ಮುಖದ ಮೇಲೊಂದು ಮಚ್ಚೆ, ಪ್ರೇಮ ಸ್ಥಾನದಲ್ಲಿ ತೂತು... ಬಿಗ್ಬಾಸ್ ನಮ್ರತಾ ಭವಿಷ್ಯ ಹೇಗಿದೆ?
ಬಿಗ್ಬಾಸ್ ಮನೆಗೆ ಭೇಟಿಕೊಟ್ಟ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ನಮ್ರತಾ ಕುರಿತು ಹೇಳಿದ ಭವಿಷ್ಯವೇನು?
ಬಿಗ್ ಬಾಸ್ ಮನೆಗೆ ಹೊಸ ವರ್ಷಕ್ಕೆ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಭೇಟಿ ಕೊಟ್ಟು ಎಲ್ಲಾ ಸ್ಪರ್ಧಿಗಳ ಭವಿಷ್ಯ ನುಡಿದಿದ್ದಾರೆ. ಯಾರಿಗೆ ಏನು ಸಮಸ್ಯೆ ಇದೆ, ಯಾರ ಭೂತಕಾಲ ಹೇಗಿತ್ತು? ಭವಿಷ್ಯ ಹೇಗಿದೆ ಎಂಬ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದ್ದಾರೆ. ಕಲರ್ಸ ಕನ್ನಡದಲ್ಲಿ ಇದೇ 15ರಿಂದ ಆರಂಭವಾಗಲಿರುವ ಮಹರ್ಷಿ ದರ್ಶನ ಕಾರ್ಯಕ್ರಮದ ಪ್ರಯುಕ್ತ ಸ್ವಾಮೀಜಿ ಬಿಗ್ಬಾಸ್ ಮನೆಯೊಳಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಎಲ್ಲಾ ಸ್ಪರ್ಧಿಗಳ ಜೊತೆಗೂ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಮುಖ ಚೆಹರೆ, ಮಚ್ಚೆ ಸೇರಿದಂತೆ ತಾಂಬೂಲ ಭವಿಷ್ಯವನ್ನೂ ಹೇಳಿದ್ದಾರೆ. ಸ್ಪರ್ಧಿಗಳಿಗೆ ಈ ವರ್ಷ ಅಂದ್ರೆ 2024 ಹೇಗಿರಲಿದೆ ಎಂದು ಹೇಳಿದ್ದಾರೆ.
ಇದೀಗ ನಮ್ರತಾರ ಮುಖದ ಮೇಲಿರುವ ಮಚ್ಚೆ ಹಾಗೂ ತಾಂಬೂಲು ನೋಡಿ ಅವರ ಭೂತಕಾಲ ಹಾಗೂ ಭವಿಷ್ಯದ ಕುರಿತು ಸ್ವಾಮೀಜಿ ನುಡಿದಿದ್ದಾರೆ. ಆರೋಗ್ಯದ ಬಗ್ಗೆ ಕಾಳಜಿ ಅತಿ ಮುಖ್ಯವಾಗಿ ಬೇಕಾದದ್ದು ಎಂದಿರುವ ಸ್ವಾಮೀಜಿ, ಉದಾಸೀನ ಮಾಡಿದರೆ ಅನಾರೋಗ್ಯ ದೊಡ್ಡ ಸ್ವರೂಪ ತಾಳುತ್ತದೆ ಎಂದಿದ್ದಾರೆ. ಇದೇ ವೇಳೆ ನಮ್ರತಾ ಮುಖದ ಬಲಭಾಗದ ಮೂಗಿನ ಸಂದಿಯಲ್ಲಿ ಇರುವ ಮಚ್ಚೆಯನ್ನು ನೋಡಿರುವ ಸ್ವಾಮೀಜಿ, ನಿಮ್ಮ ಬದುಕಿನಲ್ಲಿ ಏಳಿಗೆಗೆ ಕಾರಣವಾದದ್ದೇ ನಿಮ್ಮ ಮಚ್ಚೆ. ಇದರಿಂದ ನೀವು ಏಳಿಗೆ ಸಾಧಿಸಲಿದ್ದೀರಿ ಎಂದಿದ್ದಾರೆ. ಇದೇ ವೇಳೆ ನಮ್ರತಾ ಅವರ ಲವ್ ಲೈಫ್ ಬಗ್ಗೆಯೂ ಮಾತನಾಡಿರುವ ಸ್ವಾಮೀಜಿ, ವೀಳ್ಯದೆಲೆಯನ್ನು ತೆಗೆದು, ನಿಮ್ಮ ಪ್ರೇಮ ಸ್ಥಾನಕ್ಕೆ ತೂತು ಬಿದ್ದಿದೆ. ನೀವು ಹೊಸ ಹುಡುಕಾಟದಲ್ಲಿ ಇದ್ದೀರಿ ಎಂದಾಗ ನಮ್ರತಾ ಅದರ ಮೇಲೆ ನನಗೆ ನಂಬಿಕೆ ಇಲ್ಲ ಎನ್ನುತ್ತಾರೆ. ಆಗ ಸ್ವಾಮೀಜಿ, ಒಮ್ಮೆ ನೋವು ಆಗಿದೆ ನಿಜ, ಆದರೆ ಪದೇ ಪದೇ ಆಗಲಾರದು. ಹೊಸ ವರ್ಷದಲ್ಲಿ ಹೊಸ ವ್ಯಕ್ತಿಯ ಆಗಮನವಾಗುತ್ತದೆ, ಹೊಸ ವರ್ಷ ಹೊಸ ಹರ್ಷ ತುಂಬಲಿದೆ ಎಂದಾಗ ನಮ್ರತಾ ಮುಖ ಅರಳಿರುವುದನ್ನು ನೋಡಬಹುದು.
ಕುಟುಂಬದಿಂದ ದೂರನೇ ಇರ್ಬೇಕಾ? ಗುರೂಜಿ ಭವಿಷ್ಯಕ್ಕೆ ಕಣ್ಣೀರಾದ ಡ್ರೋನ್ ಪ್ರತಾಪ್
ಇದೇ ವೇಳೆ ನಮ್ರತಾ ಅವರಿಗೆ ಆಗಿರುವ ನಂಬಿಕೆ ದ್ರೋಹದ ಕುರಿತೂ ಸ್ವಾಮೀಜಿ ಮಾತನಾಡಿದ್ದಾರೆ. ನಿಮಗೆ ಹಲವಾರು ವರ್ಷಗಳಿಂದ ನಂಬಿಕೆ ದ್ರೋಹ ಆಗಿದೆ. ಯಾರಿಗೇ ದುಡ್ಡು ಕೊಟ್ಟರೂ ಅದು ವಾಪಸ್ ಬರುವುದಿಲ್ಲ. ನೀವು ಎಲ್ಲರಿಗೂ ಸಹಾಯ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತೀರಿ ಎಂದಾಗ ನಮ್ರತಾ ಹೌದು ಎಂದಿದ್ದಾರೆ. ಇದಾಗಲೇ ಸ್ವಾಮೀಜಿ, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್ ಭವಿಷ್ಯ ಕೂಡ ನುಡಿದಿದ್ದಾರೆ. ಸಂಗೀತಾ ಅವರಿಗೆ, 'ನಿಮ್ಮ ಕೊರೆಗಳನ್ನು ನೀಗಿಸಯವಂತಹ ಮತ್ತೊಬ್ಬ ವ್ಯಕ್ತಿ ಬರಲಿದ್ದಾರೆ. 2024ರಲ್ಲಿ ನಿಮ್ಮ ಬದುಕಿನಲ್ಲಿ ಹೊಸ ಬೆಳಕು ಮೂಡುತ್ತದೆ. ನಿಮ್ಮ ವೃತ್ತಿ ಜೀವನ ಮೇಲೆ ಹೋಗುತ್ತದೆ. ಕೆಳಗೂ ಬರುತ್ತದೆ. ನಿಮ್ಮ ಕೆರಿಯರ್ ಹಾಗೂ ಪರ್ಸನಲ್ ಲೈಫ್ ಚೆನ್ನಾಗಿ ಹೋಗುತ್ತಾರೆ. 2025ರ ನಂತರ ನಿಮ್ಮ ಮದುವೆ ನಡೆಯಲಿದೆ. ಸಂಗಾತಿ ಬಂದ ಮೇಲೆ ನಿಮ್ಮ ಜೀವನ ಇನ್ನೂ ಚೆನ್ನಾಗಿ ನಡೆಯುತ್ತದೆ' ಎಂದಿದ್ದಾರೆ.
ಡ್ರೋನ್ ಪ್ರತಾಪ್ಗೂ ಭವಿಷ್ಯ ಹೇಳಿದ್ದ ಸ್ವಾಮೀಜಿ, ಕುಟುಂಬದಿಂದ ದೂರವೇ ಇರುವಂತೆ ಪ್ರತಾಪ್‌ಗೆ ಸೂಚಿಸಿದ್ದಾರೆ. ಈ ವಿಷಯ ಹೇಳಲು ತಮಗೇ ಸಂಕಟವಾಗುತ್ತದೆ ಎಂದಿರುವ ಗುರೂಜಿ ಪ್ರತಾಪ್ ಕುಟುಂಬ ಜೀವನ ಸರಿಯಿಲ್ಲ. ಹೀಗಾಗಿ, ಕುಟುಂಬದಿಂದ ದೂರವಿದ್ದು ಧೂಪವಾಗುವೆಯೋ, ಹತ್ತಿರವಾಗಿ ಹೇಸಿಗೆಯಾಗ್ತೀಯೋ ನೀನೇ ನಿರ್ಧರಿಸು ಎಂದು ಪ್ರತಾಪ್‌ಗೆ ಹೇಳಿದ್ದಾರೆ.
ಮದ್ವೆನೇ ಬೇಡ ಅಂತಿದ್ದ ಸಂಗೀತಾ ಶೃಂಗೇರಿ; ಡೇಟ್ ಫಿಕ್ಸ್ ಮಾಡೇಬಿಟ್ರು ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ!