ದೊಡ್ಮನೆಯೊಳಗಡೆ ಇದ್ದವರಿಗೂ, ಹೊರಗಿನವರಿಗೂ ʼಬಿಗ್ ಬಾಸ್ ಕನ್ನಡ ಸೀಸನ್ 11’ ಶೋ ಗ್ರ್ಯಾಂಡ್ ಫಿನಾಲೆಯದ್ದೇ ಚಿಂತೆ. ಯಾರು ಟ್ರೋಫಿ ಗೆಲ್ತಾರೆ ಎಂದು ಕಾದು ನೋಡಬೇಕಿದೆ. ಅಷ್ಟೇ ಅಲ್ಲದೆ ರನ್ನರ್ ಅಪ್ ಆಗುವವರು ಯಾರು?
ʼಬಿಗ್ ಬಾಸ್ ಕನ್ನಡ ಸೀಸನ್ 11’ ಶೋ ಫಿನಾಲೆಗೆ ದಿನಗಣನೆ ಶುರುವಾಗಿದೆ. ಯಾರು ಟ್ರೋಫಿ ಗೆಲ್ತಾರೆ? ಯಾರು ರನ್ನರ್ ಅಪ್ ಆಗ್ತಾರೆ? ಎಂಬ ಪ್ರಶ್ನೆಗೆ ಆದಷ್ಟು ಬೇಗ ಉತ್ತರ ಸಿಗುವುದು. ಈ ನಡುವೆ ಮಿಡ್ ವೀಕ್ ಎಲಿಮಿನೇಶನ್ ಕೂಡ ಆಗಿಲ್ಲ. ಒಟ್ಟಿನಲ್ಲಿ ಒಂದು ಶೋ ಯಶಸ್ವಿಯಾಗಿ ಸಂಪೂರ್ಣವಾಗಲು ಕೆಲವೇ ದಿನಗಳು ಬಾಕಿ ಉಳಿದಿವೆ. ಹಾಗಾದರೆ ಯಾರಿಗೆ ಟ್ರೋಫಿ? ಯಾರಿಗೆ ರನ್ನರ್ ಅಪ್ ಪಟ್ಟ?
ಸದ್ಯ ತ್ರಿವಿಕ್ರಮ್, ರಜತ್, ಹನುಮಂತ, ಭವ್ಯಾ ಗೌಡ, ಮೋಕ್ಷಿತಾ ಪೈ, ಗೌತಮಿ ಜಾಧವ್, ಧನರಾಜ್ ಆಚಾರ್, ಉಗ್ರಂ ಮಂಜು ಅವರು ದೊಡ್ಮನೆಯಲ್ಲಿದ್ದಾರೆ. ಇವರಲ್ಲಿ ಗೆಲುವು ಯಾರಿಗೆ ಎನ್ನೋ ಪ್ರಶ್ನೆ ಎದುರಾಗಿದೆ. ಒಟ್ಟೂ ಐವರು ಗ್ರ್ಯಾಂಡ್ ಫಿನಾಲೆಯಲ್ಲಿ ಇರುತ್ತಾರೆ.
ಯಾವಾಗ ಗ್ರ್ಯಾಂಡ್ ಫಿನಾಲೆ?
ಜನವರಿ 25, 26ರಂದು ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋ ಗ್ರ್ಯಾಂಡ್ ಫಿನಾಲೆ ನಡೆಯುವುದು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯು ಯಾವುದೇ ಮಾಹಿತಿ ನೀಡಿಲ್ಲ. ಅಷ್ಟರೊಳಗಡೆ ಮೂವರು ಎಲಿಮಿನೇಟ್ ಆಗಬೇಕು. ಹೌದು, ಹನುಮಂತಗೆ ಫಿನಾಲೆ ಟಿಕೆಟ್ ಸಿಕ್ಕಿದೆ. ಧನರಾಜ್‌ಗೆ ಸಿಕ್ಕಿದ್ದರೂ ಕೂಡ ಅದು ಮೋಸದಾಟ ಎಂದು ಹೇಳಲಾಗಿದೆ. ಹೀಗಾಗಿ ಧನರಾಜ್ ಫಿನಾಲೆ ತಲುಪುತ್ತಾರಾ? ಇಲ್ಲವಾ ಎಂಬುದು ಕಿಚ್ಚ ಸುದೀಪ್ ಪಂಚಾಯಿತಿಯಲ್ಲಿ ಗೊತ್ತಾಗುವುದು.
ತ್ರಿವಿಕ್ರಮ್
ಆಟದ ವಿಚಾರದಲ್ಲಿ ತ್ರಿವಿಕ್ರಮ್ ಸದಾ ಮುಂದೆ. ತ್ರಿವಿಕ್ರಮ್ ಅವರ ಮಾಸ್ ಡೈಲಾಗ್, ಸ್ಪಷ್ಟನೆ ಎಲ್ಲವೂ ವೀಕ್ಷಕರಿಗೆ ಇಷ್ಟವಾಗಿದೆ. ಇದ್ದ ವಿಷಯವನ್ನು ಇದ್ದಹಾಗೆ ಹೇಳೋದರಲ್ಲಿ ತ್ರಿವಿಕ್ರಮ್ ಸದಾ ಮುಂದೆ. ಕೆಲ ಬಾರಿ ಕಿಚ್ಚ ಸುದೀಪ್ ಅವರಿಂದ ಕಿವಿ ಹಿಂಡಿಸಿಕೊಂಡಿದ್ರೂ ಕೂಡ ಅನೇಕರಿಗೆ ತ್ರಿವಿಕ್ರಮ್ ಗೆಲ್ಲಬೇಕು ಎಂದಿದೆ. ಆಗಾಗ ಪಂಚ್‌ಲೈನ್ ಹೇಳಿಕೊಂಡು ತ್ರಿವಿಕ್ರಮ್ ಕಾಮಿಡಿ ಮಾಡಿದ್ದು ವೀಕ್ಷಕರಿಗೆ ಹಾಸ್ಯದ ಕಚಗುಳಿ ಕೊಟ್ಟಿದೆ. ಹೀಗಾಗಿ ಈ ಬಾರಿ ತ್ರಿವಿಕ್ರಮ್ ಅವರು ಟ್ರೋಫಿ ಗೆದ್ದರೂ ಆಶ್ಚರ್ಯವಿಲ್ಲ. ಈ ವಾರ ತ್ರಿವಿಕ್ರಮ್ ನಾಮಿನೇಟ್ ಕೂಡ ಆಗಿಲ್ಲ.
BBK 11: ಡಬಲ್ ಎಲಿಮಿನೇಶನ್‌ನಲ್ಲಿ ಯಾರು ಔಟ್ ಆಗ್ತಾರೆ? ಬಿಗ್ ಬಾಸ್‌ನಿಂದ ಹೊರ ಹೋಗೋರು ಯಾರು?
ರಜತ್
ʼಬಿಗ್ ಬಾಸ್ʼ ಆಟ ಶುರುವಾದಮೇಲೆ ವೈಲ್‌ಕಾರ್ಡ್ ಎಂಟ್ರಿ ಕೊಟ್ಟ ರಜತ್ ಆಟದಲ್ಲೂ ಮುಂದು, ಸ್ಟ್ಯಾಂಡ್ ತಗೊಳೋದ್ರಲ್ಲೂ ಮುಂದು. ಇದ್ದವಿಷಯವನ್ನು ನೇರವಾಗಿ ಹೇಳುವ ರಜತ್ ಪಂಚ್ ಮಾತುಗಳು ಅನೇಕರು ಮೂಗಿನ ಮೇಲೆ ಬೆರಳನ್ನು ಇಟ್ಟುಕೊಳ್ಳುವ ಹಾಗೆ ಮಾಡಿತ್ತು. ಕೆಲವೊಮ್ಮೆ ಕಿಚ್ಚ ಸುದೀಪ್ ಅವರಿಂದ ಬುದ್ಧಿವಾದ ಹೇಳಿಸಿಕೊಂಡ ರಜತ್ ಪಕ್ಕಾ ಲೋಕಲ್, ಮಾಸ್! ಇವರ ಈ ಗುಣ ಕೆಲವರಿಗೆ ಇಷ್ಟ ಆದರೂ ಆಗಬಹುದು, ಆಗದೆಯೂ ಇರಬಹುದು. ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟ ಸ್ಪರ್ಧಿಗಳು ಟ್ರೋಫಿ ಗೆದ್ದಿದ್ದು ತುಂಬ ಕಡಿಮೆ, ಹೀಗಾಗಿ ರಜತ್ ಗೆದ್ದರೆ ಇತಿಹಾಸ ಸೃಷ್ಟಿ ಆಗುವುದು.
ಹನುಮಂತ
ಮುಗ್ಧನ ರೀತಿಯೇ ಇದ್ದು ದೊಡ್ಮನೆಯಲ್ಲಿ ಆಟ ಶುರು ಮಾಡಿದ್ದು ಉಳಿದ ಸ್ಪರ್ಧಿಗಳಿಗೆ ಎಷ್ಟೋ ಕಾಲ ಅರ್ಥ ಆಗಿರಲಿಲ್ಲ. ಎಂಟರ್‌ಟೇನ್‌ಮೆಂಟ್ ವಿಷಯದಲ್ಲಿ ಮುಂದೆ ಇರೋ ಹನುಮಂತ ಪಕ್ಕಾ ಜವಾರಿ ಮಾತನಾಡಿ ಎಲ್ಲರಿಗೂ ಹತ್ತಿರ ಆಗಿರೋದಂತೂ ಸತ್ಯ. ಒಮ್ಮೊಮ್ಮೆ ಊಹೆಗೂ ಮೀರಿದ ಪರ್ಫಾಮೆನ್ಸ್ ಕೊಟ್ಟು ಹನುಮಂತ ಜನರ ಮೆಚ್ಚುಗೆಗೆ ಕಾರಣ ಆಗಿದ್ದಾನೆ. ಇವರ ಆಟ ಕಿಚ್ಚ ಸುದೀಪ್‌ರಿಗೂ ಕೂಡ ಆಶ್ಚರ್ಯ ಮೂಡಿಸಿತ್ತು. ಈ ಸೀಸನ್ ಶುರುವಾಗಿ ಕೆಲ ದಿನಗಳ ಬಳಿಕ ಹನುಮಂತ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾಗಿ. ಇದೊಂದು ವಿಷಯಕ್ಕೆ ಅವರು ಟ್ರೋಫಿ ಗೆಲ್ಲುತ್ತಾರಾ? ಇಲ್ಲವಾ ಎಂದು ಕಾದು ನೋಡಬೇಕಿದೆ. ಹನುಮಂತ ಅವರು ಟ್ರೋಫಿ ಗೆಲ್ಲುವ ಸಾಧ್ಯತೆಯಂತೂ ಹೆಚ್ಚಿದೆ.
ಉಗ್ರಂ ಮಂಜು
ಆರಂಭದಲ್ಲಿ ಹುಲಿಯಂತಿದ್ದ ಮಂಜು ಅವರು ಕರಗಿ ಜಿಂಕೆಯಾಗಿದ್ದಾರೆ ಎಂದು ಇಡೀ ಮನೆಯೇ ಮಾತಾಡಿಕೊಳ್ತಿದೆ. ಅಷ್ಟೇ ಅಲ್ಲದೆ ವೀಕ್ಷಕರು ಕೂಡ ಇದೇ ಮಾತನ್ನು ಹೇಳುತ್ತಿದ್ದಾರೆ. ಇನ್ನೊಂದು ಕಡೆ ಎಲ್ಲರಿಗೂ ಮಂಜು ಆಟದ ದಾರಿ ತಪ್ಪಿದೆ, ಆಟದ ವಿಚಾರದಲ್ಲಿ ಅವರು ಹಿಂದುಳಿದಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಿರುವಾಗ ಮಂಜು ಅವರು ಟ್ರೋಫಿ ಗೆಲ್ಲುತ್ತಾರಾ?
ಹಳ್ಳಿ ಹೈದ, ಬಿಗ್ ಬಾಸ್ ಹನುಮಂತನಿಗೆ ಇದೊಂದು ದುಶ್ಚಟ ಇದ್ಯಂತೆ ಹೌದಾ?
ಮೋಕ್ಷಿತಾ ಪೈ
ಮಾತನಾಡುವಾಗ ಮಾತಾಡಿ, ಒಮ್ಮೊಮ್ಮೆ ಆಟದಲ್ಲೂ ನೈತಿಕತೆಯನ್ನು ಎತ್ತಿ ತೋರಿಸಿದ್ದ ಮೋಕ್ಷಿತಾ ಪೈ ಈ ಬಾರಿ ಫಿನಾಲೆ ತಲುಪಿದ್ದಾರೆ. ಹೌದು, ಮನೆಯ ಕ್ಯಾಪ್ಟನ್ ಹನುಮಂತ ಅವರ ಆಯ್ಕೆ ಮೇರೆಗೆ ಮೋಕ್ಷಿತಾ ಪೈ ಅವರು ಫಿನಾಲೆ ಟಿಕೆಟ್ ಪಡೆದಿದ್ದಾರೆ. ಇನ್ನು ಮೋಕ್ಷಿತಾ ಪೈ ಅವರು ಸೈಲೆಂಟ್ ಆಗಿದ್ದು, ವ್ಯಕ್ತಿತ್ವದಲ್ಲಿ ಅವರು ಅನೇಕರಿಗೆ ಇಷ್ಟವಾಗಿದ್ದಾರೆ. ಹೀಗಾಗಿ ಟ್ರೋಫಿ ಗೆದ್ದರೂ ಗೆಲ್ಲಬಹುದು.
ಭವ್ಯಾ ಗೌಡ
ಕಳೆದ ಕೆಲ ವಾರಗಳಿಂದ ಆಟಗಳಲ್ಲಿ ಚೀಟ್ ಮಾಡಿ ಭವ್ಯಾ ಗೌಡ ಅವರು ಕಿಚ್ಚ ಸುದೀಪ್‌ರಿಂದ ಕಿವಿ ಹಿಂಡಿಸಿದ್ದರು. ಆಟಕ್ಕೋಸ್ಕರ ನನ್ನನ್ನು ಬಳಸಿಕೊಂಡೆ ಅಂತ ಸ್ವತಃ ತ್ರಿವಿಕ್ರಮ್ ಅವರೇ ಭವ್ಯಾ ಗೌಡಗೆ ಹೇಳಿದ್ದರು. ಭವ್ಯಾ ಗೌಡ ಆಟದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಇದೆ. ಹೀಗಾಗಿ ಭವ್ಯಾ ಗೌಡ ಟ್ರೋಫಿ ಗೆಲ್ಲುತ್ತಾರಾ ಎಂದು ಕಾದು ನೋಡಬೇಕಿದೆ.
ಧನರಾಜ್
ಕಳೆದ ವಾರ ಆಟದಲ್ಲಿ ಧನರಾಜ್ ಮೋಸ ಮಾಡಿರುವುದು ಎಲ್ಲರಿಗೂ ಗೊತ್ತಾಗಿದೆ. ಆರಂಭದಲ್ಲಿ ಎಲ್ಲರಿಗೂ ಹೆದರುತ್ತಿದ್ದ ಧನರಾಜ್ ಕೆಲ ವಾರಗಳಿಂದ ಗಟ್ಟಿಯಾಗಿ ಮಾತಾಡೋದನ್ನು ಕಲಿತಿದ್ದಾರೆ. ಆದರೆ ಅವಕಾಶ ಸಿಕ್ಕಾಗೆಲ್ಲ ಕಾಮಿಡಿ ಮಾಡೋದನ್ನು ಅವರು ಮರೆತಿಲ್ಲ. ಈಗ ಧನರಾಜ್ ಟ್ರೋಫಿ ಗೆಲ್ಲುತ್ತಾರಾ? ಇಲ್ಲವಾ?
ಗೌತಮಿ ಜಾಧವ್
ಪಾಸಿಟಿವ್ ಮಂತ್ರ ಹೇಳುವ ಗೌತಮಿ ಜಾಧವ್ ಆಟ ಕೆಲವರಿಗೆ ಇಷ್ಟ ಆಗಿದೆ, ಇನ್ನೂ ಕೆಲವರಿಗೆ ಇಷ್ಟ ಆಗಿಲ್ಲ. ಮಂಜು ಮೇಲೆ ಗೌತಮಿ ಇನ್‌ಫ್ಲುಯೆನ್ಸ್ ಇದೆ ಎಂಬುದು ಅನೇಕರ ಅಭಿಪ್ರಾಯ. ಅಷ್ಟೇ ಅಲ್ಲದೆ ಡಾಮಿನೇಟ್ ಮಾಡ್ತಾರೆ ಎಂದು ಭವ್ಯಾ ಗೌಡ ಆರೋಪ ಮಾಡಿದ್ದರು. ಹೀಗಾಗಿ ಗೌತಮಿ ಟ್ರೋಫಿ ಗೆಲ್ತಾರಾ? ಇಲ್ಲವಾ ಎಂದು ಕಾದು ನೋಡಬೇಕಿದೆ.
ಒಟ್ಟಾರೆಯಾಗಿ ತ್ರಿವಿಕ್ರಮ್, ಹನುಮಂತ, ರಜತ್, ಮೋಕ್ಷಿತಾ ಪೈ ಅವರಲ್ಲಿ ಒಬ್ಬರಿಗೆ ಟ್ರೋಫಿ, ಇನ್ನೊಬ್ಬರಿಗೆ ರನ್ನರ್ ಅಪ್ ಪಟ್ಟ ಸಿಗುವ ಚಾನ್ಸ್ ಕಾಣಿಸ್ತಿದೆ.
