ನಟ ಅವಿನಾಶ್ ಮತ್ತು ಪತ್ನಿ ಮಾಳವಿಕಾ ದಾಂಪತ್ಯ ಜೀವನದ ಬಗ್ಗೆ ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ. ಅವರಿಬ್ಬರ ನಡುವೆ ನಂಬಿಕೆ, ಸ್ವಾತಂತ್ರ್ಯ ಮತ್ತು ಪರಸ್ಪರ ಗೌರವವಿದೆ. ಕೆಲಸದ ವಿಚಾರದಲ್ಲಿ ಒಬ್ಬರನ್ನೊಬ್ಬರು ನಿಯಂತ್ರಿಸುವುದಿಲ್ಲ. ಹೆಂಡತಿಯನ್ನು ಆಸ್ತಿಯಂತೆ ನೋಡಬಾರದು. ಮಾಳವಿಕಾ ರಾಜಕೀಯಕ್ಕೆ ಬರಲು ಬಯಸಿದಾಗ ಅವಿನಾಶ್ ಬೆಂಬಲಿಸಿದರು. ಗಂಡ-ಹೆಂಡತಿ ನಡುವೆ ವೈಯಕ್ತಿಕ ಸ್ಥಳ ಇರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಚಿತ್ರರಂಗದ ಅದ್ಭುತ ನಟ ಅವಿನಾಶ್ ಮತ್ತು ಪತ್ನಿ ಮಾಳವಿಕಾ. ಇವರಿಬ್ಬರ ಕೆಮಿಸ್ಟ್ರಿ ಮತ್ತು ಕಾಂಬಿನೇಷನ್ ಹಲವರಿಗೆ ಸ್ಪೋರ್ತಿ. ಈಗಿನ ಕಾಲದ ಯುವಕರು ಯಾವ ರೀತಿ ಸಂಬಂಧಗಳನ್ನು ಉಳಿಸಿಕೊಳ್ಳಬೇಕು, ಗಂಡ ಹೆಂಡತಿ ನಡುವೆ ಎಷ್ಟು ಸ್ಪೇಸ್ ಇರಬೇಕು ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಅವಿನಾಶ್ ಮಾತನಾಡಿದ್ದಾರೆ.
'ಕೆಲಸದ ವಿಚಾರದಲ್ಲಿ ನಾನು ಏನು ಮಾಡುತ್ತೀನಿ ಅಕೆ ಏನು ಮಾಡುತ್ತಾಳೆ ಎಂದು ಇಬ್ಬರಿಗೂ ಗೊತ್ತಿರುವುದಿಲ್ಲ. ಆಕೆಯ ಫೋನ್ ರಿಂಗ್ ಆಗುತ್ತಿದ್ದರು ಕೂಡ ನಾನು ಪಿಕ್ ಮಾಡುವುದಿಲ್ಲ ಆಕೆ ಹೇಳಿದರೆ ಮಾತ್ರ ಕರೆ ಸ್ವೀಕರಿಸುತ್ತೀನಿ. ಮದುವೆ ಆದ ಮೇಲೆ ಪ್ರತಿಯೊಬ್ಬರಿಗೂ ಒಂದು ರೀತಿಯಲ್ಲಿ ಸ್ವಾತಂತ್ರ ಬೇಕು ಯಾವತ್ತೂ ತಲೆ ಮೇಲೆ ಕೂರುವುದಿಲ್ಲ ಅಲ್ಲ. ನಮ್ಮಿಬ್ಬರ ನಡುವೆ ಒಳ್ಳೆ ನಂಬಿಕೆ ಇದೆ. ನಮ್ಮಿಬ್ಬರ ನಡುವೆ ವಾದ ಆಗುವುದು ಐಡಿಯೋಲಾಜಿಗಳ ಮೇಲೆ. ಯಾವದೇ ಕಾರಣಕ್ಕೂ ವ್ಯಕ್ತಿಗಳನ್ನು ಪ್ರಾಪರ್ಟಿ ರೀತಿಯಲ್ಲಿ ನೋಡಬಾರದು. ಮದುವೆ ಆದ ಮೇಲೆ ಹೆಂಡತಿ ಈ ರೀತಿ ಇರಬೇಕು ಹೀಗೆ ಮಾಡಬೇಕು ಅನ್ನೋ ಯೋಚನೆ ಮಾಡುತ್ತಾರೆ ಆದರೆ ನಮ್ಮಿಬ್ಬರ ನಡುವೆ ಹಾಗೆ ಇಲ್ಲ' ಎಂದು ಅವಿನಾಶ್ ಹೇಳಿದ್ದಾರೆ.
ಮೆಹೆಂದಿ ಹಾಕಿಸಿಕೊಂಡ boys vs girls ರಮ್ಯಾ; ಬೇಜಾರ್ ಆದಾಗ ಗಂಡ ಬದಲಾಯಿಸೋದಾ ಎಂದ ನೆಟ್ಟಿಗರು?
'ಸುಮಾರು 2 ವರ್ಷಗಳ ಕಾಲ ಪ್ರೀತಿ ಮಾಡಿ ಆನಂತರ ಮದುವೆ ಮಾಡಿಕೊಂಡಿದ್ದು. ನಮ್ಮಿಬ್ಬರ ವಯಸ್ಸಿನ ಅಂತರ ಇದ್ದರೂ ಕೂಡ ಮದುವೆ ಮಾಡಿಕೊಳ್ಳಬಹುದು ಅನ್ನೋ ಯೋಚನೆಯನ್ನು ಮಾಡಿ ಮುಂದುವರೆದಿದ್ದು ಆನಂತರ ಅದು ಅರೇಂಜ್ಡ್ ಮದುವೆ ಆಗಿದ್ದು. ಹೆಂಡತಿ ಇಷ್ಟ ಪಡುವುದನ್ನು ಮಾಡಲು ಬಿಡಬೇಕು...ಆಕೆ ಇಷ್ಟ ಪಟ್ಟಿದ್ದು ಮಾಡಿಸಬೇಕು ಅದಕ್ಕೆ ನಾವು ಸಪೋರ್ಟ್ ಮಾಡಬೇಕು. ರಾಜಕೀಯಕ್ಕೆ ಕಾಲಿಡಬೇಕು ಎಂದು ಮಾಳವಿಕಾ ಹೇಳಿದಾಗ ಸರಿ ಮುಂದೆ ಹೆಜ್ಜೆ ಇಡು ಎಂದೆ. ಅವಳಿಗೆ ಇರುವ ಬುದ್ಧಿವಂತಿಕೆಗೆ ಮನೆಯಲ್ಲಿ ಕುಳಿತುಕೊಳ್ಳಬೇಕು ಎಂದು ಹೇಳಲು ಆಗಲ್ಲ ನಮಗೆ ಆ ಅಧಿಕಾರವಿಲ್ಲ. ನಮಗೆ ಸಾಧನೆ ಮಾಡಲು ಕೆಲಸ ಮಾಡಲು ಬಿಡುತ್ತಾರೆ ಅಂದ್ಮೇಲೆ ನಾವು ಅವರಿಗೆ ಮಾಡಲು ಬಿಡಬೇಕು. ಮದುವೆಯಾಗಿ ಗಂಡ ಹೆಂಡತಿ ಆಗಿದ್ದರೂ ಕೂಡ ನಿಮ್ಮ ಸ್ಪೇಸ್ ನಿಮಗೆ ಬೇಕು ನನ್ನ ಸ್ಪೇಸ್ ನನಗೆ ಬೇಕು' ಎಂದಿದ್ದಾರೆ ಅವಿನಾಶ್.
ಅಪ್ಪು ಅಗಲಿದಾಗ 2 ದಿನ ನಿದ್ರೆ ಮಾಡಿಲ್ಲ, ಯಜಮಾನ್ರು ಊಟ ಬಿಟ್ಟಿದ್ದರು; ಯಶ್ ತಾಯಿ ಪುಷ್ಪ ಭಾವುಕ
ಬದುಕು ಜಟಕಾಬಂಡಿ ಕಾರ್ಯಕ್ರಮದಲ್ಲಿ ಅವರು ಹಲವು ಕೌಟುಂಬಿಕ ಸಮಸ್ಯೆಗಳನ್ನು ಸರಿಮಾಡಿದ್ದು ಇದೆ. ಅದರ ಬಗ್ಗೆ ಕಿರಿಕ್ ಕೀರ್ತಿ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುವ ವೇಳೆ, ಡಿವೋರ್ಸ್ ಬಗ್ಗೆ ಉಲ್ಲೇಖಿಸಿದ್ದಾರೆ. ಹೇಗೆ ಇಂದಿನವರ ಮನಸ್ಥಿತಿಗಳು ವರ್ಕ್ ಆಗುತ್ತಿವೆ ಎಂಬ ಬಗ್ಗೆ ಹೇಳಿದ್ದಾರೆ. ನನ್ನ ಸಮಕಾಲೀನ ನಟಿಯರ ವಿಷಯದಲ್ಲಿ ಹೇಳುವುದಾದರೆ, ಬಹುಶಃ 25 ವರ್ಷಗಳಿಂದ ಒಬ್ಬನೇ ಗಂಡನ ಜೊತೆ ಇರುವವಳು ನಾನೊಬ್ಬಳೇ ಎನ್ನಿಸುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಲವಾರು ತೆರನಾಗಿ ಕಮೆಂಟ್ಗಳು ಬರುತ್ತಿವೆ. ಮಾಳವಿಕಾ ಅವರ ಸಮಕಾಲೀನ ನಟಿಯರ ಹೆಸರುಗಳನ್ನು ಉಲ್ಲೇಖಿಸಿ, ಅವರ ವಿಷಯವಾಗಿಯೇ ಮಾಳವಿಕಾ ಹಾಗೆ ಹೇಳಿರಬಹುದು ಎನ್ನಲಾಗುತ್ತಿದೆ.
ಆ ಪಾರ್ಟಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಮನೆಯಿಂದ ಹೊರ ಬರಲು ಭಯ ಆಗುತ್ತಿತ್ತು: ನಿಶ್ವಿಕಾ ನಾಯ್ಡು

