ಮಜಾ ಟಾಕೀಸ್‌ನಲ್ಲಿ ತರುಣ್ ಸುಧೀರ್, ಶರಣ್, ಯೋಗರಾಜ್ ಭಟ್ ಮತ್ತು ಸೃಜನ್ ಲೋಕೇಶ್ ಭಾಗವಹಿಸಿದ್ದರು. "ಜೀವನ ಟಾನಿಕ್ ಬಾಟ್ಲು" ಹಾಡಿನ ಸೃಷ್ಟಿ ಕುರಿತು ಚರ್ಚಿಸಿದರು. ಭಟ್ಟರು ಉತ್ತರ ಕರ್ನಾಟಕದವರೊಂದಿಗೆ ಕೆಲಸ ಮಾಡುವುದರ ಬಗ್ಗೆ ಮಾತನಾಡಿದರು.
ಮಜಾ ಟಾಕೀಸ್ ನಲ್ಲಿ (Maja Talkies) ಅತಿಥಿಗಳಾಗಿ ಬಂದಿದ್ದ ತರುಣ್ ಸುಧೀರ್ ಹಾಗೂ ಶರಣ್ ಅವರಿಗೆ ಸೃಜನ್ ಲೊಕೇಶ್ (Srujan Lokesh) ವಿವಿಧ ಪ್ರಶ್ನೆಗಳಾನ್ನು ಕೇಳಿ ಅವರಿಂದ ಉತ್ತರ ಪಡೆದು ನಗೆ ಗಡಲಲ್ಲಿ ತೇಲಾಡುವಂತೆ ಮಾಡಿದ್ದಾರೆ. ಇದರ ಮಧ್ಯೆ ಸೃಜನ್ ಲೋಕೇಶ್ ತರುಣ್ ಸುಧೀರ್, ಶರಣ್ ಹಾಗೂ ಯೋಗರಾಜ್ ಭಟ್ಟರ ಕಾಂಬಿನೇಶನ್ ಬಗ್ಗೆ ಹಾಗೂ ಈ ಕುಡುಕರ ಹಾಡುಗಳ ಬಗ್ಗೆ ಪ್ರಶ್ನಿಸಿದಾಗ ತರುಣ್ ಹಾಗೂ ಯೋಗರಾಜ್ ಭಟ್ ಇಂಟ್ರೆಸ್ಟಿಂಗ್ ಆಗಿರುವ ವಿಷಯಗಳನ್ನು ತಿಳಿಸಿದ್ದಾರೆ. ಈ ಸೂಪರ್ ಹಿಟ್ ಹಾಡು ಹೇಗಿ ರೆಡಿಯಾಯ್ತು ಅನ್ನೋದನ್ನು ನೀವು ಕೂಡ ಕೇಳಿ.
ನಮ್ಮಪ್ಪ ಭಲೇ ರಸಿಕ; ನಾನು 9ನೇ ಮಗನೆಂದ ಕನ್ನಡದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್
ಈ ಕುರಿತು ಮಾತನಾಡಿದ ಭಟ್ಟರು (Yograj Bhat) ನಾಟಕ, ಎಣ್ಣೆ ಬಗ್ಗೆ ತಿಳಿಬೇಕು ಅಂದ್ರೆ ಉತ್ತರ ಕರ್ನಾಟಕದವರತ್ರಾನೆ ಬರಬೇಕು. ನಾವು ಮೂರು ಜನ ಬಯಲು ಸೀಮೆಯವರು. ಹಾಗಾಗಿ ಬೇಗ ಕನೆಕ್ಟ್ ಆಗುತ್ತೇನೆ ಎಂದಿದ್ದಾರೆ ಭಟ್ರು. ಇದಕ್ಕೆ ಉತ್ತರಿಸಿದ ತರುಣ್ ಸುಧೀರ್, ನಾನು ನಿರ್ದೇಶಕನಾಗಿ ಮಾಡಿದ್ದು ಮೂರು ಸಿನಿಮಾ, ಕ್ರಿಯೇಟಿವ್ ಹೆಡ್ ಆಗಿ 8 ಸಿನಿಮಾ ಹಾಗೂ ನಮ್ಮ ಪ್ರೊಡಕ್ಷನಲ್ಲಿ ಕೆಲವು ಸಿನಿಮಾ ಮಾಡಿದ್ದೇನೆ. ನಮ್ಮ ಟೆಕ್ನೀಶನ್ ನಲ್ಲಿ ಹಲವಾರು ಜನ ಬದಲಾಗಿದ್ದಾರೆ, ಆದರೆ ನಮ್ಮ ಟೀಮ್ ಅಲ್ಲಿ ಬದಲಾಗದೇ ಇದ್ದುದು ಅಂದ್ರೆ ಅದು ಭಟ್ಟರ ಹಾಡು ಎಂದಿದ್ದಾರೆ ತರುಣ್. ಅಷ್ಟೇ ಅಲ್ಲದೇ ಜೀವನ ಟಾನಿಕ್ ಬಾಟ್ಲು ಹಾಡು ಹೇಗೆಲ್ಲಾ ತಯಾರಾಯ್ತು ಅನ್ನೊದರ ಬಗ್ಗೆ ಕೂಡ ಇಂಟ್ರೆಸ್ಟಿಂಗ್ ಮಾಹಿತಿ ತಿಳಿಸಿದ್ದಾರೆ.
ರಾಮಾಚಾರಿ ಹಾಡನ್ನು 'ಅಪ್ಪು ಸರ್ ಅಣ್ಣಾಬಾಂಡ್' ಸಿನಿಮಾಕ್ಕೆ ಬರೆಯಲಾಗಿತ್ತು: ಸತ್ಯ ಹೇಳಿದ ಯೋಗರಾಜ್ ಭಟ್!
ನನ್ನ ಸಿನಿಮಾಗೆ ಒಂದಾದ್ರು ಹಾಡನ್ನು ಭಟ್ರ ಕೈಯಿಂದ ಬರೆಸ್ತೇನೆ, ಅದಕ್ಕಾಗಿ ಎಷ್ಟು ಕಾಟ ಕೊಟ್ಟು, ಟಾರ್ಚರ್ ಕೊಟ್ಟು, ಅವರ ಹಿಂದೆ ಬಿದ್ದು ಬರೆಸ್ತೀನಿ ಎಂದಿದ್ದಾರೆ ತರುಣ್ (TArun Sudhir). ಭಟ್ರ ಬಳಿ ಯಾವುದೇ ಸಿನಿಮಾಗೂ ಹಾಡು ಬರಿಯೋದಕ್ಕೆ ಹೇಳಿದ್ರೆ, ಮೊದಲು ಅವರು ನಿರಾಕರಿಸೋದು ಇದ್ದೇ ಇರುತ್ತಂತೆ. ಕಾನ್ಸೆಪ್ಟ್ ಸರಿ ಇಲ್ಲ, ಸಿಚುವೇಶನ್ ಸರಿ ಇಲ್ಲ ಬೇರೆ ಮಾಡು, ಅದು ಸರಿ ಇಲ್ಲ ಇದು ಸರಿ ಇಲ್ಲ ಅಂತಾನೆ ಹೇಳೋದಂತೆ. ಕೊನೆಗೆ ಹೇಗೇಗೋ ಮಾಡಿ ಅವರನ್ನು ಒಪ್ಪಿಸೋದಕ್ಕೆ ಸಾಕಾಗುತ್ತಂತೆ ಅಂದ್ರು ತರುಣ್. ಅದಕ್ಕೆ ಭಟ್ರು, ಆ ದೇವರು ಜಿಗಣೆಯನ್ನು ಹುಟ್ಟಿಸೋದು ಸಾಕಾಗಲ್ಲ, ಅಂತ ತರುಣನ್ನು ಹುಟ್ಟಿಸಿದ್ದಾರೆ. ಹಿಂದೆ ಬಿದ್ರೆ ಬಿಡೋದೆ ಇಲ್ಲ ಎಂದಿದ್ದಾರೆ. ಅಲ್ಲಾಡ್ಸು ಹಾಡು ಬರೆಯೋದಕ್ಕೆ ಹೇಳಿದಾಗ್ಲೂ ಮೊದಲು ನಿರಾಕರಿಸಿ ಇಲ್ಲ ಅಂದು ಬಿಟ್ಟಿದ್ರಂತೆ, ನಂತ್ರ ತರುಣ್ ಬಿಡದೇ ಇದ್ದಾಗ ಎಷ್ಟೋ ಸಮಯದ ಬಳಿಕ ಏನ್ ಬರಿಬೇಕು ಅಂತ ಕೇಳಿದ್ರಂತೆ, ಆ ದಿನ ಭಟ್ರು ಯಾವುದೋ ಹಾಡು ಬರಿತ್ತಿದ್ದಾಗ ಅದರಲ್ಲಿ ಅಲ್ಲಾಡ್ಸು ಅಂತ ಶಬ್ಧ ನೋಡಿ, ಗುರುಗರೇ ಈ ಅಲ್ಲಾಡ್ಸು ಅನ್ನೋ ಶಬ್ಧ ಇಟ್ಟುಕೊಂಡೆ ಹಾಡು ಬರೆದುಕೊಡಿ ಅಂದ್ರಂತೆ. ಆಮೇಲೆ ಯಾವ ರೀತಿ ಹಾಡು ಬೇಕು ಅಂದ್ರೆ, ತರುಣ್ ಹೇಳಿದ್ರಂತೆ, ನಮ್ಮ ಸಿನಿಮಾ ಕ್ಯಾರೆಕ್ಟರ್ ಗಳು ಜೈಲಲ್ಲಿ ಇರೋದು, ಅವರಿಗೆ ಜೀವನದಲ್ಲಿ ಮೋಟಿವೇಶನ್ ಇಲ್ಲದೇನೆ ಎಲ್ಲರೂ ವೀಕ್ ಆಗಿರ್ತಾರೆ, ಹೇಗೆ ಟಾನಿಕ್ ಬಾಟಲ್ ಮೇಲೆ ಶೇಕ್ ವೆಲ್ ಬಿಫಾರ್ ಯೂಸ್ ಅಂತ ಬರೆದಿರುತ್ತೆ ಅಲ್ವಾ? ಅದೇ ರೀತಿ ಅವರಿಗೆ ಸ್ವಲ್ಪ ಎನರ್ಜಿ ಕೊಟ್ರೆ ಅವರು ಸ್ಟ್ರಾಂಗ್ ಆಗ್ತಾರೆ ಅಂದ್ರಂತೆ. ಅವರು ಹೇಳಿ ಮುಗಿಸೋದ್ರೊಳಗೆ ಭಟ್ರು ಜೀವನ ಟಾನಿಕ್ ಬಾಟ್ಲು ಕುಡಿಯೋ ಮುಂಚೆ ಅಲ್ಲಾಡ್ಸು ಅಲ್ಲಾಡ್ಸು ಅಂತ ಹಾಡನ್ನೆ ಬರೆದು ಬಿಟ್ಟಿದ್ರಂತೆ. ಇವತ್ತು ಹಿಟ್ ಸಾಂಗ್ ಗಳಲ್ಲಿ 100 ಮಿಲಿಯನ್ ರೀಚ್ ಆಗಿರುವಂತಹ ಹಾಡುಗಳಲ್ಲಿ ಈ ಹಾಡು ಕೂಡ ಒಂದಾಗಿದೆ. ಕುಡುಕರ ಆಂಥಮ್ ಹಾಡು ಇದಾಗಿದೆ.
