ಅತಿ ಹೆಚ್ಚು ಸುದ್ದಿಯಾದ ವೀಕೆಂಡ್ ವಿತ್ ರಮೇಶ್ ರಮ್ಯಾ ಎಪಿಸೋಡ್. ಟಿಆರ್‌ಪಿ ನಿರೀಕ್ಷೆ ಸರಿಯಾಗಿತ್ತಾ? ರಮ್ಯಾ ಏನಂತಾರೆ?

ಜೀ ಕನ್ನಡ ವಾಹಿನಿಯ ಜನಪ್ರಿಯ ವೀಕೆಂಡ್ ವಿತ್ ರಮೇಶ್ ಸೀಸನ್ 5 ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸೀಸನ್ 1 ಆರಂಭಿಸಿದಾಗ ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಎಂಟ್ರಿ ಕೊಟ್ಟರು..ಸೀಸನ್ 5ರಲ್ಲಿ ಮೋಹಕ ತಾರೆ ರಮ್ಯಾ ಎಂಟ್ರಿ ಕೊಟ್ಟಿದ್ದು ನೋಡಿ ಕನ್ನಡ ಸಿನಿ ರಸಿಕರು ಫುಲ್ ಥ್ರಿಲ್ ಆದರು. ಎಪಿಸೋಡ್ ಪ್ರಸಾರ ಆದ್ಮೇಲೆ ಟ್ರೋಲ್ ಆದ ರೀತಿ ತುಂಬಾ ವಿಚಿತ್ರ. 

ಇಂಗ್ಲಿಷ್‌ ಶೋ ರೀತಿ ಇತ್ತು, ಕನ್ನಡದ ನಟಿ ಕನ್ನಡ ಮಾತನಾಡಿಲ್ಲ, ಕನ್ನಡತಿ ಅಲ್ಲ ಹಾಗೆ ಹೀಗೆ ಅನ್ನೋ ಒಂದಿಷ್ಟು ಕಾಮೆಂಟ್ಸ್‌ ಬಂತು. ಅದಕ್ಕೆ ರಮ್ಯಾ ಮತ್ತು ರಮೇಶ್ ಅರವಿಂದ್ ಕೂಡ ರಿಯಾಕ್ಟ್ ಮಾಡಿದ್ದರು. ಈಗ ಮೊದಲ ಎಪಿಸೋಡ್‌ನ ಟಿಆರ್‌ಪಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಕನ್ನಡದ ಖಾಸಗಿ ವೆಬ್‌ ಸೈಟ್‌ ವರದಿ ಮಾಡಿರುವ ಪ್ರಕಾರ ರಮ್ಯಾ ಎಪಿಸೋಡ್‌ಗೆ 5.8 ಟಿಆರ್‌ಪಿ ಸಿಕ್ಕಿದೆ. ಇದು ಹೆಚ್ಚೋ ಕಡಿಮೆನೋ ಗೊತ್ತಿಲ್ಲ ಆದರೆ ಇಷ್ಟಂತ್ತೂ ಬಂದಿದೆ. 

Weekend With Ramesh: ನನ್ನ ಜೀವನದಲ್ಲಿ ರಾಹುಲ್‌ ಗಾಂಧಿ ಮೂರನೇ ಪ್ರಭಾವಶಾಲಿ ವ್ಯಕ್ತಿ: ನಟಿ ರಮ್ಯಾ

ರಮ್ಯಾ ರಿಯಾಕ್ಷನ್: 

ಯಾಕೆ ಕನ್ನಡ ಮಾತನಾಡಿಲ್ಲ ಎಂದು ಮಾಧ್ಯಮದವರು ಪ್ರಶ್ನೆ ಮಾಡಿದಾಗ ನಾನು ಕನ್ನಡ ಮತ್ತು ಇಂಗ್ಲಿಷ್‌ ಮಾತನಾಡಿರುವೆ. ವೇದಿಕೆ ಬಳಿ ಮತ್ತೊಂದು ರಾಜ್ಯ ಮತ್ತೊಂದು ದೇಶದಿಂದ ಬಂದವರು ಇದ್ದರು ಅವರಿಗಾಗಿ ನಾನು ಇಂಗ್ಲಿಷ್ ಮಾತನಾಡಿದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ ಆನಂತರ ಟ್ರೋಲ್ ಅಗುತ್ತಿರುವ ಫೋಟೋ ಒಂದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. 'ಕಾರ್ಯಕ್ರಮದ ಅತಿಥಿಗಳು ಕನ್ನಡೇತರರು. ನಾನು ಎಲ್ಲರನ್ನು ಒಳಗೊಳ್ಳಲು ಪ್ರಯತ್ನಿಸುತ್ತಿದ್ದೆ ಅಷ್ಟೆ. ಮುಂದಿನ ಕಾರ್ಯಕ್ರಮದಲ್ಲಿ ಎಲ್ಲಾ ಮುದ್ದು ಅಜ್ಜಿಗಳಿಗೆ ಸಂಪೂರ್ಣ ಕನ್ನಡ ಮಾತನಾಡುತ್ತೇನೆ' ಎಂದು ಹೇಳಿದ್ದಾರೆ. ನಾವೆಲ್ಲರೂ ಪ್ರೀತಿ ಮತ್ತು ದಯೆಯ ಭಾಷೆಯನ್ನು ಮಾತನಾಡೋಣ ಎಂದು ಹೇಳಿದ್ದಾರೆ. ರಮ್ಯಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ರಮ್ಯಾ ಕಾಮೆಂಟ್‌ಗೂ ಪರ ವಿರೋಧ ಚರ್ಚೆ ನಡೆಯುತ್ತಿದೆ. 

ತಿದ್ದುಕೊಂಡಿಲ್ಲ ಅಂದ್ರೆ ನನ್ನಷ್ಟು ದಡ್ಡ ಇನ್ನೊಬ್ಬ ಇಲ್ಲ; ರಮ್ಯಾ ಇಂಗ್ಲಿಷ್‌ ಎಪಿಸೋಡ್‌ಗೆ ರಮೇಶ್ ರಿಯಾಕ್ಷನ್ ವೈರಲ್

ರಮೇಶ್ ಅರವಿಂದ್ ರಿಯಾಕ್ಷನ್: 

'ಇಂಗ್ಲಿಷ್‌ನಲ್ಲಿ ಮಾತನಾಡಿರವುದಕ್ಕೆ ಟ್ರೋಲ್ ಆಗಿದ್ದಾರೆ. ಹೀಗಾಗಿ ಇಂಗ್ಲಿಷ್ ಮಾತ್ರವಲ್ಲ, ವೀಕೆಂಡ್ ವಿತ್ ರಮೇಶ್ ಮಾತ್ರವಲ್ಲ, ನನ್ನ ಸಿನಿಮಾಗಳ ಬಗ್ಗೆ ಅಥವಾ ನನ್ನ ವೈಯಕ್ತಿಕ ಬದುಕಿನ ಬಗ್ಗೆ ಏನೇ ಇರಬಹುದು....ಅದರಲ್ಲಿ ಸತ್ಯ ಇರಬಹುದು ಅನಿಸಿದ್ದರೆ ನನ್ನನ್ನು ನಾನು ತಿದ್ದುಕೊಂಡಿಲ್ಲ ಅಂದ್ರೆ ನನ್ನಷ್ಟು ದಡ್ಡ ಇನ್ನೊಬ್ಬ ಇಲ್ಲ. ಹಾಗಾಗಿ ಏನೇ ಸಲಹೆ ಬಂದರೂ ಅದನ್ನು ನಾನು ಪರಿಗಣಿಸಬೇಕು ಅದರಲ್ಲಿ ಇರುವ ಸತ್ಯವನ್ನು ಒಪ್ಪಿಕೊಳ್ಳಬೇಕು ತಿದ್ದುಕೊಳ್ಳಬೇಕು...ಅದೊಂದೇ ದಾರಿ ಮೇಲೆ ಬರುವುದಕ್ಕೆ. ಜನರು ಹೇಳಿರುವ ಅಂಶ ನಮಗೆ ಗೊತ್ತಾಗಿ ನಾನು ಮತ್ತು ತಂಡದವರು ಹುಷಾರ್ ಆಗಿ ಜವಾಬ್ದಾರಿಯಿಂದ ಇರ್ತೀವಿ ಅದರ ಬಗ್ಗೆ ಸಂಶಯವಿಲ್ಲ. ಇನ್ನು 20 ಎಪಿಸೋಡ್‌ಗಳು ಇರುವ ಕಾರಣ ತಿದ್ದಿಕೊಳ್ಳಲು ಅವಕಾಶಗಳಿದೆ...ಇನ್ನೊಂದು ಅವಕಾಶ ಮುಂದಿನ ಎಪಿಸೋಡ್‌ನಲ್ಲಿ ಸಿಕ್ಕಿದೆ. ನಿಮ್ಮ ಸಲಹೆಗಳು ಬರ್ತಾ ಇರಲಿ ಧನ್ಯವಾದಗಳು. ಶೋ ಬಗ್ಗೆ ಮಾತ್ರವಲ್ಲ ನನ್ನ ಬಗ್ಗೆ ಕೂಡ ಗಮನಿಸುತ್ತಾ ಇರಿ ತಿದ್ದುಕೊಳ್ಳಬೇಕು ಅಂದ್ರೆ ತಿಳಿಸಿ ಏಕೆಂದರೆ ನಿರಂತರ ತಿದ್ದುಪಡಿಕೆನೇ ಬೆಳವಣಿಗೆ ರಹಸ್ಯವಾಗಿರುತ್ತದೆ ಅದನ್ನು ನಾನು ಮಾಡಿಕೊಂಡು ಬಂದಿದ್ದೀನಿ. Life is about constant correction ನಾನು ಮಾಡಿಕೊಂಡು ಬರುವೆ' ಎಂದು ಖಾಸಗಿ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ರಮೇಶ್ ಮಾತನಾಡಿದ್ದಾರೆ.