- Home
- Entertainment
- TV Talk
- ಮೆಹೆಂದಿ ಹಾಕಿಸಿಕೊಂಡ boys vs girls ರಮ್ಯಾ; ಬೇಜಾರ್ ಆದಾಗ ಗಂಡ ಬದಲಾಯಿಸೋದಾ ಎಂದ ನೆಟ್ಟಿಗರು?
ಮೆಹೆಂದಿ ಹಾಕಿಸಿಕೊಂಡ boys vs girls ರಮ್ಯಾ; ಬೇಜಾರ್ ಆದಾಗ ಗಂಡ ಬದಲಾಯಿಸೋದಾ ಎಂದ ನೆಟ್ಟಿಗರು?
ಮಧುಮಗಳಂತೆ ಮೆಹೆಂದಿ ಹಾಕಿಸಿಕೊಂಡ ರಮ್ಯಾ. ಮದುವೆ ಆಗಿದ್ದರೂ ಮದುವೆ ಮದುವೆ ಅಂತಿದ್ದಾರೆ ಫ್ಯಾನ್ಸ್ ಯಾಕೆ?

ಕನ್ನಡ ಕಿರುತೆರೆ ನಟಿ, ರಿಯಾಲಿಟಿ ಶೋ ಸ್ಪರ್ಧಿ ರಮ್ಯಾ ಬಾಲಕೃಷ್ಣ ತಮ್ಮ ಕೈ ಕಾಲುಗಳಿಗೆ ಮೆಹೆಂದಿ ಹಾಕಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ.
ಹಳದಿ ಬಣ್ಣದ ಮಾಡರ್ನ್ ಲೆಹೆಂಗಾ ಧರಿಸಿ ತಮ್ಮ ಮನೆಯಲ್ಲಿ ರಮ್ಯಾ ಮೆಹೆಂದಿ ಹಾಕಿಸಿಕೊಂಡಿದ್ದಾರೆ. ಇಬ್ರು ಮೂವರು ಮೆಹೆಂದಿ ಆರ್ಟಿಸ್ಟ್‌ಗಳು ಬಂದು ಮೆಹೆಂದಿ ಹಾಕಿದ್ದಾರೆ.
ಮೆಹೆಂದಿ ಕೈಗಳು ಎಂದು ರಮ್ಯಾ ಬರೆದುಕೊಂಡಿದ್ದಾರೆ. ಇದ್ದಕ್ಕಿದ್ದಂತೆ ಯಾಕೆ ಮೆಹೆಂದಿ ಹಾಕಿಸಿಕೊಳ್ಳುತ್ತಿದ್ದಾರೆ? ಮದುವೆ ಸೆಟ್ಟಾಗಿದ್ದರೂ ಕಾಲಿಗೆ ಯಾಕೆ ಹಾಕಿಸಿಕೊಳ್ಳುತ್ತಿರುವುದು ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.
'ಬೇಜಾರ್ ಆದಾಗ ಬೇಜಾರ್ ಆದಾಗ ಗಂಡನ ಚೇಂಜ್ ಮಾಡ್ತಾ ಇರ್ತಾರೆ ಅನ್ಸುತ್ತೆ. ಈವಾಗ ಯಾವ ಬಕ್ರಾ ಸಿಕ್ಕಿದೆಯೋ ಗೊತ್ತಿಲ್ಲ' ಎಂದು ಸುಮಲತಾ ಎಂದ ಫಾಲೋವರ್ ಕಾಮೆಂಟ್ ಮಾಡಿದ್ದಾರೆ.
ಕೆಲವು ವರ್ಷಗಳ ಹಿಂದೆ ರಮ್ಯಾ ಮದುವೆಯಾಗಿ ಡಿವೋರ್ಸ್ ಆಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಇನ್ನು ಕೆಲವು ತಿಂಗಳ ಹಿಂದೆ ಡಾನ್ಸ್ ಮಾಸ್ಟರ್ ಜೊತೆ ಲವ್ ಆಗಿದೆ ಎಂದು ಗುಸುಗುಸು ಕೇಳಿ ಬರುತ್ತಿತ್ತು.
'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್' ರಿಯಾಲಿಟಿ ಶೋ ಮೂಲಕ ಕಿರುತೆರೆ ಜರ್ನಿ ಆರಂಭಿಸಿದ ರಮ್ಯಾ ಕೋಳಿ ರಮ್ಯಾ ಎಂದೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಕನ್ನಡ, ತೆಲುಗು ಮತ್ತು ತಮಿಳು ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ.