ಮದುವೆ ದಿನ ಡ್ರಗ್ಸ್‌ ಮಾಡ್ಕೊಂಡು ಬಂದಿದ್ದ ವರ್ತೂರ್ ಸಂತೋಷ್, ಎರಡೇ ದಿನಕ್ಕೆ ಡಿವೋರ್ಸ್ ಅಂತಾರೆ; ಮಾವ ಕಣ್ಣೀರು

ವರ್ತೂರ್ ಮದುವೆ ರಹಸ್ಯ ಬಿಚ್ಚಿಟ್ಟ ಮಾವ. ಮಗಳನ್ನು ಎರಡು ವರ್ಷದಿಂದ ನೋಡಲು ಬಂದಿಲ್ಲ ಎಂದು ಕಣ್ಣೀರು....

Colors Kannada Bigg boss Varthur Santhosh cheated my daughter says father in law Somanath vcs

ಹುಲಿ ಉಗುರು ಬೆನ್ನಲೆ ವರ್ತೂರ್ ಸಂತೋಷ್ ಮತ್ತೊಂದು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಮದುವೆ ಆಗಿ ಮಗಳಿದ್ದರೂ ದೊಡ್ಡ ವೇದಿಕೆ ಮೇಲೆ ಮದ್ವೆ ಆಗಿಲ್ಲ ಎಂದು ಸುಳ್ಳು ಹೇಳಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ವರ್ತೂರ್ ಸಂತೋಷ್ ಮದುವೆ ಫೋಟೋ ಮತ್ತು ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಶಾಕ್ ಆಗಿದ್ದಾರೆ. ಆಗ ವರ್ತೂರ್ ಸೋಮನಾಥ್ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

'ನನ್ನ ಮಗಳಿಗೆ ಬೇಸರ ಆಗಿದೆ. ಆ ಮನೆಗೆ ಹೋದರೆ ಸಾಯಿಸಿ ಬಿಡುತ್ತಾನೆ ಅಲ್ಲಿಗೆ ಹೋಗಲ್ಲ ಅನ್ನುತ್ತಾಳೆ. ಅವರ ಜೊತೆ ಇವರ ಜೊತೆ ಮಾತನಾಡಿ ಆ ಮನೆ ಸೇರಿಸುತ್ತೀನಿ ಎಂದು ಹೇಳಿದರೆ ನನಗೆ ಮತ್ತು ನನ್ನ ಮಗಳಿಗೆ ಬೆಳಗ್ಗೆ ಬಂದು ಹಾರ ಹಾಕಿ ಎನ್ನುತ್ತಾರೆ. ಹಿರಿಯರು ಇದ್ದಾರೆ ನ್ಯಾಯ ಇದೆ ಅದಕ್ಕೆ ತಲೆ ಬಾಗುತ್ತೀವಿ. ತುಂಬಾ ಗೌರವ ಮತ್ತು ನಿಷ್ಟೆಯಿಂದ ಮದುವೆ ಮಾಡಿಕೊಟ್ಟಿದ್ದೀನಿ. ಶೋನಲ್ಲಿ ವರ್ತೂರ್‌ ಇದ್ದಾರೆ ಅಂತ ನೋಡಲು ನಾನು ಹೋಗಲ್ಲ. ರಾಜ್ಯದ ಜನರು ವೋಟ್ ಹಾಕಿ ಉಳಿಸಿಕೊಳ್ಳಲಿ. ಇಷ್ಟು ದಿನ ಯಾರೂ ಏನೂ ಹೇಳಿಲ್ಲ ಅದಿಕ್ಕೆ ಗೊತ್ತಾಗಿಲ್ಲ ಇನ್ನು ಮುಂದೆ ಗೊತ್ತಾಗುತ್ತದೆ' ಎಂದು ಕನ್ನಡ ಖಾಸಗಿ ಟಿವಿಯಲ್ಲಿ ವರ್ತೂರ್ ಮಾವ ಸೋಮನಾಥ್ ಮಾತನಾಡಿದ್ದಾರೆ.

ಅಪಾರ್ಟ್ಮೆಂಟ್ ಇದೆ ಕೋಟಿ ದುಡ್ಡಿದೆ ಅಂತ ಗುರುತಿಸಿಕೊಂಡಿಲ್ಲ; ವರ್ತೂರು ಸಂತೋಷ್ ಆದಾಯ ಎಷ್ಟು?

'ವರ್ತೂರ್ ಅವರ ತಾಯಿ ನೇರವಾಗಿ ಹೇಳಿದರು ದೊಡ್ಡ ಮಾವನಿಗೆ ಹೇಳಿ ಒಂದೆರಡು ದಿನ ಮಗಳನ್ನು ಕರೆದುಕೊಂಡು ಹೋಗಿ ಅಂದ್ರು. ಅವರ ಮಾತಿನ ಪ್ರಕಾರ ಕರೆದುಕೊಂಡು ಹೋದ್ವೆ ನೋಡಿದರೆ ಎರಡು ವರ್ಷ ಆಯ್ತು ಈ ಕಡೆ ಮುಖ ಹಾಕಿಲ್ಲ. ನನ್ನ ಮಗಳು ಗರ್ಭಿಣಿ ಅಂತಾನೂ ಕೇರ್ ಮಾಡಿಲ್ಲ ಆಕೆಯನ್ನು ಕ್ಲೌಡ್‌ ನೈನ್ ಆಸ್ಪತ್ರೆಯಲ್ಲಿ ಸೇರಿಸಿದಾಗಲೂ ಬರಲಿಲ್ಲ. ಹೆಣ್ಣು ಮಗು ಹುಟ್ಟಿತ್ತು ಅಂತ ಗೊತ್ತಾದ ಮೇಲೂ ನೋಡಲು ಬರಲಿಲ್ಲ. ಆಗ ಎಲ್ಲರಿಗೂ ನನಗೆ ಮಗು ಹುಟ್ಟಿಲ್ಲ ಅಂತ ಹೇಳಿಕೊಂಡು ಬಂದರು. ಮದುವೆ ಆದ ಮೂರು ದಿನಕ್ಕೆ ಡೈವರ್ಸ್‌ ತೆಗೆದುಕೊಳ್ಳಿ ಎಂದು ಸಂತೋಷ್ ತಾಯಿ ಹೇಳಿಬಿಟ್ಟರು' ಎಂದು ಸೋಮನಾಥ್ ಹೇಳಿದ್ದಾರೆ.

ವರ್ತೂರ್ ಸಂತೋಷ್‌ಗೆ ಮದ್ವೆ ಅಗಿದ್ಯಾ?; ಫೋಟೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಶಾಕ್!

'ಮದುವೆ ವಿಡಿಯೋದಲ್ಲಿ ಗಮನಿಸಿ ನೋಡಿದರೆ ಗೊತ್ತಾಗುತ್ತದೆ.....ಸ್ಟೇಜ್‌ ಮೇಲೆ ಹುಡುಗಿ ಪಕ್ಕ ನಿಂತುಕೊಂಡು ನಿದ್ರೆ ಮಾಡುವ ರೀತಿ ಬಿಕ್ಕಳಿಕೆ ಆಕಳಿಸುವುದು ಮಾಡುತ್ತಾನೆ. ಬಿಗ್ ಬಾಸ್ ಮನೆಯಲ್ಲಿ ವರ್ತೂರ್ ಮಾತನಾಡುತ್ತಿರುವುದು ಎಲ್ಲಾ ಸುಳ್ಳು ಅವರ ಬಾಯಲ್ಲಿ ಅದೆಷ್ಟು ಕೋಟಿ ಸುಳ್ಳು ಇದೆ ಗೊತ್ತಿಲ್ಲ. ಹುಟ್ಟಿದಾಗಿನಿಂದಲೂ ಸುಳ್ಳು. ಅವರ ದೊಡ್ಡಪ್ಪ ಅವರನ್ನೇ ಬೈಯುವುದು...ರೋಡ್‌ನಲ್ಲಿ ಯಾರೇ ಸಿಕ್ಕಿದ್ದರು ಬರೋ ಮನೆ ಹತ್ರ ನೋಡಿಕೊಳ್ಳುತ್ತೀನಿ ಅನ್ನುತ್ತಿದ್ದ. ಮದುವೆ ದಿನನೂ ಡ್ರಗ್ಸ್‌ ಮಾಡ್ಕೊಂಡು ಬಂದಿದ್ದ ವರ್ತೂರ್.  ಮಗು ಹುಟ್ಟಿದ ಮೇಲೆ ಅವರ ಕುಟುಂಬದಿಂದ ಯಾರೂ ನಮ್ಮ ಮನೆ ಕಡೆ ಬಂದಿಲ್ಲ. ಮನಸ್ಥಾಪ ಬಂದಾಗ ಎರಡು ಕುಟುಂಬದವರು ಮಾತನಾಡಿಕೊಂಡು ಸರಿ ಮಾಡಬಹುದು ಪೊಲೀಸರಿಗೆ ದೂರು ಕೊಡುವುದು ಬೇಡ ಅಂದ್ರು...ಈಗ ಆ ಮಾತು ನಡೆಯುವುದಿಲ್ಲ. ಕಾನೂನು ಮೊರೆ ಹೋಗುತ್ತೀವಿ' ಎಂದಿದ್ದಾರೆ ಸೋಮನಾಥ್. 

Latest Videos
Follow Us:
Download App:
  • android
  • ios