ಬಿಗ್‌ಬಾಸ್ 11ರಲ್ಲಿ ಡಬಲ್ ಎಲಿಮಿನೇಷನ್‌ನಲ್ಲಿ ಗೌತಮಿ, ಧನರಾಜ್ ಆಚಾರ್ ಹೊರಬಿದ್ದಿದ್ದಾರೆ. ಧನರಾಜ್ ಅರ್ಹ ಸ್ಪರ್ಧಿ, ಉತ್ತಮ ಪ್ರದರ್ಶನ ನೀಡಿದ್ದರು ಎಂದು ವೀಕ್ಷಕರು, ಕಿರಿಕ್ ಕೀರ್ತಿ ಸೇರಿದಂತೆ ಹಲವರು ಅಭಿಪ್ರಾಯಪಟ್ಟಿದ್ದಾರೆ. ಭವ್ಯಾರನ್ನು ಉಳಿಸಲು ಧನರಾಜ್‌ರನ್ನು ಬಲಿಪಶು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಧನರಾಜ್ ಪರ ಬೆಂಬಲ ವ್ಯಕ್ತವಾಗುತ್ತಿದೆ.

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Season 11) ಕೊನೆಯ ಹಂತವನ್ನು ತಲುಪಿದೆ. ಫಿನಾಲೆ ವಾರಕ್ಕೂ ಮುನ್ನವೇ ನಡೆದ ಡಬಲ್ ಎಲಿಮಿನೇಷನ್‌ನಲ್ಲಿ ಗೌತಮಿ ಜಾಧವ್ ಮೊದಲಿಗೆ ಎಲಿಮಿನೇಟ್ ಆದರೆ, ಧನರಾಜ್ ಆಚಾರ್ ಎರಡನೇಯವರಾಗಿ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಆದರೆ ಈಗ ಧನರಾಜ್ ಎಲಿಮಿನೇಷನ್ ಬಿಗ್ ಬಾಸ್ ವೀಕ್ಷಕರಲ್ಲಿ ಸಂಶಯ ಸೃಷ್ಟಿಸಿದ್ದು, ಭವ್ಯಾರನ್ನು ಉಳಿಸಿಕೊಳ್ಳೋದಕ್ಕೆ ಬಿಗ್ ಬಾಸ್ ಧನರಾಜ್ ಆಚಾರ್ ರನ್ನು ಎಲಿಮಿನೇಟ್ ಮಾಡಿರೋದಾಗಿ ವೀಕ್ಷಕರು ಆರೋಪಿಸುತ್ತಿದ್ದಾರೆ. 

BBK 11: ಬಿಗ್‌ ಬಾಸ್‌ ಟ್ರೋಫಿ ಗೆಲ್ಲೋರು ಯಾರು? ರನ್ನರ್‌ ಅಪ್‌ ಯಾರು? ಸಾಧ್ಯಾ ಸಾಧ್ಯತೆ ಹೀಗಿದೆ!

ಧನರಾಜ್ ಆಚಾರ್ ಉತ್ತಮ ಸ್ಪರ್ಧಿಯಾಗಿದ್ದರು, ಅದು ಕಾಮಿಡಿ ಆಗಿರಲಿ, ಎಂಟರ್ ಟೇನ್’ಮೆಂಟ್ ಆಗಿರಲಿ, ಗುಣ ಸ್ವಭಾವವೇ ಇರಲಿ, ಆಟದ ವಿಷಯ ಬಂದರೂ ಸಹ ಧನರಾಜ್ ಅದ್ಭುತವಾಗಿ ಆಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಉತ್ತಮ ಪ್ರದರ್ಶನ ಕೂಡ ನೀಡಿದ್ದರು. ಧನರಾಜ್ ಆಚಾರ್(Dhanaraj Achar) ಟಾಪ್ 5 ಕಂಟೆಸ್ಟಂಟ್ ಅಂತಾನೆ ಜನ ಹೇಳುತ್ತಿದ್ದರು. ಆದರೆ ಕೊನೆಗೆ ಫಿನಾಲೆಗೆ ಒಂದು ವಾರ ಬಾಕಿ ಇರುವಾಗಲೇ ಧನರಾಜ್ ಆಚಾರ್ ಎಲಿಮಿನೇಟ್ ಅಗುವ ಮೂಲಕ ಅಭಿಮಾನಿಗಳಿಗೆ ಹಾಗೂ ವೀಕ್ಷಕರಿಗೆ ಹೆಚ್ಚಿನ ನಿರಾಸೆ ಮೂಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಕೇಳಿ ಬರುತ್ತಿದೆ. ಕಿರಿಕ್ ಕೀರ್ತಿ ಸೇರಿ ಹಲವರು ಧನರಾಜ್ ಪರ ಮಾತನಾಡಿದ್ದು, ಧನರಾಜ್ ಟಾಪ್ 5 ಕಂಟೆಸ್ಟಂಟ್ ಆಗಿದ್ದಂತೂ ನಿಜಾ ಎಂದಿದ್ದರು. 

ಬಿಗ್ ಬಾಸ್ ಮನೆಯಿಂದ ಧನರಾಜ್ ಆಚಾರ್ ಔಟ್; ಹೀಗಿದೆ ನೋಡಿ ನೆಟ್ಟಿಗರ ಲೆಕ್ಕಾಚಾರ!

ಕಿರಿಕ್ ಕೀರ್ತಿ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಧನರಾಜ್ ಕುರಿತು ಬರೆದು ಈ ಸೀಸನ್‌ನ ಬಿಗ್‌ಬಾಸ್‌ನಲ್ಲಿ ನಂಗೆ ತುಂಬಾ ಇಷ್ಟವಾದ ಕಂಟೆಸ್ಟೆಂಟ್‌ಗಳಲ್ಲಿ ಒಬ್ಬ ಧನರಾಜ್ ಆಚಾರ್. ಸಹೋದರ ತನಗೆ ಸಿಕ್ಕ ಎಲ್ಲಾ ಅವಕಾಶಗಳನ್ನು ಅದ್ಭುತವಾಗಿ ಬಳಸಿಕೊಂಡ. ತನ್ನ ಶಕ್ತಿ‌ಮೀರಿ ಟಾಸ್ಕ್ ಆಡಿದ್ದ. ಪ್ರತೀ ಕ್ಷಣ ಮನರಂಜನೆ ಕೊಟ್ಟಿದ್ದಾನೆ. ನಕ್ಕಿದ್ದಾನೆ. ನಗಿಸಿದ್ದಾನೆ. ಮನಸಾರೆ ಆಟವಾಡಿದ್ದಾನೆ. ತನ್ನ ವ್ಯಕ್ತಿತ್ವಕ್ಕೆ ತಕ್ಕಂತೆ ನಡೆದುಕೊಂಡಿದ್ದಾನೆ. ಸ್ನೇಹ ಉಳಿಸಿಕೊಂಡಿದ್ದಾನೆ. ಮನಸ್ಸಿಗೆ ಅನಿಸಿದ್ದನ್ನು ಮುಖದ ಮೇಲೆ ಹೇಳಿದ್ದಾನೆ. ಕಪ್ ಗೆಲ್ಲದಿದ್ದರೂ ಗೆದ್ದು ಬೀಗಿದ್ದಾನೆ. ಕಪ್ ಗೆಲ್ಲೋ ಅಷ್ಟು ಆಡಿದ್ದಾನಾ ಗೊತ್ತಿಲ್ಲ. ಆದ್ರೆ ಫಿನಾಲೆ ವಾರದಲ್ಲಿರೋ ಎಲ್ಲಾ ಯೋಗ್ಯತೆ ಇತ್ತು ಧನ್‌ರಾಜ್‌ಗೆ. ಫಿನಾಲೆಗೆ ವಾರ ಬಾಕಿ‌ ಇದ್ದಾಗ ಮನೆಯಿಂದ ಹೊರಹೋಗೋ ಸಂಕಟ ಸಾಮಾನ್ಯವಾದುದ್ದಲ್ಲ‌. ಬೇಜಾರಗಬೇಡ ತಮ್ಮ. ನಿನ್ನ ತಾಕತ್ತು ಇನ್ನೂ ಇದೆ‌‌. ನೀನು ಸೋತಿಲ್ಲ. ಸೋಲಲ್ಲ. ಮತ್ಯಾವತ್ತೂ ಕಣ್ಣೀರು ಹಾಕಬೇಡ. ಭವಿಷ್ಯ ಉಜ್ವಲವಾಗಿರಲಿ. ಬದುಕು ಬಂಗಾರವಾಗಲಿ. U gave ur best. ಸಕಲವೂ ಸನ್ಮಂಗಳವಾಗಲಿ ಎಂದಿದ್ದಾರೆ. 

ಬಿಗ್ ಬಾಸ್ ನಿಂದ ಧನ್‌ರಾಜ್‌ ಎಲಿಮಿನೇಟ್‌ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಮಾಜಿ ಸ್ಪರ್ಧಿ ಕಿರಿಕ್‌ ಕೀರ್ತಿ!


ಇನ್ನು ಸೋಶಿಯಲ್ ಮೀಡಿಯಾ ಪೂರ್ತಿಯಾಗಿ ಧನರಾಜ್ ಪರ ಕೂಗು ಕೇಳಿ ಬರುತ್ತಿದೆ. ಧನರಾಜ್ ಅವ್ರು ಭವ್ಯ ಗಿಂಟ ಬೆಟರ್ ಆಗಿದ್ದರು. ಧನರಾಜ್ ಗೆ ಮೋಸ ಆಗಿದೆ. ಕೊನೆಗೂ ಒಳ್ಳೆಯತನಕ್ಕೆ ಬೆಲೆ ಇಲ್ಲ ಬಿಗ್ ಬಾಸ್ ಶೋ ಅಲ್ಲಿ, ಭವ್ಯ ಬದಲು ಧನರಾಜ್ ನ ಸೇವ್ ಮಾಡಬೇಕಿತ್ತು, ಧನರಾಜ್ ಅವರು ಟಾಪ್ 5 ಇರಬೇಕಿತ್ತು . ಕ್ಯಾಪ್ಟನ್ ಆಗಿದಾರೆ , ಉತ್ತಮ 1 ಬಾರಿ, ಕಿಚ್ಚನ ಚಪ್ಪಾಳೆ , ಕಳಪೆ, ಕಾಮಿಡಿ, ವ್ಯಕ್ತಿತ್ವ, ಟಾಸ್ಕ್, ತುಂಬಾ ಪ್ರಾಮಾಣಿಕವಾಗಿ ಇದ್ದರೆ ಅವರು ಮಾಡಿರೋ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಧನು ಮಾತಾಡುವಗ ಮಾತಲ್ಲಿ ತೂಕ ಇರುತ್ತೆ ಇದು ಜನರಿಗೆ ಇಷ್ಟ ಆಗುತ್ತೆ. ಇಷ್ಟು ಎಲ್ಲಾ ಇದ್ರೂ ಧನು ಫಿನಾಲೆ ಯಾಕೆ ಆಯ್ಕೆ ಮಾಡಿಲ್ಲ ಇವರು. ಇವರ ಮೋಸದ ಆಟಕ್ಕೆ ಧನು ಎಲ್ಲಿಮಿನೇಟ್ ಮಾಡಿ ಬಲಿಪಶು ಮಾಡಿದ್ರು. ನೀವು ಎಲ್ಲರ ಮನಸ್ಸನ್ನು ಗೆದ್ದು ಕಪ್ ಗೆದ್ರಿ ಎಂದಿದ್ದಾರೆ. ಇನ್ನೊಬ್ಬರು ಭವ್ಯನ ಉಳಿಸೋಕೆ ಧನರಾಜನ ಬಲಿಕೊಟ್ಟ ಬಿಗ್ ಬಾಸ್ ಎಂದು ಕಿಡಿ ಕಾರಿದ್ದಾರೆ. 

ವೀಕೆಂಡ್‌ ಕಿಚ್ಚನ ಕಟಕಟೆ: ಹೇಗಿತ್ತು ಈ ವಾರದ ಪಾಠ?

ಮತ್ತೊಬ್ಬರು ಕಾಮೆಂಟ್ ಮಾಡಿ ಮನೆ ಮಗಳು ಭವ್ಯ ಮತ್ತು ಮನೆ ಮಗ ಮಂಜು ಅವರನ್ನು ಉಳಿಸಿಕೊಳ್ಳಲು ಈ ತರ ದ ಟಾಸ್ಕ್ ಗೆ ನೆಪ ಹುಡುಕಿ ಬಿಗ್ ಬಾಸ್ ಅಂಡ್ ಕಲರ್ಸ್ ವಾಹಿನಿಯ ಮಾಡಿದ ಮೋಸಕ್ಕೆ ಧನರಾಜ್ ಬಲಿಯಾದ್ರು. ಭವ್ಯಗೆ ಹೋಲಿಸಿದ್ರೆ ಧನರಾಜ್ ಬೆಸ್ಟ್. ಆದ್ರೆ ಇಲ್ಲಿ ಮನೆ ಮಕ್ಳನ್ನ ಗೆಲ್ಲಿಸ್ಬೇಕಿದೆ ಹಾಗಾಗಿ ಒಬ್ಬೊಬ್ಬರನ್ನೇ ಬಲಿ ಕೊಡ್ತಿದಾರೆ ಅಂತಾನೂ ಹೇಳಿದ್ದಾರೆ. ಇನ್ನೂ ಒಬ್ಬರು ಕಾಮೆಂಟ್ ಮಾಡಿ ಭವ್ಯ ಹೋಗಬೇಕಿತ್ತು, ಪ್ರತಿ ಆಟದಲ್ಲೂ ಮೋಸ ಮಾಡಿ ಭವ್ಯ ಆಡಿದಾಗ ಬಿಗ್ ಬಾಸ್ ಆಟ ರದ್ದು ಮಾಡಲಿಲ್ಲ, ಹನುಮಂತು ಮೇಲೆ ಹಲ್ಲೆ ಮಾಡಿದಾಗ ನಿಯಮ ಪ್ರಕಾರ ಭವ್ಯ ನ ಹೊರಗೆ ಹಾಕಲಿಲ್ಲ, ಮೋಸ ಮಾಡೋರಿಗೆ ಸಪೋರ್ಟ್ ಮಾಡಿ ಧನರಾಜ್ ಬಲಿ ಕೊಟ್ಟಿದಾರೆ, ಕರ್ನಾಟಕ ದ ಜನ ಭವ್ಯ ಹೋಗ್ಬೇಕಿತ್ತು ಎಂದು ಎಲ್ಲರೂ ಕಾಮೆಂಟ್ ಮಾಡ್ತಾ ಇದಾರೆ, ಕಲರ್ಸ್ ಅಂಡ್ ಬಿಗ್ ಬಾಸ್ ಟೀಮ್ ನಿಮ್ಮ ನಿರ್ಧಾರ ಜನರ ಪರವಾಗಿ ಇರಬೇಕು ಹೊರತು ವಿರೋಧ ಅಲ್ಲ.... ಪ್ರಾಮಾಣಿಕರಿಗೆ ಅವಕಾಶ ಕೊಡಿ, ಮೋಸ ಮಾಡಿದವರಿಗೆ ಬಕೆಟ್ ಯಾಕೆ ಹಿಡಿತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.