ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಡಬಲ್ ಎಲಿಮಿನೇಷನ್ ನಡೆದಿದ್ದು, ಗೌತಮಿ ಜಾಧವ್ ಮತ್ತು ಧನರಾಜ್ ಆಚಾರ್ ಹೊರಬಿದ್ದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಫಿನಾಲೆ ವಾರಕ್ಕೆ 6 ಸ್ಪರ್ಧಿಗಳು ಆಯ್ಕೆಯಾಗಿದ್ದು, ಮುಂದಿನ ವಾರದ ಮಧ್ಯದಲ್ಲಿ ಮತ್ತೊಬ್ಬ ಸ್ಪರ್ಧಿಯನ್ನು ಹೊರಹಾಕಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು (ಜ.19): ಬಿಗ್ ಬಾಸ್ ಕನ್ನಡ ಸೀಸನ್ 11ರ ಫಿನಾಲೆ ವಾರಕ್ಕೂ ಮುನ್ನವೇ ನಡೆದ ಡಬಲ್ ಎಲಿಮಿನೇಷನ್‌ನಲ್ಲಿ ಮೊದಲನೆಯದಾಗಿ ಗೌತಮಿ ಜಾಧವ್ ಹೊರಗೆ ಹೋದರೆ, ಇನ್ನೊಬ್ಬ ಎರಡನೇ ಸ್ಪರ್ಧಿಯಾಗಿ ಧನರಾಜ್ ಆಚಾರ್ ಹೊರಗೆ ಹೋಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಮೂಲಕ ಬಿಗ್ ಬಾಸ್ ಸೀಸನ್ 11ರ ಫಿನಾಲೆ ವಾರಕ್ಕೆ 6 ಮಂದಿ ಆಯ್ಕೆಯಾಗಿದ್ದು, ಇದರಲ್ಲಿಯೂ ವಾರದ ಮಧ್ಯದಲ್ಲಿಯೇ ಒಬ್ಬರನ್ನು ಹೊರಗಿಟ್ಟು ಅಂತಿಮವಾಗಿ ಟಾಪ್-5 ಆಟಗಾರರನ್ನು ಫಿನಾಲೆಗೆ ಕರೆದುಕೊಂಡು ಹೋಗಲಾಗುತ್ತದೆ.
ಬಿಗ್ ಬಾಸ್ ಸೀಸನ್ 11 ಮುಕ್ತಾಯಕ್ಕೆ ಇನ್ನೇನು ದಿನಗಣನೆ ಶುರುವಾಗಿದೆ. ಇನ್ನು 8 ದಿನಗಳನ್ನು ಕಳೆದರೆ ಯಾರಿ ಬಿಗ್ ಬಾಸ್ ಸೀಸನ್ 11ರ ಟ್ರೋಫಿ ವಿಜೇತರು ಎಂಬುದು ತಿಳಿಯಲಿದೆ. ಆದರೆ, 112 ದಿನಗಳನ್ನು ಬಿಗ್ ಬಾಸ್ ಮನೆಯಲ್ಲಿ ಕಳೆದು ಫಿನಾಲೆಗೆ ಇನ್ನೊಂದು ವಾರ ಮಾತ್ರ ಬಾಕಿ ಇರುವಾಗ ಹೊರಗೆ ಹೋಗುವುದು ಭಾರೀ ಬೇಸರದ ಸಂಗತಿಯಾಗಿದೆ. ಅದೂ ಕೂಡ ಒಂದು ವಾರದಲ್ಲಿ ಡಬಲ್ ಎಲಿಮಿನೇಷನ್ ಮೂಲಕ ಇಬ್ಬರು ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಯಿಂದ 16ನೇ ವಾರದಲ್ಲಿ ಹೊರಗೆ ಹಾಕಲಾಗುತ್ತಿದೆ.
ಬಿಗ್ ಬಾಸ್ ಮನೆಯಿಂದ ಕಳೆದ ವಾರದ ಮಿಡ್ ವೀಕ್ ಎಲಿಮಿನೇಷನ್ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿ 7 ಜನರನ್ನು ನೇರವಾಗಿ ನಾಮಿನೇಟ್ ಮಾಡಲಾಗಿತ್ತು. ಆದರೆ, ಇದಕ್ಕಾಗಿ ನಡೆಸಲಾದ ಟಾಸ್ಕ್‌ನಲ್ಲಿ ಧನರಾಜ್ ಆಚಾರ್ ಅವರು ಆಟದಲ್ಲಿ ತಪ್ಪು ಮಾಡಿದ್ದರಿಂದಾಗಿ ಮಧ್ಯಂತರ ವಾರದಲ್ಲಿ ಯಾರನ್ನೂ ಎಲಿಮಿನೇಟ್ ಮಾಡದೇ ಮತ್ತೊಮ್ಮೆ ಎಲಿಮಿನೇಷನ್ ಪ್ರಕ್ರಿಯೆಗೆ ಎಲ್ಲರ ಹೆಸರನ್ನು ನಾಮಿನೇಟ್ ಮಾಡಿಸಲಾಯಿತು. ಈ ವೇಳೆ ಕ್ಯಾಪ್ಟನ್ ಹನುಮಂತ ಹಾಗೂ ಸಹಸ್ಪರ್ಧಿ ತ್ರಿವಿಕ್ರಮ್ ಬಿಟ್ಟು ಉಳಿದ 6 ಜನರು ನಾಮಿನೇಟ್ ಆಗಿದ್ದರು.
ಇದನ್ನೂ ಓದಿ: BBK 11: ಡಬಲ್ ಎಲಿಮಿನೇಶನ್‌ನಲ್ಲಿ ಯಾರು ಔಟ್ ಆಗ್ತಾರೆ? ಬಿಗ್ ಬಾಸ್‌ನಿಂದ ಹೊರ ಹೋಗೋರು ಯಾರು?
ಅದರಲ್ಲಿ ಕ್ಯಾಪ್ಟನ್ ಹನುಮಂತ ಅವರಿಗೆ ನೀಡಲಾಗಿದ್ದ ವಿಶೇಷ ಅಧಿಕಾರವನ್ನು ಬಳಸಿ ಮೋಕ್ಷಿತಾ ಪೈ ಅವರನ್ನು ನೇರವಾಗಿ ಫಿನಾಲೆ ವಾರಕ್ಕೆ ಸೆಲೆಕ್ಟ್ ಮಾಡಿದರು. ನಂತರ ಉಗ್ರಂ ಮಂಜು, ಗೌರಮಿ ಜಾಧವ್, ಧನರಾಜ್ ಆಚಾರ್, ಭವ್ಯಾ ಗೌಡ ಹಾಗೂ ರಜತ್ ಕಿಶನ್ ಅವರು ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಉಳಿದುಕೊಳ್ಳುತ್ತಾರೆ. ಕಿಚ್ಚ ಸುದೀಪ ಅವರು ವಾರದ ಪಂಚಾಯಿತಿ ನಡೆಸಿಕೊಡಲು ಬಂದ ಕೂಡಲೇ ಈ ವಾರದ ಮಿಡ್ ವೀಕ್ ಎಲಿಮಿನೇಷನ್ ಆಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿ. ಈ ವಾರ ಡಬಲ್ ಎಲಿಮಿನೇಷನ್ ಮಾಡುವುದಾಗಿ ತಿಳಿಸುತ್ತಾರೆ. ಹೀಗಾಗಿ, ಶನಿವಾರವೇ ಗೌತಮಿಉ ಜಾಧವ್ ಅವರನ್ನು ಬಿಗ್ ಬಾಸ್ ಫಿನಾಲೆ ವಾರಕ್ಕೂ ಮೊದಲೇ ಮನೆಯಿಂದ ಎಲಿಮಿನೇಟ್ ಮಾಡಿ ಮನೆಗೆ ಕಳುಹಿಸಲಾಗುತ್ತದೆ. ಈವರೆಗಿನ ವಿಚಾರ ಎಲ್ಲ ವೀಕ್ಷಕರಿಗೂ ತಿಳಿದಿದೆ.
ಆದರೆ, ಡಬಲ್ ಎಲಿಮಿನೇಷನ್ ವಾರದಲ್ಲಿ ಇನ್ನೊಬ್ಬ ಸ್ಪರ್ಧಿ ಮನೆಗೆ ಹೋಗುವುದು ಯಾರು ಎಂಬ ಪ್ರಶ್ನೆಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಉತ್ತರ ಸಿಕ್ಕಾಗಿದೆ. ಇದರಲ್ಲಿ ಧನರಾಜ್ ಆಚಾರ್ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಹೋದ ಎರಡನೇ ಸ್ಪರ್ಧಿ ಎಂಬುದನ್ನು ಖಚಿತಪಡಿಸಿದ್ದಾರೆ. ಈ ಬಗ್ಗೆ ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಡಬಲ್ ಎಲಿಮಿನೇಷನ್ ವಾರದಲ್ಲಿ ಮನೆಯಿಂದ ಹೊರಗೆ ಹೋಗಲು ನಾಮಿನೇಷನ್ ಆಗಿರುವ ಸ್ಪರ್ಧಿಗಳು ಪಡೆದ ವೋಟುಗಳ ಆಧಾರದಲ್ಲಿ ಅತಿ ಕಡಿಮೆ 8 ಲಕ್ಷ ವೋಟು ಪಡೆದ ಗೌತಮಿ ಜಾಧವ್ ಮನೆಯಿಂದ ಹೊರಗೆ ಹೋಗಿದ್ದಾರೆ. ಇದಾದ ನಂತರ 9 ಲಕ್ಷ ಚಿಲ್ಲರೆ ವೋಟುಗಳನ್ನು ಪಡೆದ ಧನರಾಜ್ ಆಚಾರ್ ಇಂದು ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂದು ಲೆಕ್ಕ ಹಾಕಿ ತಿಳಿಸಲಾಗಿದೆ. ಆದರೆ, ಈ ನೆಟ್ಟಿಗರಿಗೆ ಹೇಗೆ ಮಾಹಿತಿ ಲಭ್ಯವಾಗಿದೆ ಎಂಬುದು ಮಾತ್ರ ನಿಗೂಢವಾಗಿದೆ. ಅದರಲ್ಲಿಯೂ ಬಿಗ್ ಬಾಸ್ ರಿಯಾಲಿಟಿ ಶೋ ಶೂಟಿಂಗ್ ನೋಡಲು ಹೋದವರು ರಿವೀಲ್ ಮಾಡಿದರೆ ಈ ವಿಚಾರ ಪಕ್ಕಾ ಆಗಿರುತ್ತದೆ.
ಇದನ್ನೂ ಓದಿ: ನಿರೀಕ್ಷೆಯಂತೆಯೇ ಬಿಗ್‌ಬಾಸ್ ಮನೆಯಿಂದ ಗೌತಮಿ ಜಾಧವ್ ಔಟ್! ಭಾನುವಾರ ಧನ್‌ರಾಜ್ ಎಲಿಮಿನೇಟ್?
