'ಬಾದಲ್ ಬರ್ಸಾ'ಗೆ ಪುಟ್ಟಕ್ಕನ ಮಕ್ಕಳ ಸೂಪರ್ ಡ್ಯಾನ್ಸ್: ಮೆಸ್ ಸುಟ್ಟೋದ್ರೂ ಹೀಗ್ ಮಾಡೋದಾ ಅಂದ ಫ್ಯಾನ್ಸ್
'ಬಾದಲ್ ಬರ್ಸಾ'ಗೆ ಪುಟ್ಟಕ್ಕನ ಮಕ್ಕಳ ಸೂಪರ್ ಡ್ಯಾನ್ಸ್ ಮಾಡಿದ್ದು, ನೆಟ್ಟಿಗರು ತಮಾಷೆಯ ಕಮೆಂಟ್ ಮಾಡುತ್ತಿದ್ದಾರೆ. ಮೆಸ್ ಸುಟ್ಟೋದ್ರೆ ನೀವು ಹೀಗ್ ಮಾಡೋದಾ ಅಂತಿದ್ದಾರೆ.

ಝೀ ಟಿ.ವಿಯಲ್ಲಿ ಪ್ರಸಾರ ಆಗ್ತಿರೋ ಪುಟ್ಟಕ್ಕನ ಮಕ್ಕಳು (Puttakkana Makkalu) ಸದಾ ಟಿಆರ್ಪಿಯಲ್ಲಿ ಟಾಪ್ಮೋಸ್ಟ್ ಸ್ಥಾನ ಪಡೆದು ಮುನ್ನುಗ್ಗುತ್ತಿದೆ. ದಿನದಿಂದ ದಿನಕ್ಕೆ ವೀಕ್ಷಕರ ಸಂಖ್ಯೆಯನ್ನು ಈ ಧಾರಾವಾಹಿ ಪಡೆದುಕೊಳ್ಳುತ್ತಿದೆ. ಗಂಡ ತನ್ನನ್ನು ಬಿಟ್ಟು ಇನ್ನೊಂದು ಮದುವೆಯಾದರೂ ಪುಟ್ಟಕ್ಕ ತನ್ನ ಮೂರು ಹೆಣ್ಣುಮಕ್ಕಳಾದ ಸಹನಾ, ಸ್ನೇಹಾ ಮತ್ತು ಸುಮಾ ಅವರನ್ನು ಹೇಗೆ ಕಷ್ಟಪಟ್ಟು ಸಾಕುತ್ತಿದ್ದಾಳೆ ಎನ್ನುವ ಕಥಾಹಂದರವನ್ನು ಈ ಧಾರಾವಾಹಿ ಹೊಂದಿದೆ. ಚಿಕ್ಕದೊಂದು ಕ್ಯಾಂಟೀನ್ ನಡೆಸಿಕೊಂಡು ಮಕ್ಕಳನ್ನು ಈಕೆ ಸಾಕುವ ಪರಿಯಿಂದ ಉತ್ತೇಜನಗೊಂಡು ನಿಜ ಜೀವನದಲ್ಲಿ ಎಷ್ಟೋ ತಾಯಂದಿರು ತಮಗೆ ಇದು ಸ್ಫೂರ್ತಿ ಕೊಟ್ಟಿದೆ ಎಂದೂ ಹೇಳಿದ್ದುಂಟು. ತಮ್ಮ ಕಥೆ ಕೂಡ ಪುಟ್ಟಕ್ಕನ ಕಥೆಗಿಂತ ಭಿನ್ನವಾಗಿಲ್ಲ ಎಂದು ಮಾಧ್ಯಮದ ಮುಂದೆ ಬಂದು ಕಣ್ಣೀರಾಕಿದ್ದೂ ಇದೆ. ಹಾಗೆ ಪುಟ್ಟಕ್ಕನಲ್ಲಿ ತಮ್ಮತನವನ್ನು ಕಂಡುಕೊಳ್ಳುವಷ್ಟರ ಮಟ್ಟಿಗೆ ಈ ಧಾರಾವಾಹಿ ಮನೆಮಾತಾಗಿದೆ. ಇದೀಗ ಧಾರಾವಾಹಿ ರೋಚಕ ಘಟ್ಟ ತಲುಪಿದೆ. ಪುಟ್ಟಕ್ಕ ಹಾಗೂ ಆಕೆಯ ಮಕ್ಕಳಿಗೆ ಬದುಕು ಕಟ್ಟಿಕೊಟ್ಟ ಮೆಸ್ ಸುಟ್ಟು ಬೂದಿಯಾಗಿದೆ. ಜೀವನ ಕತ್ತಲಾಗಿದೆ, ಬದುಕಿಗೆ ದಿಕ್ಕು ಇಲ್ಲದಾಗಿದೆ. ಯಾರದ್ದೋ ಮಹಾ ದ್ವೇಷಕ್ಕೆ ಪುಟ್ಟಕ್ಕನ ಸಂಸಾರ ಬೀದಿ ಪಾಲಾಗಿದೆ.
ಈ ಧಾರಾವಾಹಿಯಲ್ಲಿ ಹೈಲೈಟ್ ಆಗಿರೋದು ಪುಟ್ಟಕ್ಕನ ಮೂವರು ಹೆಣ್ಣುಮಕ್ಕಳು. ಅದರಲ್ಲಿ ಸ್ನೇಹಾ ನಾಯಕಿಯೇ. ಧಾರಾವಾಹಿ ಪ್ರಿಯರ ಮನಸ್ಸನ್ನು ಗೆದ್ದು, ಕದ್ದು ಬೀಗುತ್ತಿರೋ ನಟಿಯರಲ್ಲಿ ಒಬ್ಬರು ಈ ಸ್ನೇಹಾ. ಇವರ ಅಸಲಿ ಹೆಸರು ಸಂಜನಾ ಬುರ್ಲಿ. ಎಷ್ಟೋ ಮಂದಿಗೆ ಮಾದರಿ ಹೆಣ್ಣೀಕೆ. ರೌಡಿ ಕಂಠಿಯ ಜೊತೆಗಿನ ಸಂಪ್ರದಾಯಸ್ಥ ಹೆಣ್ಣುಮಗಳು ಸ್ನೇಹಾಳ ಲವ್ ಸ್ಟೋರಿಯೇ ಈ ಧಾರಾವಾಹಿಯ ಬಂಡವಾಳ. ಇಂತಿಪ್ಪ ಸ್ನೇಹಾ ಅಲಿಯಾ ಸಂಜನಾ ಅವರು ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ಅವರು, ಜೈಲರ್ ಚಿತ್ರದ ಕಾವಾಲಯ್ಯ ಹಾಡಿಗೆ ಡ್ಯಾನ್ಸ್ ಮಾಡಿದ್ದು, ಅದರನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಮಿನಿ ಸ್ಕರ್ಟ್ (Mini skirt) ಧರಿಸಿ ಅವರು ಸಕತ್ ಸ್ಟೆಪ್ ಹಾಕಿದ್ದಕ್ಕೆ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿತ್ತು. ಇದೇ ರೀತಿ ಹಲವಾರು ವಿಡಿಯೋ, ಫೋಟೋಗಳನ್ನು ಅವರು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.
ಸುಟ್ಟು ಭಸ್ಮವಾದ ಮೆಸ್ನಲ್ಲಿ ನೋಡಲಾಗ್ತಿಲ್ಲ ಪುಟ್ಟಕ್ಕನ ಕಣ್ಣೀರು: ಈಕೆಯ ಮುಂದಿನ ನಡೆ ಏನು?
ಇದೀಗ ಧಾರಾವಾಹಿಯಲ್ಲಿ ತಮ್ಮ ತಂಗಿಯ ಪಾತ್ರಧಾರಿಯಾಗಿರುವ ಸುಮಾ ಅವರ ಜೊತೆ ಬಾದಲ್ ಬರಸಾ ಪಾನಿಗೆ ಸಕತ್ ಸ್ಟೆಪ್ ಹಾಕಿದ್ದಾರೆ. ಅಂದಹಾಗೆ ಸುಮಾ ಅವರ ಅಸಲಿ ಹೆಸರು ಶಿಲ್ಪಾ ಸವಸೆರೆ. ಇವರು ಮಾಡೆಲ್ ಹಾಗೂ ಫ್ಯಾಷನ್ ಡಿಸೈನರ್ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ. ಇದೀಗ ಧಾರಾವಾಹಿ ಅಕ್ಕ ಸ್ನೇಹಾ ಜೊತೆ ಸಕತ್ ಸ್ಟೆಪ್ ಹಾಕಿದ್ದಾರೆ. ಈ ಹಿಂದೆ ಕೂಡ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ತುಂಬಾ ರೀಲ್ಸ್ ಮಾಡಿದ್ದಾರೆ. ತುಂಬಾ ದಿನಗಳ ಬಳಿಕ ಮತ್ತೆ ಕಾಣಿಸಿಕೊಂಡಿದ್ದಾರೆ.
ಅಕ್ಕ-ತಂಗಿಯ ಈ ಜೋಡಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಹಲವು ತಿಂಗಳ ಬಳಿಕ ಅಕ್ಕ-ತಂಗಿಯಂದಿರನ್ನು ನೋಡಿ ಖುಷಿಯಾಗುತ್ತಿದೆ ಎನ್ನುತ್ತಿದ್ದಾರೆ. ಇನ್ನು ಕೆಲವರು ಈ ಜೋಡಿಗೆ ಕಾಲೆಳೆಯುತ್ತಿದ್ದಾರೆ. ಅತ್ತ ನಿಮ್ಮ ಅಮ್ಮ ಜೀವನಕ್ಕೆ ಆಧಾರವಾಗಿರೋ ಮೆಸ್ ಸುಟ್ಟುಹೋಗಿದೆ ಎಂದು ಗೋಳಾಡುತ್ತಿದ್ದರೆ, ನೀವು ನೋಡಿದ್ರೆ ಇಲ್ಲಿ ಡ್ಯಾನ್ಸ್ ಮಾಡ್ತಾ ಇದ್ದೀರಾ, ಎಂಥ ಮಕ್ಕಳು ನೀವು ಅಂತ ಕೇಳುತ್ತಿದ್ದಾರೆ. ಉಳಿದಂತೆ ಹಾರ್ಟ್ ಇಮೋಜಿಗಳಿಂದ ಕಮೆಂಟ್ ಬಾಕ್ಸ್ ಫುಲ್ ಆಗಿದೆ.