ಬಿಗ್‌ಬಾಸ್ ಸೀಸನ್‌ಗಳ ಅಬ್ಬರ ಶುರುವಾಗಿದೆ. ಸ್ಪರ್ಧಿ ಸಾರಾ ಗುಪ್ತಾ ತಾನು ಸಿಂಗಲ್ ಎಂದು ಹೇಳಿದ್ದರು. ಆದರೆ ಆಕೆ ನನ್ನ ಪತ್ನಿ ಎಂದು ಪ್ರೂಫ್ ಸಮೇತ ಬಂದಿದ್ದಾರೆ ಪಂಜಾಬಿ ಸಿಂಗರ್ ತುಷಾರ್ ಕುಮಾರ್.

ಹಿಂದಿ ಬಿಗ್‌ಬಾಸ್ 14ನೇ ಸೀಸನ್ ಶನಿವಾರವಷ್ಟೇ ಆರಂಭವಾಗಿದೆ. ಶುರುವಾಗಿ ಕಲೆವೇ ದಿನಕ್ಕೆ ಕಾಂಟ್ರವರ್ಸಿ ಶುರುವಾಗಿದೆ. ಹೊಸ ಸ್ಪರ್ಧಿಗಳಲ್ಲಿ ಸಾರಾ ಗುರುಪಾಲ್, ಜಾಸ್ಮಿನ್ ಭಾಸಿನ್, ನಿಕ್ಕ ಟಂಬೊಲಿ, ಪವಿತ್ರ ಪುನಿಯಾ ಈಗಾಗಲೇ ಶೋ ಮೂಲಕ ಸೌಂಡ್ ಮಾಡ್ತಿದ್ದಾರೆ.

ಬಿಗ್‌ ಬಾಸ್ ಮನೆಗೆ ರಾಧೇ ಮಾ ಎಂಟ್ರಿ..!

ಇದೀಗ ಸಾರಾ ನನ್ನ ಪತ್ನಿ ಎಂದು ಬಂದಿದ್ದಾರೆ ಪಂಜಾಬಿ ಸಿಂಗರ್. ಸಾರಾ 2014ರಲ್ಲಿ ನನ್ನ ಮದುವೆಯಾಗಿದ್ದಾಳೆ ಎಂದಿದ್ದಾರೆ ತುಷಾರ್. ಆಕೆ ಬಿಗ್‌ಬಾಸ್‌ಗೆ ಬರೋವಾಗ ಸಿಂಗಲ್ ಎಂದು ಸುಳ್ಳು ಹೇಳಿದ್ದಾಳೆ ಎಂದಿರುವ ಗಾಯಕ ಸಾರ ಜೊತೆಗಿನ ಮದುವೆ ಸರ್ಟಿಫಿಕೇಟ್, ಫೋಟೋಸ್ ಶೇರ್ ಮಾಡಿದ್ದಾರೆ.

ಪಂಜಾಬ್‌ನ ಜಲಂದರ್‌ನಲ್ಲಿ 2014ರಲ್ಲಿ ಅಗಸ್ಟ್ 16ಕ್ಕೆ ನಾನು ಮದುವೆಯಾಗಿದ್ದೆ. ಸಾರಾ ಶೋನಲ್ಲಿ ಸಿಂಗಲ್ ಎಂದ ಕಾರಣ ನಾನಿದನ್ನು ಹೇಳಬೇಕಾಯ್ತು ಎಂದಿದ್ದಾರೆ. ಇನ್‌ಸ್ಟಾಗ್ರಾಂ, ವಾಟ್ಸಾಪ್‌ನಲ್ಲಿ ಜನ ನನಗೆ ಮಸೇಜ್ ಮಾಡ್ತಾ ಇದ್ದಾರೆ, ಆದರೆ ಸಾರಾ ಅದು ಆಕೆಯಲ್ಲ, ಆಕೆಯಂತೆ ಇರುವ ಬೇರೊಬ್ಬಳು ಎನ್ನುತ್ತಿದ್ದಾರೆ ಎಂದು ತುಷಾರ್ ಹೇಳಿದ್ದಾರೆ.

ಮಾಲ್, ರೆಸ್ಟೋರೆಂಟ್, ಥಿಯೇಟರ್.. ವಾವ್ ಈ ಬಾರಿಯ Bigg Boss ಮನೆಯೆಷ್ಟು ಚಂದ..!

ತುಷಾರ್ ಶೇರ್ ಮಾಡಿದ ಫೋಟೊದಲ್ಲಿ ಫೋಟೋದಲ್ಲಿ ಸಾರಾ ಖುಷಿಯಾಗಿ ಪೋಸ್ ಕೊಟ್ಟಿದ್ದು ಕಾಣಬಹುದು. ವಿವಾಹಿತ ಮಹಿಳೆಯರು ಧರಿಸೋ ಬಿಳಿ ಮತ್ತು ಕೆಂಬಣ್ಣದ ಬಳೆಗಳು ಸಾರಾ ಕೈಯಲ್ಲಿತ್ತು. ಮದುವೆ ಸರ್ಟಿಫಿಕೇಟ್‌ನಲ್ಲಿ ವಧುವಿನ ಹೆಸರು ರಚನಾ ದೇವಿ ಎಂದಿದೆ.

ಸಾರಾ ಆಕೆಯ ವಿವಾಹದ ಬಗ್ಗೆ ಸುಳ್ಳು ಹೇಳಿದ್ದು, ಸ್ಟೇಟಸ್‌ಗಾಗಿ ಮದುವೆಯಾಗಿದ್ದಳು. ಫೋಟೋಸ್ ನೋಡಿದ ಕಂಟೆಸ್ಟೆಂಟ್ ಶೆಹ್ಝಾದ್ ಡಿಯೋಲ್ ಔದ್ಯೋಗಿಕವಾಗಿ ಆಕೆಯನ್ನ ಭೇಟಿಯಾಗಿದ್ದೆ, ಆಗ ಆಕೆ ಬಬ್ಲಿಯಾಗಿ ಚೈಲ್ಡಿಶ್ ಇರಲಿಲ್ಲ ಎಂದಿದ್ದಾರೆ.