Asianet Suvarna News Asianet Suvarna News

ಕ್ರೈಸ್ತ ಕೌನ್ಸಿಲರ್ ಆಗಿರುವ 'ಶ್ರೀರಾಮಚಂದ್ರ' ನಟಿ ಮೋಹಿನಿ; ಬದಲಾಗಿದೆ ಬದುಕು, ವಿಭಿನ್ನ ನಿಲುವು!

ನಟನೆಯಲ್ಲಿ ಅವಕಾಶಗಳು ಕಮ್ಮಿ ಆಗುತ್ತಿದ್ದಂತೆ ಸ್ವಲ್ಪಸ್ವಲ್ಪವಾಗಿ ಎನ್ನುವಂತೆ ಆಧ್ಯಾತ್ಮದತ್ತ ಒಲವು ತೋರಿಸತೊಡಗಿದ ಮೋಹಿನಿ, ಹಿಂದೂ ಧಾರ್ಮಿಕ ಆಚರಣೆ ಬದಲಾಗಿ ಕ್ರೈಸ್ತ ಧರ್ಮದ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ. 

Kannada movie shriramachandra fame actress Mohini converts as Christian Counsellor srb
Author
First Published Jan 25, 2024, 1:23 PM IST

ನಟಿ ಮೋಹಿನಿ ಹೆಸರು ಕೇಳದ ಸ್ಯಾಂಡಲ್‌ವುಡ್ ಪ್ರೇಕ್ಷಕರು ಕಡಿಮೆ ಎಂದೇ ಹೇಳಬಹುದು. 'ಶ್ರೀರಾಮಚಂದ್ರ' ಚಿತ್ರದ ನಾಯಕಿ ಎಂದರೆ ಸಾಕು, ನಟಿ ಮೋಹಿನಿಯ (Mohini) ಮುಖ ಕಣ್ಮುಂದೆ ನಲಿಯುತ್ತದೆ. ಕನಸಿನ ರಾಮಾಲಾಶ್ರೀ ಕನ್ನಡ ಚಿತ್ರರಂಗವನ್ನು ಅಕ್ಷರಶಃ ಆಳುತ್ತಿದ್ದ ಕಾಲದಲ್ಲಿ ನಟಿ ಮೋಹಿನಿ ಕನ್ನಡಕ್ಕೆ ಎಂಟ್ರಿ ಕೊಟ್ಟರು. ಮಾಲಾಶ್ರೀ ಹಾಗೂ ಶಿವರಾಜ್‌ಕುಮಾರ್ (Malashri and Shivarajkumar) ಜೋಡಿಯ ಗಡಿಬಿಡಿ ಅಳಿಯ (Gadibidi Aliya) ಚಿತ್ರದಲ್ಲಿ ಮೋಹಿನಿ ಕೂಡ ಮುಖ್ಯ ಪಾತ್ರದಲ್ಲೇ ಕಾಣಿಸಿಕೊಂಡಿದ್ದರು. 

ನಿಶ್ಯಬ್ಧ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಮೋಹಿನಿ ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಆದರೆ, ಅವರಿಗೆ ಅವಕಾಶ ಕಡಿಮೆಯಾಗುತ್ತ ಬಂದಂತೆ ಟಿವಿ ಶೋಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದ ನಟಿ ಮೋಹಿನಿ, ಕಾಲಕಳೆದಂತೆ ಬಣ್ಣದ ಬದುಕಿನಿಂದ ದೂರವಾಗಿಬಿಟ್ಟರು. ಈಗಂತೂ ನಟಿ ಮೋಹಿನಿ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದು ಹಲವರಿಗೆ ಗೊತ್ತೇ ಇಲ್ಲ. ಕಾರಣ, ಮೋಹಿನಿ ಈಗ ನಟನೆಯಲ್ಲಿ ಸಕ್ರಿಯರಾಗಿಲ್ಲ, ಸೋಷಿಯಲ್ ಮೀಡಿಯಾಗಳಿಂದಲೂ ಬಹುದೂರವೇ ಇದ್ದಾರೆ. 

ಸಿಲ್ಕ್ ಸ್ಮಿತಾನ್ನ ಹತ್ತು ಹುಡುಗ್ರು ಎತ್ತಾಕ್ಕೊಂಡು ಹೋಗಿದ್ರಂತೆ; ಸಾಯೋ ಮೊದ್ಲು ಕನ್ನಡದ ಖ್ಯಾತ ನಟರಿಗೆ ಕಾಲ್ ಮಾಡಿದ್ರಂತೆ!?

ಹಾಗಾದರೆ ನಟಿ ಮೋಹಿನ ಈಗೆಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದಕ್ಕೆ ಉತ್ತರ ಇಲ್ಲಿದೆ. ನಟನೆಯಲ್ಲಿ ಅವಕಾಶಗಳು ಕಮ್ಮಿ ಆಗುತ್ತಿದ್ದಂತೆ ಸ್ವಲ್ಪಸ್ವಲ್ಪವಾಗಿ ಎನ್ನುವಂತೆ ಆಧ್ಯಾತ್ಮದತ್ತ ಒಲವು ತೋರಿಸತೊಡಗಿದ ಮೋಹಿನಿ, ಹಿಂದೂ ಧಾರ್ಮಿಕ ಆಚರಣೆ ಬದಲಾಗಿ ಕ್ರೈಸ್ತ ಧರ್ಮದ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ. ಬಳಿಕ ಮೋಹಿನಿ ಕ್ರಿಶ್ಚಿಯನ್ ವ್ಯಕ್ತಿಯನ್ನು ಮದುವೆಯಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದಾರೆ ಎನ್ನಲಾಗುತ್ತಿದೆ. ಹಿಂದೂ ಬ್ರಾಹ್ಮಣ ಸಮುದಾಯದ ಹುಡುಗಿಯೊಬ್ಬಳು ಮತಾಂತರಗೊಂಡ ಬಳಿಕ ಆಕೆಯ ಬಾಳಲ್ಲಿ ಬಹಳಷ್ಟು ಬದಲಾವಣೆ ಆಗಿವೆ ಎನ್ನಲಾಗುತ್ತಿದೆ.

ಮಾಜಿ ಭುವನ ಸುಂದರಿಗೆ ಭಾರೀ ಹಾರ್ಟ್ ಅಟ್ಯಾಕ್; ಹೃದಯದಿಂದ ಬಂದವು ಗೋಲ್ಡನ್ ಟಿಪ್ಸ್!

ನಟಿ ಮೋಹಿನಿ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ. ಇಬ್ಬರು ಮುದ್ದಾದ ಮಕ್ಕಳೊಂದಿಗೆ ಫ್ಯಾಮಿಲಿ ಲೈಫ್ ನಡೆಸುತ್ತಿದ್ದರೂ ಮೋಹಿನಿಗೆ ಇತ್ತೀಚೆಗೆ ಆಧ್ಯಾತ್ಮದತ್ತ ಇನ್ನೂ ಹೆಚ್ಚಿನ ಒಲವು ಬಂದಿದೆ ಎನ್ನಲಾಗುತ್ತಿದೆ. ಕ್ರೈಸ್ತ ಧರ್ಮದ ಕೌನ್ಸಿಲರ್ (Christian Counsellor) ಆಗಿ ಈಗ ಮಾಜಿ ನಟಿ ಮೋಹಿನಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ, ಶ್ರೀರಾಮಚಂದ್ರ ಸಿನಿಮಾ ನಟಿ ಮೋಹಿನಿ ಈಗ ಕ್ರೈಸ್ತ ಕೌನ್ಸಿಲರ್ ಆಗಿ ಬದಲಾಗಿದ್ದು, ಬಣ್ಣದ ಲೋಕದೊಂದಿಗೆ ಸಂಪೂರ್ಣ ನಂಟು ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. 

ಹೊಸ ಹೆಜ್ಜೆ ಹಾಕಲಿರುವ 'ಪ್ರಾಣಸಖಿ' ಭಾವನಾ; ಸಾಥ್ ಕೊಡ್ತಾರಾ ಸಿದ್ದರಾಮಯ್ಯ-ಡಿಕೆಶಿ, ನಟ ದರ್ಶನ್‌!

Follow Us:
Download App:
  • android
  • ios