Asianet Suvarna News Asianet Suvarna News

ಜೊತೆ ಜೊತೆಯಲಿ; ನಟ ಅನಿರುದ್ಧ್ ಜಾಗಕ್ಕೆ 'ವಿಕ್ರಾಂತ್ ರೋಣ' ನಿರ್ದೇಶಕ ಅನೂಪ್ ಭಂಡಾರಿ ಎಂಟ್ರಿ?

ಧಾರಾವಾಹಿಯಿಂದ ಅನಿರುದ್ಧ ಹೊರಬಿದ್ದ ಬಳಿಕ ಇದೀಗ ಅನಿರುದ್ಧ್ ಜಾಗಕ್ಕೆ ಎಂಟ್ರಿ ಕೊಡುವ ನಟ ಯಾರು ಎನ್ನುವ ಚರ್ಚೆ ಪ್ರಾರಂವಾಗಿದೆ. ಸದ್ಯ ಕೇಳಿಬರುತ್ತಿವ ಮಾಹಿತಿ ಪ್ರಕಾರ ವಿಕ್ರಾಂತ್ ರೋಣ ನಿರ್ದೇಶಕ ಅನೂಪ್ ಭಂಡಾರಿ ಹೆಸರು ಬಲವಾಗಿ ಕೇಳಿಬರುತ್ತಿದೆ.

Vikrant Rona director anup bhandari likely to replace Aniruddha Jatkar in popular serial Jothe jotheyali sgk
Author
Bengaluru, First Published Aug 22, 2022, 3:20 PM IST

ಕಳೆದ ನಾಲ್ಕೈದು ದಿನಗಳಿಂದ ಕನ್ನಡ ಕಿರುತೆರೆಯಲ್ಲಿ ಜೊತೆ ಜೊತೆಯಲಿ ಧಾರಾವಾಹಿಯದ್ದೆ ಸದ್ದು. ನಟ ಅನಿರುದ್ಧ್ ಮತ್ತು ಧಾರಾವಾಹಿ ತಂಡದ ಜೊತೆಗಿನ ಕಿತ್ತಾಟ ಕೊನೆಗೆ ಅನಿರುದ್ಧ್ ಅವರನ್ನು 2 ವರ್ಷಗಳು ಬ್ಯಾನ್ ಮಾಡುವ ಮೂಲಕ ಅಂತ್ಯವಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಾಸವಾಗುತ್ತಿದ್ದ ಜೊತೆ ಜೊತೆಯಲಿ ಧಾರಾವಾಹಿ ತಂಡದ ಜೊತೆ ನಟ ಅನಿರುದ್ಧ್ ಕಿರಿಕ್ ಮಾಡಿಕೊಂಡ ಹಿನ್ನಲ್ಲೆ ಅನಿರುದ್ಧ್ ಅವರನ್ನು ಕಿರುತೆರೆಯಿಂದನೇ ಕಿಕ್ ಔಟ್ ಮಾಡಲಾಗಿದೆ. ಅನಿರುದ್ಧ್ ಅವರನ್ನು ಎರಡು ವರ್ಷಗಳ ಕಾಲ ಧಾರಾವಾಹಿಯಿಂದ ದೂರ ಇಡಲು ನಿರ್ಮಾಪಕರ ಸಂಘ ನಿರ್ಧರಿಸಿದೆ. ಈ ಬಗ್ಗೆ ಜೊತೆ ಜೊತೆಯಲಿ ಧಾರಾವಾಹಿಯ ನಿರ್ಮಾಪಕ ಆರೂರು ಜಗದೀಶ್ ಸ್ಪಷ್ಟಪಡಿಸಿದ್ದಾರೆ. ಅನಿರುದ್ಧ ವಿರುದ್ಧ ಆರೋಪಗಳ ಸುರಿಮಳೆ ಗೈದಿರುವ ಆರೂರು, ಅನಿರುದ್ಧ ಜೊತೆ ಕೆಲಸ ಮಾಡಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಆರೂರು ಜಗದೇಶ್ ಅವರ ಎಲ್ಲಾ ಆರೋಪಗಳಿಗೂ ಅನಿರುದ್ಧ್ ಪ್ರತಿಕ್ರಿಯೆ ನೀಡಿ ಆರೋಪಗಳನ್ನು ತಳ್ಳಿ ಹಾಕಿದರು. ಅಲ್ಲದೆ ಶೂಟಿಂಗ್‌ಗೆ ಕರೆದರೆ ಹೋಗ್ತೀನಿ ಅಂತ ಹೇಳಿದ್ದರು. ಆದರೀಗ ಅನಿರುದ್ಧ್ ಜಾಗಕ್ಕೆ ಬೇರೆ ಕಲಾವಿದರ ಹೆಸರು ಕೇಳಿಬರುತ್ತಿದೆ. 

ಧಾರಾವಾಹಿಯಿಂದ ಅನಿರುದ್ಧ ಹೊರಬಿದ್ದ ಬಳಿಕ ಅವರ ಜಾಗಕ್ಕೆ ಎಂಟ್ರಿ ಕೊಡುವ ನಟ ಯಾರು ಎನ್ನುವ ಚರ್ಚೆ ಪ್ರಾರಂವಾಗಿದೆ. ಈಗಾಗಲೇ ಸಾಕಷ್ಟು ನಟರ ಹೆಸರು ಕೇಳಿಬಂದಿದೆ. ವಿಜಯ್ ರಾಘವೇಂದ್ರ, ಜೆಕೆ, ಹರೀಶ್ ರಾಜ್, ನವೀನ್ ಕೃಷ್ಣ ಹೀಗೆ ಅನೇಕರ ಹೆಸರು ಆರ್ಯವರ್ಧನ್ ಪಾತ್ರಕ್ಕೆ ಕೇಳಿಬರುತ್ತಿತ್ತು. ಆದರೀಗ ಮತ್ತಷ್ಟು ಹೆಸರು ವೈರಲ್ ಆಗಿದೆ. ಅದು ಮತ್ಯಾರು ಅಲ್ಲ ವಿಕ್ರಾಂತ್ ರೋಣ ನಿರ್ದೇಶಕ ಅನೂಪ್ ಭಂಡಾರಿ. ಹೌದು, ಆರ್ಯವರ್ಧನ್ ಪಾತ್ರದಲ್ಲಿ ಅನೂಪ್ ಭಂಡಾರಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಬಲವಾಗಿ ಕೇಳಿಬರುತ್ತಿದೆ. ಒಂದು ವೇಳೆ ಅನೂಪ್ ಭಂಡಾರಿ ಆರ್ಯವರ್ಧನ್ ಆಗಿ ಬಣ್ಣ ಹಚ್ಚಿದರೆ ಮೊದಲ ಬಾರಿಗೆ ನಟನಾಗಿ ಕಿತುತೆರೆಯಲ್ಲಿ ಮಿಂಚಲಿದ್ದಾರೆ. 

ಮಕ್ಕಳ ಮೇಲೆ ಕೈ ಇಟ್ಟು ಹೇಳಲಿ; ಆರೂರು ಜಗದೀಶ್ ಆರೋಪಗಳಿಗೆ ಅನಿರುದ್ಧ್ ರಿಯಾಕ್ಷನ್

ಈ ಬಗ್ಗೆ ಧಾರಾವಾಹಿ ಕಡೆಯಿಂದ ಅಥವಾ ವಾಹಿನಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಆದರೆ ಅನೂಪ್ ಹೆಸರು ಬಲವಾಗಿ ಕೇಳಿಬರುತ್ತಿರುವ ಕಾರಣ ಅನೂಪ್ ಭಂಡಾರಿ ಆರ್ಯವರ್ಧನ್ ಆಗಿ ಕಿರುತೆರೆ ಅಭಿಮಾನಿಗಳ ಮುಂದೆ ಬರುವ ಸಾಧ್ಯತೆ ಇದೆ. ಸದ್ಯ ಅನೂಪ್ ಭಂಡಾರಿ ವಿಕ್ರಾಂತ್ ರೋಣ ಸಿನಿಮಾ ಸಕ್ಸಸ್ ನಲ್ಲಿದ್ದಾರೆ. ಈ ಸಿನಿಮಾ ಬಳಿಕ ಇನ್ನು ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ. ಸುದೀಪ್ ಅವರ ಜೊತೆಯೇ ಬಿಲ್ಲ ರಂಗ ಭಾಷ ಸಿನಿಮಾ ಮಾಡಬೇಕಿತ್ತು. ಆದರೀಗ ನಟನಾಗಿ ಕಿರುತೆರೆಗೆ ಎಂಟ್ರಿ ಕೊಡುತ್ತಿರುವುದು ಅಚ್ಚರಿ ಮೂಡಿಸಿದೆ. ನಟನೆ ಮತ್ತು ನಿರ್ದೇಶನ ಎರಡರಲ್ಲೂ ಅನೂಪ್ ಬ್ಯುಸಿಯಾಗಲಿದ್ದಾರೆ. 

ಜೊತೆ ಜೊತೆಯಲಿ ಕಿರಿಕ್; ನಟ ಅನಿರುದ್ಧ್ ವಿರುದ್ಧ ಆರೂರ್ ಜಗದೀಶ್ ಆರೋಪಗಳ ಸುರಿಮಳೆ

ಅನಿರುದ್ಧ ಕಿಕ್ ಔಟ್ ಆಗಿದ್ದೇಕೆ?

ನಟ ಅನಿರುದ್ಧ್ ಮತ್ತು ನಿರ್ದೇಶಕರ ನಡುವೆ ಹೊಂದಾಣಿಕೆ ಇಲ್ಲದೆ ಕಿತ್ತಾಡಿಕೊಂಡಿದ್ದಾರೆ. ನಟ ಅನಿರುದ್ಧ ಸ್ಕ್ರಿಪ್ಟ್ ವಿಚಾರದಲ್ಲಿ ಕಿರಿಕ್ ಮಾಡುತ್ತಾರೆ, ಸಂಭಾಷಣೆ ವಿಚಾರದಲ್ಲಿ ಕಿರಿಕ್ ಮಾಡುತ್ತಾರೆ, ಧಾರಾವಾಹಿ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಾರೆ, ಕ್ಯಾರವಾನ್ ಗಲಾಟೆ, ಅಧಿಕ ಖರ್ಚು ಹೀಗೆ ಅನೇಕ ಆರೋಪಗಳು ಅನಿರುದ್ಧ್ ವಿರುದ್ಧ ಕೇಳಿಬಂದಿದೆ. ಆದರೆ ಅನಿರುದ್ಧ್ ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ತನಗೆ ಅಹಂಕಾರ ವಿಲ್ಲ ತನ್ನ ವಿರುದ್ಧ ಮಾಡಿರುವ ಆರೋಪಗಳನ್ನು ಅವರ ಮಕ್ಕಳ ಮೇಲೆ ಕೈ ಇಟ್ಟು ಹೇಳಲಿ ಎಂದು ಚಾಲೆಂಜ್ ಮಾಡಿದ್ದರು. ಆದರೆ ನಿರ್ಮಾಪಕ ಆರೂರು ಜಗದೀಶ್, ಅನಿರುದ್ಧ ಜೊತೆ ಕೆಲಸ ಮಾಡುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. 

Follow Us:
Download App:
  • android
  • ios