ಉನ್ನತ ವ್ಯಾಸಂಗಕ್ಕಾಗಿ "ಪುಟ್ಟಕ್ಕನ ಮಕ್ಕಳು" ಧಾರಾವಾಹಿಯಿಂದ ನಟಿ ಸಂಜನಾ ಬುರ್ಲಿ ಹೊರನಡೆದಿದ್ದಾರೆ. ಸ್ನೇಹಾ ಪಾತ್ರವನ್ನೇ ಕಥೆಯಿಂದಲೇ ತೆಗೆದುಹಾಕಲಾಗಿದೆ. ಇದೀಗ ಸಂಜನಾ, ಧಾರಾವಾಹಿಯ ಹಳೆಯ ಕ್ಲಿಪ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಅವರನ್ನು ಮತ್ತೆ ಧಾರಾವಾಹಿಯಲ್ಲಿ ನೋಡಲು ಕಾತುರರಾಗಿದ್ದಾರೆ.

ಸ್ನೇಹಾ ಎಂದರೆ ಪುಟ್ಟಕ್ಕನ ಮಕ್ಕಳು ನಟಿ ಸಂಜನಾ ಬುರ್ಲಿ ಎಲ್ಲರ ನೆನಪಿಗೇ ಬರುತ್ತಿದ್ದಾರೆ. ನಟಿ ಉನ್ನತ ವ್ಯಾಸಂಗದ ಕಾರಣ ಕೊಟ್ಟು ಸೀರಿಯಲ್​ನಿಂದ ಹೊರಕ್ಕೆ ಬಂದಿದ್ದಾರೆ. ಅವರು ಹೊರಕ್ಕೆ ಬರುವುದು ತಿಳಿದ ಕಾರಣ ಸ್ನೇಹಾ ಪಾತ್ರವನ್ನೇ ಸಾಯಿಸಲಾಗಿದೆ. ಇದು ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲಿಂದ ಸೀರಿಯಲ್​ ಹಂತ ಹಂತವಾಗಿ ಟಿಆರ್​ಪಿ ಕಳೆದುಕೊಳ್ಳಲು ಶುರು ಮಾಡಿತ್ತು. ಸಿಕ್ಕಾಪಟ್ಟೆ ಓದಿರುವ ಸ್ನೇಹಾ ಹಾಗೂ ರೌಡಿಯಾಗಿರುವ ಕಂಠಿಯ ಲವ್​ಸ್ಟೋರಿ ವೀಕ್ಷಕರಿಗೆ ಸಕತ್​ ಇಷ್ಟವಾಗಿತ್ತು. ಒಂದು ಪಾತ್ರದಲ್ಲಿ ಒಬ್ಬರನ್ನೇ ಕೆಲ ವರ್ಷ ನೋಡಿದ ಬಳಿಕ, ಆ ಪಾತ್ರದಲ್ಲಿ ಬೇರೆಯವರನ್ನು ವೀಕ್ಷಕರು ಅಷ್ಟು ಸುಲಭದಲ್ಲಿ ಒಪ್ಪಿಕೊಳ್ಳುವುದಿಲ್ಲ ಎಂದು ಸ್ನೇಹಾ ಪಾತ್ರವನ್ನು ಸಾಯಿಸಲಾಗಿದೆ ಎಂದು ನಿರ್ದೇಶಕ ಆರೂರು ಜಗದೀಶ್​ ಹೇಳಿದರು. ಆದರೆ ಸ್ನೇಹಾ ಪಾತ್ರಕ್ಕೆ ಬೇರೆ ನಟಿಯನ್ನು ಕರೆತಂದು, ಅದೇ ಕಥೆಯನ್ನು ಮುಂದುವರೆಸಬಹುದಿತ್ತು ಎನ್ನುವುದು ವೀಕ್ಷಕರ ಅಭಿಮತ. 

ಅದೇನೇ ಇರಲಿ. ಸದ್ಯ ಪುಟ್ಟಕ್ಕನ ಮಕ್ಕಳು ಬೇರೆ ಬೇರೆ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಕಂಠಿಗೆ ಇನ್ನೊಂದು ಮದುವೆ ಮಾಡುವ ಬಗ್ಗೆ ಬಂದು ಮುಟ್ಟಿದೆ. ಬಂಗಾರಮ್ಮ ಕಂಠಿಯ ಬಳಿ ಆಣೆ ಹಾಕಿಸಿಕೊಂಡಿದ್ದಾಳೆ. ಕಂಠಿ ತನ್ನ ಪತ್ನಿಯ ಹೃದಯ ಯಾರ ಬಳಿ ಇದೆ ಎಂಬ ಹುಡುಕಾಟದಲ್ಲಿ ಇದ್ದಾನೆ. ಆ ಹೃದಯ ಇರುವ ಇನ್ನೋರ್ವ ಸ್ನೇಹಾಳನ್ನು ಕಂಡರೆ ಉರಿಉರಿ ಎನ್ನುತ್ತಿದ್ದಾನೆ. ಅದು ಬೇಗ ತಿಳಿದು ಅವರಿಬ್ಬರನ್ನು ಮದುವೆ ಮಾಡಿ ಸೀರಿಯಲ್​ ಮುಗಿಸಿಬಿಡಿ ಎನ್ನುವುದು ವೀಕ್ಷಕರ ಮಾತು. 

ಸೀರಿಯಲ್​ ಬಿಟ್ಟ ಪುಟ್ಟಕ್ಕನ ಮಗಳು ಸ್ನೇಹಾ ಪಾತ್ರಧಾರಿ ಸಂಜನಾ ತಲೆಗೆ ಏನಾಯ್ತು? ವಿಡಿಯೋ ಫ್ಯಾನ್ಸ್​ ಶಾಕ್​

ಇದರ ನಡುವೆಯೇ ಸಂಜನಾ ಬುರ್ಲಿ ಮತ್ತೆ ಸೋಷಿಯಲ್​ ಮೀಡಿಯಾದಲ್ಲಿ ರೀಲ್ಸ್​ ಮಾಡಿದ್ದಾರೆ. ಆದರೆ ಇದರಲ್ಲಿ ಅವರು ಸಾವಿನ ಬಗ್ಗೆ ಮಾತನಾಡಿದ್ದಾರೆ. ಹಾಗಂತ ಅವರ ಫ್ಯಾನ್ಸ್​ ಶಾಕ್​ ಆಗಬೇಕೆಂದೇನೂ ಇಲ್ಲ. ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಸಾವಿನ ಬಗ್ಗೆ ಇರುವ ಡೈಲಾಗ್​ನ ಕ್ಲಿಪ್ಪಿಂಗ್​ ಅನ್ನು ಅವರು ಹಂಚಿಕೊಂಡಿದ್ದಾರೆ. ಸಾವು ಎಂದರೆ ಏನು? ಅದಕ್ಕೆ ಭಯ ಯಾಕೆ ಪಡಬೇಕು ಎನ್ನುವ ಬಗ್ಗೆ ಸೀರಿಯಲ್​ ನಾಯಕ ಕಂಠಿಗೆ ಹೇಳಿರುವ ಡೈಲಾಗ್​ ಇದು. ಯಾಕೋ ನಟಿಗೆ ಮತ್ತೆ ಸೀರಿಯಲ್​ ನೆನಪಾಗಿರಬೇಕು, ಅದಕ್ಕಾಗಿ ಪುನಃ ಪುನಃ ಸೀರಿಯಲ್​ ಕ್ಲಿಪ್ಪಿಂಗ್ಸ್​ ಶೇರ್​ ಮಾಡಿಕೊಳ್ತಾ ಇದ್ದಾರೆ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ. ಮತ್ತೆ ಕೆಲವರು ನಿಮ್ಮನ್ನು ಮಿಸ್​ ಮಾಡಿಕೊಳ್ತಾ ಇದ್ದೇವೆ ಎನ್ನುತ್ತಿದ್ದಾರೆ. 

ಇನ್ನು ಸಂಜನಾ ಕುರಿತು ಹೇಳುವುದಾದರೆ, ಇವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಬೆಂಗಳೂರಿನ ಡಾ. ಅಂಬೇಡ್ಕರ್​ ಇನ್​ಸ್ಟಿಟ್ಯೂಟ್​ ಆಫ್ ಟೆಕ್ನಾಲಜಿಯಲ್ಲಿ ವಿಧ್ಯಾಭ್ಯಾಸ ಮುಗಿಸಿರುವ ಇವರು `ವಿಕೇಂಡ್' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಮುಂದಿನ ವಿದ್ಯಾಭ್ಯಾಸಕ್ಕೆ, ಉನ್ನತ ಶಿಕ್ಷಣ ಪಡೆಯುವ ಹಿನ್ನೆಲೆಯಲ್ಲಿ ಧಾರಾವಾಹಿಯಿಂದ ದೂರ ಆಗ್ತಿರೋದಾಗಿ ಇದಾಗಲೇ ನಟಿ ಹೇಳಿದ್ದಾರೆ. ಸೀರಿಯಲ್ ನಿಂದ ಹೊರ ಬಂದ ಮೇಲೆ ನಟಿ ದೇಶ ವಿದೇಶ ಸುತ್ತೋದ್ರಲ್ಲೇ ಬ್ಯುಸಿಯಾಗಿದ್ರು. ಕೆಲವು ದಿನಗಳ ಹಿಂದೆ ದುಬೈನಲ್ಲಿ ಎಂಜಾಯ್ ಮಾಡ್ತಿದ್ರು, ಕೊನೆಗೆ ಹಿಮಾಲಯ ಪರ್ವತ ಟ್ರೆಕ್ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದರು. ಇದೀಗ ರೀಲ್ಸ್​ ಮೂಲಕ ಕಾಣಿಸಿಕೊಂಡಿದ್ದಾರೆ. 

ಗಂಡ ಮತ್ತೊಂದು ಮದ್ವೆಗೆ ಸಿದ್ಧನಾಗಿದ್ರೆ ಇಲ್ಲಿ ರೀಲ್ಸ್​ ಮಾಡ್ತಿದ್ದೀರಾ? ನಟಿ ಸಂಜನಾ ಕಾಲೆಳೀತಿರೋ ನೆಟ್ಟಿಗರು

View post on Instagram