‘ಅಣ್ಣಯ್ಯʼ ಧಾರಾವಾಹಿಯಲ್ಲಿ ರಶ್ಮಿಗೆ ಅತ್ತೆಯಿಂದ ಅನ್ಯಾಯ ಆಗ್ತಿದೆ. ಜಿಮ್‌ ಸೀನ ಪಿಂಕಿ ಜೊತೆ ಸ್ನೇಹ ಇಟ್ಟುಕೊಂಡಿದ್ದಾನೆ. ಹೀಗಾಗಿ ರಶ್ಮಿಗೆ ಸೀನನ ಮೇಲೆ ಅನುಮಾನ ಶುರುವಾಗಿದೆ.

‘ಅಣ್ಣಯ್ಯʼ ಧಾರಾವಾಹಿಯಲ್ಲಿ ತನ್ನ ಮಗ ಜಿಮ್‌ ಸೀನನ ಜೊತೆ ಡುಮ್ಮಿ ರಶ್ಮಿ ಮದುವೆ ಆಗಿರೋದು ಶಾಂತಿಗೆ ಇಷ್ಟವೇ ಇಲ್ಲ. ಏನಾದರೂ ಮಾಡಿ ಗುಂಡಮ್ಮಳನ್ನು ಮನೆಯಿಂದ ಓಡಿಸಬೇಕು ಅಂತಿದ್ದಾಳೆ. ಯಾವಾಗಲೂ ಊಟಕ್ಕೆ ಹಾತೊರೆಯುವ ಗುಂಡಮ್ಮಳಿಗೆ ಊಟ ಕೊಡದೆ, ಬಾಯಿಗೆ ಬಂದಹಾಗೆ ಬೈಯ್ಯೋದು, ಜಿಮ್‌ ಸೀನ-ಗುಂಡಮ್ಮಳ ನಡುವೆ ಅಂತರ ಮೂಡಿಸೋದು ಶಾಂತಿ ಕೆಲಸವಾಗಿತ್ತು. ಇದಕ್ಕೀಗ ಗುಂಡಮ್ಮ ಠಕ್ಕರ್‌ ಕೊಟ್ಟಿದ್ದಾಳೆ.

ಮಾದಪ್ಪಣ್ಣ ಏನಂದ್ರು?

ಜಿಮ್‌ ಸೀನ, ಗುಂಡಮ್ಮ, ಲೀಲಾ ಹಾಗೂ ಅವಳ ಗಂಡ ಎಲ್ಲರೂ ಶಿವಣ್ಣನ ಮನೆಗೆ ಬಂದಿದ್ದರು. ಆ ವೇಳೆ ರಶ್ಮಿಯ ತಾಳಿ ಶಾಸ್ತ್ರವೂ ಆಗಿದೆ. ಮಾದಪ್ಪಣ್ಣ ಎಲ್ಲರ ಮುಂದೆ, “ರಶ್ಮಿ ಮದುವೆ ಆಗಿ ನಮ್ಮ ಮನೆಗೆ ಬಂದಾಗ, ಮಾವ ಇನ್ಮುಂದೆ ನೀವು ನನ್ನ ಗಂಡನಿಗೆ ಬೈಯ್ಯಬಾರದು, ಅವರಿಗೆ ಮರ್ಯಾದೆ ಕೊಡಬೇಕು. ಜಿಮ್‌ ಹಾಕಿಕೊಡಬೇಕು ಅಂತ ಹೇಳಿದ್ದಳು” ಎಂದು ಹೇಳಿದ್ದಾರೆ. ಆಗ ಜಿಮ್‌ ಸೀನ ಮನಸ್ಸಿನಲ್ಲಿ, “ನನ್ನ ತಂದೆ ನನ್ನ ಜೊತೆ ಪ್ರೀತಿಯಿಂದ ಮಾತಾಡೋಕೆ, ಜಿಮ್‌ ಹಾಕಿಕೊಡೋಕೆ ರಶ್ಮಿ ಕಾರಾಣಾನಾ” ಅಂತ ಅಂದುಕೊಂಡಿದ್ದಾನೆ.

ಅತ್ತೆ ಬಾಯಿಗೆ ಹೋಳಿಗೆ ತುರುಕಿದ ರಶ್ಮಿ!

ಜಿಮ್‌ ಸೀನ ಹಾಗೂ ಪಿಂಕಿ ಮದುವೆ ಆಗಬೇಕು ಅಂತ ಲೀಲಾ ಅಂದುಕೊಂಡಿದ್ದಾಳೆ. ಹೀಗಾಗಿ ಅವಳು ಯಾವಾಗಲೂ ಪಿಂಕಿ ಪರ ಇರುತ್ತಾಳೆ. ರಶ್ಮಿಗೆ ಅವಳು ಊಟ ಕೂಡ ಕೊಡುತ್ತಿರಲಿಲ್ಲ. ಶಿವಣ್ಣನ ಮನೆಯಲ್ಲಿ ಹೋಳಿಗೆ ಊಟ ರೆಡಿಯಾಗಿತ್ತು. ಆಗ ರಶ್ಮಿಯೇ ತನ್ನ ಅತ್ತೆಗೆ ಒಂದಾದ ಮೇಲೆ ಒಂದರಂತೆ ಹೋಳಿಗೆ ಹಾಕಿ, ಬಾಯಿಗೆ ತುರುಕಿದ್ದಾಳೆ. “ಊಟ ಕೊಡದೆ ಹೋದ್ರೆ ಎಷ್ಟು ನೋವಾಗತ್ತೆ ಅಂತ ಗೊತ್ತಾಯ್ತಾ ಅತ್ತೆ?” ಎಂದು ಪ್ರಶ್ನೆ ಮಾಡಿದ್ದಾಳೆ. ಈ ಮಾತು ಕೇಳಿ ಎಲ್ಲರಿಗೂ ಶಾಕ್‌ ಆಗಿದೆ.

ಸೀನನಿಗೆ ಹೆದರಿಸಿದ ರಶ್ಮಿ!

ಲೀಲಾಳಿಂದ ರಶ್ಮಿಗೆ ಸಮಸ್ಯೆ ಆಗ್ತಿದೆ ಅಂತ ಎಲ್ಲರ ಮುಂದೆ ಮಾದಪ್ಪಣ್ಣ ತುಂಬ ಸಲ ಹೇಳಿದ್ದಾನೆ. ಆದರೆ ಎಲ್ಲರೂ ಒಮ್ಮೆ ಶಾಕ್‌ ಆದರೂ ಕೂಡ ಸೀರಿಯಸ್‌ ಅಗಿ ತಗೊಂಡಿಲ್ಲ. ಇನ್ನೊಂದು ಕಡೆ ಪಿಂಕಿ ಜೊತೆ ಸೀನನ ಸ್ನೇಹ ಇದೆ, ಪದೇ ಪದೇ ಅವಳು ಫೋನ್‌ ಮಾಡ್ತಿದ್ದಾಳೆ ಅಂತ ರಶ್ಮಿಗೆ ಗೊತ್ತಾಗಿದೆ. ಈ ವಿಷಯವನ್ನು ನನ್ನ ಅಣ್ಣನಿಗೆ ಹೇಳಿದರೆ ಏನು ಆಗಬಹುದು ಅಂತ ಗೊತ್ತಿದೆ ಅಲ್ವಾ ಅಂತ ಅವಳು ಸೀನನಿಗೆ ಹೆದರಿಸಿದ್ದಾಳೆ. ಜಿಮ್‌ ಸೀನ, ರಶ್ಮಿ ಚೆನ್ನಾಗಿದ್ದಾರೆ ಅಂತ ಎಲ್ಲರೂ ನಂಬಿಕೊಂಡಿದ್ದಾರೆ.

ಕಥೆ ಏನು?

ಮಾರಿಗುಡಿ ಶಿವು ಹಾಗೂ ಪಾರ್ವತಿ ಅನಿರೀಕ್ಷಿತವಾಗಿ ಮದುವೆಯಾದರು. ಆರಂಭದಲ್ಲಿ ಪಾರು ಮೇಲೆ ಶಿವುಗೆ ಲವ್‌ ಇತ್ತು, ಈಗ ಪಾರು ಕೂಡ ಶಿವುನನನ್ನು ಪ್ರೀತಿ ಮಾಡ್ತಿದ್ದಾಳೆ. ಇನ್ನೊಂದು ಕಡೆ ಶಿವು ತಂಗಿ ರಶ್ಮಿ ಜೊತೆ ಸೀನನ ಮದುವೆ ಆಗಿದೆ. ಸೀನನಿಗೆ ಈ ಮದುವೆ ಇಷ್ಟವೇ ಇರಲಿಲ್ಲ, ಅವನು ಪಿಂಕಿಯನ್ನು ಪ್ರೀತಿ ಮಾಡುತ್ತಿದ್ದನು. ಇನ್ನೊಂದು ಕಡೆ ಪಿಂಕಿ ಜೊತೆ ಮತ್ತೆ ಮದುವೆ ಆಗೋಕೆ ಆಗದೆ, ರಶ್ಮಿ ಜೊತೆ ಬದುಕೋಕೆ ಆಗದೆ ಜಿಮ್‌ ಸೀನ ಕಷ್ಟಪಡುತ್ತಿದ್ದಾನೆ. ಹಾಗಾದರೆ ಇವರ ಜೀವನ ಏನಾಗಲಿದೆ? ಶಿವು ತಂಗಿ ಬಾಳು ಏನಾಗಲಿದೆ ಎನ್ನೋದು ದೊಡ್ಡ ಕುತೂಹಲವಾಗಿದೆ. ನಿಮ್ಮ ಪ್ರಕಾರ ಏನಾಗಲಿದೆ? ಕಾಮೆಂಟ್‌ ಮಾಡಿ.

ಪಾತ್ರಧಾರಿಗಳು

ರಶ್ಮಿ- ಪ್ರತೀಕ್ಷಾ ಶ್ರೀನಾಥ್‌

ಜಿಮ್‌ ಸೀನ- ಸುಷ್ಮಿತ್‌ ಜೈನ್‌

ಲೀಲಾ- ಶ್ರುತಿ

ಶಿವು- ವಿಕಾಶ್‌ ಉತ್ತಯ್ಯ

ಪಾರ್ವತಿ-ನಿಶಾ ರವಿಕೃಷ್ಣನ್‌

View post on Instagram