ತಿದ್ದುಕೊಂಡಿಲ್ಲ ಅಂದ್ರೆ ನನ್ನಷ್ಟು ದಡ್ಡ ಇನ್ನೊಬ್ಬ ಇಲ್ಲ; ರಮ್ಯಾ ಇಂಗ್ಲಿಷ್‌ ಎಪಿಸೋಡ್‌ಗೆ ರಮೇಶ್ ರಿಯಾಕ್ಷನ್ ವೈರಲ್

ಸತ್ಯವನ್ನು ಒಪ್ಪಿಕೊಳ್ಳಬೇಕು, ಜನರು ಹೇಳುವುದನ್ನು ಪರಿಗಣಿಸಿ ಬದಲಾಗಬೇಕು ಎಂದ ನಟ ರಮೇಶ್ ಅರವಿಂದ್. ಕೊನೆಗೂ ರಮ್ಯಾ ಎಪಿಸೋಡ್‌ ಬಗ್ಗೆ ರಿಯಾಕ್ಷನ್..... 
 

Weekend with Ramesh reaction to Ramya English episode and Dr Bro entry vcs

ಕನ್ನಡ ಕಿರುತೆರೆ ಜನಪ್ರಿಯ ಶೋ ವೀಕೆಂಡ್ ವಿತ್ ರಮೇಶ್ ಸೀಸನ್ 5 ಆರಂಭವಾಗಿದೆ. ಮೊದಲ ಎಪಿಸೋಡ್‌ನಲ್ಲಿ ಸಾಧಕರ ಸ್ಥಾನಕ್ಕೆ ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾರನ್ನು ಕರೆಸಲಾಗಿತ್ತು. ಬಹುನಿರೀಕ್ಷಿತಾ ಎಪಿಸೋಡ್‌ ಇದಾಗಿತ್ತು ಆದರೆ ರಮ್ಯಾ ಇಂಗ್ಲಿಷ್ ಮಾತನಾಡಿದ್ದು ವೀಕ್ಷಕರಿಗೆ ಕೊಂಚ ಬೇಸರವಾಯ್ತು. ಅಲ್ಲದೆ ಡಾಕ್ಟರ್‌ ಬ್ರೋನ ಕರೆಸಬೇಕು ಎಂದ ಒತ್ತಾಯ ಹೆಚ್ಚಿದೆ. ಈ ವಿಚಾರದ ಬಗ್ಗೆ ನಿರೂಪಕ ಕಮ್ ನಟ ರಮೇಶ್ ಅರವಿಂದ್ ಮೊದಲ ಸಲ ರಿಯಾಕ್ಷನ್‌ ಕೊಟ್ಟಿದ್ದಾರೆ.

ಇಂಗ್ಲಿಷ್‌ ಎಪಿಸೋಡ್‌ ಎಂದು ಟ್ರೋಲ್?: 

'ಇಂಗ್ಲಿಷ್‌ನಲ್ಲಿ ಮಾತನಾಡಿರವುದಕ್ಕೆ ಟ್ರೋಲ್ ಆಗಿದ್ದಾರೆ. ಹೀಗಾಗಿ ಇಂಗ್ಲಿಷ್ ಮಾತ್ರವಲ್ಲ, ವೀಕೆಂಡ್ ವಿತ್ ರಮೇಶ್ ಮಾತ್ರವಲ್ಲ, ನನ್ನ ಸಿನಿಮಾಗಳ ಬಗ್ಗೆ ಅಥವಾ ನನ್ನ ವೈಯಕ್ತಿಕ ಬದುಕಿನ ಬಗ್ಗೆ ಏನೇ ಇರಬಹುದು....ಅದರಲ್ಲಿ ಸತ್ಯ ಇರಬಹುದು ಅನಿಸಿದ್ದರೆ ನನ್ನನ್ನು ನಾನು ತಿದ್ದುಕೊಂಡಿಲ್ಲ ಅಂದ್ರೆ ನನ್ನಷ್ಟು ದಡ್ಡ ಇನ್ನೊಬ್ಬ ಇಲ್ಲ. ಹಾಗಾಗಿ ಏನೇ ಸಲಹೆ ಬಂದರೂ ಅದನ್ನು ನಾನು ಪರಿಗಣಿಸಬೇಕು ಅದರಲ್ಲಿ ಇರುವ ಸತ್ಯವನ್ನು ಒಪ್ಪಿಕೊಳ್ಳಬೇಕು ತಿದ್ದುಕೊಳ್ಳಬೇಕು...ಅದೊಂದೇ ದಾರಿ ಮೇಲೆ ಬರುವುದಕ್ಕೆ. ಜನರು ಹೇಳಿರುವ ಅಂಶ ನಮಗೆ ಗೊತ್ತಾಗಿ ನಾನು ಮತ್ತು ತಂಡದವರು ಹುಷಾರ್ ಆಗಿ ಜವಾಬ್ದಾರಿಯಿಂದ ಇರ್ತೀವಿ ಅದರ ಬಗ್ಗೆ ಸಂಶಯವಿಲ್ಲ. ಇನ್ನು 20 ಎಪಿಸೋಡ್‌ಗಳು ಇರುವ ಕಾರಣ ತಿದ್ದಿಕೊಳ್ಳಲು ಅವಕಾಶಗಳಿದೆ...ಇನ್ನೊಂದು ಅವಕಾಶ ಮುಂದಿನ ಎಪಿಸೋಡ್‌ನಲ್ಲಿ ಸಿಕ್ಕಿದೆ. ನಿಮ್ಮ ಸಲಹೆಗಳು ಬರ್ತಾ ಇರಲಿ ಧನ್ಯವಾದಗಳು. ಶೋ ಬಗ್ಗೆ ಮಾತ್ರವಲ್ಲ ನನ್ನ ಬಗ್ಗೆ ಕೂಡ ಗಮನಿಸುತ್ತಾ ಇರಿ ತಿದ್ದುಕೊಳ್ಳಬೇಕು ಅಂದ್ರೆ ತಿಳಿಸಿ ಏಕೆಂದರೆ ನಿರಂತರ ತಿದ್ದುಪಡಿಕೆನೇ ಬೆಳವಣಿಗೆ ರಹಸ್ಯವಾಗಿರುತ್ತದೆ ಅದನ್ನು ನಾನು ಮಾಡಿಕೊಂಡು ಬಂದಿದ್ದೀನಿ. Life is about constant correction ನಾನು ಮಾಡಿಕೊಂಡು ಬರುವೆ' ಎಂದು ಖಾಸಗಿ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ರಮೇಶ್ ಮಾತನಾಡಿದ್ದಾರೆ.

ಅಪ್ಪು ನಿಧನರಾದಾಗ ರಮ್ಯಾ ಎಲ್ಲಿದ್ರು? ಪುನೀತ್ ಜೊತೆಗಿನ ನೆನೆಪು ಬಿಚ್ಚಿಟ್ಟು ಭಾವುಕರಾದ ಮೋಹಕತಾರೆ

ಡಾಕ್ಟರ್ ಬ್ರೋ ಬರ್ತಾರಾ?

'ಕಾರ್ಯಕ್ರಮಕ್ಕೆ ಯಾರು ಬರಬೇಕು ಅನ್ನೋ ವಿಚಾರದ ಬಗ್ಗೆ ನಾನು ಸಾಮಾನ್ಯವಾಗಿ ತಂಡದ ಜೊತೆ ಚರ್ಚೆ ಮಾಡುವುದಿಲ್ಲ. ನನ್ನ ಕೆಲಸ ನಿರೂಪಣೆ ಮಾಡುವುದು. ಕರ್ನಾಟಕದಲ್ಲಿ ಇರುವಂತ ಒಳ್ಳೆ ಸಾಧಕರು ಜನರು ಇಷ್ಟ ಪಡುವಂತವರನ್ನು ಆ ಚೇರ್‌ ಮೇಲೆ ಕೂರಿಸಬೇಕು ಎಂದು ವೈಯಕ್ತಿಕ ಆಸೆ ಇದೆ. ಯಾವುದೋ ಒಂದು ಕಾರಣಕ್ಕೆ ಯುವಕರು ನಿಮಗೆ ಇಷ್ಟ ಆಗಿದ್ದಾರೆ ಅಂದ್ರೆ ಅದನ್ನು ಗೌರವಿಸಬೇಕಾಗುತ್ತದೆ ...ಆ ಚೇರ್‌ನ ಉದ್ದೇಶವೇ ಅದು. ಯಾರು ಯಾರು ಸಾಧನೆ ಮಾಡಿದ್ದಾರೆ ಅವರ ಕಥೆಯನ್ನು ನಿಮಗೆ ತಿಳಿಸಬೇಕು ಎಂದು ಕಾರ್ಯಕ್ರಮವನ್ನು ಶುರು ಮಾಡಿರುವುದು. ಈಗಲೇ ಆಗುತ್ತೆ ಮುಂದಿನ ವಾರ ಇವ್ರು ಬರಬಹುದು ಎಂದು ನಾನು ಹೇಳುವುದಕ್ಕೆ ಆಗಲ್ಲ ಅದು ಚಾನೆಲ್ ನಿರ್ಧಾರ ಮಾಡುತ್ತಾರೆ. ಎಲ್ಲಾ ಸಾಧಕರು ಆ ಚೇರ್‌ ಮೇಲೆ ಕುಳಿತುಕೊಳ್ಳಬೇಕು ಅನ್ನೋದು ನನ್ನ ಆಸೆ' ಎಂದು ರಮೇಶ್ ಹೇಳಿದ್ದಾರೆ.

ಅಪ್ಪ ನಿಧನರಾದಾಗ ಜೀವನ ಕೊನೆಗೊಳಿಸಲು ನಿರ್ಧರಿಸಿದ್ದೆ; ಶಾಕಿಂಗ್ ವಿಚಾರ ಬಿಚ್ಚಿಟ್ಟ ರಮ್ಯಾ

Latest Videos
Follow Us:
Download App:
  • android
  • ios