'ಜೊತೆಜೊತೆಯಲಿ' ಸೀರಿಯಲ್ ಒಂದು ಕಾಲದಲ್ಲಿ ಟಿಆರ್‌ಪಿ ರೇಟಿಂಗ್‌ನಲ್ಲಿ ಸದಾ ನಂಬರ್ 1. ಆದ್ರೆ ಯಾಕೋ ಜನಕ್ಕೆ ಚೇಂಜ್ ಬೇಕು ಅನಿಸಿರಬೇಕು. ಗಟ್ಟಿಮೇಳದ ಸೌಂಡ್ ಜೋರಾದದ್ದೇ ಎಲ್ಲ ಆ ಕಡೆ ಹೋದ್ರು. ತೀರಾ ಇತ್ತೀಚೆಗೆ ಬಂದ ಸತ್ಯಾ ಅನ್ನೋ ಸೀರಿಯಲ್ ಈ ಎರಡೂ ಸೀರಿಯಲ್‌ಗಳನ್ನು ಮಕಾಡೆ ಮಲಗಿಸಿ, ತಾನು ನಂಬರ್ 1 ಪ್ಲೇಸ್‌ನಲ್ಲಿ ಹೋಗಿ ನಿಂತುಕೊಂಡಿತು. 

ಈಗ 'ಜೊತೆ ಜೊತೆಯಲಿ' ಟೀಮ್ ಗೆ ತಾನು ಮತ್ತೆ ನಂಬರ್ 1 ಪ್ಲೇಸ್ ಗೆ ಬಂದೇ ಬರಬೇಕು ಅನ್ನೋ ಹಠ ಶುರುವಾಗಿದೆ. ಅದಕ್ಕಾಗಿ ಏನೇನೆಲ್ಲ ಬದಲಾವಣೆಗಳು ಶುರುವಾಗಿವೆ. ಈ ಸೀರಿಯಲ್ನ ಫೋರ್ಸ್ ಯಾವ ಲೆವೆಲ್ಗೆ ಇದೆ ಅಂದರೆ ಇನ್‌ಸ್ಟಾಗ್ರಾಮ್‌ನಲ್ಲಿ ಬಿಡೋ ಒಂದೂವರೆ ನಿಮಿಷದ ಒನ್‌ಲೈನ್ ಪ್ರೋಮೋ ನೋಡಿದವರು ಮತ್ತೆ ಮರುದಿನವೂ ಆ ಕಡೆ ನೋಡೋ ಹಾಗಾಗಿದೆ. ಅಷ್ಟು ಇಂಟೆರೆಸ್ಟಿಂಗ್ ಆಗಿ ಕತೆ ಡೆವಲಪ್ ಮಾಡುತ್ತಿದ್ದಾರೆ. ಆರ್ಯವರ್ಧನ್ ಮತ್ತು ಅನು ಲವ್ ಸ್ಟೋರಿಯಲ್ಲಿ ಸಖತ್ತಾಗಿರುವ ಟ್ವಿಸ್ಟ್ ಬಂದಿದೆ. ಫಾರಿನ್ ರಿಟರ್ನ್ಡ್ ವಿಜಯ್ ಸೂರ್ಯ ಎಂಟ್ರಿಯಿಂದ ಜೊತೆ ಜೊತೆಯಲಿ ಸೀರಿಯಲ್ ಗೆ ಹೊಸ ಆಕರ್ಷಣೆ ಬಂದ ಹಾಗಾಗಿದೆ. 

ಆರ್ಯವರ್ಧನ್ ಭೇಟಿ ಮಾಡಲು ಅವಕಾಶ;' ವಿಶ್ವಾಸವೇ ನನಗೆ ಅತಿ ದೊಡ್ಡ ಗಿಫ್ಟ್'! ...

ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡ್ತಾರಾ ಅನಿರುದ್ಧ?
ಇತ್ತ ಅನಿರುದ್ಧ್ ಎಷ್ಟೇ ನಿರಾಕರಿಸಿದರೂ ಅವರು ಬಿಗ್ ಬಾಸ್ಗೆ ಹೋಗ್ತಾರೆ ಅನ್ನೋ ಮಾತು ಪದೇ ಪದೇ ಕೇಳಿ ಬರ್ತಿದೆ. ಜನ ಇದನ್ನು ಇಷ್ಟು ನಂಬೋದಿಕ್ಕೆ ಕಾರಣ ಸೀರಿಯಲ್ ತಗೊಳ್ತಿರೋ ಟರ್ನಿಂಗ್. ಇಲ್ಲಿಯವರೆಗೆ ಆರ್ಯವರ್ಧನ್ ಮೇಲೇ ಫೋಕಸ್ ಆಗಿದ್ದ ಕತೆ ನಿಧಾನಕ್ಕೆ ವಿಜಯ್ ಸೂರ್ಯ ಕಡೆಗೆ ಟರ್ನ್ ಆಗ್ತಿದೆ. ಸೂರ್ಯ ಇರುವಾಗ ಮರೆಯಾಗಿಯೇ ಇರುವ ಚಂದ್ರನ ರೀತಿಯಲ್ಲಿ ಆರ್ಯವರ್ಧನ್ ಇದ್ದಾರೆ. ಜನ ಅನು ಸಿರಿಮನೆ ಮತ್ತು ವಿಜಯ್ ಸೂರ್ಯ ಎಷ್ಟೊಳ್ಳೆ ಕಪಲ್ ಅಂತ ಮಾತಾಡೋದಕ್ಕೆ ಬೇರೆ ಶುರು ಮಾಡಿದ್ದಾರೆ. ಮೊದಲು ಆರ್ಯವರ್ಧನ್ ಮೇಲಿದ್ದ ಜನರ ಆಕರ್ಷಣೆ ನಿಧಾನಕ್ಕೆ ವಿಜಯ್ ಸೂರ್ಯ ಕಡೆಗೆ ಟರ್ನ್ ಆಗ್ತಿದೆ. ಆರ್ಯವರ್ಧನ್ಗೂ ಅನುಗೂ ಭಾರೀ ವಯಸ್ಸಿನ ಅಂತರ ಇದೆ. ಆದರೆ ವಿಜಯ್ ಸೂರ್ಯ ಮತ್ತು ಅನು ನಡುವೆ ಕೆಲವೇ ವರ್ಷಗಳ ಅಂತರ. ಮಗಳಿಗೆ ಈ ಸಂಬಂಧವೇ ಬೆಸ್ಟ್ ಅಂತ ಅನು ತಂದೆಗೂ ಅನಿಸ್ತಿದೆ. ನಿಧಾನಕ್ಕೆ ಅನು ಸಖತ್ ಸ್ಮಾರ್ಟ್ ಆಂಡ್ ಹ್ಯಾಂಡ್‌ಸಮ್ ಸೂರ್ಯನ ಒಪ್ಪಿಕೊಳ್ಳಬಹುದಾ, ಅವರಿಬ್ಬರ ಜೋಡಿ ಒಂದಾಗುವ ಮೂಲಕ ಕತೆಗೆ ಫುಲ್ ಸ್ಟಾಪ್ ಹಾಕ್ಬಹುದಾ ಅಂತೆಲ್ಲ ಜನ ಲೆಕ್ಕಾಚಾರ ಹಾಕ್ತಿದ್ದಾರೆ. ಇತ್ತ ಆರ್ಯವರ್ಧನ್ ಅಲಿಯಾಸ್ ಅನಿರುದ್ಧ್ ಬಿಗ್‌ಬಾಸ್ ಗೆ ಹೋಗೋ ಹಾದಿನೂ ಇದರಿಂದ ಸುಗಮವಾಗುತ್ತೆ ಅನ್ನೋದು ಸ್ಪಷ್ಟ.

ಭುವಿ ಅಪ್ಪನ ಚಿತೆಗೆ ಬೆಂಕಿ ಕೊಡಬೇಕೋ, ಬೇಡ್ವೋ? ...

ಧಾರಾವಹಿ ತಂಡ ಹೇಳುತ್ತಿರವುದೇನು?
ಆದರೆ ಈ ಎಲ್ಲ ಲೆಕ್ಕಾಚಾರಗಳೂ ಸದ್ಯದಲ್ಲೇ ತಲೆ ಕೆಳಗಾಗಲಿವೆ. ಅನಿರುದ್ಧ್ ಬಿಗ್ ಬಾಸ್‌ಗೆ ತಾನು ಹೋಗಲ್ಲ. ಜೊತೆ ಜೊತೆಯಲಿ ಜೊತೆಗೇ ಇರ್ತೀನಿ ಅಂದಿದ್ದಾರೆ. ಅದಕ್ಕೆ ಸರಿಯಾಗಿ ಅವರ 'ರಾಜ ನಂದಿನಿ ವಿಲಾಸ'ದ ಕತೆ ಬಿಚ್ಚಿಕೊಳ್ತಾ ಇದೆ. ಅನುಗೆ ಕೊರವಂಜಿ ಬಂದು ನಿನ್ನ ಬದುಕು ಹೊಸ ತಿರುವು ಪಡೆದುಕೊಳ್ಳುತ್ತೆ ಅಂತ ಸೂಚನೆ ನೀಡಿದ್ದಾಳೆ. ಆ ತಿರುವು ರಾಜನಂದಿನಿ ವಿಲಾಸಕ್ಕೆ ಅನು ಹೋಗೋದಾಗಿರುತ್ತಾ ಅಥವಾ ಆರ್ಯವರ್ಧನ್ ನಿಂದ ಸೂರ್ಯನತ್ತ ಸಂಬಂಧ ತಿರುವು ಪಡೆದುಕೊಳ್ಳೋದಾಗಿರುತ್ತಾ ಅನ್ನೋದು ಸದ್ಯದ ಕುತೂಹಲ. 


ಮತ್ತೊಂದು ವಿಷ್ಯ ಗೊತ್ತಾ? ಈ ಸೀರಿಯಲ್ನಲ್ಲಿ ತಾನು ಅತಿಥಿ ಪಾತ್ರವಷ್ಟೇ, ಮುಂದೆ ಇನ್ನೊಂದು ಸೀರಿಯಲ್‌ನಲ್ಲಿ ತಾನು ಫುಲ್‌ ಟೈಮ್‌ ಹೀರೋ ಆಗಲಿದ್ದೀನಿ ಅಂತ ಸ್ವತಃ ವಿಜಯ್ ಸೂರ್ಯ ಅವರೇ ಹೇಳಿದ್ದಾರೆ. ಹಾಗಾಗಿ ಅನು ಜೊತೆ ವಿಜಯ್ ಸೂರ್ಯನ ಪಾತ್ರ ಇನ್ನು ಕೆಲವು ದಿನ ಮಾತ್ರ. ಇದರ ಜೊತೆಗೆ ಮತ್ತೊಂದು ಗುಮಾನಿಯೂ ಬರುತ್ತದೆ. ವಿಜಯ್ ಸೂರ್ಯನ ಹಿಂದಿನ ಹಿಸ್ಟರಿ ತಗೊಂಡ್ರೆ ಅವ್ರು ಮೊದಲು ಎಂಟ್ರಿ ಕೊಟ್ಟಿದ್ದು ಲಕ್ಷ್ಮೀ ಬಾರಮ್ಮ ಸೀರಿಯಲ್‌ಗೆ. ಚಂದನ್ ಫ್ರೆಂಡ್ ಆಗಿ. ಅಲ್ಲಿ ಚಿನ್ನುಗೆ ಲೈನ್ ಹೊಡ್ದು, ವರ್ಕೌಟ್ ಆಗದೇ ಅದೇ ಬೇಜಾರಲ್ಲಿರುವಾಗಲೇ ಇದಕ್ಕೆ ಕನೆಕ್ಟ್ ಆಗಿ ಶುರುವಾಗಿದ್ದು ಅಗ್ನಿಸಾಕ್ಷಿ ಸೀರಿಯಲ್. ಅದರಲ್ಲಿ ವಿಜಯ್ ಪೂರ್ಣ ಪ್ರಮಾಣದ ಹೀರೋ. ಇಲ್ಲೂ ಅನು ಮೇಲೆ ಮೋಹಕ್ಕೆ ಬೀಳುವ ವಿಜಯ್ ನೆಕ್ಸ್ಟ್ ಸೀರಿಯಲ್ ನಲ್ಲಿ ಇದರ ಲಿಂಕ್‌ನಲ್ಲೇ ಮುಂದುವರೀತಾರಾ ಅನ್ನೋದು ಪ್ರಶ್ನೆ. ಆದರೆ, ಇನ್ಮೇಲೆ ರೊಮ್ಯಾಂಟಿಕ್ ಸೀರಿಯಲ್ ಸಾವಾಸ ಮಾಡಲ್ಲ ಅಂತ ವಿಜಯ್ ಹೇಳಿದ್ದಾರೆ. ಸೋ, ಇದೆಲ್ಲ ಎಲ್ಲಿ ಹೋಗಿ ನಿಲ್ಲಬಹುದು ಅನ್ನೋದು ಮುಂದಿನ ಕೆಲವು ದಿನಗಳಲ್ಲಿ ಗೊತ್ತಾಗಬಹುದು. 

ಸೀರಿಯಲ್ ಸತ್ಯಾಳ ರಿಯಲ್ ಗಂಡ ಯಾರು ಗೊತ್ತಾ! ...