ಮೇಕಪ್ ಕಿಟ್ ಹೋಗಿದ್ದಕ್ಕೆ ಕಣ್ಣೀರಾದ್ರು ತನಿಷಾ; ಸಂಗೀತಾ ಮಾಡಿದ್ರು ಸಮಾಧಾನ, ನಮ್ರತಾ ನಗು!
ಡ್ರೋನ್ ಪ್ರತಾಪ್, ಸಂಗೀತಾ, ವರ್ತೂರು ಸಂತೋಷ್, ತುಕಾಲಿ ಸಂತೋಷ್, ಕಾರ್ತಿಕ್, ತನಿಷಾ ಹಾಗು ನಮ್ರತಾ ಸದ್ಯ ಬಿಗ್ ಬಾಸ್ ಮನೆಯಲ್ಲಿ ಇನ್ನೂ ಉಳಿದುಕೊಂಡಿರುವ ಸ್ಪರ್ಧಿಗಳು. ಅವರಲ್ಲಿ ಗೆಲ್ಲುವವರು ಯಾರು ಎಂಬುದನ್ನು ತಿಳಿಯಲು ಇನ್ನೊಂದೇ ವಾರ ಕಾದರೆ ಸಾಕು.
ಬಿಗ್ ಬಾಸ್ ಕನ್ನಡ ಸೀಸನ್ 10ರ ಮನೆಯಲ್ಲಿ ಗ್ರೋಸರಿಗೆ ಬದಲಾಗು ಮೇಕಪ್ ಕಿಟ್ ಎಕ್ಸ್‌ಚೇಂಜ್ ಮಾಡಿದ್ದಾರೆ. ಅಂದರೆ, ಈ ತಿಂಗಳು ಗ್ರೋಸರಿ ಕಳುಹಿಸಲು ಯಾರ ಮೇಕಪ್ ಕಿಟ್ ತರಿಸಿಕೊಳ್ಳುವುದು ಎಂದು ತಿಳಿಸಲು ಬಿಗ್ ಬಾಸ್ ಆದೇಶಿಸಿತ್ತು. ಅದರಂತೆ, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್ ಸೇರಿದಂತೆ ಹಲವರು ತನಿಷಾ ಹೆಸರನ್ನು ಹೇಳಿದ್ದಾರೆ. ಬಿಗ್ ಬಾಸ್ ಆದೇಶದಂತೆ, ತನಿಷಾ ತಮ್ಮ ಮೇಕಪ್ ಕಿಟ್ ಕೊಟ್ಟರಾದರೂ ಕೊಡುವ ಮೊದಲು ಸಾಕಷ್ಟು ಕಣ್ಣೀರು ಸುರಿಸಿದರು.
ತನಿಷಾ ತಮ್ಮ ಮೇಕಪ್ ಕಿಟ್ ಕೊಡುವ ಮೊದಲು 'ನಂಗೆ ಮೇಕಪ್ ಕಿಟ್ ತುಂಬಾ ಇಂಪಾರ್ಟೆಂಟ್, ಏನು ಹೇಳ್ಬೇಕು ಅಂತಾನೇ ಗೊತ್ತಾಗ್ತಿಲ್ಲ' ಎಂದು ಹೇಳುತ್ತ ಗೋಳೋ ಎಂದು ಅತ್ತಿದ್ದಾಳೆ. ತನಿಷಾಗೆ ಸಮಾಧಾನ ಮಾಡಲು ಬಂದ ಸಂಗೀತಾ 'ಮೇಕಪ್ ಕಿಟ್ ಬದಲು ಗ್ರೋಸರಿ ಕೊಡ್ತಾರೆ, ಅಳ್ಬೇಡ' ಎಂದು ಹೇಳಿದ್ದಾರೆ. ಅವರಿಬ್ಬರ ಈ ಮಾತುಕತೆಗಳು ಇದೀಗ ಬಿಡುಗಡೆ ಆಗಿರುವ ಪ್ರೋಮೋದಲ್ಲಿ ಹೈಲೈಟ್ ಆಗಿದೆ. ಇಂದಿನ ಸಂಚಿಕೆಯಲ್ಲಿ ಮೇಕಪ್ ಕಿಟ್ ಬದಲು ಅದೆಷ್ಟು ಗ್ರೋಸರಿ ಸ್ಪರ್ಧಿಗಳ ಕೈ ಸೇರಿತು ಎಂಬುದು ತಿಳಿದುಬರಲಿದೆ.
ಬಿಗ್ ಬಾಸ್ ಕನ್ನಡ ಸೀಸನ್ 10ರ ಮನೆ ಈಗ ಭಾರೀ ಕುತೂಹಲದ ಕೇಂದ್ರ ಬಿಂಧು ಆಗಿದೆ. ಏಕೆಂದರೆ, ಗ್ರಾಂಡ್ ಫಿನಾಲೆಗೆ ಇನ್ನು ಒಂದೇ ವಾರ ಬಾಕಿ ಉಳಿದಿದೆ. ನಿನ್ನೆ ಯಾವುದೇ ಎಲಿಮಿನೇಷನ್ ಆಗಿಲ್ಲ. ಈಗಿರುವ ಸ್ಪರ್ಧಿಗಳಲ್ಲಿ ಗೆಲ್ಲವವರು ಯಾರು ಎಂಬ ಲೆಕ್ಕಾಚಾರ ಸೋಷಿಯಲ್ ಮೀಡಿಯಾ ಸೇರಿದಂತೆ ಹಲವು ಕಡೆ ನಡೆಯುತ್ತಿದೆ. ಕಾರ್ತಿಕ್ ಅಥವಾ ಸಂಗೀತಾ ಗೆಲ್ಲಬಹುದು ಎಂಬ ಮಾತು ಟ್ರೆಂಡಿಂಗ್ ಆಗುತ್ತಿದೆ. ಆದರೆ, ಬಿಗ್ ಬಾಸ್ ಮನೆಯಲ್ಲಿ ಒಂದು ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು, ಹೀಗಾಗಿ ವಿನ್ನರ್ ಯಾರು ಎಂದು ಈಗಲೇ ಹೇಳುವುದು ಕಷ್ಟ ಎನ್ನಬಹುದು.
ಸಿಲಿಕಾನ್ ಸಿಟಿಯಲ್ಲಿ '45' ಚಿತ್ರೀಕರಣ; ಅರ್ಜುನ್ ಜನ್ಯ ಚಿತ್ರದಲ್ಲಿ ಉಪೇಂದ್ರ, ಶಿವಣ್ಣಗೆ 'ಮೊಟ್ಟೆ' ಹೀರೋ ಸಾಥ್
ಡ್ರೋನ್ ಪ್ರತಾಪ್, ಸಂಗೀತಾ, ವರ್ತೂರು ಸಂತೋಷ್, ತುಕಾಲಿ ಸಂತೋಷ್, ಕಾರ್ತಿಕ್, ತನಿಷಾ ಹಾಗು ನಮ್ರತಾ ಸದ್ಯ ಬಿಗ್ ಬಾಸ್ ಮನೆಯಲ್ಲಿ ಇನ್ನೂ ಉಳಿದುಕೊಂಡಿರುವ ಸ್ಪರ್ಧಿಗಳು. ಅವರಲ್ಲಿ ಗೆಲ್ಲುವವರು ಯಾರು ಎಂಬುದನ್ನು ತಿಳಿಯಲು ಇನ್ನೊಂದೇ ವಾರ ಕಾದರೆ ಸಾಕು. ಜನವರಿ 27, 28ರಂದು ಗ್ರಾಂಡ್ ಫಿನಾಲೆ ನಡೆಯಲಿದೆ. ಅಲ್ಲಿ ಯಾರು ವಿನ್ನರ್ ಎಂಬುದನ್ನು ಅನೌನ್ಸ್ ಮಾಡಲಾಗುತ್ತದೆ. ಅಲ್ಲಯವರೆಗೆ ದಿನದ ಸಂಚಿಕೆಯನ್ನು ನೋಡುತ್ತಿದ್ದರೆ, ಯಾರು ಗೆಲ್ಲಬಹುದು ಎಂಬ ಬಗ್ಗೆ ಸಣ್ಣ ಕ್ಲೂ ಸಿಗಬಹುದೇನೋ!.
ಹೊಸ ಆಲೋಚನೆ, ವಿಭಿನ್ನ ಕಥೆಯ 'ಕಥಾ `ಸಾರಾಂಶ'ಕ್ಕೆ ಕೌಟ್‌ಡೌನ್; ಮತ್ತೆ ಬರುತ್ತಿದ್ದಾರೆ ಶೃತಿ ಹರಿಹರನ್!
ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ ವೀಕ್ಷಿಸಬಹುದು.