ಹೊಕ್ಕು ಸಾಕ್ಷಾತ್​ ಖಳನಾಯಕಿಯಾಗಿ ಮಿಂಚುತ್ತಿದ್ದಾರೆ ಹಂಸ. ಹಂಸ ಅವರು ನಟನೆ ಮಾತ್ರವಲ್ಲದೇ ಇನ್​ಸ್ಟಾಗ್ರಾಮ್​ನಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಒಂದು ಪಾತ್ರವನ್ನು ತೆರೆಯ ಮೇಲೆ ನೋಡಿದವರಿಗೆ ಅವರ ಅಸಲಿ ಮುಖ ಹೇಗಿದೆ ಎಂದು ತಿಳಿಯುವುದು ಕಷ್ಟವೇ. ಆದರೆ ನಟರ ಸಾಮಾಜಿಕ ಜಾಲತಾಣದಲ್ಲಿ (Social Media) ಅವರ ನಿಜವಾದ ರೂಪವನ್ನು ತಿಳಿಯಬಹುದು. ಅದೇ ರೀತಿ ಹಂಸ ಅವರ ಇನ್​ಸ್ಟಾಗ್ರಾಮ್​ ನೋಡಿದರೆ ಅರೆರೆ ಪುಟ್ಟಕ್ಕನ ಮಕ್ಕಳಿನ ರಾಜೇಶ್ವರಿ ಇವರು ಹೌದೋ ಅಲ್ವೋ ಅನ್ನುವಷ್ಟರ ಮಟ್ಟಿಗೆ ಡಿಫರೆಂಟ್​ ಆಗಿ ಕಾಣಿಸುತ್ತದೆ. 

ವಿಧವೆಯರಿಗೆ ಅರಿಶಿಣ-ಕುಂಕುಮವೆ? ಸತ್ಯ ಸೀರಿಯಲ್​ ಕಲಿಸಿದ ಪಾಠಕ್ಕೆ ಭೇಷ್​ ಭೇಷ್​ ಎಂದ ಪ್ರೇಕ್ಷಕರು

ಇದೀಗ ನಟಿಯ ಬಾಕ್ಸಿಂಗ್​ ಮಾಡಿದ್ದು, ಅದರ ವಿಡಿಯೋ ಶೇರ್​ ಮಾಡಿದ್ದಾರೆ. ಇದಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಬಾಕ್ಸಿಂಗ್ ತರಬೇತುದಾರನ ಜೊತೆ ಸಕತ್​ ಕಿಕ್​ ಕೊಟ್ಟಿದ್ದಾರೆ ರಾಜೇಶ್ವರಿ. ಇವರು ಬಾಕ್ಸಿಂಗ್​ ಪಟು  ಕೂಡ ಹೌದಾ ಎಂದು ಎಲ್ಲರೂ ಹುಬ್ಬೇರಿಸುತ್ತಿದ್ದಾರೆ. ಪುಟ್ಟಕ್ಕನಿಗೆ ಮಾತ್ರ ಈ ರೀತಿ ಪಂಚ್​ ಕೊಡಬೇಡಿ ಎಂದು ತಮಾಷೆ ಮಾಡುತ್ತಿದ್ದಾರೆ. 

ಅಂದಹಾಗೆ ಹಂಸ ಅವರು, ನಟಿ, ಅನೇಕ ಆ್ಯಂಗಲ್​ಗಳಲ್ಲಿ, ಬಗೆಬಗೆಯ ಡ್ರೆಸ್​ ತೊಟ್ಟು ಹಂಸ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಲೇ ಇದ್ದಾರೆ. ಇಂದು ಕೂಡ ಹಲವಾರು ರೀತಿಯ ಡ್ರೆಸ್​ಗಳಲ್ಲಿ ಅವರು ಫೋಟೋಶೂಟ್​ (Photoshoot) ಮಾಡಿಸಿಕೊಂಡು ಅದನ್ನು ಶೇರ್​ ಮಾಡಿಕೊಂಡಿದ್ದಾರೆ. ರೆಡ್ ಬ್ಲೇಜರ್ ತೊಟ್ಟು, ಬ್ಲಾಕ್ ಕಲರ್ ಸೂಟ್, ಮಿಡಿ, ಮಿನಿ, ಫ್ರಾಕ್​, ಸಲ್ವಾರ್​, ಸೀರೆ... ಹೀಗೆ ವಿಭಿನ್ನ ಉಡುಗೆ ತೊಟ್ಟು ಅವರು ಫೋಟೋಶೂಟ್​ ಮಾಡಿಸಿಕೊಂಡಿದ್ದು ಅದರ ಫೋಟೋ ಶೇರ್​ ಮಾಡಿದ್ದಾರೆ. ಈ ಫೋಟೋಗಳಿಗೆ ಸಕತ್​ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ಹಾರ್ಟ್​ ಎಮೋಜಿಗಳಿಂದ ಕಮೆಂಟ್​ಗಳು ತುಂಬಿದ್ದು ಹಲವಾರು ಮಂದಿ ಸೋ ಸ್ವೀಟ್​ ಎನ್ನುತ್ತಿದ್ದಾರೆ. ಇನ್ನು ಹಲವು ಫ್ಯಾನ್ಸ್​ ನೀವೇ ನಮ್​ ಕ್ರಷ್​ ಎನ್ನುತ್ತಿದ್ದಾರೆ.    ಇವರು, ಕನ್ನಡದಲ್ಲಿ `ಧ್ರುವ',`ಅಮ್ಮ',`ರಾಜಾಹುಲಿ' ಮುಂತಾದ ಚಿತ್ರಗಳಲ್ಲಿಯೂ ನಟಿಸಿದ್ದಾರೆ.

'ಬಾದಲ್​ ಬರ್ಸಾ'ಗೆ ಪುಟ್ಟಕ್ಕನ ಮಕ್ಕಳ ಸೂಪರ್​ ಡ್ಯಾನ್ಸ್​: ಮೆಸ್​ ಸುಟ್ಟೋದ್ರೂ ಹೀಗ್​ ಮಾಡೋದಾ ಅಂದ ಫ್ಯಾನ್ಸ್
 

Follow Us:
Download App:
  • android
  • ios