Asianet Suvarna News Asianet Suvarna News

ಬಿಗ್‌ಬಾಸ್‌ನಲ್ಲಿ ಗೋಲ್‌ಮಾಲ್; ಮನೆ ಮುಂದೆ ಪ್ರತಿಭಟಿಸಿದ ಸ್ವಾತಿ ಫ್ಯಾನ್ಸ್

ಬಿಗ್ ಬಾಸ್‌ ಸೀಸನ್‌ 4ರಿಂದ ನಟಿ ಸ್ವಾತಿ ಹೊರ ಬಂದಿದ್ದಾರೆ. ವೋಟಿಂಗ್‌ ಪ್ಯಾಡ್‌ನಲ್ಲಿ ಗೋಲ್‌ಮಾಲ್‌ ಮಾಡಲಾಗಿದೆ ಎಂದು ಅಭಿಮಾನಿಗಳು ಇದಕ್ಕೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
 

telugu bigg boss swathi deekshith fan protest outside annapuraan studios vcs
Author
Bangalore, First Published Oct 9, 2020, 3:01 PM IST
  • Facebook
  • Twitter
  • Whatsapp

ಕಡಿಮೆ ಅವಧಿಯಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿರುವ ನಟಿ ಸ್ವಾತಿ ದೀಕ್ಷಿತ್ ಬಿಗ್ ಬಾಸ್‌ ಸೀಸನ್‌4ರಿಂದ ಎಲಿಮಿನೇಟ್ ಆಗಿದ್ದಾರೆ.  ಸರಿಯಾದ ಸಾಕ್ಷಿಗಳಿಲ್ಲದೇ ಮನೆಯಿಂದ ಹೊರ ಹಾಕಿರುವುದು ಸರಿಯಲ್ಲ, ಎಂದು ಅಭಿಮಾನಿಗಳು ಅನ್ನಪೂರ್ಣ ಸ್ಟುಡಿಯೋ ಎದುರು ಪ್ರತಿಭಟನೆ ಮಾಡಿದ್ದಾರೆ.

ಶಾಕಿಂಗ್; 'ಬಿಗ್‌ಬಾಸ್‌ನಲ್ಲಿದ್ದ ಎಲ್ಲರ ನೆಚ್ಚಿನ ಈ ನಟಿಯೂ ಡ್ರಗ್ಸ್ ದಾಸಿ'

ತೆಲುಗು ಬಿಬಿ ಸೀಸನ್‌ 4 ಶೋ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದಿನೆ ದಿನೇ ಚರ್ಚೆ ಹೆಚ್ಚಾಗುತ್ತಿದೆ. ಸ್ವಾತಿ ಹೆಸರು ಮಾಡಿರುವ ನಟಿ, ಶೋನಲ್ಲಿ ಆಕೆಯನ್ನು ಸರಿಯಾಗಿ ತೋರಿಸಿಲ್ಲ. ಹೈ ಡ್ರಾಮಾ ಕ್ರಿಯೇಟ್ ಮಾಡುತ್ತಿದ್ದವರನ್ನು ಮಾತ್ರ ತೋರಿಸಲಾಗಿದೆ. ಅಲ್ಲದೆ ವೋಟಿಂಗ್ ಸಮಯದಲ್ಲಿಯೂ ಸ್ವಾತಿ ಮನವಿ ಮಾಡುತ್ತಿದ್ದನ್ನು ಸರಿಯಾಗಿ ಪ್ರಸಾರ ಮಾಡದೇ ಕಟ್ ಮಾಡಲಾಗಿದೆ, ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

telugu bigg boss swathi deekshith fan protest outside annapuraan studios vcs

'ನಾವು ಮಾಡುತ್ತಿರುವ ಪ್ರತಿಭಟನೆಯ ಉದ್ದೇಶ ಶೋ ನಿರ್ಮಾಪಕರಿಗೆ ತಿಳಿಯಬೇಕು. ಅಭಿಮಾನಿಗಳು ಕಾರ್ಯಕ್ರಮವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬುವುದು ಎಲ್ಲರಿಗೂ ಅರ್ಥವಾಗಬೇಕು. ನಟಿ ಸ್ವಾತಿ ಪರವಾಗಿ ನಾವಿದ್ದೀವಿ. ಕಾರಣವಿಲ್ಲದೇ ಒಬ್ಬ ವ್ಯಕ್ತಿಯನ್ನು ಮನೆಯಿಂದ ಹೊರ ಹಾಕುವುದು ಸರಿ ಅಲ್ಲ,' ಎಂದು ಪ್ರತಿಭಟನೆ ಮಾಡುತ್ತಿದ್ದ ಅಭಿಮಾನಿಯೊಬ್ಬರು ಮಾತನಾಡಿದ್ದಾರೆ.

ಮದ್ವೆಯಾಗಿಲ್ಲ ಎಂದ Bigg Boss ಕಂಟೆಸ್ಟ್, ಆಕೆ ನನ್ನ ಹೆಂಡ್ತಿ ಎಂದು ಪ್ರೂಫ್ ಕೊಟ್ಟ ಸಿಂಗರ್

ದೇವಿ ನಾಗವಳ್ಳಿ ಹಾಗೂ ಸ್ವಾತಿ ಬಿಬಿ 4ರಲ್ಲಿದ ಸ್ಟ್ರಾಂಗ್ ಸ್ಪರ್ಧಿಗಳಿಗೇ ತೊಂದರೆ ಎದುರಾಗಿದೆ ಎಂದರೆ ಖಂಡಿತವಾಗಿಯೂ ಶೋನಲ್ಲಿ ಏನೋ ಮೋಸ ಇದೆ ಎಂಬುದು ನೆಟ್ಟಿಗರ ವಾದ. ಈ ಹಿಂದೆ ಕರಾಟೆ ಕಲ್ಯಾಣಿ ಮನೆಯಿಂದ ಎಲಿಮಿನೇಟ್‌ ಆದಾಗಲೂ ವೋಟಿಂಗ್‌ ಸಿಸ್ಟಮ್ ಸರಿಯಿಲ್ಲ ಎಂದು ಆರೋಪಿಸಿದ್ದರು. ಈ ವಿಚಾರದಲ್ಲಿ ಅನ್ಯಾಯ ಆಗುತ್ತಿದೆ ಎಂದು ಶೋ ಆಯೋಜಕರ ವಿರುದ್ಧ ದೂರು ದಾಖಲಿಸುವುದಾಗಿ ನಿರೂಪಕ ನಾಗಾರ್ಜುನ್‌ಗೆ ತಿಳಿಸಿದ್ದರು.

telugu bigg boss swathi deekshith fan protest outside annapuraan studios vcs

ಕೊರೋನಾ ಸೋಂಕಿನ ನಡುವೆಯೂ ಮುಂಜಾಗೃತ ಕ್ರಮಗಳನ್ನು ಕೈ ಗೊಂಡು ಮಾಡಲಾಗುತ್ತಿರುವ ರಿಯಾಲಿಟಿ ಶೋ ಬಿಗ್ ಬಾಸ್‌ ಬಗ್ಗೆ ಇಷ್ಟೊಂದು ಆರೋಪಗಳು ಕೇಳಿ ಬರುತ್ತಿದ್ದರೂ ತಂಡದಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎನ್ನಲಾಗಿದೆ.

ಬಿಗ್‌ ಬಾಸ್ ಮನೆಗೆ ರಾಧೇ ಮಾ ಎಂಟ್ರಿ..! 

ಹಿಂದಿ, ತಮಿಳು ಹಾಗೂ ತೆಲುಗು ಬಿಗ್‌ಬಾಸ್‌ ಶೋಗಳಿಗೆ ಚಾಲನೆ ಸಿಕ್ಕಿದ್ದು, ಕನ್ನಡದಲ್ಲಿ ಈ ವರ್ಷ ಬಿಗ್ ಬಾಸ್ ನಡೆಸುವ ಬಗ್ಗೆ ಯಾವುದೇ ಚಿಂತನೆಗಳಿದ್ದಂತೆ ಕಾಣುವುದಿಲ್ಲ.

Follow Us:
Download App:
  • android
  • ios