ಯಶ್ ಅವರ ರಾಮಾಚಾರಿ ಸಿನಿಮಾದ ಯಾರಲ್ಲಿ ಸೌಂಡು ಮಾಡೋದು.. ಹಾಡನ್ನು ಅಪ್ಪು ಸರ್ ಅವರ ಅಣ್ಣಾಬಾಂಡ್ ಸಿನಿಮಾಕ್ಕೆ ಬರೆಯಲಾಗಿತ್ತು ಎಂದು ನಿರ್ದೇಶಕ ಯೋಗರಾಜ್ ಭಟ್ ಹೇಳಿದ್ದಾರೆ.

ಬೆಂಗಳೂರು (ಮಾ.12): ಪ್ಯಾನ್ ಇಂಡಿಯಾ ನಟ ರಾಕಿಂಗ್ ಸ್ಟಾರ್ ಯಶ್ ಅವರ ರಾಮಾಚಾರಿ ಸಿನಿಮಾದ ಯಾರಲ್ಲಿ ಸೌಂಡು ಮಾಡೋದು... ಸುಮ್ನಿರ್ರಿ ಅಣ್ಣ ಬೈಬೋದು... ರಾಮಾಚಾರಿ.. ಹಾಡನ್ನು ಮೊದಲು ಪುನೀತ್‌ ರಾಜ್‌ಕುಮಾರ್ ಅವರ ಅಣ್ಣಬಾಂಡ್ ಸಿನಿಮಾಕ್ಕೆ ಬರೆಯಲಾಗಿತ್ತು. ಆದರೆ, ಈ ಸಿನಿಮಾಕ್ಕೆ ಅದನ್ನು ಬಳಸಲಾಗದೇ ರಾಮಾಚಾರಿ ಚಿತ್ರಕ್ಕೆ ಬಳಸಲಾಗಿದೆ ಎಂದು ನಿರ್ದೇಶಕ ಯೋಗರಾಜ್ ಭಟ್ ಸತ್ಯವನ್ನು ಹೇಳಿದ್ದಾರೆ.

ಖಾಸಗಿ ಯ್ಯೂಟ್ಯೂಬ್ ಚಾನೆಲ್‌ನಲ್ಲಿ ಆರ್‌ಜೆ ಅಮಿತ್ ಅವರು ನಿರ್ದೇಶಕ ಯೋಗರಾಜ್ ಭಟ್ ಹಾಗೂ ನಟ ಶಿವರಾಜ್ ಕುಮಾರ್ ಅವರೊಂದಿಗೆ ನಡೆಸಿದ 'ಕರಟಕ ದಮನಕ' ಸಿನಿಮಾದ ಬಗ್ಗೆ ಸಂದರ್ಶನ ನಡೆಸಿದರು. ಈ ವೇಳೆ ಮಾತನಾಡಿದ ನಟ, ನಿರ್ದೇಶಕ ಹಾಗೂ ಗೀತೆ ರಚನೆಕಾರ ಯೋಗರಾಜ್ ಭಟ್ ಅವರು ರಾಮಾಚಾರಿ ಸಿನಿಮಾಕ್ಕೆ ಬರೆದ ಹಾಡಿನ ಸಾಹಿತ್ಯವನ್ನು ಪುನೀತ್ ರಾಜ್ ಕುಮಾರ್ ಅವರ ಸಿನಿಮಾಗಾಗಿ ಬರೆಯಲಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಈ ಹಾಡನ್ನು ಅಪ್ಪು ಸರ್ ಅವರಿಗಾಗಿ ಮಾಡಲಾಗಿತ್ತು. 'ಯಾರಲ್ಲಿ ಸೌಂಡು ಮಾಡೋದು... ಸುಮ್ನಿರ್ರಿ ಅಣ್ಣ ಬೈಬೋದು... ಅಣ್ಣಾ ಬಾಂಡ್...' ಎಂದು ಬರೆಯಲಾಗಿತ್ತು. ಈ ಹಾಡನ್ನು ಯಶ್ ಡ್ರಾಮ ಸಿನಿಮಾ ಟೈಮ್‌ನಲ್ಲಿ ಹಾಗೂ ನಂತರದ ದಿನಗಳಲ್ಲಿ ಹರಿಕೃಷ್ಣ ಅವರ ಸೆಲ್‌ಫೋನಿನಲ್ಲಿ ಕೇಳಿದ್ದೆವು. ಆಮೇಲೆ ಅದು ಆ ಕಡೆ ರಾಮಾಚಾರಿ ಸಿನಿಮಾಗೆ ಹೋಯ್ತು ಎಂದು ಹೇಳಿದ್ದಾರೆ.

ದೇವರ ಹಾಡು-ಬಟ್ಟೆಗೂ ಹೋಲಿಸಬೇಡಿ ಎಂದು ಹೊಸ ಫೋಟೋ ಶೂಟ್ ಮಾಡಿಸಿದ ಚೈತ್ರಾ ಜೆ.ಆಚಾರ್

ರಾಮಾಚಾರಿ ಹಾಡು ಹಾಗೂ ಯಶ್‌ ಅವರ ಕುರಿತು ಮಾತನಾಡಿದ ಶಿವರಾಜ್ ಕುಮಾರ್ ಅವರು, ನಾನು ಈಗ ಯಶ್ ನೆನಪು ಮಾಡಿಕೊಳ್ತೇನೆ. ನಾನು ಯಶ್ ಅವರನ್ನು ಮೊದಲ ಬಾರಿಗೆ ಸ್ಕ್ರೀನ್‌ ಮೇಲೆ ಕಾಣಿಸಿಕೊಂಡಾಗ ತುಂಬಾ ಹ್ಯಾಂಡ್ಸಮ್ ಆಗಿ ಕಂಡರು. ಆಗ ಯಾರಯ್ಯಾ ಇದು ಇಷ್ಟು ಸುಂದರವಾಗಿದ್ದಾನೆ. ಅಯ್ಯೋ ಏನು ಡ್ಯಾನ್ಸ್‌ ಮಾಡ್ತಾನೆ. ಇವರೆಲ್ಲಾ ಮುಂದೆ ಹೆಂಗೆ ಬೆಳೆಯಬಹುದು ಎಂದು ಆಲೋಚನೆ ಮಾಡಿದ್ದೆನು. ಅದರಂತೆ ಈಗ ಯಶ್ ತುಂಬಾ ದೊಡ್ಡ ಮಟ್ಟದಲ್ಲಿ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದ್ದಾನೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

View post on Instagram

ಸೀರೆಲಿ ಹುಡುಗೀರ ನೋಡಲೇಬಾರದು, ನಿಲ್ಲಲ್ಲ ಟೆಂಪ್ರೇಚರ್... ಸ್ಕೂಲ್‌ನಲ್ಲಿ ಹೇಳಿ ಕೊಡಬಹುದಿತ್ತು, ಹೇಳಲಿಲ್ಲ ನ್ ಟೀಚರ್... ಹಾಡಿನ ಬಗ್ಗೆ ಮಾತನಾಡಿದ ಯೋಗರಾಜ್ ಭಟ್ ಅವರು, ಈ ಸಾಲು ಕೇಳಿದಾಗಲೆಲ್ಲ ಎರಡನೇ ಸಾಲು ನೆನಪಾಗುತ್ತದೆ. ಅಂದರೆ, ಈ ಹಾಡು ಎಂದಾಕ್ಷಣ ಟೀಚರ್ ಯಾಕೆ ಸ್ಕೂಲ್‌ನಲ್ಲಿ ಹೇಳಿಕೊಡಲಿಲ್ಲ ಎಂಬುದು ಈಗಲೂ ಕೊರಗು ಕಾಡುತ್ತಿದೆ ಎಂದು ಹೇಳಿದರು.

ಗೀತಾ ಶಿವರಾಜ್ ಕುಮಾರ್ ಲೋಕಸಭೆಗೆ ಸ್ಪರ್ಧೆ: ಗೆಲ್ಲಲೇಬೇಕೆಂದೇ ಕಣಕ್ಕೆ ಇಳಿದಿದ್ದೇವೆ: ನಟ ಶಿವಣ್ಣ

'ಕರಟಕ ದಮನಕ'ದಲ್ಲಿ ಶಿವಣ್ಣ ಮತ್ತು ಪ್ರಭುದೇವ ಜುಗಲ್‌ಬಂದಿ: ನಟ ಶಿವರಾಜ್‌ಕುಮಾರ್ ಅವರಿಗೆ ಬಹುದಿನಗಳ ನಂತರ ಒಂದು ಕ್ಲಾಸ್ ಪಾತ್ರ ಸಿಕ್ಕಿದೆ. ಹಳೆಯ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಂತರ ರಗಡ್ ಪಾತ್ರಗಳಲ್ ಶಿವಣ್ಣ ಕಾಣಿಸಿಕೊಂಡಿದ್ದಾರೆ. 60 ವರ್ಷ ದಾಟಿದರೂ, 30 ವಯಸ್ಸಿನವರಂತೆ ಎನರ್ಜಿ ತೋರಿಸುವ ಶಿವಣ್ಣನ ಜೊತೆಗೆ ನಟ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಹಲವು ವರ್ಷಗಳ ಬಳಿಕ ಪ್ರಭುದೇವ ಕನ್ನಡ ಸಿನಿಮಾದ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಆದರೂ, ಸಿಕ್ಕ ಪಾತ್ರವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ಇನ್ನು ಸಿನಿಮಾದಲ್ಲಿ ಕಾಮಿಡಿ ಟೈಮಿಂಗ್ ಕೂಡ ಸೂಪರ್ ಆಗಿದೆ. ಸಿನಿಮಾದ ಮೊದಲಾರ್ಧ ಭಾಗ ಪ್ರಭುದೇವ ಅವರ ಕಾಮಿಡಿ ಹಿಡಿದಿಟ್ಟುಕೊಂಡಿದೆ. ಇನ್ನು ಉಳಿದಂತೆ ನಟಿಯರಾದ ಪ್ರಿಯಾ ಆನಂದ್ ಮತ್ತು ನಿಶ್ವಿಕಾ ನಾಯ್ಡು, ತೆಲುಗು ನಟ ತನಿಕೆಳ್ಳಾ ಭರಣಿ, ದೊಡ್ಡಣ್ಣ, ರಂಗಾಯಣ ರಘು ತಮಗೆ ಕೊಟ್ಟ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಯೋಗರಾಜ್ ಭಟ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.