ಸ್ಟೇಷನ್‌ ಇಲ್ಲದೆಯೂ ರೇಡಿಯೊದ ಕೆಲಸ ಮಾಡುತ್ತಿದ್ದ ತುಕಾಲಿ ಅವರಿಗೆ ಮೈಕ್ ಸಿಕ್ಕರೆ ಕೇಳಬೇಕೆ?’ಹಾಯ್ ಅಲೋ ನಮಸ್ಕಾರ’ ಎಂದು ಶುರುಮಾಡಿ ಅವರು ಮೊದಲು ಮಾತಾಡಿಸಿದ್ದು ವರ್ತೂರು ಸಂತೋಷ್. 

ನಿನ್ನೆಯ ಎಪಿಸೋಡಿನಲ್ಲಿ ಕೋಪ, ಆತ್ಮವಿಮರ್ಶೆ ನಂತರ ತನ್ನ ಸಹಸ್ಪರ್ಧಿಗಳ ಜೊತೆ ಮನಬಿಚ್ಚಿ ಮಾತಾಡಿ ಹಗುರಾಗಿರುವ ಬಿಗ್‌ಬಾಸ್ ಮನೆಯ ಸದಸ್ಯರಿಗೆ ಇಂದೊಂದು ರಂಜನೀಯ ಟಾಸ್ಕ್ ಸಿಕ್ಕಿದೆ. ಅದೇನೆಂದು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸೆರೆಯಾಗಿದೆ. ಬಿಗ್‌ಬಾಸ್ ಮನೆಯೊಳಗೆ ರೆಡಿಯೊ ಸ್ಟೇಷನ್ ಸ್ಥಾಪಿತವಾಗಿದೆ. 

ಸ್ಟೇಷನ್‌ ಇಲ್ಲದೆಯೂ ರೇಡಿಯೊದ ಕೆಲಸ ಮಾಡುತ್ತಿದ್ದ ತುಕಾಲಿ ಅವರಿಗೆ ಮೈಕ್ ಸಿಕ್ಕರೆ ಕೇಳಬೇಕೆ?’ಹಾಯ್ ಅಲೋ ನಮಸ್ಕಾರ’ ಎಂದು ಶುರುಮಾಡಿ ಅವರು ಮೊದಲು ಮಾತಾಡಿಸಿದ್ದು ವರ್ತೂರು ಸಂತೋಷ್ ಅವರನ್ನೇ. ಇದಕ್ಕೆ ಸಂಗೀತಾ ಹುಸಿಮುನಿಸಿನಿಂದ, ‘ಬರೀ ಅವ್ರನ್ನೇ ಮಾತಾಡಿಸ್ಬೇಕಾ?’ ಎಂದು ಗಾಳಿಯಲ್ಲಿ ಗುದ್ದಿದ್ದಾರೆ.

ಅಷ್ಟೇ ಅಲ್ಲ, ಕಾರ್ತಿಕ್ ಅವರಿಗೆ, ‘ಈ ಮನೆಯಲ್ಲಿ ತಲೆನೋವು ಎಂಬ ಪದಕವನ್ನು ಯಾರಿಗೆ ಕೊಡಲು ಬಯಸುತ್ತೀರಾ?’ ಎಂದು ಕೇಳಿದ್ದಾರೆ. ಅದಕ್ಕೆ ಕಾರ್ತಿಕ್, ‘ಸಂಗೀತಾ’ ಎಂದು ಹೇಳಿದ್ದಾರೆ. ಅದಕ್ಕೆ ಸಂಗೀತಾ ಮುಖದಲ್ಲಿ ಅಸಮಧಾನದ ಗೆರೆಗಳು ಕಾಣಿಸಿಕೊಂಡಿವೆ. ಕಾರ್ತಿಕ್ ಅವರ ಉತ್ತರ ಕೇಳಿ ತುಕಾಲಿ ಅವರು, ‘ಈ ಸಂದರ್ಭದಲ್ಲಿ ನನಗೊಂದು ಹಾಡು ನೆನಪಾಗ್ತಿದೆ’ ಎಂದು ಹೇಳಿ ‘ಏನೋ ಮಾಡಲು ಹೋಗಿ… ಏನು ಮಾಡಿದೆ ನೀನು…’ ಎಂದು ಹಾಡಿ ಮತ್ತೆ ಟಾಂಗ್ ಕೊಟ್ಟಿದ್ದಾರೆ. 

ಕಾರ್ತಿಕ್ ಮಾತು ಕೇಳಿ ಸಂಗೀತಾ ನಿಜಕ್ಕೂ ಮುನಿಸಿಕೊಂಡರಾ? ರೆಡಿಯೊ ಜಾಕಿ ಆಗಿ ಕೂತಾಗಿ ಇದಕ್ಕೆ ಉತ್ತರ ಕೊಡ್ತಾರಾ? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಲು ಜಿಯೊಸಿನಿಮಾ ನೇರಪ್ರಸಾರ ನೋಡುತ್ತಿರಿ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು ಮತ್ತು ಎಪಿಸೋಡ್‌ಗಳನ್ನು JioCinemaದಲ್ಲಿ ಉಚಿತವಾಗಿ ನೋಡಿ.

ಕ್ರೈಸ್ತ ಕೌನ್ಸಿಲರ್ ಆಗಿರುವ 'ಶ್ರೀರಾಮಚಂದ್ರ' ನಟಿ ಮೋಹಿನಿ; ಬದಲಾಗಿದೆ ಬದುಕು, ವಿಭಿನ್ನ ನಿಲುವು!

ಅಂದಹಾಗೆ, ಬಿಗ್ ಬಾಸ್‌ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ ವೀಕ್ಷಿಸಬಹುದು. 

ಯಾರ ಕೈವಾಡಕ್ಕೆ ಸಿಲುಕಿದ್ರು ಪರಮ ಸುಂದರಿ; ಸ್ಟಾರ್ ನಟಿಗೆ ಬೇಕಿತ್ತಾ ಅಂಥ ಚಟ!?