ಕನ್ನಡತಿ ಸೀರಿಯಲ್‌ ಸದ್ಯ ಸಾನಿಯಾ ನಾಪತ್ತೆ, ಭುವಿಯ ಚಿಕ್ಕಮ್ಮನ ಬೇಸರ ಅಂತೆಲ್ಲ ಸಾಗ್ತಿದ್ದರೆ ಇತ್ತ ರಿಯಲ್ ಲೈಫ್‌ನಲ್ಲಿ ಭುವಿ ಅಲಿಯಾಸ್ ರಂಜಿನಿ ರಾಘವನ್ ಮತ್ತು ಸಾರಾ ಅಣ್ಣಯ್ಯ ಮತ್ಯಾವುದೋ ಜಗತ್ತಿನಲ್ಲಿ ಇದ್ದಂಗಿದ್ದಾರೆ. ಸೀರಿಯಲ್ ನ ಕತೆ ಏನಾಗುತ್ತೋ, ಸಾನಿಯಾ ಕತೆ ಏನಾಗುತ್ತೆ, ವರೂಧಿನಿ ಹರ್ಷ ನಡುವೆ ಇಂಟೆಮೆಸಿ ಹೆಚ್ಚಾಗಿ ಭುವಿ ಹರ್ಷ ದೂರಾಗ್ತಾರಾ ಅಂತೆಲ್ಲ ವೀಕ್ಷಕರ ತಲೆಯಲ್ಲಿ ನೂರಾರು ವಿಚಾರಗಳು ಓಡಾಡ್ತಿವೆ. ಆದರೆ ಶೂಟಿಂಗ್ ನಲ್ಲಿ ಸಖತ್ ಫನ್ನಿಯಾಗಿ ಕಾಲ ಕಳೀತಿರೋ ರಂಜಿನಿ ಮತ್ತು ಸಾರಾ ಅಣ್ಣ ತಮ್ಮ ಪಾತ್ರಗಳ ಭಾವನೆಗಳ ಭಾರ ಹೊತ್ತುಕೊಂಡಿಲ್ಲ. ತಮ್ಮ ಪಾಡಿಗೆ ತಾವು ಶೂಟಿಂಗ್ ಕ್ಷಣಗಳನ್ನು ಎನ್ ಜಾಯ್ ಮಾಡ್ತಿದ್ದಾರೆ. ಶೂಟಿಂಗ್‌ನಲ್ಲಿ ಇವರಿಬ್ಬರ ತರಲೆ, ತುಂಟಾಟಗಳು ಅಲ್ಲಿದ್ದವರಿಗೆ ಗೊತ್ತು. ಆದರೆ ಅದನ್ನು ಸೋಷಿಯಲ್ ಮೀಡಿಯಾದಲ್ಲೂ ಅಪ್ ಲೋಡ್ ಮಾಡಿ ಜಗತ್ತಿಗೇ ತಿಳಿಯೋ ಹಾಗೆ ಮಾಡಿದ್ದಾರೆ ಈ ಇಬ್ಬರು ಗೆಳೆತಿಯರು. 

ದುಲ್ಕರ್ ಮನೆಗೆ ಬಂದು ಹೋದ ಅತಿಥಿ ಯಾರು ಗೊತ್ತಾ? ...

 ಈ ವೀಡಿಯೋ ನೋಡಿದ ಮೇಲೆ ವರೂಧಿನಿ ಪಾತ್ರಧಾರಿ ಸಾರಾ ಅಣ್ಣಯ್ಯ ಹಾಗೂ ಭುವಿ ಪಾತ್ರಧಾರಿ ರಂಜಿನಿ ಮೊದಲಿಂದಲೂ ಫ್ರೆಂಡ್ಸಾ ಅಂತ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ನಡೀತಿದೆ. ಈ ವೀಡಿಯೋದಲ್ಲಿ ಇವರಿಬ್ಬರ ಮಾತುಕತೆ ಕೇಳಿದ್ರೆ ಆ ಅನುಮಾನ ಬರೋದು ಸಹಜ. ಆದರೆ ಎಷ್ಟೋ ಸಲ, ಸೀರಿಯಲ್ ಸೆಟ್‌ಗಳಲ್ಲಿ ಪರಿಚಯವಾದ ಪಾತ್ರಧಾರಿಗಳು ರಿಯಲ್ ಲೈಫ್‌ನಲ್ಲೂ ಸಖತ್ ಫ್ರೆಂಡ್ಲಿಯಾಗಿರುತ್ತಾರೆ. ಎಂದೋ ಆಗಿಹೋದ ಸೀರಿಯಲ್ ನಟ ನಟಿಯರು ಇಂದೂ ಜೊತೆಯಾಗಿ ಔಟಿಂಗ್ ಹೋಗೋದು, ಪಾರ್ಟಿ ಮಾಡೋದು ಎಲ್ಲಾ ಮಾಡ್ತಿದ್ದಾರೆ. ಸೀರಿಯಲ್‌ನಲ್ಲಿ ಪರಸ್ಪರ ಶತ್ರುಗಳಂತೆ  ಆಡ್ತಿದ್ದೋರೂ ರಿಯಲ್‌ನಲ್ಲಿ ಉಳಿದೆಲ್ಲರಿಗಿಂತ ಹೆಚ್ಚು ಕ್ಲೋಸ್ ಫ್ರೆಂಡ್ಸ್ ಆಗೋದೂ ಕಾಮನ್. ಅವರಿಬ್ಬರನ್ನು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಬೈಯ್ಯೋ ಜನ, ಅವರಿಬ್ಬರೂ ನಗು ನಗುತ್ತಾ ತುಂಬ ಕ್ಲೋಸ್ ಆಗಿರೋ ಫೋಟೋ ನೋಡಿ ಅವಕ್ಕಾಗೋದೂ ಇದೆ. 

ಹಾಲಿವುಡ್‌ ಸ್ಟಾರ್ಸ್‌ಗೆ ಹೋಲಿಸಿದ ಟ್ವೀಟ್‌ನಿಂದ ಸಖತ್‌ ಟ್ರೋಲ್‌ ಆದ ಕಂಗನಾ! ...

ಇನ್ನು ಕನ್ನಡತಿ ಸೀರಿಯಲ್ ವಿಷಯಕ್ಕೆ ಬಂದರೆ ಇಲ್ಲಿ ವರೂಧಿನಿ ಹೀರೋ ಹರ್ಷ. ಭುಮಿ ಮನಸ್ಸಲ್ಲೇ ಆರಾಧಿಸೋ ವ್ಯಕ್ತಿಯೂ ಹರ್ಷನೇ. ಆದರೆ ಹರ್ಷನಿಗೆ ಭುವಿಯ ಮೇಲೆ ಮನಸ್ಸು. ಒಳ್ಳೆ ಮನಸ್ಸಿನ ಹುಡುಗಿ ಭುವಿ ಇಂಥಾ ವಿಚಾರಗಳ ಬಗ್ಗೆ ಯೋಚನೆ ಮಾಡದೇ ವರೂದಿನಿಯನ್ನು ಜೈಲಿಂದ ಬಿಡುಗಡೆ ಮಾಡಿಸಿದ್ದಾಳೆ. ಮುಂದೆ ತನ್ನಿಂದ ಹರ್ಷ ದೂರಾಗಲು ಈಕೆಯೇ ಕಾರಣವಾಗ್ತಾಳೆ ಅನ್ನೋದು ಭುವಿಗೆ ಗೊತ್ತಿಲ್ಲ. ಭುವಿಗೆ ತನ್ನ ವರೂಧಿನಿ ಸ್ನೇಹ ಮುಖ್ಯ ಒಳ್ಳೆತನವೇ ಅವಳ ಜೀವಾಳ. ಆದರೆ ವರೂಧಿನಿಗೆ ಮಾತ್ರ ಸ್ನೇಹ, ಸಂಬಂಧ ಎಲ್ಲಕ್ಕಿಂತ ಅವಳ ಹೀರೋ ಹರ್ಷನೇ ಬಹಳ ಮುಖ್ಯ. ಹರ್ಷನಿಗೆ ಭುವಿ ಬಗ್ಗೆ ಪ್ರೀತಿ ಇದ್ದರೂ ಪರಿಸ್ಥಿತಿಯ ನಿಯಂತ್ರಣಕ್ಕೆ ಸಿಕ್ಕಿ ಆತ ಕೆಲವೊಮ್ಮೆ ವರೂಧಿನಿ ಮಾತಿಗೆ ತಲೆಯಾಡಿಸಲೇ ಬೇಕಾಗುತ್ತದೆ. 
 


ಸೀರಿಯಲ್ ಕತೆ ಹೀಗೆಲ್ಲ ಆದ್ರೆ ಇತ್ತ ರಿಯಲ್ ಲೈಫ್‌ನಲ್ಲಿ ವರೂಧಿನಿ, ಭುವಿ ತರಲೆ ನೀವು ನೋಡಬೇಕು. ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ, "ಭುವಿ ಅವ್ರೇ ವರೂಧಿನಿ ಜೈಲಿಂದ ಹೊರಗೆ ಬಂದಿದ್ದಾಳೆ. ನಿಮಗೇನನಿಸುತ್ತೆ?' ಅಂತ ಇಂಟರ್‌ವ್ಯೂ ಮಾಡೋ ರೀತಿಯಲ್ಲಿ ವರೂಧಿನಿ ಅಲಿಯಾಸ್ ಸಾರಾ ಅಣ್ಣಯ್ಯ ಪ್ರಶ್ನಿಸಿದ್ದಾರೆ. "ನಂಗೆ ತುಂಬಾ ಖುಷಿಯಾಗುತ್ತೆ' ಅಂತ ರಂಜಿನಿ ರಾಘವನ್ ಉತ್ತರ. "ಯಾಕೆ?' ಅಂತ ಮತ್ತೆ ಪ್ರಶ್ನೆ ಕೇಳ್ತಾರೆ ಸಾರಾ. ಇದಕ್ಕೆ ರಂಜಿನಿ ಕೊಡೋ ಉತ್ತರ ಸಖತ್ ಹಿಲೇರಿಯಸ್. 'ಯಾಕಂದ್ರೆ, ವರೂಧಿನಿ ಜೈಲಲ್ಲಿ ಇರುವಷ್ಟು ದಿನ ಭುವಿ ಬೇಜಾರಲ್ಲಿರ್ತಾಳೆ ಅಂತ ಡಲ್ಲಾಗಿ ಮೇಕಪ್ ಮಾಡ್ತಿದ್ರು. ಆದರೆ ಈಗ ವರೂಧಿನಿ ಜೈಲಿಂದ ಹೊರಗೆ ಬಂದಿದ್ದಾಳಲ್ಲಾ.. ಇನ್ನು ಫುಲ್ ಮಿಂಚಿಂಗ್' ಅಂದು ನಕ್ಕಿದ್ದಾರೆ ರಂಜಿನಿ. 


'ಅಲ್ಲಾ ತಾಯಂದ್ರಾ, ನಾವಿಲ್ಲಿ ಸೀರಿಯಲ್ ಬಗ್ಗೆ ಸೀರಿಯಸ್ ಆಗಿ ಯೋಚ್ನೆ ಮಾಡ್ಕೊಂಡು ತಲೆ ಕೆಡಿಸ್ಕೊಂಡಿದ್ರೆ ನೀವು ಹಿಂಗೆಲ್ಲ ತಮಾಷೆ ಮಾಡೋದಾ!' ಅಂತ ತಲೆ ತಲೆ ಚಚ್ಕೊಳ್ಳೋ ಸರದಿ ಅಭಿಮಾನಿಗಳದ್ದು. 

 
 
 
 
 
 
 
 
 
 
 
 
 
 
 

A post shared by @artists_galary

ಬ್ರೇಕಪ್ ನಂತ್ರ ಯಾವುದೇ ಚಟ ಹತ್ತಿಸ್ಕೊಳ್ಳಿಲ್ಲ, ಆದ್ರೆ ಸಿಕ್ಕಾಪಟ್ಟೆ ಡುಮ್ಮಿಯಾದ್ರು ಪ್ರಿಯಾಂಕ ...