ಬಿಗ್​ಬಾಸ್​ ಮನೆಗೆ ಭೇಟಿಕೊಟ್ಟ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಕಾರ್ತಿಕ್​ ಕುರಿತು ಹೇಳಿದ ಭವಿಷ್ಯವೇನು?  

 ಬಿಗ್​ ಬಾಸ್​ ಮನೆಗೆ ಹೊಸ ವರ್ಷಕ್ಕೆ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಭೇಟಿ ಕೊಟ್ಟು ಎಲ್ಲಾ ಸ್ಪರ್ಧಿಗಳ ಭವಿಷ್ಯ ನುಡಿದಿದ್ದರು. ಯಾರಿಗೆ ಏನು ಸಮಸ್ಯೆ ಇದೆ, ಯಾರ ಭೂತಕಾಲ ಹೇಗಿತ್ತು? ಭವಿಷ್ಯ ಹೇಗಿದೆ ಎಂಬ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದ್ದರು. ಕಲರ್ಸ ಕನ್ನಡದಲ್ಲಿ ಇದೇ 15ರಿಂದ ಆರಂಭವಾಗಲಿರುವ ಮಹರ್ಷಿ ದರ್ಶನ ಕಾರ್ಯಕ್ರಮದ ಪ್ರಯುಕ್ತ ಸ್ವಾಮೀಜಿ ಬಿಗ್​ಬಾಸ್​ ಮನೆಯೊಳಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಎಲ್ಲಾ ಸ್ಪರ್ಧಿಗಳ ಜೊತೆಗೂ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದರು. ಮುಖ ಚೆಹರೆ, ಮಚ್ಚೆ ಸೇರಿದಂತೆ ತಾಂಬೂಲ ಭವಿಷ್ಯವನ್ನೂ ಹೇಳಿದ್ದಾರೆ. ಸ್ಪರ್ಧಿಗಳಿಗೆ ಈ ವರ್ಷ ಅಂದ್ರೆ 2024 ಹೇಗಿರಲಿದೆ ಎಂದು ಹೇಳಿದ್ದರು. ಇದಾಗಲೇ ಕೆಲವು ಸ್ಪರ್ಧಿಗಳ ಜೊತೆ ಸ್ವಾಮೀಜಿ ಮಾತನಾಡಿದ್ದ ಪ್ರೊಮೋ ಅನ್ನು ಕಲರ್ಸ್​ ಕನ್ನಡ ವಾಹಿನಿ ಶೇರ್​ ಮಾಡಿದ್ದು, ಇದೀಗ ಕಾರ್ತಿಕ್​ ಅವರ ಕುರಿತು ಸ್ವಾಮೀಜಿ ಏನು ಹೇಳಿದ್ದಾರೆ ಎನ್ನುವ ಪ್ರೊಮೋ ರಿಲೀಸ್​ ಮಾಡಲಾಗಿದೆ. 

12 ಎಲೆ ಎತ್ತಿಕೊಳ್ಳಿ ಎಂದು ಕಾರ್ತಿಕ್​ ಅವರಿಗೆ ಗುರೂಜಿ ಹೇಳಿದರು. ಅದನ್ನು ಎತ್ತಿಕೊಳ್ಳುತ್ತಲೇ ಜೋಡಿಸಿದ್ದರಲ್ಲಿಯೇ ಅಸ್ತವ್ಯಸ್ತ. ಯಾವುದೂ ಸರಿಯಾಗಿ ಜೋಡಿಸಿಲ್ಲ. ಇದೇ ಬದುಕಿನಲ್ಲಿಯೂ ತೋರಿಸುತ್ತದೆ ಎಂದು ಗುರೂಜಿ ಹೇಳಿದರು. ಬದುಕಿನಲ್ಲಿ ಯಾವುದೂ ಸರಿಯಾಗಿ ಇಲ್ಲ. ಅಂದುಕೊಳ್ಳುವುದು ಒಂದು, ನಡೆಯುವುದು ಇನ್ನೊಂದು. ದೇಹದ ಅಸೌಖ್ಯ ಕಾಣುತ್ತಿದೆ. ಏನಾದರೂ ಒಂದು ದೇಹಕ್ಕೆ ಪೆಟ್ಟು ಆಗುತ್ತಲೇ ಇರುತ್ತದೆ. ಲೋಯರ್​ ಬ್ಯಾಕ್​ ಸಮಸ್ಯೆ ಇದೆ ಎಂದು ಗುರೂಜಿ ಹೇಳಿದರು. ನಂತರ 2024 ಹೇಗೆ ಇರುತ್ತದೆ ಎಂದು ಕೇಳಿದರು. ಚೆನ್ನಾಗಿ ಇರುತ್ತದೆ ಎಂದು ಅಂದುಕೊಂಡಿರುವುದಾಗಿ ಕಾರ್ತಿಕ್​ ಹೇಳಿದರು. ಆಗ ಸ್ವಾಮೀಜಿ ಅಂದುಕೊಂಡರೆ ಸಾಲದು. ಪ್ರಯತ್ನವೂ ಬೇಕಾಗುತ್ತದೆ ಎಂದರು. 2024ರವರೆಗಿನ ಜೀವನ ಒಂದು ರೀತಿ, ಇನ್ನು ಮುಂದೆ ಇನ್ನೊಂದು ರೀತಿ ಎನ್ನುತ್ತಲೇ, ಬಿಗ್​ಬಾಸ್​ ಅಪಾರ ಹೆಸರು ತಂದುಕೊಟ್ಟಿದೆ. ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆ ಎಂದು ಕಿವಿ ಮಾತು ಹೇಳಿದರು. ಯಾರ ಬದುಕೂ ಸುಂದರವಾಗಿರುವುದಿಲ್ಲ, ಅದನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಪತ್ನಿಯಿಂದ ಶುಕ್ರದೆಸೆ, ಹೊಸ ವರ್ಷದಲ್ಲಿ ರಾಜಯೋಗ: ವಿನಯ್​ ವಿನ್ನರ್​ ಎಂದು ಹಿಂಟ್​ ಕೊಟ್ರಾ ಸ್ವಾಮೀಜಿ?

ಈ ಹಿಂದೆ ಇನ್ನೂ ಕೆಲವು ಸ್ಪರ್ಧಿಗಳಿಗೆ ಗುರೂಜಿ ಹೇಳಿದ ಭವಿಷ್ಯದ ವಿಡಿಯೋ ವೈರಲ್​ ಆಗಿತ್ತು. ವಿನಯ್​ ಅವರಿಗೆ, ನಿಮ್ಮ ಸುಖ, ಸಂಪತ್ತು ವೃದ್ಧಿಸುತ್ತದೆ. ಅದು ನಿಮ್ಮ ಮನದನ್ನೆಯಿಂದ ಮಾತ್ರ. ನಿಮ್ಮ ಹೆಂಡತಿಯ ಬಿಗಿ ಹಿಡಿತದಿಂದಾಗಿ ಬದುಕು ತುಂಬಾ ಚೆನ್ನಾಗಿ ನಡೆಯುತ್ತಿದೆ. 2024ರಲ್ಲಿ ಬಹುದೊಡ್ಡ ಯೋಗವಿದೆ. ರಾಜಯೋಗವಿದೆ. ನಿಮ್ಮ ಬಯಕೆಗಳು ಎಲ್ಲವೂ ಈಡೇರಲಿವೆ ಎಂದಿದ್ದರು. ಇದರಿಂದ ಬಿಗ್​ಬಾಸ್​ ವಿನ್ನರ್​ ಇವರೇ ಎಂದು ವಿನಯ್​ ಫ್ಯಾನ್ಸ್​ ಸಂತೋಷದಿಂದ ಜಿಗಿದಾಡುತ್ತಿದ್ದಾರೆ. 

ಅದೇ ರೀತಿ, ನಮ್ರತಾರ ಮುಖದ ಮೇಲಿರುವ ಮಚ್ಚೆ ಹಾಗೂ ತಾಂಬೂಲು ನೋಡಿ ಅವರ ಭೂತಕಾಲ ಹಾಗೂ ಭವಿಷ್ಯದ ಕುರಿತು ಸ್ವಾಮೀಜಿ ನುಡಿದಿದ್ದರು. ಆರೋಗ್ಯದ ಬಗ್ಗೆ ಕಾಳಜಿ ಅತಿ ಮುಖ್ಯವಾಗಿ ಬೇಕಾದದ್ದು ಎಂದಿರುವ ಸ್ವಾಮೀಜಿ, ಉದಾಸೀನ ಮಾಡಿದರೆ ಅನಾರೋಗ್ಯ ದೊಡ್ಡ ಸ್ವರೂಪ ತಾಳುತ್ತದೆ ಎಂದಿದ್ದರು. ನಮ್ರತಾ ಅವರ ಲವ್​ ಲೈಫ್ ಬಗ್ಗೆಯೂ ಮಾತನಾಡಿರುವ ಸ್ವಾಮೀಜಿ, ವೀಳ್ಯದೆಲೆಯನ್ನು ತೆಗೆದು, ನಿಮ್ಮ ಪ್ರೇಮ ಸ್ಥಾನಕ್ಕೆ ತೂತು ಬಿದ್ದಿದೆ. ನೀವು ಹೊಸ ಹುಡುಕಾಟದಲ್ಲಿ ಇದ್ದೀರಿ ಎಂದಾಗ ನಮ್ರತಾ ಅದರ ಮೇಲೆ ನನಗೆ ನಂಬಿಕೆ ಇಲ್ಲ ಎಂದಿದ್ದರು. ಆಗ ಸ್ವಾಮೀಜಿ, ಒಮ್ಮೆ ನೋವು ಆಗಿದೆ ನಿಜ, ಆದರೆ ಪದೇ ಪದೇ ಆಗಲಾರದು. ಹೊಸ ವರ್ಷದಲ್ಲಿ ಹೊಸ ವ್ಯಕ್ತಿಯ ಆಗಮನವಾಗುತ್ತದೆ ಎಂದಿದ್ದರು. 

ಮುಖದ ಮೇಲೊಂದು ಮಚ್ಚೆ, ಪ್ರೇಮ ಸ್ಥಾನದಲ್ಲಿ ತೂತು... ಬಿಗ್​ಬಾಸ್​ ನಮ್ರತಾ ಭವಿಷ್ಯ ಹೇಗಿದೆ?

View post on Instagram