ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡುವ ಅನ್ಯರಾಜ್ಯದ ಅನುಕೂಲ್ ಮಿಶ್ರಾ ಜೊತೆ ಮದುವೆ ನಿಶ್ಚಯವಾಗಿದೆ. "ಸೀತಾರಾಮ" ಧಾರಾವಾಹಿಯಲ್ಲಿ ಸೀತೆಗೆ ಅವಳಿ ಮಕ್ಕಳಿದ್ದು, ಸುಬ್ಬಿ ಕೂಡ ಅವರ ಮಗಳೇ ಎಂಬ ರಹಸ್ಯ ಬಯಲಾಗಲಿದೆ. ವೈಷ್ಣವಿ ಮದುವೆಯ ನಂತರ ಧಾರಾವಾಹಿ ಮುಕ್ತಾಯವಾಗುವ ಸಾಧ್ಯತೆ ಇದೆ. ಅಭಿಮಾನಿಗಳು ನಟಿ ಕರ್ನಾಟಕ ಬಿಡುವರೇ ಎಂದು ಚಿಂತಿತರಾಗಿದ್ದಾರೆ.

ಅತ್ತ ಸೀತಾರಾಮ ಸೀತೆ ಅರ್ಥಾತ್​ ನಟಿ ವೈಷ್ಣವಿ ಗೌಡ ಕಲ್ಯಾಣಕ್ಕೆ ಇನ್ನೇನು ಕೆಲವೇ ತಿಂಗಳು ಬಾಕಿ ಇದೆ. ಮೊನ್ನೆಯಷ್ಟೇ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ ನಟಿ. ಮದ್ವೆ ಫಿಕ್ಸ್​ ಆಗಿದ್ದ ವಿಷಯವನ್ನು ಗುಟ್ಟಾಗಿ ಇಟ್ಟಿದ್ದ ನಟಿ ಎಲ್ಲರಿಗೂ ಬಿಗ್​ ಸರ್​ಪ್ರೈಸ್​ ಕೊಟ್ಟಿದ್ದಾರೆ. ಸದ್ಯ ವೈಷ್ಣವಿ ಗೌಡ ಅವರು ಅನುಕೂಲ್‌ ಮಿಶ್ರಾ ಎನ್ನುವವರ ಜೊತೆ ಎಂಗೇಜ್‌ ಆಗಿದ್ದಾರೆ. ಅನುಕೂಲ್ ಅವರು ಬೇರೆ ರಾಜ್ಯದವರು ಎನ್ನಲಾಗಿದೆ. ಏರ್‌ಫೋರ್ಸ್‌ನಲ್ಲಿ ಅನುಕೂಲ್ ಕೆಲಸ ಮಾಡುತ್ತಿದ್ದಾರೆ. ಅನುಕೂಲ್ ಅವರಿಂದಲೇ ವೈಷ್ಣವಿ ಈ ಬಾರಿ ಬೆಂಗಳೂರಿನಲ್ಲಿ ನಡೆದಿದ್ದ ಏರ್‌ ಷೋ ವೀಕ್ಷಣೆ ಮಾಡಿದ್ದರು. ಇದನ್ನೇ ಅವರು ಪರೋಕ್ಷವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, “ಥ್ಯಾಂಕ್ಯು ಎ. ನಿಮ್ಮಿಂದಲೇ ಏರ್‌ ಷೋ ನೋಡೋದು ಸಾಧ್ಯ ಆಯ್ತು, ಇದೊಂದು ಅದ್ಭುತ ಅನುಭವ” ಎಂದು ಹೇಳಿದ್ದರು. ಆದರೆ, ಗುಟ್ಟನ್ನು ಮಾತ್ರ ಬಿಟ್ಟು ಕೊಟ್ಟಿರಲಿಲ್ಲ. ಇದೀಗ ಕೊನೆಗೂ ಗುಟ್ಟನ್ನು ಅವರೇ ರಿವೀಲ್​ ಮಾಡಿದ್ದು, ಭಾವಿ ಪತಿಯನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

ಇದು ರಿಯಲ್​ ಕಥೆಯಾದ್ರೆ ಇನ್ನು ರೀಲ್​ ಅಂದ್ರೆ ಸೀತಾರಾಮ ಸೀರಿಯಲ್​ನಲ್ಲಿ ಇನ್ನೊಂದು ರಹಸ್ಯ ಬಯಲಾಗಿದೆ. ಸೀತೆಗೆ ಸಿಹಿಯ ಜೊತೆ ಇನ್ನೊಬ್ಬಳು ಮಗಳು ಹುಟ್ಟಿದ್ದಳು ಎನ್ನುವ ರಹಸ್ಯವದು. ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಹೆತ್ತ ಸೀತೆಗೆ ಹುಟ್ಟಿದ್ದು ಅವಳಿ ಮಕ್ಕಳು, ಅವರಲ್ಲಿ ಒಬ್ಬಳು ಸಿಹಿ ಇದಾಗಲೇ ಕಾನೂನುಬದ್ಧವಾಗಿ ಸೀತೆಗೆ ಸಿಕ್ಕೂ ಆಗಿದೆ. ಆಕೆ ಸತ್ತು ಸುಬ್ಬಿಗೆ ಕಾಣಿಸಿಕೊಳ್ತಿರೋದೂ ಆಗಿದೆ. ಇದೀಗ ಸುಬ್ಬಿ ಕೂಡ ಸೀತಾ-ರಾಮ ಮನೆಯನ್ನು ಸೇರಿದ್ದರೂ ಅವಳೇ ಸೀತೆಯ ಮಗಳು ಎನ್ನುವ ಸತ್ಯ ಗೊತ್ತಿಲ್ಲ. ಆದರೆ ಸುಬ್ಬಿಯನ್ನು ಇದೀಗ ದತ್ತು ಪಡೆದುಕೊಳ್ಳಲು ಬೇರೊಬ್ಬರು ಬಂದಿದ್ದಾರೆ. ಇದೇ ಸಮಯದಲ್ಲಿ ಈಗ ವಾಹಿನಿ ಹೊಸ ಪ್ರೊಮೋ ಬಿಡುಗಡೆ ಮಾಡಿದೆ. ಅದರಲ್ಲಿ ಸುಬ್ಬಿ ಸೀತಾಳ ಮಗು ಎನ್ನುವ ರಹಸ್ಯ ಬಯಲಾಗುವ ಕಾಲ ಬಂದಿದೆ ಎಂದು ತೋರಿಸಲಾಗಿದೆ. 

ವೈಷ್ಣವಿ ಗುಟ್ಟಾದ ನಿಶ್ಚಿತಾರ್ಥದ ಹಿಂದಿದ್ಯಾ ಈ ವೈರಲ್‌ ವಿಡಿಯೋ? ಏನದು ಭವಿಷ್ಯವಾಣಿ?

ಸುಬ್ಬಿಯ ಸತ್ಯವೂ ಗೊತ್ತಾದರೆ ಇರುವುದು ಭಾರ್ಗವಿ ಚಿಕ್ಕಿಯ ಮೋಸದಾಟ ರಾಮ್​ಗೆ ಗೊತ್ತಾಗುವುದು ಮಾತ್ರ. ಅವೆಲ್ಲವೂ ಅಶೋಕ್​ಗೂ ಗೊತ್ತು, ಸಿಹಿಗೂ ಗೊತ್ತು. ಅದನ್ನು ರಾಮ್​ಗೆ ತಿಳಿಸಲು ಒಂದೇ ಒಂದು ನಿಮಿಷ ಸಾಕು. ಆದರೆ ಅದನ್ನೇ ವರ್ಷಗಟ್ಟಲೆ ಎಳೆಯುವುದು ಹೇಗೆಂದು ನಿರ್ದೇಶಕರಿಗೆ ಗೊತ್ತಿದೆ. ಆದರೆ ಈಗಿನ ಸನ್ನಿವೇಶ ನೋಡುತ್ತಿದ್ದರೆ, ಸೀತಾರಾಮ ಮುಗಿಯುವ ಎಲ್ಲಾ ಲಕ್ಷಣಗಳೂ ಕಾಣಿಸ್ತಿದೆ. ವೈಷ್ಣವಿ ಗೌಡ ಅವರು ಕೂಡ ಇದೇ ಕಾರಣಕ್ಕೆ ಇದೀಗ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ ಎನ್ನುವ ಮಾತೂ ಕೇಳಿಬರುತ್ತಿದೆ. ಸೀರಿಯಲ್​ನ ಕೊನೆಯ ಶೂಟಿಂಗ್​ ಮುಗಿಸಿ ಅವರು ಮದುವೆಯಾಗುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗುತ್ತಿಲ್ಲ. 

ಅದೇ ಇನ್ನೊಂದೆಡೆ, ವೈಷ್ಣವಿ ಮದುವೆಯಾದರೆ ಅವರು ಸೀರಿಯಲ್​ ಬಿಟ್ಟು ಹೋಗ್ತಾರಾ ಎನ್ನುವ ಚಿಂತೆಯೂ ಅವರ ಫ್ಯಾನ್ಸ್​ಗೆ ಕಾಡಿದ್ದು ಇದೆ. ಏಕೆಂದರೆ, ಅವರ ಭಾವಿ ಪತಿ ಹಿಂದಿಯವರು. ಅವರಿಗೆ ಕನ್ನಡ ಬರಲ್ಲ. ಹೊರ ರಾಜ್ಯದವರು ಎಂದಷ್ಟೇ ವಿಷಯವನ್ನು ನಟಿ ರಿವೀಲ್​ ಮಾಡಿದ್ದು, ಅವರ ಬಗ್ಗೆ ಇನ್ನಷ್ಟು ಡಿಟೇಲ್ಸ್​ ಅನ್ನು ಸೀಕ್ರೇಟ್​ ಆಗಿಟ್ಟಿದ್ದಾರೆ. ಅಭಿಮಾನಿಗಳು ಈ ವಿಷಯವನ್ನು ತಿಳಿದುಕೊಳ್ಳಲು ದಿನನಿತ್ಯವೂ ಕಾಯುತ್ತಿರಲಿ ಎನ್ನುವ ಆಸೆಯೂ ನಟಿಯಲ್ಲಿ ಇದ್ದಿರಬಹುದು. ಅದಕ್ಕಾಗಿಯೇ ಹಂತ ಹಂತವಾಗಿ ವಿಷಯವನ್ನು ರಿವೀಲ್​ ಮಾಡುವ ಯೋಚನೆಯಲ್ಲಿದ್ದಾರೆ. ತಮ್ಮ ಪರಿಚಯ ಹೇಗಾಯ್ತು? ಅನುಕೂಲ್​ ಯಾರು? ಮದ್ವೆ ಯಾವಾಗ ಇತ್ಯಾದಿ ವಿಷಯಗಳನ್ನು ಸ್ಟೆಪ್​ ಬೈ ಸ್ಟೆಪ್​ ಹೇಳುವ ಯೋಚನೆಯಲ್ಲಿ ಅವರು ಇದ್ದರೂ, ಹೊರ ರಾಜ್ಯದ ಗಂಡನ ಜೊತೆ ಕರ್ನಾಟಕವನ್ನೇ ಬಿಟ್ಟು ಹೋಗ್ತಾರಾ ನಟಿ ಎನ್ನುವ ಆತಂಕ ಅಭಿಮಾನಿಗಳಿಗೆ ಕಾಡತೊಡಗಿದೆ. ಆದರೆ ಇದೀಗ ಪ್ರೊಮೋ ನೋಡಿದರೆ ಸೀರಿಯಲ್​ ಮುಗಿಯಲಿದೆ ಎಂದೇ ಅನ್ನಿಸುತ್ತಿದೆ. 

ಹಿಂದಿವಾಲಾ ಜೊತೆ ರಾಜ್ಯನೇ ಬಿಟ್ಟು ಹೋಗ್ತಾರಾ ವೈಷ್ಣವಿ? ಸೀರಿಯಲ್​ ಮುಂದಿನ ಸೀತೆ ಯಾರು?

View post on Instagram