ಮಲಯಾಳಂ ಚಿತ್ರರಂಗದ ಈಗಿನ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬ ದುಲ್ಖರ್ ಸಲ್ಮಾನ್. ಯಂಗ್ ಆಂಡ್ ಎನರ್ಜಿಟಿಕ್ ಹೀರೋ ಆಗಿರುವ ದುಲ್ಕರ್, ಮತ್ತೊಬ್ಬ ಮಹಾ ತಾರೆ ಮಮ್ಮುಟ್ಟಿಯ ಮಗ. ಮಮ್ಮುಟ್ಟಿ ಹಾಗೂ ಇನ್ನೊಬ್ಬ ಸೂಪರ್‌ಸ್ಟಾರ್ ಮೋಹನ್‌ಲಾಲ್ ಮಲಯಾಳಂ ಚಿತ್ರರಂಗವನ್ನು ದಶಕಗಳಿಂದ ಆಳಿದ್ದಾರೆ. ಇಂದು ಹತ್ತಾರು ಸ್ಟಾರ್‌ಗಳು ಮಲಯಾಳಂನಲ್ಲಿ ಇದ್ದರೂ, ಮೂಲತಃ ಮೋಹನ್‌ಲಾಲ್‌ ಮತ್ತು ಮಮ್ಮುಟ್ಟಿಗಳೇ ಮಲಯಾಳಿಗಳಿಗೆ ಇಂದಿಗೂ ಮಹಾ ಪ್ರೀತಿ. ಇವರಿಬ್ಬರಿಗೂ ತೆರೆಯ ಮೇಲೆ ಅಧಿಪತ್ಯ ಸ್ಥಾಪಿಸುವುದರಲ್ಲಿ ಯಾವಾಗಲೂ ಪೈಪೋಟಿ. 
ಹೀಗಿರುವ ಮಮ್ಮುಟ್ಟಿ ಮತ್ತು ಲಾಲೇಟ್ಟನ್‌ ನಡುವೆ ಬದ್ಧ ಶತ್ರುತ್ವ ಇರಬಹುದು ಎಂದು ನೀವು ಅಂದುಕೊಂಡಿದ್ದರೆ ತಪ್ಪು. ಹಾಗೇನೂ ಇಲ್ಲ. ಇಬ್ಬರೂ ಇಂದಿಗೂ ಜೊತೆಯಾಗಿ ಒಳ್ಳೆಯ ಫಿಲಂ ಸಿಕ್ಕಿದರೆ ನಟಿಸಲು ಸಿದ್ಧ. ಅಂದಹಾಗೆ, ಇಬ್ಬರೂ ೫೫ ಫಿಲಂಗಳಲ್ಲಿ ಜತೆಯಾಗಿ ನಟಿಸಿಯೂ ಇದ್ದಾರೆ. ಹೆಚ್ಚಿನ ಫಿಲಂಗಳಲ್ಲಿ ಮಮ್ಮುಟ್ಟಿ ಹೀರೋ ಮತ್ತು  ಮೋಹನ್‌ಲಾಲ್‌ ವಿಲನ್‌. ಮೊತ್ತಮೊದಲು ಇಬ್ಬರೂ ಜೊತೆಯಾಗಿ ನಟಿಸಿದ ಫಿಲಂ ಪದಯೋಟ್ಟಮ್. ಇದರಲ್ಲಿಮೋಹನ್‌ಲಾಲ್‌ನ ತಂದೆಯಾಗಿ ಮಮ್ಮುಟ್ಟಿ ನಟಿಸಿದ್ದರು. ಪಾವಂ ಪೂರ್ಣಿಮಾ, ಎಂದಿನೋಪೂಕುನ್ನ ಪೂಕ್ಕಳ್‌, ಅಂಗಡಿಕ್ಕಪ್ಪರತ್ತು, ಅವಿಡತೆಪೋಲೆ ಇವಿಡಿಯುಮ್, ವಾರ್ತಾ ಮೊದಲಾದ ಫಿಲಂಗಳಲ್ಲಿ ಇಬ್ಬರೂ ನಟಿಸಿದರು. ಎಲ್ಲ ಫಿಲಂಗಳೂ ಸೂಪರ್ ಹಿಟ್ ಆದವು. ಇಬ್ಬರನ್ನೂ ಜೊತೆಯಾಗಿ ನೋಡುವುದು ಎಂದರೆ ಮಲೆಯಾಳಿಗಳಿಗೆ ತುಂಬಾ ಖುಷಿ. 

ಬ್ರೇಕಪ್ ನಂತ್ರ ಯಾವುದೇ ಚಟ ಹತ್ತಿಸ್ಕೊಳ್ಳಿಲ್ಲ, ಆದ್ರೆ ಸಿಕ್ಕಾಪಟ್ಟೆ ಡುಮ್ಮಿಯಾದ್ರು ಪ್ರಿಯಾಂಕ ...

ಅದಿರಲಿ, ಈಗ ವಿಷಯ ಮಮ್ಮುಟ್ಟಿಯ ಮಗ ದುಲ್ಕರ್ ಸಲ್ಮಾನ್‌ನದು. ಮೊನ್ನೆ ಮೊನ್ನೆ ದುಲ್ಕರ್ ಮನೆಗೆ ಮೋಹನ್‌ಲಾಲ್‌ ಬಂದು ಹೋದರು. ಆಗ ದುಲ್ಕರ್ ಫ್ಯಾಮಿಲಿಯ ಜೊತೆ ಲಾಲೇಟ್ಟನ್‌ ತೆಗೆಸಿಕೊಂಡ ಫೋಟೋ ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಇಬ್ಬರೂ ಫ್ರೀಯಾಗಿ ಹರಟಿದರು. ಜೊತೆಯಾಗಿ ತಿಂಡಿ ಸವಿದರು. ಮುಕ್ತವಾಗಿ ನಕ್ಕರು. ದುಲ್ಕರ್‌ನ ಹೆಂಡತಿ ಅಮಾಲ್ ಸೂಫಿಯಾ ಹಾಗೂ ಪುಟ್ಟ ಮಗು ಮರ್ಯಮ್ ಅಮ್ರೀಶ್ ಸಲ್ಮಾನ್‌ ಆಗ ಜೊತೆಗಿದ್ದರು. ಮಗುವಿನ ಜೊತೆಗೆ ಮಗುವಾಗಿ ಲಲ್ಲೆ ಹೊಡೆದ ಲಾಲೇಟ್ಟನ್‌, ಮೂವರ ಜೊತೆಗೆ ತೆಗೆಸಿಕೊಂಡ ಫೋಟೋವನ್ನು ದುಲ್ಕರ್ ಇನ್‌ಸ್ಟಗ್ರಾಮ್‌ನಲ್ಲಿ ಹಾಕಿದ್ದು, ಈಗ ಅದು ಎಲ್ಲೆಡೆ ವೈರಲ್ ಆಗ್ತಾ ಇದೆ. ೨೦೧೭ರಲ್ಲಿ ಜನಿಸಿದ ಮರ್ಯಮ್‌ಗೆ ಈಗ ಮೂರು ವರ್ಷ ತುಂಬಿದೆ. ಫೋಟೋದಲ್ಲಿ ಮೋಹನ್‌ಲಾಲ್‌, ಮರ್ಯಮ್‌ಗೆ ಮುದ್ದಾಗಿ ಏನೋ ತೋರಿಸುತ್ತಾ ಇದ್ದಾರೆ. 


ಮೋಹನ್‌ಲಾಲ್‌ ಅವರ ಹೊಸ ಫಿಲಂ ದೃಶ್ಯಂ-2 ಸದ್ಯದಲ್ಲಿಯೇ ಬರುತ್ತಿದೆ. ಇವರ ದೃಶ್ಯಂ-1 ಸೂಪರ್‌ ಹಿಟ್‌ ಆಗಿತ್ತು. ಇದರ ರಿಮೇಕ್ ಕನ್ನಡ, ಹಿಂದಿಯಲ್ಲೂ ಬಂದಿತ್ತು. ದೃಶ್ಯಂ-2ನ ಟ್ರೇಲರ್ ಅಮೆಜಾನ್ ಪ್ರೈಮ್‌ನಲ್ಲಿ ರಿಲೀಸ್ ಆಗಿದೆ. ಫಿಲಂ ಕೂಡ ಅದರಲ್ಲೇ ಬರಲಿದೆ. ಅಂತೂ ಲಾಲೇಟ್ಟನ್‌ನಂಥ ಸೂಪರ್‌ಸ್ಟಾರ್ ಕೂಡ ಅಮೆಜಾನ್‌ ಪ್ರೈಮ್‌ನಂಥ ಒಟಿಟಿ ಫ್ಲ್ಯಾಟ್‌ಫಾರಂಗಳನ್ನು ಬಳಸಿಕೊಳ್ಳಲು ಅಂಜುತ್ತಿಲ್ಲ. ದುಲ್ಕರ್‌ನ ಹಲವಾರು ಸಿನಿಮಾಗಳು ಅಮೆಜಾನ್‌ನಲ್ಲಿ ಈಗಾಗಲೇ ಇವೆ. 

ಜಗತ್ತಿಗೆ ಪ್ರಿಯಕರನ ಪರಿಚಯ ಮಾಡಿಸಿದ ಇರಾ.. ಅಮೀರ್ ಫೋನ್ ಸ್ವಿಚ್ ಆಫ್? ...

ದುಲ್ಕರ್ ಈಗ ಬರೀ ಮಲಯಾಳಂ ನಟನಲ್ಲ. ಆತ ಪಾನ್ ಇಂಡಿಯಾ ಸ್ಟಾರ್. ಯಾಕೆಂದರೆ ಆತ ಹಲವು ಭಾಷೆಗಳಲ್ಲಿ ನಟಿಸಿದ್ದಾನೆ. ಈಗ ನಾಲ್ಕು ಭಾಷೆಗಳಲ್ಲಿ ಆತನ ನಾಲ್ಕು ಫಿಲಂಗಳು ರೆಡಿಯಾಗ್ತಾ ಇವೆ. ತಮಿಳಿನಲ್ಲಿ ಹೇ ಸಿನಾಮಿಕಾ ಎಂಬ ರೊಮ್ಯಾಂಟಿಕ್ ಕಾಮಿಡಿ, ಬಾಲಿವುಡ್‌ನಲ್ಲಿ ಒಂದು ಪತ್ತೇದಾರಿ ಥ್ರಿಲ್ಲರ್‌, ಮಲಯಾಳಂನಲ್ಲಿ ಸೆಲ್ಯೂಟ್ ಎಂಬ ಒಂದು ಮೂವಿ ಹಾಗೂ ತೆಲುಗಿನಲ್ಲಿ ಆತ ಸೇನಾ ಲೆಫ್ಟಿನೆಂಟ್ ಆಗಿ ನಟಿಸುತ್ತಿರುವ ಒಂದು ಪೀರಿಯೆಡ್ ಮೂವಿ. ಇವುಗಳ ನಡುವೆಯೂ ಆತ ಮಗಳ ಜತೆ, ಪತ್ನಿಯ ಜೊತೆ ಇರಲು ಟೈಮ್ ಮಾಡಿಕೊಳ್ಳುತ್ತಾನೆ. ಹಾಗೇ ಲಾಲೆಟ್ಟನ್‌ನಂಥ ಹಿರಿಯ ನಟ, ಹಿತೈಷಿಯ ಜೊತೆ ಸಮಯ ಕಳೆದಿರುವುದು ಕೂಡ ಮಲೆಯಾಳಿಗಳಿಗೆ ಸಕತ್‌ ಥ್ರಿಲ್‌ ಕೊಟ್ಟಿದೆ.

ಮನಾಲಿಯಲ್ಲಿರುವ ಕಂಗನಾ ವಿಲಾಸಿ ಬಂಗಲೆ ನೋಡಿದ್ದೀರಾ..? ...