ರಾಮಚಾರಿ ಸೀರಿಯಲ್​ನಲ್ಲಿನ ಧಾತ್ರಿವನದ ಬಗ್ಗೆ ನೆಟ್ಟಿಗರು ಪ್ರಶ್ನೆ ಕೇಳುತ್ತಿದ್ದಾರೆ. ಇದಕ್ಕೆ ಕಾರಣವೇನು? 

ಹಲವೊಮ್ಮೆ ಸಿನಿಮಾ, ಸೀರಿಯಲ್​ಗಳಲ್ಲಿ ವಾಸ್ತವಕ್ಕೆ ದೂರವಾಗುವ ಕಾಲ್ಪನಿಕ ಕಥೆಗಳನ್ನು ಜೋಡಿಸಿ ಕಥೆ ಹೆಣೆಯುವುದು ಸಹಜ. ಇತ್ತೀಚಿನ ಆ್ಯಕ್ಷನ್​ ಸಿನಿಮಾಗಳಲ್ಲಂತೂ ಇದು ಮಾಮೂಲು. ಏನೇ ಇದ್ದರೂ ಪ್ರೇಕ್ಷಕರನ್ನು ರಂಜಿಸುವ ಉದ್ದೇಶವಷ್ಟೇ ಇರುವುದು. ಆದರೆ ಅದೇ ಇನ್ನೊಂದೆಡೆ, ನಿಜ ಜೀವನದಲ್ಲಿಯೂ ಕೆಲವೊಮ್ಮೆ ಕಾಲ್ಪನಿಕ ಅಂದುಕೊಂಡದ್ದೂ ನಿಜವಾಗುವುದೂ ಉಂಟು. ಯಾವುದೋ ಒಂದು ಪವಾಡದಂಥ ಸನ್ನಿವೇಶ ಸೃಷ್ಟಿಯಾಗಿ ಊಹೆಗೂ ನಿಲುಕದ ಸಂಗತಿಗಳು ಘಟಿಸುವುದೂ ಉಂಟು. ವೈದ್ಯಕೀಯ ಲೋಕಕ್ಕೆ ನಿಲುಕದ ಅದ್ಭುತ ಪವಾಡಗಳು ಅದೆಷ್ಟು ಬಾರಿ ಸೃಷ್ಟಿಯಾಗಿಲ್ಲ. ಸತ್ತೇ ಹೋದರು ಎಂದು ವೈದ್ಯರು ಸರ್ಟಿಫಿಕೇಟ್​ ಕೊಟ್ಟವರು ಕೂಡ ಶವಾಗಾರಕ್ಕೆ ಹೋದಾಗ ಬದುಕಿರುವುದು ಗೊತ್ತಾಗಿರುವ ಘಟನೆಗಳು ಆಗಾಗ್ಗೆ ನಡೆಯುವುದು ಉಂಟು. ಇವೆಲ್ಲವೂ ಸೃಷ್ಟಿ ವೈಚಿತ್ರ್ಯವೇ.

ಆದರೆ, ಇದೀಗ ರಾಮಾಚಾರಿ ಸೀರಿಯಲ್​ನಲ್ಲಿನ ಧಾತ್ರಿವನ ಸಕತ್​ ಸೌಂಡ್​ ಮಾಡುತ್ತಿದೆ. ವೈದ್ಯಕೀಯ ಭಾಷೆಯಲ್ಲಿ ಬ್ರೈನ್​ ಡೆಡ್​ ಎಂದರೆ ಸತ್ತು ಹೋದರು ಎಂದೇ ಅರ್ಥ. ಈ ಸೀರಿಯಲ್​ ನಾಯಕ ರಾಮಾಚಾರಿಯ ಬ್ರೈನ್​ ಡೆಡ್​ ಆಗಿರುವುದು ಘೋಷಿಸಲಾಗಿದ್ದರೂ, ಸತಿ ಸಾವಿತ್ರಿ ರೀತಿ ಪತ್ನಿ ಚಾರು ಆತನನ್ನು ಬದುಕಿಸಲು ಧಾತ್ರಿವನಕ್ಕೆ ಕರೆದುಕೊಂಡು ಬಂದಿದ್ದಾಳೆ. ಅಲ್ಲಿ ಆತ ಉಳಿಯುವ ಎಲ್ಲಾ ಸಾಧ್ಯತೆಗಳು ಇವೆ ಎಂದು ಗುರುಗಳು ಹೇಳಿದ್ದಾರೆ. ನೆನಪಿನ ಶಕ್ತಿ ಕಳೆದುಕೊಳ್ಳುವ ಸಾಧ್ಯತೆ ಇದ್ದರೂ ಅದು ಸ್ಪಷ್ಟವಾಗಿ ಹೇಳಲು ಆಗುವುದಿಲ್ಲ, ಆದರೆ ಜೀವಕ್ಕೆ ಅಪಾಯವಿಲ್ಲ ಎಂದು ಚಾರುಗೆ ಹೇಳಿದ್ದಾರೆ. ಇದರ ಪ್ರೊಮೋ ರಿಲೀಸ್​ ಆಗುತ್ತಿದ್ದಂತೆಯೇ ಈ ಧಾತ್ರಿವನ ಎಲ್ಲಿದೆ ಹೇಳಿ, ಅಡ್ರೆಸ್​ ಕೊಡಿ ಎಂದು ಕಮೆಂಟ್​ ಬಾಕ್ಸ್​ಗಳಲ್ಲಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. 

ಮತ್ತೆ ಮದುಮಕ್ಕಳಾದ ತಾಂಡವ್​-ಭಾಗ್ಯ: ಮದ್ವೆ ಫೋಟೋದಲ್ಲಿ ನಾನ್ಯಾಕೆ ಇಲ್ಲ ಎಂದು ಪ್ರಶ್ನಿಸಿದ ಗುಂಡ!

ಇನ್ನು ಈ ಸೀರಿಯಲ್​ ಕುರಿತು ಹೇಳುವುದಾದರೆ, ಮೋಸದಿಂದ ಜೈಲು ಸೇರಿದ್ದ ರಾಮಾಚಾರಿಯನ್ನ ಬಿಡಿಸಲು ಚಾರು ಪ್ಲ್ಯಾನ್​ ಮಾಡಿದ್ದಳು. ಆದರೆ ಅಪಘಾತವಾಗಿ ರಾಮಾಚಾರಿಯ ಬ್ರೈನ್​ಡೆಡ್​ ಆಗಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಆದರೆ ಆತ ಬದುಕುತ್ತಾನೆ, ನಾನು ಆತನನ್ನು ಬದುಕಿಸಿಕೊಳ್ಳುವುದಾಗಿ ಹೇಳಿರುವ ಚಾರು, ನರ್ಸ್ ವೇಷದಲ್ಲಿ ರಾಮಾಚಾರಿಯನ್ನು ಅಸ್ಪತ್ರೆಯಿಂದ ಕರೆತಂದಿದ್ದಾಳೆ. ಧಾತ್ರಿವನಕ್ಕೆ ಈತನನ್ನು ಸಾಗಿಸಿದರೆ ಹೇಗಾದರೂ ಅಲ್ಲಿನ ಗುರುಗಳು ರಾಮಾಚಾರಿಯನ್ನು ಉಳಿಸುತ್ತಾರೆ ಅನ್ನೋ ನಂಬಿಕೆ ಈಕೆಯದ್ದು. ದಾರಿ ಮಧ್ಯೆಯೇ ಇವರನ್ನು ಮುಗಿಸುವ ವಿಲನ್​ಗಳ ತಂತ್ರ ವಿಫಲವಾಗಿದೆ.

ರಾಮಾಚಾರಿಯ ಜೀವ ಉಳಿಸಲು ಆಂಬ್ಯುಲೆನ್ಸ್‌ನಲ್ಲಿ ಧಾತ್ರಿವನಕ್ಕೆ ಚಾರುಲತಾ ಕರೆದುಕೊಂಡು ಹೋಗುತ್ತಿದ್ದಳು. ದಾರಿ ಮಧ್ಯೆ ದೇವ್ ಸೂಚಿಸಿದಂತೆ ಆಂಬ್ಯುಲೆನ್ಸ್ ಮೇಲೆ ರೌಡಿಗಳು ಅಟ್ಯಾಕ್ ಮಾಡ್ತಾರೆ. ರಾಮಾಚಾರಿಯನ್ನ ಕೊಲ್ಲಲು ಪ್ರಯತ್ನಿಸುತ್ತಾರೆ. ಆಗ ರೌಡಿಗಳನ್ನ ಒದ್ದು ಓಡಿಸೋದು ಕೃಷ್ಣ. ದಾರಿ ಮಧ್ಯೆ ಆಂಬ್ಯುಲೆನ್ಸ್ ಕೆಟ್ಟು ನಿಲ್ಲುತ್ತೆ. ಆಗ ಚಾರುಲತಾಗೆ ದಿಕ್ಕೇ ತೋಚದಂತಾಗುತ್ತೆ. ಈ ವೇಳೆ ಸ್ನೇಹಿತನ ಕಾರು ಕಳುಹಿಸಿ, ರಾಮಾಚಾರಿ ಹಾಗೂ ಚಾರುಲತಾ ಧಾತ್ರಿವನ ತಲುಪುವ ಹಾಗೆ ಮಾಡ್ತಾನೆ ಕೃಷ್ಣ. ಅಲ್ಲಿ, ಚಾರುಲತಾ ಹಾಗೂ ರಾಮಾಚಾರಿ ಧಾತ್ರಿವನ ತಲುಪಿದ್ರೆ, ಇತ್ತ ಆಂಬ್ಯುಲೆನ್ಸ್‌ನಲ್ಲಿ ರಾಮಾಚಾರಿಯಂತೆ ಮಲಗುತ್ತಾನೆ ಕೃಷ್ಣ. ರೌಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾದಾಗ ದಿಢೀರನೆ ಎದ್ದು ಶಾಕ್ ಕೊಡ್ತಾನೆ ಕೃಷ್ಣ. ರೌಡಿಗಳನ್ನ ಹಣ್ಣುಗಾಯಿ ನೀರುಗಾಯಿ ಮಾಡ್ತಾನೆ ಕೃಷ್ಣ. ಕೊನೆಗೂ ಚಾರು ರಾಮಚಾರಿಯನ್ನು ಧಾತ್ರಿವನಕ್ಕೆ ಸಾಗಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಗುರುಗಳು ಆತ ಬದುಕುವ ಭರವಸೆ ನೀಡಿದ್ದಾರೆ. ಇದೀಗ ಸೀರಿಯಲ್​ ಧಾತ್ರಿವನದ ಬಗ್ಗೆ ಪ್ರಶ್ನೆ ಜೋರಾಗಿದೆ. 

ಬೇಗ ಮುತ್ತು ಕೊಡಿಸ್ರಪ್ಪಾ... ಇನ್ನು ಕಾಯೋಕೆ ಆಗಲ್ಲ ಅಂತಿದ್ದಾರೆ ಅಮೃತಧಾರೆ ಫ್ಯಾನ್ಸ್​!