ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಎರಡು ವರ್ಷಗಳ ಹಿಂದೆ ಪತ್ನಿ ಸ್ಪಂದನಾ ಜೊತೆ ದರ್ಶನ ಪಡೆದಾಗ ಧರಿಸಿದ್ದ ಶರ್ಟನ್ನೇ ಈಗಲೂ ಧರಿಸಿರುವುದು ವಿಶೇಷ. ಸ್ಪಂದನಾ ನೆನಪು ಸದಾ ಇರುತ್ತದೆ ಎಂದು ವಿಜಯ್ ಹೇಳಿದ್ದಾರೆ. ಅಭಿಮಾನಿಗಳು ಸ್ಪಂದನಾ ಮೇಲಿನ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಪಂದನಾ 2023ರಲ್ಲಿ ಹೃದಯಾಘಾತದಿಂದ ನಿಧನರಾದರು.

ಕನ್ನಡ ಚಿತ್ರರಂಗ ಚಿನ್ನಾರಿ ಮುತ್ತ, ಚಾಕೋಲೇಟೆ ಹೀರೋ ಹಾಗೂ ದಿ ಬೆಸ್ಟ್‌ ಹ್ಯೂಮನ್ ಎಂದು ಜನರಿಂದ ಬಿರುದು ಪಡೆದಿರುವ ವಿಜಯ್ ರಾಘವೇಂದ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಮಗನ ಪರೀಕ್ಷೆ ನಡೆಯುತ್ತಿರುವ ಸಮಯದಲ್ಲಿ ದೇವರ ಆಶೀರ್ವಾದ ತುಂಬಾ ಮುಖ್ಯವಾಗಿದೆ. ಆಶ್ಚರ್ಯ ಏನೆಂದರೆ ಎರಡು ವರ್ಷಗಳ ಹಿಂದೆ ವಿಜಯ್ ಧರಿಸಿದ್ದ ಶರ್ಟ್ ಹಾಗೂ ಈ ಸಲ ಭೇಟಿ ನೀಡಿದಾಗ ಧರಿಸಿರುವ ಶರ್ಟ್ ಒಂದೇ ಇದೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಅಲ್ಲದೆ ಸ್ಪಂದನಾ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

'ಎರಡು ವರ್ಷಗಳ ಹಿಂದೆ ಜೊತೆಯಲ್ಲೇ ಕೊಲ್ಲೂರು ಶ್ರೀ ಮೂಕಾಂಬಿಕೆಯ ದರ್ಶನಕ್ಕೆ ಹೋದಾಗ ದಾಕಿದ್ದ ಶರ್ಟನ್ನೇ ನನಗರಿಯದೆಯೇ ಈ ದಿನವೂ ಕೊಲ್ಲೂರು ಅಮ್ಮನ ದರ್ಶನ ಪಡೆಯಲು ಹೋದಾಗ ಹಾಕಿದ್ದೆ...ಐ ಲವ್ ಯು ಚಿನ್ನ' ಎಂದು ವಿಜಯ್ ರಾಘವೇಂದ್ರ ಬರೆದುಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ಪತ್ನಿ ಜೊತೆ ಭೇಟಿ ನೀಡಿದ್ದಾಗ ನೀಲಿ ಬಣ್ಣದ ಶರ್ಟ್‌ಗೆ ಪಂಚೆ ಶೆಲ್ಯೆ ಧರಿಸಿದ್ದರು ಹಗೂ ಸ್ಪಂದಾನ ನೇರಳ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಈಗ ಅದೇ ನೀಲಿ ಬಣ್ಣದ ಶರ್ಟ್‌ ಮತ್ತೆ ಧರಿಸಿದ್ದಾರೆ. ಇದು ವಿಜಯ್‌ಗೆ ಮಾತ್ರವಲ್ಲದೆ ಅಭಿಮಾನಿಗಳಿಗೂ ಆಶ್ಚರ್ಯವಾಗಿದೆ.

26 ವರ್ಷದ ಬಿಗ್ ಬಾಸ್ ಭವ್ಯಾ ಗೌಡ ಒಂದು ಸೀರಿಯಲ್ ಒಂದು ಶೋಯಿಂದ ಮಾಡಿರೋ ಆಸ್ತೆ ಎಷ್ಟು?

'ನಿಜವಾದ ಪ್ರೀತಿ ಅಂದ್ರೆ ಇದೇ ಸರ್. ನೀವು ಎಲ್ಲೇ ಹೋದರು ಅಲ್ಲಿ ಮೇಡಂ ನೆನಪು ಮತ್ತು ಫೋಟೋ ಇದ್ದೇ ಇರುತ್ತದೆ. ನೆರಳಾಗಿ ಅವರು ನಿಮ್ಮೊಟ್ಟಿಗೆ ಈಗಲೂ ಪಕ್ಕದಲ್ಲಿ ಇದ್ದಾರೆ' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ಮಹಾಲಕ್ಷ್ಮಿ ರೀತಿಯಲ್ಲಿ ಕೈಗೆ ಬಳೆ ಹಣೆಯಲ್ಲಿ ಕುಂಕುಮ ಇಟ್ಟಿರುವ ಸ್ಪಂದನಾರನ್ನು ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 

ಮಾಳವಿಕಾ ಫೋನ್‌ ರಿಂಗ್‌ ಆದ್ರೂ ನಾನು ಮುಟ್ಟಲ್ಲ, ಮದ್ವೆ ಆದ್ಮೇಲೆ ಸ್ಪೇಸ್‌ ಬೇಕು: ನಟ ಅವಿನಾಶ್

ವಿಜಯ್ ರಾಘವೇಂದ್ರ ಮತ್ತು ಸ್ಪಂದನಾ ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆ ಮಾಡಿಕೊಂಡರು. ಸ್ಪಂದನಾ ಮೂಲತಃ ಬೆಳ್ತಂಗಡಿಯವರು. ಮದುವೆ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದರು. 2007ರಲ್ಲಿ ಆಗಸ್ಟ್‌ 26ರಂದ ವಿಜಯ್ ಮತ್ತು ಸ್ಪಂದನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ ಈಗ 14 ವರ್ಷ ಮಗನಿದ್ದಾನೆ. 2023ರ ಆಗಸ್ಟ್‌ 6ರಂದು ಬ್ಯಾಂಕಾಂಕ್ ಪ್ರಯಾಣ ಮಾಡಿದ್ದಾಗ ಸ್ಪಂದನಾ ಹೃದಯಾಘಾತದಿಂದ ನಿಧನರಾದರು. ಸದ್ಯ ಸಿಂಗಲ್ ಪೇರೆಂಟ್ ಆಗಿ ವಿಜಯ್ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ. 

ಮೆಹೆಂದಿ ಹಾಕಿಸಿಕೊಂಡ boys vs girls ರಮ್ಯಾ; ಬೇಜಾರ್ ಆದಾಗ ಗಂಡ ಬದಲಾಯಿಸೋದಾ ಎಂದ ನೆಟ್ಟಿಗರು?

View post on Instagram