'ಭಾಗ್ಯಲಕ್ಷ್ಮಿ' ಧಾರಾವಾಹಿಯ ಖಳನಾಯಕಿ ಕನ್ನಿಕಾ (ಸುಕೃತಾ ನಾಗ್) ತಮ್ಮ ಜೀವನದ ಕಹಿ ಘಟನೆಯನ್ನು ಬಹಿರಂಗಪಡಿಸಿದ್ದಾರೆ. ಕೋವಿಡ್ ಸಮಯದಲ್ಲಿ ಎರಡೂವರೆ ವರ್ಷಗಳ ಪ್ರೀತಿ ವಿಫಲವಾಗಿ ಖಿನ್ನತೆಗೆ ಒಳಗಾಗಿದ್ದಾಗಿ, ಮಾನಸಿಕ ಚಿಕಿತ್ಸೆ ಪಡೆದಿದ್ದಾಗಿ ತಿಳಿಸಿದ್ದಾರೆ. ಸಂಬಂಧದಲ್ಲಿ ಪ್ರೀತಿ ಕಡಿಮೆಯಾಗಿ ಬ್ರೇಕಪ್ ಆಯಿತೆಂದೂ, ಹುಡುಗರು ಆತುರದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಬಣ್ಣದ ಲೋಕದಲ್ಲಿ ಎಲ್ಲವೂ ಅಂದುಕೊಂಡಂತೆ ಇರುವುದಿಲ್ಲ. ತೆರೆಯ ಮೇಲೆ ಎಷ್ಟು ಚೆನ್ನಾಗಿ ಇರುತ್ತಾರೋ, ಕೆಲವರ ಬಾಳಿನಲ್ಲಿ ಅಷ್ಟೇ ದುರಂತವೂ ಇರುತ್ತದೆ. ನೋಡುಗರಿಗೆ ಮಾತ್ರ ಎಲ್ಲಾ ತಾರೆಯರೂ ಚೆನ್ನಾಗಿದ್ದಾರೆ ಎನ್ನಿಸುತ್ತದೆ. ಇದೀಗ ಅಂಥದ್ದೇ ನೋವಿನ ಘಟನೆಯನ್ನು ತೆರೆದಿಟ್ಟಿದ್ದಾರೆ ಕಲರ್ಸ್ ಕನ್ನಡ ಭಾಗ್ಯಲಕ್ಷ್ಮಿ ಸೀರಿಯಲ್ ವಿಲನ್ ಕನ್ನಿಕಾ. ಭಾಗ್ಯಲಕ್ಷ್ಮಿ ಸೀರಿಯಲ್ ನೋಡುಗರಿಗೆ ಕನ್ನಿಕಾ ಕಂಡ್ರೆ ನಾಲ್ಕೇಟು ಕೊಟ್ಟೇ ಬಿಡೋಣ ಎನ್ನುವಷ್ಟು ಸಿಟ್ಟು. ಶ್ರೇಷ್ಠಾಳ ಮಾತು ಕೇಳಿ ಭಾಗ್ಯಳಿಗೆ ಇನ್ನಿಲ್ಲದ ತೊಂದರೆ ಕೊಡುವ ಕ್ಯಾರೆಕ್ಟರ್ ಕನ್ನಿಕಾಳದ್ದು. ಇದೀಗ ಅದೇ ಕನ್ನಿಕಾ ತಮ್ಮ ರಿಯಲ್ ಲೈಫ್ನ ಕೆಲವೊಂದು ನೋವಿನ ದಿನಗಳ ಬಗ್ಗೆ ಯೂಟ್ಯೂಬ್ ಚಾನೆಲ್ ಒಂದರಲ್ಲಿ ತೆರೆದಿಟ್ಟಿದ್ದಾರೆ.
ಅಂದಹಾಗೆ ಕನ್ನಿಕಾಳ ನಿಜವಾದ ಹೆಸರು, ಸುಕೃತಾ ನಾಗ್. ಸುಕೃತಾ ಭಾಗ್ಯಲಕ್ಷ್ಮಿ ಸೀರಿಯಲ್ಗೂ ಮುನ್ನ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಅಗ್ನಿಸಾಕ್ಷಿ ಸೀರಿಯಲ್ ಅಂಜಲಿ ಪಾತ್ರದ ಮೂಲಕ ಸೀರಿಯಲ್ ಪ್ರೇಕ್ಷಕರ ಮನಸ್ಸನ್ನು ಗೆದ್ದವರು. ಇದೀಗ ನಟಿ, ತಮ್ಮ ಜೀವನದ ಲವ್, ಬ್ರೇಕಪ್, ಡಿಪ್ರೆಷನ್ ಬಗ್ಗೆ ಮಾತನಾಡಿದ್ದಾರೆ. ಸಾಮಾನ್ಯವಾಗಿ ಎಲ್ಲರ ಜೀವನದಲ್ಲೂ ಲವ್ ಮತ್ತು ಬ್ರೇಕಪ್ ತುಂಬಾ ಕಾಮನ್ ಸಂಗತಿ ಆಗಿದೆ. ನಾನು ಲವ್ ಮಾಡಿದ್ದೀನಿ.. ನನಗೂ ಬ್ರೇಕಪ್ ಆಗಿದೆ. ಹಾರ್ಟ್ ಬ್ರೇಕ್ ಆಗಿದೆ. ಡಿಪ್ರೆಶನ್‌ಗೂ ಹೋಗಿದ್ದೀನಿ, ಥೆರಪಿನೂ ತೆಗೆದುಕೊಂಡಿದ್ದೀನಿ ಎಂದು ಸುಕೃತಾ ಓಪನ್ ಆಗಿ ಹೇಳಿಕೊಂಡಿದ್ದಾರೆ.
ಪುಟ್ಟಕ್ಕನ ಮಕ್ಕಳು ಸೀರಿಯಲ್ ಅರ್ಧಕ್ಕೇ ಬಿಟ್ಟು ಸಾವಿನ ಬಗ್ಗೆ ಮಾತನಾಡೋದಾ ಸ್ನೇಹಾ?
ಲವ್ ಬ್ರೇಕಪ್ ಆದಾಗ, ಖಿನ್ನತೆಗೆ ಜಾರಿದ್ದ ಬಗ್ಗೆ ಹೇಳಿಕೊಂಡಿರೋ ಸುಕೃತಾ, ಆ ಸಮಯದಲ್ಲಿ, ಮಾನಸಿಕ ತಜ್ಞರ ಸಲಹೆ ಪಡೆದು ಚಿಕಿತ್ಸೆ ಪಡೆದುಕೊಂಡಿದುದ್ದಾಗಿ ಹೇಳಿದ್ದಾರೆ. ಇದೆಲ್ಲವೂ ಪ್ರತಿಯೊಬ್ಬರ ಜೀವನದ ಒಂದು ಭಾಗ ಅಷ್ಟೇ. ಎರಡೂವರೆ ವರ್ಷದ ಪ್ರೀತಿ, ಬ್ರೇಕಪ್ ಆದಾಗ ಅದನ್ನ ಸಹಿಸಿಕೊಳ್ಳೋಕೆ ತುಂಬಾ ಕಷ್ಟ ಆಯ್ತು. ಒಂದು ವ್ಯಕ್ತಿ ಜೊತೆಗೆ ಪ್ರೀತಿ ಮಾಡಿ, ಇವರನ್ನೇ ಮದುವೆನೂ ಆಗಬೇಕು ಅಂದ್ಕೊಂಡು, ಇಡೀ ಜೀವನವನ್ನೇ ಪ್ಲ್ಯಾನ್ ಮಾಡಿರುತ್ತೇವೆ. ಆ ವ್ಯಕ್ತಿ ದೂರ ಆದಾಗ ಬೇಜಾರಾಗುತ್ತೆ. ಅದೇ ನೋವಿನಿಂದ ಖಿನ್ನತೆಗೆ ಹೋಗಿದ್ದೆ. ಜೀವನ ಇಷ್ಟೇ ಎಂದು ಗೊತ್ತಾಯಿತು, ಏನೂ ಮಾಡಲು ಆಗಲ್ಲ ಎಂದಿದ್ದಾರೆ ನಟಿ.
ನಾವು ಒನ್ನರನೊಬ್ಬರನ್ನು ತುಂಬಾ ಇಷ್ಟ ಪಟ್ಟಿದ್ದೆವು. ಆದರೆ ಒಂದು ಪಾಯಿಂಟ್‌ನಲ್ಲಿ ಸಂಬಂದ ಟೇಕನ್ ಫಾರ್ ಗ್ರ್ಯಾಂಟೆಡ್ ಅನ್ನೋ ಥರ ಆಗಿ ಬಿಟ್ಟಿತು. ಮಾತು ಕಡಿಮೆ ಆಗುತ್ತೆ ಜೊತೆಗೆ ಪ್ರೀತಿ ಕೂಡ ಕಮ್ಮಿ ಆಗುತ್ತಾ ಹೋಗುತ್ತೆ. ನನಗೆ ಪ್ರೀತಿಗಿಂತ ಮುಖ್ಯ ಇನ್ನೇನು ಇಲ್ಲ. ನನಗೆ ಮನಸಾರೆ ಪ್ರೀತಿಸಬೇಕು ಅಷ್ಟೇ ಎಂದು ಮನದ ಮಾತನ್ನು ತೆರೆದಿಟ್ಟಿದ್ದಾರೆ. ನಮ್ಮ ಹಣೆಯ ಬರಹದಲ್ಲಿ ಯಾರೊಟ್ಟಿಗೆ ಬದುಕಬೇಕು ಅಂತ ಇರುತ್ತೋ ಅದೇ ಆಗೋದು. ಅದು ನನ್ನ ಜೀವನದ ಬ್ಯೂಟಿಫುಲ್ ಪಾರ್ಟ್. ಬ್ರೇಕಪ್ ಆದಮೇಲೆಮತ್ತೆ ನನ್ನನ್ನು ಕಾಂಟ್ಯಾಕ್ಟ್ ಮಾಡಲಿಲ್ಲ. ನಾನು ಕೂಡ ಕಾಂಟ್ಯಾಕ್ಟ್ ಮಾಡಲಿಲ್ಲ. ಅವರ ಲೈಫ್‌ನಲ್ಲಿ ಅವರು ಚೆನ್ನಾಗಿದ್ದಾರೆ ಮತ್ತು ನನ್ನ ಜೀವನದಲ್ಲಿ ನಾನು ಚೆನ್ನಾಗಿದ್ದೀನಿ ಅಷ್ಟೇ ಎಂದಿದ್ದಾರೆ. ಅಷ್ಟಕ್ಕೂ ಇವರ ಲವ್ ಫೇಲ್ಯೂರ್ ಆಗಿದ್ದು, ಕೋವಿಡ್ ಟೈಮ್‌ನಲ್ಲಿ. ವ್ಯಕ್ತಿ ಸಿಗುವುದಕ್ಕೂ ಮೊದಲು ತುಂಬಾ ಎತ್ತರಕ್ಕೆ ವ್ಯಾಲ್ಯೂ ಇರುತ್ತೆ. ಸಿಕ್ಕಿದ ಮೇಲೆ ಆ ವ್ಯಾಲ್ಯೂ ತುಂಬಾ ಕೆಳಗೆ ಹೋಗುತ್ತದೆ, ಮತ್ತೆ ಕಳೆದುಕೊಂಡಾಗ ವಾಲ್ಯೂ ಹೆಚ್ಚಾಗುತ್ತೆ ಎಂದಿದ್ದಾರೆ.
ಸಾಮಾನ್ಯವಾಗಿ ಹುಡುಗಿಯರೇ ಬ್ರೇಕಪ್ ಮಾಡಿಕೊಳ್ತಾರೆ ಎನ್ನೋ ಆರೋಪ ಇದೆ. ಆದರೆ ಅದರ ಮತ್ತೊಂದು ಆ್ಯಂಗಲ್ ಇದೆ. ಹುಡುಗಿಯರು ಬ್ರೇಕಪ್ ಮಾಡಿಕೊಳ್ಳುವ ಮುಂಚೆ ಆ ಸಂಬಂಧ ಉಳಿಸೋಕೆ ಇರುವ ಎಲ್ಲ ಪಾಸಿಬಿಲಿಟಿಯನ್ನು ಯೋಚನೆ ಮಾಡಿರುತ್ತೇವೆ. ಒಂದು ದಿನದಲ್ಲಿ ಯಾರೂ ಯಾರನ್ನೂ ಬಿಟ್ಟು ಹೋಗಲ್ಲ. ಆದರೆ ಹುಡುಗರು ಒಂದು ಕ್ಷಣಕ್ಕೆ ಡಿಸೈಡ್ ಮಾಡಿ ಲವ್ ಬ್ರೇಕಪ್ ಮಾಡಿಕೊಳ್ಳುತ್ತಾರೆ ಎಂದಿದ್ದಾರೆ ನಟಿ ಸುಕೃತಾ.
ಆ ರೂಮ್ನಲ್ಲೇ ಇಬ್ರೂ ಮಾಡ್ತೀವಿ, ಏನಿವಾಗ? ನೋಡೋಕೆ ಆಗದಿದ್ರೆ ಕಣ್ಮುಚ್ಚಿ...


