"ವಧು" ಧಾರಾವಾಹಿ ನಾಯಕ-ನಾಯಕಿ ದುರ್ಗಾಶ್ರೀ ಮತ್ತು ಅಭಿಷೇಕ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡು, ಅಭಿಮಾನಿಗಳಿಗೆ ಕಥೆ ಬರೆಯಲು ಅವಕಾಶ ನೀಡಿದ್ದಾರೆ. ಫೋಟೋಗಳಲ್ಲಿ ಸಾರ್ಥಕ್ ಮತ್ತು ವಧುವಿನ ಭಾವನಾತ್ಮಕ ಕ್ಷಣಗಳಿವೆ. ಉತ್ತಮ ಕಥೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.
ಕಲರ್ಸ್ ಕನ್ನಡ (Colors Kannada ) ದಲ್ಲಿ ಪ್ರಸಾರವಾಗ್ತಿರುವ ವಧು ಸೀರಿಯಲ್ (Vadhu Serial), ಅಭಿಮಾನಿಗಳಿಗೆ ಹತ್ತಿರವಾಗ್ತಿದೆ. ಡಿವೋರ್ಸ್ ಲಾಯರ್ (Divorce Lawyer) ವಧು, ಬ್ಯುಸಿನೆಸ್ ಮೆನ್ ಸಾರ್ಥಕ್ ಹಾಗೂ ಅವನ ಹೆಂಡ್ತಿ ಪ್ರಿಯಾಂಕ ಮಧ್ಯೆ ನಡೆಯುವ ಕಥೆಗೆ ಒಂದಿಷ್ಟು ಹೊಸ ಟ್ವಿಸ್ಟ್ ಸಿಕ್ಕಿದೆ. ಈಗ ವೀಕ್ಷಕರಿಗೆ, ಸೀರಿಯಲ್ ಕಲಾವಿದರು ಒಂದೊಳ್ಳೆ ಅವಕಾಶ ನೀಡ್ತಿದ್ದಾರೆ. ನಿಮ್ಗೆ ಕಥೆ ಬರೆಯುವ ಅವಕಾಶ ಸಿಕ್ಕಿದೆ. ವಧು ಪಾತ್ರಕ್ಕೆ ಜೀವ ತುಂಬಿರುವ ದುರ್ಗಾಶ್ರೀ (Durgashree) ಹಾಗೂ ಸಾರ್ಥಕ್ ಅಲಿಯಾಸ್ ಅಭಿಷೇಕ್ (Abhishek) ತಮ್ಮ ಇನ್ಸ್ಟಾ ಖಾತೆಯಲ್ಲಿ ಒಂದಿಷ್ಟು ಫೋಟೋ ಹಂಚಿಕೊಂಡಿದ್ದಾರೆ. ಆ ಫೋಟೋ ನೋಡಿ ನೀವು ಅದಕ್ಕೆ ಸೂಕ್ತ ಎನ್ನಿಸುವ ಕಥೆ ಬರೆಯಬೇಕು. ಕಥೆ ಚೆನ್ನಾಗಿದ್ರೆ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡೋದಾಗಿ ಕಲಾವಿದರು ಪೋಸ್ಟ್ ಹಾಕಿದ್ದಾರೆ.
ದುರ್ಗಶ್ರೀ ನಮ್ಮ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿರುವ ಫೋಟೋದಲ್ಲಿ ಸಾರ್ಥಕ್ ಹಾಗೂ ವಧು ಮೆಟ್ಟಿಲ ಮೇಲೆ ಕುಳಿತುಕೊಂಡಿದ್ದಾರೆ. ಮೊದಲ ಫೋಟೋದಲ್ಲಿ ವಧು, ಸಾರ್ಥಕ್ ಕಿವಿಯಲ್ಲಿ ಏನೋ ಹೇಳ್ತಿದ್ದಾರೆ. ಎರಡನೇ ಫೋಟೋದಲ್ಲಿ ಸಾರ್ಥಕ್ ಹೌದಾ ಎನ್ನುವಂತ ರಿಯಾಕ್ಷನ್ ನೀಡಿದ್ದಾರೆ. ಇನ್ನು ಮೂರನೇ ಫೋಟೋದಲ್ಲಿ ವಧು ಮುಖ ಮುಚ್ಚಿಕೊಂಡಿದ್ರೆ, ಸಾರ್ಥಕ್ ಮಧು ಗೆ ಏನೋ ಹೇಳ್ತಿದ್ದಾರೆ. ನಾಲ್ಕನೇ ಫೋಟೋದಲ್ಲಿ ವಧುವನ್ನು ಸಾರ್ಥಕ್ ತಳ್ತಾ ಇದ್ದು, ವಧು ಮುಖವನ್ನು ಸೊಟ್ಟಗೆ ಮಾಡ್ಕೊಂಡಿದ್ದಾರೆ. ನಂತ್ರದ ಎರಡು ಫೋಟೋದಲ್ಲಿ ಸಾರ್ಥಕ್ ಆಲೋಚನೆ ಮಾಡ್ತಿರೋದನ್ನು ನೀವು ಕಾಣ್ಬಹುದು. ಈ ಫೋಟೋಕ್ಕೆ ಫ್ಯಾನ್ಸ್ ಕಥೆ ಬರೆಯಬೇಕು. ಕೆಲ ಬಳಕೆದಾರರು ತಮ್ಮದೆ ಸ್ಟೈಲ್ ನಲ್ಲಿ ಕಥೆ ಬರೆಯುವ ಪ್ರಯತ್ನ ಮಾಡಿದ್ದಾರೆ. ಮತ್ತೆ ಅನೇಕರು ಹಾರ್ಟ್ ಎಮೋಜಿ ಒತ್ತಿದ್ದಾರೆ. ಇಬ್ಬರದ್ದು ಸೂಪರ್ ಜೋಡಿ ಅಂತ ಕಮೆಂಟ್ ಮಾಡಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಈ ಸೀರಿಯಲನ್ನು ಪರಮೇಶ್ವರ್ ಗುಂಡ್ಕಲ್ ನಿರ್ದೇಶ ಮಾಡಿದ್ದಾರೆ. ದಿಲೀಪ್ ರಾಜ್ ದಂಪತಿ ನಿರ್ಮಾಣ ಮಾಡಿದ್ದಾರೆ. ಮಗಳ ಮದುವೆ ಕನಸು ಹೊತ್ತಿರುವ ಅಪ್ಪ, ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡ್ಬೇಕು ಎನ್ನುವ ಕಾರಣಕ್ಕೆ ಮಗಳಿಗೆ ವಧು ಅಂತ ಹೆಸರಿಟ್ಟಿದ್ದಾನೆ. ಆದ್ರೆ ವಧುಗೆ ಮದುವೆ ಆಗ್ತಿಲ್ಲ. ಸಾರ್ಥಕ್ ಹಾಗೂ ಪ್ರಿಯಾಂಕಾ ಡಿವೋರ್ಸ್ ಕೇಸ್ ಪಡೆದಿದ್ದ ವಧುಗೆ, ಪ್ರಿಯಾಂಕಾಳಿಂದ ನಾನಾ ಸಮಸ್ಯೆ ಎದುರಾಗ್ತಿದೆ. ತನ್ನಿಂದ ವಧು ಕಷ್ಟಪಡೋದು ಬೇಡ ಎಂಬ ಕಾರಣಕ್ಕೆ ಸಾರ್ಥಕ್, ವಧುವನ್ನು ತನ್ನ ಕೇಸ್ ನಿಂದಲೇ ತೆಗೆದಿದ್ದಾನೆ. ಇದ್ರಿಂದ ನೊಂದ ವಧು, ತನ್ನ ಕನಸಿದ ಕೆಲಸ ವಕೀಲ ವೃತ್ತಿಯನ್ನೇ ತೊರೆಯುವ ನಿರ್ಧಾರಕ್ಕೆ ಬಂದಿದ್ದಾಳೆ. ಆದ್ರೆ ಮನೆಯಲ್ಲಿನ ಬಡತನ, ಅಪ್ಪನ ಕಷ್ಟ, ವಧುವಿನ ಮನಸ್ಸು ಬದಲಿಸಿದೆ. ಲಾಯರ್ ಅಲ್ದೆ ಹೋದ್ರೂ ಬೇರೆ ಕೆಲ್ಸ ಮಾಡ್ಲೇಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾಳೆ.
ವಧು ಪಾತ್ರಕ್ಕೆ ದುರ್ಗಾಶ್ರೀ ಹೇಳಿ ಮಾಡಿಸಿದಂತಿದೆ. ಕನ್ನಡದ ನೇತ್ರಾವತಿ ಸೀರಿಯಲ್ ನಲ್ಲಿ ನಟಿಸಿದ್ದ ದುರ್ಗಾಶ್ರೀ ಈಗ ವಧು ಪಾತ್ರದಲ್ಲಿ ಅದ್ಭುತವಾಗಿ ನಟಿಸ್ತಿದ್ದಾರೆ. ಅವರ ಸೌಮ್ಯ ನಡೆ, ನುಡಿ ಪ್ರೇಕ್ಷಕರನ್ನು ಸೆಳೆದಿದೆ. ಇನ್ನು ಸಾರ್ಥಕ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಭಿಷೇಕ್ ಪೂರ್ತಿ ಹೆಸರು ಅಭಿಷೇಕ್ ಶ್ರೀಕಾಂತ್. ಅವರು ಲಕ್ಷಣ ಸೀರಿಯಲ್ ನಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದರು. ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗ್ತಿದ್ದ ಯಜಮಾನಿ ಸೀರಿಯಲ್ ನಲ್ಲಿ ಮೊದಲ ಬಾರಿ ಕಾಣಿಸಿಕೊಂಡಿದ್ದ ಅಭಿಷೇಕ್ ಶ್ರೀಕಾಂತ್, ಬೆರಳೆಣಿಕೆಯಷ್ಟು ಧಾರಾವಾಹಿಯಲ್ಲಿ ಮಾತ್ರ ನಟಿಸಿದ್ದಾರೆ. ಅಭಿಷೇಕ್, ಕೋಟಿ, ತಲ್ವಾರ್ ಪೇಟೆ, ಕೆಟಿಎಂ ಸಿನಿಮಾಗಳಲ್ಲಿ ನಟಿಸಿದ್ದು, ತಮ್ಮ ನಟನೆ ಮೂಲಕವೇ ವೀಕ್ಷಕರಿಗೆ ಹತ್ತಿರವಾಗಿದ್ದಾರೆ.


