Asianet Suvarna News Asianet Suvarna News

ಜೊತೆ ಜೊತೆಯಲಿ ಕಿರಿಕ್; ನಟ ಅನಿರುದ್ಧ್ ವಿರುದ್ಧ ಆರೂರ್ ಜಗದೀಶ್ ಆರೋಪಗಳ ಸುರಿಮಳೆ

ಜೊತೆ ಜೊತೆಯಲಿ ಧಾರಾವಾಹಿಯ ನಿರ್ಮಾಪಕ ಆರೂರು ಜಗದೀಶ್ ಆಡಿಯೋ ಮೂಲಕ ನಟ ಅನಿರುದ್ಧ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಟ ಅನಿರುದ್ಧ ವಿರುದ್ಧ ಆರೋಪಗಳ ಸುರಿಮಳೆ ಗೈದಿದ್ದಾರೆ.  

jothe jotheyali serial producer aroor jagadish allegations against Actor Anirudh sgk
Author
Bengaluru, First Published Aug 20, 2022, 3:52 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಾಸವಾಗುತ್ತಿದ್ದ ಜೊತೆ ಜೊತೆಯಲಿ ಧಾರಾವಾಹಿ ತಂಡದ ಜೊತೆ ನಟ ಅನಿರುದ್ಧ್ ಕಿರಿಕ್ ಮಾಡಿಕೊಂಡ  ಹಿನ್ನಲ್ಲೆ ಅನಿರುದ್ಧ್ ಅವರನ್ನು ಕಿರುತೆರೆಯಿಂದನೇ ಕಿಕ್ ಔಟ್ ಮಾಡಲಾಗಿದೆ. ಅನಿರುದ್ಧ್ ಅವರನ್ನು ಎರಡು ವರ್ಷಗಳ ಕಾಲ ಧಾರಾವಾಹಿಯಿಂದ ದೂರ ಇಡಲು ನಿರ್ಮಾಪಕರ ಸಂಘ ನಿರ್ಧಾರ ಮಾಡಿದೆ. ಈ ಬಗ್ಗೆ ಜೊತೆ ಜೊತೆಯಲಿ ಧಾರಾವಾಹಿಯ ನಿರ್ಮಾಪಕ ಆರೂರು ಜಗದೀಶ್ ಆಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ನಟ ಅನಿರುದ್ಧ ವಿರುದ್ಧ ಆರೋಪಗಳ ಸುರಿಮಳೆ ಗೈದಿದ್ದಾರೆ.  

'ವಿಷ್ಣುವರ್ಧನ್ ಅವರ ಅಳಿಯ ಅವರ ಮೇಲೆ ತುಂಬಾ ಗೌರವವಿದೆ. ಜನಪ್ರಿಯತೆ ಜಾಸ್ತಿ ಆದಮೇಲೆ ಅವರು ಬದಲಾದರು. ಧಾರಾವಾಹಿ ಮೇಲೆ ಹಿಡಿತ ಸಾಧಿಸಲು ಹೋದರು. ಸಿನಿಮಾ ಅಲ್ಲ, ಇದು ಧಾರಾವಾಹಿ ಅಂತ ಹೇಳಿದ್ರು ಅರ್ಥ ಆಗಿಲ್ಲ. ಬೀದಿ ಬೀದಿ ಶೂಟಿಂಗ್ ಮಾಡ್ತಾ ಇದ್ವಿ ಪ್ರಾರಂಭದಲ್ಲಿ, ಅಲ್ಲೇ ಊಟ ಮಾಡುತ್ತಿದೆದ್ವಿ, ಆದರೀಗ ಕ್ಯಾರವಾನ್ ಇಲ್ಲದೆ ಬರುವುದೇ ಇಲ್ಲ' ಎಂದು ಹೇಳಿದರು. 

ಮೊದಲು ಜಗಳ ಪ್ರಾರಂಭವಾಗಿದ್ದೇ ಇಲ್ಲಿಂದ 

'ಫ್ಯಾಕ್ಟರಿ ಸೀನ್ ಶೂಟಿಂಗ್ ವೇಳೆ. ಒಂದು ಸೀನ್ ಪೇಪರ್ ಮಿಸ್ ಆಗಿತ್ತು. ಈಗ ಕೊಡ್ತಾ ಇದ್ದೀರಾ ಅದನ್ನು ಮಾಡಲ್ಲ ಅಂತ ಜೋರಾಗಿ ಗಲಾಟೆ ಮಾಡಿದ್ರು. ಅದನ್ನು ಮತ್ತೆ ಫ್ಯಾಕ್ಟರಿಗೆ ಹೋಗಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಅಲ್ಲೆ ಮಾಡಲು ಹೇಳಿದ್ರೆ ಫುಲ್ ಗಲಾಟೆ ಮಾಡಿದ್ರು. ಒಂದು ಗಂಟೆ ಶೂಟಿಂಗ್ ನಿಂತು ಹೋಯ್ತು. ಬಳಿಕ ಮತ್ತೆ ಮಾಡಿದರು. ಪ್ರಾರಂಭದಲ್ಲಿ ತುಂಬಾಕಷ್ಟ ಪಟ್ಟಿದೀವಿ. ಚಿನ್ನ, ಒಡವೆ ಎಲ್ಲಾ ಅಡ ಇಟ್ಟು ಈ ಧಾರಾವಾಹಿ ಮಾಡಿದ್ದೀವಿ. ಇಷ್ಟು ಕಷ್ಟಪಟ್ಟಿದ್ದಕ್ಕೆ ಅದ್ದೂರಿಯಾಗಿ ಧಾರಾವಾಹಿ ಬಂದಿದೆ' ಎಂದು ಹೇಳಿದರು 

'ಪ್ರತಿ ಶಾಟ್ ತೆಗೆಯುವಾಗಲೂ ಮಾನಿಟರ್ ಬಂದು ನೋಡ್ತಾರೆ. ಅದು ಹಾಗೆ ಇದು ಹಾಗೆ ಅಂತಾರೆ, ಆಗ ಸಮಯ ಹಾಳಾಗುತ್ತೆ. ಎಪಿಸೋಡ್ ಮಾಡೋದು ಲೇಟ್ ಆಗುತ್ತಿತ್ತು. ಇದರಿಂದ ತುಂಬಾ ನಷ್ಟವಾಗಿದೆ. ಚಿಕ್ಕ ಚಿಕ್ಕ ವಿಚಾರಕ್ಕೂ ಗಲಾಟೆ ಮಾಡುವುದು ಆಗುತ್ತಲೆ ಇತ್ತು. ಇವರಿಂದ ಅನೇಕರನ್ನು ಕೆಲಸದಿಂದ ತೆಗೆದಿದ್ದೀವಿ. ಫಸ್ಟ್ ಶಾಟ್ ಶೂಟಿಂಗ್‌ಗೆ ಕರೆದ್ರೆ ತಿಂಡಿ ತಿಂಥ ಇದ್ದೀವಿ ಅಂತ ಕೂಗಾಡುತ್ತಿದ್ದರು. ಸಹ ಕಲಾವಿದರನ್ನು ಕರೆದುಕೊಂಡು ಹೋಗುತ್ತಿದ್ದರು. 95 ಪರ್ಸೆಂಟ್ ಆರ್ಯವರ್ಧನ್ ಅವರದ್ದೇ ಕಥೆ ಇರೇದು' ಎಂದು ಬೇಸರ ಹೊರಹಾಕಿದ್ದಾರೆ.  

ಮಕ್ಕಳ ಮೇಲೆ ಕೈ ಇಟ್ಟು ಹೇಳಲಿ; ಆರೂರು ಜಗದೀಶ್ ಆರೋಪಗಳಿಗೆ ಅನಿರುದ್ಧ್ ರಿಯಾಕ್ಷನ್

ಗಾಸಿಪ್ ಮಾಡ್ತಾ ಇದ್ದಾರೆ ಎಂದು ಶೂಟಿಂಗ್‌ಗೆ ಬಂದಿಲ್ಲ

'ಸೆಟ್ ನಲ್ಲಿ ನನ್ನ ಬಗ್ಗೆ ತಂತ್ರಜ್ಞರು ಗಾಸಿಪ್ ಮಾಡ್ತಾ ಇದ್ದಾರೆ ಅಂತ ಶೂಟಿಂಗ್ ಗೆ ಬಂದಿಲ್ಲ. 5-6 ದಿನ ಬಂದಿಲ್ಲ. ಬಳಿಕ ನಾನೆ ಅವರ ಮನೆಗೆ ಹೋಗಿ ಕರೆದುಕೊಂಡು ಬಂದಿದ್ದೀನಿ. ಕೊರೊನಾ ಸಮಯದಲ್ಲಿ ಎಲ್ಲರಿಗೂ ಪೇಮೆಂಟ್ ಕಟ್ ಆಗಿತ್ತು. ಇವರಿಗೂ ಪೇಮೆಂಟ್ ಕಟ್ ಮಾಡಿದ್ವಿ .ಆದರೆ ಅವರು ಕೆಟ್ಟದಾಗಿ ಬೈದು, ನಿರ್ಮಾಪಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಇವರು ಮಾತ್ರ ಹಣ ಕಟ್ ಮಾಡಲು ಬಿಟ್ಟಿಲ್ಲ.  ಬಳಿಕ ಶೂಟಿಂಗ್ ಬರಲ್ಲ ಎಂದು ಗಲಾಟೆ ಮಾಡಿದ್ರು. ಆಗಲು ಸಾಮಾಧಾನ ಮಾಡಿ ಶೂಟಿಂಗ್ ಮುಂದುವರೆಸಿದ್ವಿ. 

ನಮ್ಮ ಕುಟುಂಬ ಸೂಸೈಡ್ ಮಾಡಿಕೊಳ್ಳಬೇಕಿತ್ತು

ಕಷ್ಟದಲ್ಲಿ ಶೂಟಿಂಗ್ ಪ್ರಾರಂಭ ಮಾಡಿದ್ದು. ನಮ್ಮ ಕುಟುಂಬ ಸೂಸೈಡ್ ಮಾಡಿಕೊಳ್ಳಬೇಕಿತ್ತು, ಹಾಗಿತ್ತು ಪರಿಸ್ಥಿತಿ. ಔಟ್ ಡೋರ್ ಶೂಟಿಂಗ್ ಇದ್ದರೆ ಮನೆಗೆ ಬರಬೇಕು ಎನ್ನುತ್ತಿದ್ದರು. ಮನೆಯಿಂದ ಶೂಟಿಂಗ್ ಬರುವಾಗ ತುಂಬಾ ಸಮಯ ಆಗುತ್ತದೆ, ಸಮಯ ಹಾಳು' ಎಂದು ಆರೂರು ಆರೋಪ ಮಾಡಿದರು.

'ಜೊತೆ ಜೊತೆಯಲಿ' ತಂಡದ ಜೊತೆ ಕಿರಿಕ್; ಕಿರುತೆರೆಯಿಂದ ನಟ ಅನಿರುದ್ಧ್ ಕಿಕ್ ಔಟ್

 ಸ್ಟಾರ್ ಹೋಟೆಲ್‌ನಲ್ಲಿ 2 ಲಕ್ಷ ಬಿಲ್ ಮಾಡಿದ್ರು

'ಎಲ್ಲರೂ ಶೂಟಿಂಗ್ ಸೆಟ್ ನಲ್ಲಿ ಊಟ ಮಾಡಿದ್ರೆ ಅವರಿಗೆ ಸ್ಟಾರ್ ಹೇಟೆಲ್ ಬೇಕಿತ್ತು, 2 ಲಕ್ಷ ಬಿಲ್ ಆಗಿತ್ತು.  ಹೀರೋಯಿನ್ ಕೂಡ ಇವರಿಂದನೆ ಹಾಳಾಗಿದ್ದು ಅಮೇಲೆ ಗೊತ್ತಾಯಿತು. ದೊಡ್ಡ ಸ್ಟಾರ್ಸ್ ಎಲ್ಲಾ ಇದ್ದರೂ, ಅವರೆಲ್ಲರಿಗೂ ಕ್ಯಾರವಾನ್ ಇರಲಿಲ್ಲ. ಸ್ಟಾರ್ ಆದಮೇಲೆ ಕೆಲವು ಸಂಭಾಷಣೆ ಮಾಡಲ್ಲ ಅಂತ ಗಲಾಟೆ, ಅದು ಮಾಡಲ್ಲ, ಇದು ಮಾಡಲ್ಲ ಅಂತ ಗಲಾಟೆ ಮಾಡಿದ್ರು, ಅಲ್ಲಿಗೆ ಧಾರಾವಾಹಿ ಟಿ ಆರ್ ಪಿ ಬಿದ್ದು ಹೋಯ್ತು. ಹಿಂದಿನ ದಿನ ರಾತ್ರಿಯೆ ಸೀನ್ ಪೇಪರ್ ಕಳುಹಿಸುತ್ತಿದ್ದೆವು. ಕೊಟ್ಟಿಲ್ಲ ಎಂದರೆ ಶೂಟಿಂಗ್ ಬರಲ್ಲ. ಪ್ರತಿ ದಿನ ಪ್ರತಿ ಸಂಭಾವಣೆ ಬಗ್ಗೆಯೂ ಚರ್ಚೆ ಮಾಡುತ್ತಾರೆ. ಹೀಗೆ ಪ್ರತಿ ದಿನ ಶೂಟಿಂಗ್ ಮಾಡಿದ್ರೆ ಹೇಗೆ ಸಾಧ್ಯ. ಅವರ ಸ್ವಾರ್ಥಕ್ಕೆ ಧಾರಾವಾಹಿ ಬಳಸಿಕೊಂಡರು. ಮಾತಲ್ಲಿ ಇದ್ದಹಾಗೆ ಅನಿರುದ್ಧ್ ಇಲ್ಲ. ಚಾನೆಲ್ ಮತ್ತು ಧಾರಾರವಾಹಿ ನಿರ್ಧಾರ ಮಾಡಿದ್ದು ಇವರನ್ನು ಈ ಧಾರಾವಾಹಿಯಲ್ಲಿ ಮುಂದುವರೆಸುವುದು ಬೇಡ ಅಂತ' ಅಂತ ಆರೋಪಗಳ ಸುರಿಮಳೆ ಗೈದರು.   

Follow Us:
Download App:
  • android
  • ios