Asianet Suvarna News Asianet Suvarna News

ಶಾಕಿಂಗ್; 'ಬಿಗ್‌ಬಾಸ್‌ನಲ್ಲಿದ್ದ ಎಲ್ಲರ ನೆಚ್ಚಿನ ಈ ನಟಿಯೂ ಡ್ರಗ್ಸ್ ದಾಸಿ'

ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿಯಿಂದ ಮತ್ತೊಂದು ಸ್ಫೋಟಕ ವಿಚಾರ ಹೊರಕ್ಕೆ/ ಬಿಗ್ ಬಾಸ್ ನಲ್ಲಿ ಭಾಗವಹಿಸಿದ ಮತ್ತೊಬ್ಬ ನಟಿಗೆ ಡ್ರಗ್ಸ್ ಲಿಂಕ್ ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದ ಈ ನಟಿ ಡ್ರಗ್ಸ್ ಜಾಲಕ್ಕೆ ಸಿಕ್ಕಿಹಾಕಿಕೊಡಿದ್ದಾರೆ/ ಆ ನಟಿ ಡ್ರಗ್ಸ್ದಾ ದಾಸರಾಗಿದ್ರು

Bigg Boss participant Actress in Sandalwood Drugs case says prashanth sambargi mah
Author
Bengaluru, First Published Oct 8, 2020, 4:11 PM IST

ಬೆಂಗಳೂರು(ಅ. 08)  ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಒಂದೊಂದೆ ಸ್ಫೋಟಕ ಮಾಹಿತಿ  ನೀಡುತ್ತಿರುವ  ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಮತ್ತೊಂದು  ಬಾಂಬ್ ಸಿಡಿಸಿದ್ದಾರೆ. 

ಬಿಗ್ ಬಾಸ್ ನಲ್ಲಿ ಭಾಗವಹಿಸಿದ ಮತ್ತೊಬ್ಬ ನಟಿಗೆ ಡ್ರಗ್ಸ್ ಲಿಂಕ್ ಇದೆ ಎಂದು ಹೇಳಿದ್ದು ಯಾರು? ಯಾರು? ಎನ್ನುವ ಪ್ರಶ್ನೆ ಮೂಡಿದೆ. ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದ ಈ ನಟಿ ಡ್ರಗ್ಸ್ ಜಾಲಕ್ಕೆ ಸಿಕ್ಕಿಹಾಕಿಕೊಡಿದ್ದರು. ನಟಿ  ಡ್ರಗ್ಸ್ ದಾಸರಾಗಿದ್ರು ಎಂದು ಹೇಳಿದ್ದಾರೆ.

ಡ್ರಗ್ಸ್ ದಂಧೆಯ ಸ್ಯಾಂಡಲ್‌ವುಡ್ ಸ್ಟಾರ್ ನಟರ ಮಕ್ಕಳ ಪಟ್ಟಿ ಕೊಟ್ಟ ಸಂಬರಗಿ

ಇದೆ ನಟಿ ಜುಲೈ 22 ರಂದು ಸುಸೈಡ್ ಮಾಡಿಕೊಳ್ಳುವ ಯತ್ನಕ್ಕೂ ಕೈಹಾಕಿದ್ದರು. ಆದರೆ ಆ ಸೂಸೈಡ್ ಹಿಂದಿನ ವಿಚಾರ ಬೇರೆ‌ ಇದೆ. ನಾವು ಸೂಸೈಡ್ ಹಿಂದಿನ ರಹಸ್ಯವನ್ನು ಪತ್ತೆ ಮಾಡಿದಾಗ ಡ್ರಗ್ಸ್ ವಿಚಾರ ಗೊತ್ತಾಗಿದೆ ಎಂದಿದ್ದಾರೆ.ಸೂಸೈಡ್ ಕೇವಲ ನಾಟಕ. ದುಡ್ಡಿಗಾಗಿ ಅವರ ಮನೆಯವರನ್ನು ಹೆದರಿಸುವ ನಾಟಕ ಅಷ್ಟೇ. ಆ ನಟಿಗೆ 22 ವರ್ಷ. ಇದೀಗ ಆ ಹುಡುಗಿ ಸಂಪೂರ್ಣ ವಾಗಿ ಡ್ರಗ್ಸ್ ನಿಂದ ಮುಕ್ತರಾಗಿದ್ದಾರೆ.

ಈಕೆಯನ್ನು ಡ್ರಗ್ಸ್ ಮುಕ್ತವಾಗಿಸಲು ನಾವು ಹಾಗೂ ಅವರ ತಾಯಿ,ಮಾವ ಸಾಕಷ್ಟು ಶ್ರಮ ವಹಿಸಬೇಕಾಗಿ ಬಂತು ಎಂದು ಹೇಳಿರುವುದು ಸಹಜವಾಗಿಯೇ ಹೊಸದೊಂದಿಷ್ಟು ಪ್ರಶ್ನೆಗಳನ್ನು ತೆರೆದಿಟ್ಟಿದೆ. 

Follow Us:
Download App:
  • android
  • ios