ಪ್ರತಿ ಮನೆಯಲ್ಲೂ ಇಂಥ ಅತ್ತೆ-ಮಾವ ಇದ್ರೆ ಬದುಕೆಷ್ಟು ಸುಂದರ ಅಲ್ವಾ ಅಂತಿದ್ದಾರೆ ನೆಟ್ಟಿಗರು...
ಮಹಿಮಾ ಮಾಡುವ ತಪ್ಪುಗಳನ್ನು ತಿದ್ದಿ ತೀಡುವ ಮಾವನ ಕ್ಯಾರೆಕ್ಟರ್ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇಲ್ಲಿ ಮಾವ ಆಡಿದ ಮಾತುಗಳು ಅಣಿಮುತ್ತುಗಳಿದ್ದಂತೆಯೇ ಅಲ್ಲವೆ?
ಇಂದು ಪರಿಸ್ಥಿತಿ ಹೇಗಾಗಿದೆ ಎಂದರೆ ಯಾವ ಮಹಿಳೆಯಾದರೂ ಕೆಟ್ಟದಾಗಿ ವರ್ತಿಸಿದರೆ ಅದೇನು ಅತ್ತೆ ರೀತಿ ಮಾಡ್ತಿಯಾ ಎಂದು ಕೇಳುತ್ತಾರೆ. ಅತ್ತೆ-ಮಾವ ಎನ್ನುವ ಪದ ಎಂದರೆ ನೆಗೆಟಿವ್ ಎನ್ನುವಂಥ ಪರಿಸ್ಥಿತಿ ಉಂಟಾಗಿದೆ. ಆದರೆ ಎಲ್ಲಾ ಮನೆಗಳಲ್ಲಿಯೂ ಹೀಗಲ್ಲ. ತಮ್ಮ ಸೊಸೆಯಂದಿರನ್ನು ಮಗಳಂತೆಯೇ ನೋಡಿಕೊಳ್ಳುವ ಅತ್ತೆ-ಮಾವಂದಿರೂ ಸಾಕಷ್ಟು ಮಂದಿ ಸಿಗುತ್ತಾರೆ. ಅದೇ ರೀತಿ ಎಲ್ಲಾ ಕೆಲವು ಮನೆಗಳಲ್ಲಿ ಸೊಸೆಯಾಗಿ ಹೋಗುವವಳೇ ಮನೆಯ ನೆಮ್ಮದಿ ಕೆಡಿಸುವುದೂ ಉಂಟು. ಅದೇ ಇನ್ನೊಂದೆಡೆ, ಹುಟ್ಟಿದ ಮನೆ ಹಾಗೂ ಕೊಟ್ಟ ಮನೆಯ ಮರ್ಯಾದೆ ಕಾಪಾಡಿಕೊಂಡು, ಎರಡೂ ಮನೆಯನ್ನು ಸೊಗಸಾಗಿ ನಿಭಾಯಿಸಿಕೊಂಡು, ಅತ್ತೆ ಮನೆಯಲ್ಲಿಯೂ ಮಗಳಾಗಿ ವರ್ತಿಸುವವರೂ ಇದ್ದಾರೆ. ಆದರೆ ಕೆಲವೊಮ್ಮೆ ಯಾವುದೇ ಕೆಟ್ಟ ಘಳಿಗೆಯಲ್ಲಿ ಅತ್ತೆ-ಮಾವ ಮತ್ತು ಸೊಸೆಯ ನಡುವೆ ಏನಾದರೂ ಸಮಸ್ಯೆಗಳು ಬಂದರೆ ಅದೇ ದೊಡ್ಡದಾಗಿ ಬೃಹದಾಕಾರವಾಗಿ ಬೆಳೆದು ಮನೆಯ ಮಾನ ಬೀದಿಗೆ ಬರುವುದೂ ಉಂಟು.
ಇಂದಿನ ಕೆಲವು ಧಾರಾವಾಹಿಗಳಲ್ಲಿ ಅತ್ತೆ-ಸೊಸೆಯ ಬಾಂಧವ್ಯವನ್ನು ಕೆಟ್ಟವರಂತೆ ತೋರಿಸುವುದೂ ಇದೆ, ಅದೇ ರೀತಿ ಕೆಲವು ಧಾರಾವಾಹಿಗಳಲ್ಲಿ ಮನೆಗೆ ಬಂದ ಸೊಸೆಯನ್ನು ಮಗಳಂತೆಯೇ ನೋಡಿಕೊಳ್ಳುವುದೂ ಇದೆ. ಎಷ್ಟೋ ಸಂದರ್ಭದಲ್ಲಿ ಸೊಸೆ ಒಳ್ಳೆಯವಳಾಗಿದ್ದರೂ ಅತ್ತೆ ಮನೆಯ ಪರಿಸರಕ್ಕೆ ಹೊಂದಿಕೊಳ್ಳಲು ತಿಣುಕಾಡುವುದು ಇದೆ. ಹುಟ್ಟಿದ ಪರಿಸರಕ್ಕೂ, ಹೋದ ಮನೆಯ ಪರಿಸರಕ್ಕೂ ತಾಳ-ಮೇಳ ಇಲ್ಲದ ಸಂದರ್ಭದಲ್ಲಿ ಮಾನಸಿಕವಾಗಿ ಕಿರಿಕಿರಿ ಅನುಭವಿಸಿ ಅದನ್ನು ಬೇರೆಯವರ ಮೇಲೆ ತೋರಿಸುವುದು ಸಹಜ. ಅಂಥ ಸಂದರ್ಭದಲ್ಲಿ ತಮ್ಮ ಮಗಳೇ ಹೀಗೆ ಮಾಡಿದರೆ ಏನು ಮಾಡುತ್ತಿದ್ದರೋ ಅದನ್ನೇ ಸೊಸೆಯಾದವಳಿಗೂ ಅನ್ವಯಿಸಿದರೆ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತೆಯೇ. ಸೊಸೆಯನ್ನು ಮಗಳಂತೆಯೇ ನೋಡಿಕೊಂಡು, ಆಕೆ ಏನಾದರೂ ತಪ್ಪು ಮಾಡಿದರೆ ತಿದ್ದಿ ಬುದ್ಧಿ ಹೇಳುವ ಅತ್ತೆ-ಮಾವಂದಿರು ಇದ್ದರೆ, ಬದುಕು ಎಷ್ಟು ಸೊಗಸು ಎನ್ನುತ್ತಿದ್ದಾರೆ ಅಮೃತಧಾರೆಯ ವೀಕ್ಷಕರು.
ಬೇಗ ಮುತ್ತು ಕೊಡಿಸ್ರಪ್ಪಾ... ಇನ್ನು ಕಾಯೋಕೆ ಆಗಲ್ಲ ಅಂತಿದ್ದಾರೆ ಅಮೃತಧಾರೆ ಫ್ಯಾನ್ಸ್!
ಸಿರಿವಂತ ಕುಟುಂಬದಲ್ಲಿ ಹುಟ್ಟಿದ ಮಹಿಮಾಗೆ ಮಿಡ್ಲ್ಕ್ಲಾಸ್ ಫ್ಯಾಮಿಲಿಯಲ್ಲಿ ಹೊಂದಿಕೊಳ್ಳುವುದು ಕಷ್ಟವೇ. ಅವಳು ಬಾಲ್ಯದಿಂದಲೇ ಅನುಭವಿಸಿದ ಆಗರ್ಭ ಸಿರಿವಂತಿಕೆ, ಈ ಮನೆಯಲ್ಲಿ ಸಿಗದಾಗ ಕಿರಿಕಿರಿ ಅನುಭವಿಸುತ್ತಿದ್ದಾಳೆ. ಅವಳ ದೃಷ್ಟಿಯಲ್ಲಿ ನೋಡಿದರೆ ಅದು ಸಹಜವೇ. ಈಕೆಯ ಅತ್ತೆ-ಮಾವ ಅಂತೂ ಸೊಸೆ ಎಂದರೆ ಪ್ರಾಣ. ಅದಕ್ಕಿಂತಲೂ ಮಿಗಿಲಾಗಿ ಶ್ರೀಮಂತರ ಹುಡುಗಿ ತಮ್ಮ ಮನೆಯಲ್ಲಿ ಹೊಂದಿಕೊಳ್ಳಲು ಎಷ್ಟು ಕಷ್ಟಪಡುತ್ತಿದ್ದಾಳೆ, ಇದೇ ಕಾರಣಕ್ಕೆ ಆಗಾಗ್ಗೆ ಆಕೆ ರೋಸಿ ಹೋಗುವುದು, ಕೆಟ್ಟ ಮಾತು ಆಡುವುದು, ಕಿರಿಕಿರಿ ಮಾಡುವುದು ಎಲ್ಲವನ್ನೂ ಮಾಡುತ್ತಾಳೆ ಎನ್ನುವುದನ್ನೂ ಈ ಅತ್ತೆ-ಮಾವ ತಿಳಿದುಕೊಂಡಿರುವುದಕ್ಕೇ ಇಲ್ಲಿಯ ಬಾಂಧವ್ಯ ಸೊಗಸಾಗಿದೆ. ಸಿಟ್ಟಿನ ಭರದಲ್ಲಿ ಮಹಿಮಾ ಏನೋ ಕೆಟ್ಟದ್ದು ಮಾತನಾಡಿ ನಂತರ ತಾನು ಮಾಡಿದ್ದು ತಪ್ಪು ಎಂದು ತಿಳಿದುಕೊಳ್ಳುವ ಸ್ವಭಾವದಾಕೆ.
ಇದೇ ರೀತಿ ಈಗಲೂ ಅಂಥದ್ದೇ ಎಡವಟ್ಟು ಮಾಡಿದ್ದಾಳೆ. ಮಾವನ ಬಳಿ ಕ್ಷಮೆ ಕೋರಿದ್ದಾಳೆ. ಅದಕ್ಕೆ ಮಾವ ಆಡಿದ ಮಾತುಗಳನ್ನು ಕೇಳಿ ಪ್ರೇಕ್ಷಕರು ಭೇಷ್ ಭೇಷ್ ಎನ್ನುತ್ತಿದ್ದಾರೆ. ಮೊದಲಿನ ಹಾಗೆ ಕುಳಿತುಕೊಂಡು ನಾವು ಹೇಗೆ ಮಾತನಾಡುತ್ತೇವೆ ಎನ್ನುವುದು ಮುಖ್ಯ. ಎಲ್ಲವನ್ನೂ ಮರೆತು ಮೊದಲಿನ ರೀತಿ ಹೇಗೆ ಇರುತ್ತೇವೆ ಎನ್ನುವುದು ಮುಖ್ಯ. ಅದಕ್ಕಾಗಿಯೇ ಸಾರಿ, ಪ್ಲೀಸ್, ಎಕ್ಸ್ಕ್ಯೂಸ್ ಮೀ ಇಂಥ ಪದಗಳು ಅವಶ್ಯಕತೆ ಇವೆ. ಆವಾವಾಗ ಇಂಥ ಪದಗಳನ್ನು ಬಳಸುತ್ತಾ ಇದ್ದರೇನೇ ಸಂಬಂಧಗಳು ಗಟ್ಟಿಯಾಗುವುದು ಎನ್ನುತ್ತಾರೆ. ಮನೆಯಲ್ಲಿ ಮಕ್ಕಳು ನಮಗೆ ಬೇಜಾರು ಮಾಡುತ್ತಾರೆ ಎಂದು ನಾವು ಬೇಜಾರು ಮಾಡಿಕೊಳ್ಳುವುದಿಲ್ಲ. ನೀನೂ ನಮ್ಮ ಮಗು ಇದ್ದ ಹಾಗೆ. ಅದಕ್ಕಾಗಿ ನೀನು ಹೇಳಿದ್ದನ್ನು ಮರೆತುಬಿಟ್ಟಿದ್ದೇವೆ ಎನ್ನುತ್ತಾರೆ. ಇದನ್ನು ಕೇಳಿ ಮಹಿಮಾಗೆ ತನ್ನ ತಪ್ಪಿನ ಅರಿವಾಗಿದೆ. ಹೀಗೆ ದಾರಿ ತೋರುವ ಅತ್ತೆ-ಮಾವ ಇದ್ದರೆ ಮನೆ ಎಷ್ಟು ಸೊಗಸಲ್ಲವೇ ಎನ್ನುತ್ತಿದ್ದಾರೆ ಅಮೃತಧಾರೆ ಫ್ಯಾನ್ಸ್.
ಬ್ರೈನ್ ಡೆಡ್ ಆದೋರನ್ನೂ ಬದುಕಿಸೋ ಈ ಧಾತ್ರಿವನದ ಅಡ್ರೆಸ್ ಕೊಡಿ ಪ್ಲೀಸ್ ಅಂತಿದ್ದಾರೆ ಫ್ಯಾನ್ಸ್!