ನಿವೇದಿತಾ ಗೌಡ, ಬಾತ್‌ರೂಮ್‌ನಲ್ಲಿ ರೀಲ್ಸ್‌ ಮಾಡುವುದಕ್ಕೆ ಟ್ರೋಲ್‌ ಆಗುತ್ತಿದ್ದಾರೆ. ಹೆಚ್ಚಿನ ವೀಕ್ಷಣೆಗಾಗಿ ಬಾತ್‌ರೂಮ್‌ ರೀಲ್ಸ್‌ ಟ್ರೆಂಡ್‌ ಆಗಿದ್ದು, ನಿವೇದಿತಾ ಕೂಡ ಇದನ್ನೇ ಅನುಸರಿಸುತ್ತಿದ್ದಾರೆ ಎನ್ನುತ್ತಾರೆ ಅಭಿಮಾನಿಗಳು. ಟ್ರೋಲ್‌ಗಳಿಗೆ ತಿರುಗೇಟು ನೀಡುತ್ತಿರುವ ನಿವೇದಿತಾ, ರೀಲ್ಸ್‌ ಮಾಡುವುದನ್ನು ಮುಂದುವರೆಸಿದ್ದಾರೆ. ವೀಕ್ಷಣೆಗಾಗಿ ಅಶ್ಲೀಲ ವಿಡಿಯೋಗಳಿಗೆ ಜನ ಆದ್ಯತೆ ನೀಡುತ್ತಿರುವುದೇ ಇದಕ್ಕೆ ಕಾರಣ ಎಂಬ ಚರ್ಚೆಯೂ ಇದೆ.

ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ, ಫಾರಿನ್​ ಟೂರ್​ ಸುತ್ತಿ, ಶ್ರೀಲಂಕಾದ ಜೂಜು ಅಡ್ಡೆಗೂ ಹೋಗಿ, ವಾಪಸ್​ ಮನೆಗೆ ಬಂದಾಗಿದೆ. ದಿನದಿಂದ ದಿನಕ್ಕೆ ಈಕೆಯ ರೀಲ್ಸ್​ ಹೆಚ್ಚುತ್ತಲೇ ಇದೆ. ಸಿನಿಮಾಗಳಲ್ಲಿ ನಟಿಸದಿದ್ದರೂ, ಧಾರಾಳ ದೇಹ ಪ್ರದರ್ಶನ ಮಾಡಿಕೊಂಡಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಡುತ್ತಲೇ ಫೇಮಸ್​ ಆಗ್ತಿರೋ ನಟಿಯರು ಒಂದಿಷ್ಟು ಮಂದಿ ಇದ್ದಾರೆ. ಅಂಗಾಂಗಗಳ ಪ್ರದರ್ಶನ ಹೆಚ್ಚಾದಷ್ಟೂ ಅವರಿಗೆ ಡಿಮಾಂಡ್​ ಜಾಸ್ತಿಯಾಗ್ತಿರೋದು ಈಗಿನ ಟ್ರೆಂಡ್​. ಟ್ರೋಲ್​ ಮಾಡುವುದಕ್ಕಾಗಿಯೇ ಒಂದಿಷ್ಟು ಜನ ಇಂಥ ನಟಿಯರ ವಿಡಿಯೋ ಕಾಯುತ್ತಲೇ ಇರುತ್ತಾರೆ. ಅವರು ಟ್ರೋಲ್​ ಮಾಡಿ ಖುಷಿ ಪಟ್ಟುಕೊಂಡರೆ, ದೇಹ ಪ್ರದರ್ಶನ ಧಾರಾಳವಾಗಿ ಮಾಡುವ ನಟಿಯರೂ ಫುಲ್​ ಖುಷ್​. ಒಟ್ಟಿನಲ್ಲಿ ಪ್ರಚಾರ ಬೇಕು ಅಷ್ಟೇ, ಪಾಸಿಟಿವ್​, ನೆಗೆಟಿವ್​ ಅದೆಲ್ಲಾ ಯಾರಿಗೆ ಬೇಕು ಎನ್ನುವ ಜಾಯಮಾನ ಇವರದ್ದು.

ಆದರೆ, ಕುತೂಹಲ ಎನ್ನುವಂತೆ ನಿವೇದಿತಾ ಗೌಡ ಪದೇ ಪದೇ ಬಾತ್​ರೂಮ್​ನಲ್ಲಿಯೇ ರೀಲ್ಸ್​ ಮಾಡುವುದು ಹೆಚ್ಚುತ್ತಿದೆ. ಐಷಾರಾಮಿ ಬಂಗಲೆ ಇದ್ದರೂ, ಒಂದು ಮಾತು ಹೇಳಿದ್ರೆ ಸಾಕು, ರೀಲ್ಸ್​ಗಾಗಿಯೇ ದೊಡ್ಡ ಜಾಗವನ್ನು ಅರೇಂಜ್​ ಮಾಡಿಸುವ ತಾಕತ್ತು ಇದ್ದರೂ ಬಾತ್​ರೂಮ್​ನಲ್ಲಿಯೇ ನಟಿ ರೀಲ್ಸ್​ ಮಾಡ್ತಿರೋದೇ ಅವರ ಅಭಿಮಾನಿಗಳಿಗೆ ಯಕ್ಷ ಪ್ರಶ್ನೆ ಆಗಿ ಹೋಗಿತ್ತು. ಈ ಬಗ್ಗೆನೇ ಇದೀಗ ನಿವೇದಿತಾ ಮಾತನಾಡಿದ್ದು, ಟ್ರೋಲ್​ ಮಾಡುವವರಿಗೆ ಸಕತ್​ ಟಾಂಗ್​ ನೀಡಿದ್ದಾರೆ. ನಾವು ಬಾತ್​ರೂಮ್​ನಲ್ಲಿಯೇ ರಿಲ್ಸ್​ ಮಾಡ್ತೀವಿ, ಈಗೇನು? ನೀವು ಬಾಯಿಮುಚ್ಚಿಕೊಂಡಿರಿ ಎನ್ನುವ ರೀತಿಯಲ್ಲಿ ಶೀರ್ಷಿಕೆ ಕೊಟ್ಟಿದ್ದಾರೆ. ಒಂದು ರೀಲ್ಸ್​ನಲ್ಲಿ ನಿವೇದಿತಾ ಅವರ ಸ್ನೇಹಿತೆ ವಾಣಿ ಜೊತೆ ಬಾತ್​ರೂಮ್​ನಲ್ಲಿ ರೀಲ್ಸ್​ ಮಾಡಿದ್ದರೆ, ಮತ್ತೊಂದರಲ್ಲಿ ಸಂತೋಷ್​ ಎನ್ನುವವರ ಜೊತೆ ಸ್ಟೆಪ್​ ಹಾಕಿದ್ದಾರೆ. ಒಟ್ಟಿನಲ್ಲಿ ಕೆಟ್ಟ ಕಮೆಂಟ್​ ಹಾಕುವವರಿಗೆ ನಿವ್ವಿ ಸಕತ್​ ಟಾಂಗ್​ ಕೊಟ್ಟಿದ್ದಾರೆ. 

ಪಬ್​ಡಾನ್ಸ್​ ಇಷ್ಟ ಎನ್ನುತ್ತಲೇ ಹಾಟ್​ ಅವತಾರ ಬಿಚ್ಚಿಟ್ಟ ನಿವೇದಿತಾ ಗೌಡ: ಕಣ್ಣರಳಿಸಿ ನೋಡಿದ ನೆಟ್ಟಿಗರು!

ಅಷ್ಟಕ್ಕೂ ಇದಾಗಲೇ ನಿವೇದಿತಾ ಬಾತ್​ರೂಮ್​ ಸೀಕ್ರೇಟ್​ ಅನ್ನು ಅವರ ಫ್ಯಾನ್ಸ್​ ರಿವೀಲ್​ ಮಾಡಿದ್ದಾರೆ. ಅದೇನೆಂದರೆ, ಬಾತ್​ರೂಮ್​ನಲ್ಲಿ ರೀಲ್ಸ್​ ಮಾಡಿದರೆ ಅದು ಸಕತ್​ ಹಿಟ್​ ಆಗುತ್ತದೆಯಂತೆ. ಅದಕ್ಕಾಗಿಯೇ ಈಗ ಹಲವು ರೀಲ್ಸ್​ ತಾರೆಯರು ಹೆಚ್ಚು ಲೈಕ್ಸ್​ ಪಡೆಯುವುದಕ್ಕಾಗಿ ಬಾತ್​ರೂಮಿನಲ್ಲಿಯೇ ರೀಲ್ಸ್​ ಮಾಡಿ ಹಾಕುತ್ತಿದ್ದಾರೆ ಎನ್ನುವುದು ನೆಟ್ಟಿಗರ ಸಂಶೋಧನೆ! ಇನ್ನು ನಿವೇದಿತಾ ವಿಷ್ಯದಲ್ಲಿಯೂ ಹಾಗೆಯಾ ಆಗಿರಬೇಕು, ಇವರು ಬಾತ್​ರೂಮ್​ನಲ್ಲಿ ಮಾಡುವ ಹಾಡುಗಳು ಹೆಚ್ಚು ವ್ಯೂವ್ಸ್​ ಪಡೀತಿರಬೇಕು ಎಂದು ಅಂದಾಜು ಮಾಡಿದ್ದಾರೆ ಅವರ ಅಭಿಮಾನಿಗಳು. ಒಟ್ಟಿನಲ್ಲಿ ನಿವೇದಿತಾ ಏನೇ ಕಮೆಂಟ್​ ಹಾಕಿದರೂ ಕ್ಯಾರೇ ಅನ್ನದೇ ತಮ್ಮ ಪಾಡಿಗೆ ತಾವು ರೀಲ್ಸ್​ ಮಾಡುತ್ತಲೇ ಇದ್ದಾರೆ. 

ಅಷ್ಟಕ್ಕೂ ಜನರಿಗೆ ಬೇಕಿರುವುದೂ ಅದೇ ಅಲ್ವಾ? ಯಾವುದಾದರೂ ಒಳ್ಳೆಯ ವಿಷಯದ ವಿಡಿಯೋ ಮಾಡಿ ನೋಡಿ. ನೀವು ಕಾಲಿಗೆ ಬಿದ್ದರೂ ಹತ್ತಾರು ಮಂದಿ ಅದನ್ನು ನೋಡುವುದು ಕಷ್ಟ. ಆದರೆ ಅದೇ ಅಸಭ್ಯ, ಅಶ್ಲೀಲ ಎನ್ನುವ ವಿಡಿಯೋಗಳನ್ನು ಬಾಯಿ ಚಪ್ಪರಿಸುತ್ತಾ, ಅದನ್ನು ಟ್ರೋಲ್​ ಮಾಡುತ್ತಲೇ ಶೇರ್​ ಕೂಡ ಮಾಡುತ್ತ, ವ್ಯೂವ್ಸ್​ ಜಾಸ್ತಿ ಮಾಡುವುದು ಹೊಸ ವಿಷಯವೇನಲ್ಲ. ತಮ್ಮ ಡಿಕ್ಷನರಿಯಲ್ಲಿ ಇರುವ ಕೆಟ್ಟ ಪದಗಳನ್ನೆಲ್ಲಾ ಕಮೆಂಟ್​ ಬಾಕ್ಸ್​ನಲ್ಲಿ ತುಂಬುತ್ತಲೇ ಮಜಾ ಪಡೆಯುವ ದೊಡ್ಡ ವರ್ಗವೇ ಇರುವ ಕಾರಣ, ಇದೀಗ ಬಹುತೇಕ ರೀಲ್ಸ್​ ತಾರೆಯರು ಇದನ್ನೇ ಫಾಲೋ ಮಾಡುತ್ತಿರುವುದು ಕೂಡ ಹೊಸ ವಿಷಯವಲ್ಲ ಬಿಡಿ! ಒಟ್ಟಿನಲ್ಲಿ ನಿವೇದಿತಾ ಬಾತ್​ರೂಂ ಸೀಕ್ರೇಟ್​ ಈಗ ರಿವೀಲ್​​ ಆದಂತಾಗಿದೆ. 

ನಿವೇದಿತಾ ಗೌಡ ಬಾತ್​ರೂಂ ಸೀಕ್ರೇಟ್​ ಕೊನೆಗೂ ರಿವೀಲ್​! ಅಬ್ಬಾ... ಇದಾ ವಿಷ್ಯ?

View post on Instagram
View post on Instagram