ಕನ್ನಡ ಕಿರುತೆರೆ ಹಾಗೂ ಸದ್ಯ ಹಿರಿತೆರೆಯಲ್ಲಿ ಮಿಂಚುತ್ತಿರುವ ಮೋಕ್ಷಿತಾ ಪೈ ಸಹಜ ಹಾಗು ಸರಳ ಸುಂದರಿ.
ಮೋಕ್ಷಿತಾ ಪೈ ಅಂದಕ್ಕೆ ಮನಸೋಲದವರು ಯಾರೂ ಇರಲಾರದು, ಅಷ್ಟೊಂದು ಸುಂದರಿ ಆಕೆ.
ಮೋಕ್ಷಿತಾ ಪೈಯವರನ್ನು ಸಹಜ ಸುಂದರಿ ಅಂತಾನೆ ಕರೆಯೋದು, ಯಾಕಂದರೆ ಹೆಚ್ಚು ಮೇಕಪ್ ಮಾಡಿಕೊಳ್ಳದೇ ಇದ್ದರೂ ಕೂಡ ಸಖತ್ ಕ್ಯೂಟ್ ಈಕೆ.
ಮೋಕ್ಷಿತಾ ಪೈಗೆ ಹೆಸರು ತಂದುಕೊಟ್ಟಿದ್ದು ಝೀ ಕನ್ನಡದ ಪಾರು ಧಾರಾವಾಹಿ. ಈ ಧಾರಾವಾಹಿ ಮೂಲಕ ಮನೆಮಾತಾಗಿದ್ದ ಬೆಡಗಿ.
ಬಿಗ್ ಬಾಸ್ ಸೀಸನ್ 11 ರಲ್ಲಿ ಸ್ಪರ್ಧಿಸುವ ಮೂಲಕ, ತಮ್ಮ ನೇರ ಮಾತು, ಆಟಗಳಿಂದ ಮನ ಗೆದ್ದಿದ್ದ ಚೆಲುವೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಮೋಕ್ಷಿತಾ ದಿನಕ್ಕೊಂದು ಸೀರೆಯಲ್ಲಿ ಫೋಟೊ ಶೂಟ್ ಮಾಡಿ ಶೇರ್ ಮಾಡುತ್ತಿರುತ್ತಾರೆ.
ಸದ್ಯ ಇನ್’ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಹೊಸ ಫೋಟೊ ಶೂಟ್ ವೈರಲ್ ಆಗುತ್ತಿದೆ.
ಮೋಕ್ಷಿತಾ ಆರೆಂಜ್ ಬಣ್ಣದ ಸಿಂಪಲ್ ಆಗಿರುವ ಸೀರೆ, ಸಿಂಪಲ್ ನೆಕ್ಲೆಸ್ ಧರಿಸಿ, ಹಣೆಗೆ ಕುಂಕುಮ್ ಇಟ್ಟು ಡಿವೈನ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ತಮ್ಮ ಫೋಟೊಗಳ ಜೊತೆಗೆ ಮೋಕ್ಷಿತಾ Love yourself first ಎಂದಿದ್ದಾರೆ.
ಫ್ಯಾನ್ಸ್ ನಟಿಯ ನಗುವಿಗೆ ಸ್ಥಿಗ್ಧ ಸೌಂದರ್ಯಕ್ಕೆ ಮನಸೋತಿದ್ದು, ಸಹಜ ಸರಳ ಸುಂದರಿ, ಸೀರೆಲಿ ತುಂಬಾನೆ ಸುಂದರವಾಗಿ ಕಾಣಿಸ್ತೀರಿ, ನಿಮ್ಮ ನಗು ಚೆನ್ನಾಗಿದೆ ಎಂದಿದ್ದಾರೆ.
ಕೆಲವು ಅಭಿಮಾನಿಗಳು ಮಂಜಣ್ಣ ಜೊತೆ ನಿಮ್ಮ ಸ್ನೇಹ ಮುಂದುವರೆಯಲಿ, ಮಾತು ಬಿಡಬೇಡಿ ಅಂತಾನೂ ಕಾಮೆಂಟ್ ಮಾಡಿದ್ದಾರೆ.
ವೈಭವದ ಮಂಟಪದಲ್ಲಿ ನಡೆದ ಸೀತಾ ವಲ್ಲಭ ನಟಿ ಸುಪ್ರೀತಾ ಸತ್ಯನಾರಾಯಣ್ ಮದುವೆ Photos
ಪುಟ್ಟಕ್ಕನ ಮಕ್ಕಳು ಖ್ಯಾತಿಯ ಸ್ನೇಹಾ… ರಿಯಲ್ ಆಗಿ ಸಖತ್ ಸ್ಟೈಲಿಶ್
ಮತ್ತೆ ಒಂದಾದ ಮೋಕ್ಷಿತಾ, ಶಿಶಿರ್, ಐಶ್ವರ್ಯಾ… ಗೆಳೆತನ ನೋಡಿ ಫ್ಯಾನ್ಸ್ ಖುಷ್
ಹೊಸ ಸ್ಟೈಲಿಶ್ ಲುಕ್ ನಲ್ಲಿ ಲಕ್ಷ್ಮೀ ಬಾರಮ್ಮ ಸುಪ್ರೀತಾ