ಲಕ್ಷ್ಮಿ ಬಾರಮ್ಮ ಸೀರಿಯಲ್ ಮುಗಿದಿದೆ. ಆದ್ರೆ ಸೀರಿಯಲ್ ಬಗ್ಗೆ ಈಗ್ಲೂ ಚರ್ಚೆ ಆಗ್ತಿದೆ. ಜನರು ಸೀರಿಯಲ್ ಮಿಸ್ ಮಾಡ್ಕೊಂಡ್ರೆ ಕಲಾವಿದರು ಶೂಟಿಂಗ್ ಮಿಸ್ ಮಾಡ್ತಿದ್ದಾರೆ. ಕೊನೆ ಸೀನ್ ನಲ್ಲಿ ಏನಾಯ್ತು? ನಾನು ಬಂಡೆಯಿಂದ ಬಿದ್ದಿದ್ದು ಹೇಗೆ ಅನ್ನೋದನ್ನು ಕಾವೇರಿ ವಿಡಿಯೋ ಮೂಲಕ ಹೇಳಿದ್ದಾರೆ.
ಮನೆ ಮನೆಗೆ ಪ್ರತಿ ದಿನ ಬರೋ ಸೀರಿಯಲ್ (Serial) ಯಾವಾಗ್ಲೂ ವೀಕ್ಷಕರಿಗೆ ಹತ್ತಿರವಾಗಿರುತ್ತೆ. ಸೀರಿಯಲ್ ಕಲಾವಿದರನ್ನು ತಮ್ಮ ಮನೆಯವರಂತೆ ನೋಡೋರ ಸಂಖ್ಯೆ ಸಾಕಷ್ಟಿದೆ. ವೀಕ್ಷಕರಿಗೆ ಹತ್ತಿರವಾಗೋಕೆ ಕಲಾವಿದರು ಸಾಕಷ್ಟು ಪ್ರಯತ್ನ ಕೂಡ ಮಾಡ್ತಾರೆ. ಸ್ಟಂಟ್, ಫೈಟ್, ರೋಮ್ಯಾನ್ಸ್ ಸಿನಿಮಾಗಳಲ್ಲಿ ಮಾತ್ರವಲ್ಲ ಸಿರಿಯಲ್ ನಲ್ಲೂ ಈಗ ಕಾಮನ್ ಆಗಿದೆ. ನಟನೆಯನ್ನು ರಿಯಲ್ ಅಂತ ತೋರಿಸೋಕೆ ಕಲಾವಿದರು ಮಾತ್ರವಲ್ಲ ನಿರ್ದೇಶಕರ ಟೀಂ ಸಿಕ್ಕಾಪಟ್ಟೆ ಕಷ್ಟಪಡುತ್ತೆ. ಹಿಂದೆ ಶೂಟಿಂಗ್ ಹೇಗೆ ನಡೆಯುತ್ತೆ, ಅಲ್ಲಿ ಏನೆಲ್ಲ ಕಸರತ್ತು, ನೋವು, ಪ್ರಯತ್ನಗಳಿರುತ್ವೆ ಅನ್ನೋದು ವೀಕ್ಷಕರಿಗೆ ಗೊತ್ತಿರಲಿಲ್ಲ. ಆದ್ರೀಗ ಕಲಾವಿದರು, ಸೀರಿಯಲ್ ಟೀಂ ಕೆಲ ಆಸಕ್ತಿಕರ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಾ ಇರುತ್ತೆ.
ಕಲರ್ಸ್ ಕನ್ನಡ (Colors Kannada)ದಲ್ಲಿ ಹೊಸ ಹೊಸ ಸೀರಿಯಲ್ ಬರ್ತಿದೆ. ಲಕ್ಷ್ಮಿ ಬಾರಮ್ಮ (Lakshmi Baramma) ಸೀರಿಯಲ್ ಮುಗಿದು ತಿಂಗಳುಗಳೇ ಕಳೆದಿದೆ. ಆದ್ರೆ ಈಗ್ಲೂ ವೀಕ್ಷಕರು ಸೀರಿಯಲ್ ನೆನಪಿಸಿಕೊಳ್ತಿದ್ದಾರೆ. ವೈಷ್ಣವ್, ಲಕ್ಷ್ಮಿ, ಕೀರ್ತಿ, ಕಾವೇರಿಯನ್ನು ಮಿಸ್ ಮಾಡಿಕೊಳ್ತಿದ್ದಾರೆ. ಮಗನಿಗೆ ಕೀರ್ತಿ ಬದಲು ಲಕ್ಷ್ಮಿಯನ್ನು ಮದುವೆ ಮಾಡಿಸಿ, ಮೂವರ ಜೀವನದಲ್ಲಿ ಆಟ ಆಡಿದವಳು ಕಾವೇರಿ. ಕೀರ್ತಿಯನ್ನು ಬೆಟ್ಟದಿಂದ ತಳ್ಳಿ ತನ್ನ ದಾರಿಯನ್ನು ಸುಲಭ ಮಾಡಿಕೊಂಡಿದ್ದ ಕಾವೇರಿ, ಲಕ್ಷ್ಮಿಯಿಂದ ವೈಷ್ಣವ್ ದೂರ ಮಾಡುವ ಪ್ರಯತ್ನ ನಡೆಸಿದ್ದಳು. ಬೆಟ್ಟದಿಂದ ಕೆಳಗೆ ಬಿದ್ರೂ ಬದುಕಿ ಬಂದಿದ್ದ ಕೀರ್ತಿ ನೆನಪಿನ ಶಕ್ತಿ ಕಳೆದುಕೊಂಡಿದ್ಲು. ಇದನ್ನೇ ಬಂಡವಾಳ ಮಾಡ್ಕೊಂಡಿದ್ದ ಕಾವೇರಿ, ವೈಷ್ಣವ್ ಗೆ ಇನ್ನೊಂದು ಮದುವೆ ಮಾಡಿಸಲು ಸಿದ್ಧವಾಗಿದ್ದಳು. ಆದ್ರೆ ಕಾವೇರಿ ಪ್ಲಾನ್ ಸಂಪೂರ್ಣ ಪ್ಲಾಪ್ ಆಗಿತ್ತು. ಕಿಡ್ನಪ್ ಆಗಿದ್ದ ಲಕ್ಷ್ಮಿ ಉಳಿಸಲು ಹೋಗಿ ಅಪಾಯಕ್ಕೆ ಸಿಲುಕಿದ್ದ ಕೀರ್ತಿಗೆ ಎಲ್ಲ ನೆನಪು ಮರಳಿತ್ತು. ಕಾವೇರಿ ಬಣ್ಣ ಬಯಲು ಮಾಡೋಕೆ ಕೀರ್ತಿ ಹಾಗೂ ಲಕ್ಷ್ಮಿ ಕೈ ಜೋಡಿಸಿದ್ದರು.
ಕಾವೇರಿ ಕೀರ್ತಿಯನ್ನು ಹತ್ಯೆ ಮಾಡಿದ್ದ ಜಾಗಕ್ಕೆ ಮನೆಯವರೆಲ್ಲ ತಲುಪಿದ್ರು. ಕಾವೇರಿ ಮೋಸವನ್ನು ಎಲ್ಲರಿಗೂ ತಿಳಿಸೋದೇ ಕೀರ್ತಿ ಹಾಗೂ ಮಹಾಲಕ್ಷ್ಮಿ ಪ್ಲಾನ್ ಆಗಿತ್ತು. ಆದ್ರೆ ಸೋಲೊಪ್ಪಿಕೊಳ್ಳಲು ಸಿದ್ಧವಿಲ್ಲದ ಕಾವೇರಿ ಬೆಟ್ಟದ ತುದಿಗೆ ಹೋಗಿ ಕೆಳಗೆ ಬಿದ್ದಿದ್ದಳು. ಅಲ್ಲಿಗೆ ಕಾವೇರಿ ಚಾಪ್ಟರ್ ಕ್ಲೋಸ್ ಆಗಿತ್ತಲ್ಲದೆ ಸೀರಿಯಲ್ ಹ್ಯಾಪಿ ಎಂಡಿಂಗ್ ಆಗಿತ್ತು.
ಕಾವೇರಿ ಬೆಟ್ಟದಿಂದ ಕೆಳಗೆ ಹೇಗೆ ಬಿದ್ಲು? ನಿಜವಾಗ್ಲೂ ಶೂಟ್ ಮಾಡೋಕೆ ಲಕ್ಷ್ಮಿ ಬಾರಮ್ಮ ಟೀಮ ಬೆಟ್ಟದ ಮೇಲೆ ಹೋಗಿತ್ತಾ? ಕಾವೇರಿ ಬೆಟ್ಟದಿಂದ ಬೀಳೋ ಸೀನ್ ಹೇಗೆ ಮಾಡಿದ್ರು? ಈ ಎಲ್ಲ ಪ್ರಶ್ನೆಗೆ ಈಗ ಕಾವೇರಿ ಅಲಿಯಾಸ್ ಸುಷ್ಮಾ ನಾಣಯ್ಯ ವಿಡಿಯೋ ಮೂಲಕ ಉತ್ತರ ನೀಡಿದ್ದಾರೆ. ತಮ್ಮ ಇನ್ಸ್ಟಾ ಖಾತೆಯಲ್ಲಿ ಅವರು ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸುಷ್ಮಾ, ಕೊನೆ ಸೀನ್ ಮಾಡೋಕೆ ಏನೆಲ್ಲ ಕಸರತ್ತು ಮಾಡಿದ್ದಾರೆ ಅನ್ನೋದನ್ನು ನೀವು ನೋಡ್ಬಹುದು.
ವಾಸ್ತವವಾಗಿ ಕಾವೇರಿ ಬೆಟ್ಟದ ಮೇಲೆ ಹೋಗೇ ಇಲ್ಲ. ಸ್ಟುಡಿಯೋದಲ್ಲೇ ಈ ಸೀನ್ ಶೂಟ್ ಆಗಿದೆ. ಕಾವೇರಿಯನ್ನು ಬೆಡ್ ಮೇಲೆ ಮಲಗಿಸಿ, ಅದನ್ನು ಹಗ್ಗಕ್ಕೆ ಕಟ್ಟಲಾಗಿದೆ. ಹಗ್ಗವನ್ನು ಮೇಲೆ ಎಳೆದು, ನಿಧಾನವಾಗಿ ಕೆಳಗೆ ಬಿಡ್ತಾರೆ. ಕೆಳಗೆ ಬರ್ತಿದ್ದಂತೆ ಕಾವೇರಿ ವಿಡಿಯೋವನ್ನು ಶೂಟ್ ಮಾಡಲಾಗಿದೆ. ಕಾವೇರಿ ಸ್ಟುಡಿಯೋದಲ್ಲಿ ಇಳಿತಿದ್ರೆ ಸೀರಿಯಲ್ ನಲ್ಲಿ ಬೆಟ್ಟದಿಂದ ಬಿದ್ದಂತೆ ತೋರಿಸಲಾಗಿದೆ. ಈ ವಿಡಿಯೋ ಪೋಸ್ಟ್ ಮಾಡಿದ ಸುಷ್ಮಾ, ಬಂಡೆಯಿಂದ ಕಾವೇರಿ ಬಿದ್ದಿದ್ದು ಹೀಗೆ, ಇಂತಹ ಸೀನ್ ಶೂಟ್ ಮಾಡುವ ಹಿಂದೆ ಕಠಿಣ ಪರಿಶ್ರಮ, ನೋವು, ಹೋರಾಟವಿದೆ. ನಾನು ಈ ಸೀನ್ ಮಾಡುವಾಗ ತುಂಬಾ ಹೆದರಿದ್ದೆ. ಆದ್ರೆ ಹೇಗೋ ಮ್ಯಾನೇಜ್ ಮಾಡಿದೆ. ಈ ಸೀನ್ ಶೂಟ್ ಮಾಡೋಕೆ ಅನೇಕರ ಪರಿಶ್ರಮವಿದೆ ಅಂತ ಶೀರ್ಷಿಕೆ ಹಾಕಿದ್ದಾರೆ.
